ಕೊರೊನಾ ನಮ್ಮಿಂದ ದೂರವಾಗುತ್ತಿದೆಯಾ: ಡಾ. ಸಿ.ಎನ್.ಮಂಜುನಾಥ್ ಸಂದರ್ಶನ
ಕೊರೊನಾ ಎರಡನೇ ಅಲೆಯ ತೀವ್ರತೆ ಕರ್ನಾಟಕದಲ್ಲಿ ಕಮ್ಮಿಯಾಗುತ್ತಾ ಬರುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದರೂ, ಪಾಸಿಟಿವಿಟಿ ರೇಟ್ ಎರಡು ಜಿಲ್ಲೆಗಳನ್ನು ಹೊರತು ಪಡಿಸಿ ಹತೋಟಿಯಲ್ಲಿದೆ. ಇನ್ನು, ಮೃತ ಪಡುತ್ತಿರುವವರ ಸಂಖ್ಯೆಯೂ ಕಮ್ಮಿಯಾಗುತ್ತಿರುವುದು ನೆಮ್ಮದಿಯ ವಿಚಾರ.
ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳು, ಒಂದು ದಿನದ ಹಿಂದೆ ಮೂರಂಕಿಯಲ್ಲಿ ಇತ್ತು, ಆದರೆ, ಇದರ ಮರುದಿನ ಅದು ಹೆಚ್ಚಾಗಿದೆ. ಆದರೂ, ಲಸಿಕೆ ನೀಡುವ ವಿಚಾರ ಭಾರೀ ವೇಗವನ್ನು ಪಡೆದುಕೊಂಡಿದೆ. ಜನರಿಗೆ ವ್ಯಾಕ್ಸಿನ್ ಮೇಲಿರುವ ಅಪನಂಬಿಕೆ ದಿನದಿಂದ ದಿನಕ್ಕೆ ದೂರವಾಗುತ್ತಿದೆ ಎನ್ನುವುದು ವೈದ್ಯರ ಮಾತುಗಳು.
ಒನ್ ಇಂಡಿಯಾ ಕನ್ನಡ ನಡೆಸುತ್ತಿರುವ ಫೇಸ್ ಬುಕ್ ಸಂವಾದದ ಭಾಗವಾಗಿ, 83ನೇ ಸರಣಿಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿರುವಂತಹ ಡಾ.ಸಿ.ಎನ್.ಮಂಜುನಾಥ್ ಭಾಗವಹಿಸಿದ್ದರು.
ಸಂವಾದದಲ್ಲಿ ಡಾ.ಮಂಜುನಾಥ್ ಅವರು ಹಲವು ಉಪಯುಕ್ತ ಮಾಹಿತಿ/ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಸರಳ ನಡೆ, ಜನಸ್ನೇಹಿ, ಅಚ್ಚ ಕನ್ನಡದ ಸಂಭಾಷಣೆಯ ಮೂಲಕ 'ಜನಪರ ಡಾಕ್ಟರ್'ಎಂದೇ ಹೆಸರಾಗಿರುವ ಇವರು ಸಂದರ್ಶನದಲ್ಲಿ ನೀಡಿದ ಟಿಪ್ಸಿನ ಪ್ರಮುಖಾಂಶ ಹೀಗಿದೆ:

ಮೂರು ವಾರದ ಸೋಂಕಿತರ ಸಂಖ್ಯೆಯನ್ನು ನೋಡುತ್ತಿದ್ದರೆ ಇದು ಕಮ್ಮಿಯಾಗುತ್ತಿದೆ
ಪ್ರಶ್ನೆ: ಕೊರೊನಾ ಎರಡನೇ ಅಲೆ ನಮ್ಮಿಂದ ದೂರವಾಗಿದೆ ಎಂದು ಖಚಿತ ವಿಶ್ವಾಸದಿಂದ ಹೇಳಬಹುದಾ?
ಡಾ.ಮಂಜುನಾಥ್: ಎರಡನೇ ಅಲೆ ಕಮ್ಮಿಯಾಗುತ್ತಿರುವುದು ಹೌದು, ಆದರೆ ನಾವು ಮೂರನೇ ಅಲೆಯ ಆತಂಕದಲ್ಲಿದ್ದೇವೆ. ಕಳೆದ ಮೂರು ವಾರದ ಸೋಂಕಿತರ ಸಂಖ್ಯೆಯನ್ನು ನೋಡುತ್ತಿದ್ದರೆ ಇದು ಕಮ್ಮಿಯಾಗುತ್ತಿರುವುದು ಹೌದು. ರಾಜ್ಯದಲ್ಲಿ ಒಟ್ಟಾರೆಯಾಗಿ ಸುಮಾರು ಒಂದೂವರೆ ಸಾವಿರ ಹೊಸ ಕೇಸುಗಳು ಬರುತ್ತಿವೆ. ಇದೊಂದು, ಸಮಾಧಾನಕಾರ ಅಂಶ, ಜೊತೆಗೆ ಕೇರಳದಲ್ಲಿ ಹೆಚ್ಚುತ್ತಿರುವ ಸಂಖ್ಯೆಯನ್ನು ನೋಡಿದರೆ ಆತಂಕ ಕೂಡಾ ಇದೆ. ಕರಾವಳಿ ಭಾಗದಲ್ಲಿ ಕೇರಳದ ಜೊತೆಗೆ ಹೆಚ್ಚಿನ ವಹಿವಾಟು ಇರುವುದರಿಂದ ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಲಬೇಕಿದೆ.
ಜಿಲ್ಲಾಡಳಿತ ಸೇರಿದಂತೆ ಹದಿನಾರು ಇಲಾಖೆಗಳು ಇದರಲ್ಲಿ ಕೆಲಸ ಮಾಡುತ್ತದೆ
ಪ್ರಶ್ನೆ: ಬೊಮ್ಮಾಯಿ ಸರಕಾರ ಕೋವಿಡ್ ಟಾಸ್ಕ್ ಫೋರ್ಸ್ ನೀಡುವ ಸಲಹೆಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾ?
ಡಾ.ಮಂಜುನಾಥ್: ಹೌದು, ಟೆಕ್ನಿಕಲ್ ಕಮಿಟಿ ನೀಡುವ ಸಲಹೆಗಳನ್ನು ಹೊಸ ಸರಕಾರ ಬಹುತೇಕ ಪಾಲಿಸುತ್ತಿದೆ. ಇದು ಬರೀ ಆರೋಗ್ಯ ಇಲಾಖೆಯ ಜವಾಬ್ದಾರಿ ಆಗಿರುವುದಿಲ್ಲ, ರೆವೆನ್ಯೂ, ಬಿಬಿಎಂಪಿ, ಜಿಲ್ಲಾಡಳಿತ ಸೇರಿದಂತೆ ಹದಿನಾರು ಇಲಾಖೆಗಳು ಇದರಲ್ಲಿ ಕೆಲಸ ಮಾಡುತ್ತದೆ. ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಲಬೇಕಾದರೆ ನಮ್ಮ ಸಲಹೆಗಳನ್ನು ರಾಜ್ಯ ಸರಕಾರ ಕೇಳುತ್ತದೆ.

ಐವತ್ತು ಸಾವಿರ ಹೊಸ ಕೇಸುಗಳನ್ನು ನಾವು ನೋಡಿದ್ದೇವೆ
ಪ್ರಶ್ನೆ: ಕೊರೊನಾ ತಳಿ ರೂಪಾಂತರಿಯಾಗಲಿದೆಯಾ, ಅದರ ಪರಿಣಾಮ ಹೇಗಿರುತ್ತದೆ?
ಡಾ.ಮಂಜುನಾಥ್: ಕೊರೊನಾ ವೈರಸಿಗೆ ಮೂಲ ಕಾರಣ ಡೆಲ್ಟಾ, ಇದರ ಬಗ್ಗೆ ಅನುಮಾನವಿಲ್ಲ. ಹರಡುವಿಕೆ ಮತ್ತು ತೀವ್ರತೆ ಮೊದಲು ಜಾಸ್ತಿಯಾಗಿತ್ತು. ಕರ್ನಾಟಕದಲ್ಲಿ ಒಂದು ಹಂತದಲ್ಲಿ ಐವತ್ತು ಸಾವಿರ ಹೊಸ ಕೇಸುಗಳನ್ನು ನಾವು ನೋಡಿದ್ದೇವೆ. ಈಗಿರುವ ತಳಿ ಒಂದು ವೇಳೆ ಮೂರನೇ ಅಲೆಗೆ ಬಂದಿದ್ದೇ ಆದಲ್ಲಿ, ಅದರ ತೀವ್ರತೆ ಕಮ್ಮಿಯಿರುತ್ತೆ ಎನ್ನುವುದನ್ನು ಖಚಿತವಾಗಿ ಹೇಳಬಹುದು. ಆದರೆ, ಆಗಸ್ಟ್ ಕೊನೆಯ ವಾರದಿಂದ ಮುಂದಿನ ಎರಡು ತಿಂಗಳಲ್ಲಿ ಹೊಸ ತಳಿ ಬಂದರೆ ಏನು ಎನ್ನುವುದು ನಮಗೂ ಖಚಿತತೆಯಿಲ್ಲ. ಹಾಗಾಗಿ, ಮುಂದಿನ ಎರಡು ತಿಂಗಳು ಎಚ್ಚರಿಕೆಯಿಂದ ಇರುವುದು ಸೂಕ್ತ.Recommended Video

ಮಕ್ಕಳಿಗೆ ಇದರ ಪ್ರಭಾವ ಕಮ್ಮಿಯಿರಬಹುದು, ಪೋಷಕರು ಎಚ್ಚರಿಕೆಯಿಂದ ಇರಬೇಕು
ಪ್ರಶ್ನೆ: ಸಾರ್ವಜನಿಕ ಗಣೇಶೋತ್ಸವ ವಿಚಾರದಲ್ಲಿ ಟಾಸ್ಕ್ ಫೋರ್ಸ್ ನೀಡಿದ ಸಲಹೆ ಮತ್ತು ಮೂರನೇ ಅಲೆ ಮಕ್ಕಳಿಗೆ ಕಾಡಲಿದೆಯಾ?
ಡಾ.ಮಂಜುನಾಥ್: ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದರೂ ಅದನ್ನು ಪಾಲಿಸಬೇಕಾದವರು ಸಾರ್ವಜನಿಕರು. ಜನರ ಸಹಕಾರವಿಲ್ಲದಿದ್ದರೆ ಯಾವ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಲಬೇಕು ಎನ್ನುವುದು ನನ್ನ ನಿವೇದನೆ. ಕೊರೊನಾ ಎನ್ನುವುದು ಗುಪ್ತಗಾಮಿನಿ, ಏರಿದರೇ ಏರುತ್ತಲೇ ಇರುತ್ತದೆ. ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ. ಆದರೂ, ಮಕ್ಕಳಿಗೆ ಇದರ ಪ್ರಭಾವ ಸ್ವಲ್ಪ ಕಮ್ಮಿಯಿರಬಹುದು, ಆದರೆ ಪೋಷಕರು ಎಚ್ಚರಿಕೆಯಿಂದ ಇರುವುದು ಸೂಕ್ತ. ಟೆಸ್ಟಿಂಗ್ ಮುಂದುವರಿಯಬೇಕು, ಲಸಿಕೆ ಅಭಿಯಾನ ಹೆಚ್ಚಾಗಬೇಕು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications