• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೂಯೆಜ್’ ಚಕ್ರವ್ಯೂಹದಲ್ಲಿ ಭಾರತೀಯರು, ನೆಪೋಲಿಯನ್ ಕಾಲದಲ್ಲೇ ಕಾಲುವೆ ಕಸರತ್ತು!

|

ಈಗ ಎಲ್ಲೆಲ್ಲೂ 'ಸೂಯೆಜ್ ಕಾಲುವೆ'ಯದ್ದೇ ಮಾತು. ಅದರಲ್ಲೂ ಸೂಯೆಜ್ ಕಾಲುವೆ ನಡುವೆ ಭಾರತದ ಕಾರ್ಮಿಕರು ಸಿಲುಕಿರುವುದು ದುಃಖದ ಸಂಗತಿ. ಈ ಬೃಹತ್ ಹಡಗು 'ಎವರ್ ಬಾಕ್ಸ್ ಗ್ರೀನ್‌'ನಲ್ಲಿ ಭಾರತ ಮೂಲದ ಕಾರ್ಮಿಕರು ಸಿಲುಕಿದ್ದರೂ ಅವೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಹಡಗು ನಿರ್ವಹಣಾ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದ್ಕಡೆ ಇಡೀ ಜಗತ್ತಿನ ಗಮನ ಸೆಳೆಯುತ್ತಿರುವ 'ಸೂಯೆಜ್ ಕಾಲುವೆ'ಯ ಇತಿಹಾಸ ಬೆದಕುತ್ತಾ ಹೋದರೆ ನೆಪೋಲಿಯನ್ ಕಾಲಕ್ಕೆ ಹೋಗಬೇಕಾಗುತ್ತದೆ. ಯೆಸ್, ಈಜಿಪ್ಟ್‌ ದೇಶದ ಭಾಗವಾಗಿರುವ ಸೂಯೆಜ್ ಕಾಲುವೆಗೆ ಹಲವು ಶತಮಾನಗಳ ಇತಿಹಾಸವಿದೆ. ಇದರ ನಿರ್ಮಾಣವೇ ಒಂದು ರೋಚಕ ಕಥನ.

ಪೂರ್ವ ಹಾಗೂ ಪಶ್ಚಿಮ ಪ್ರದೇಶಗಳ ಕೊಂಡಿ 'ಸೂಯೆಜ್ ಕಾಲುವೆ'. ಅದರಲ್ಲೂ ನೆಲವನ್ನು ಬಗೆದು ಸಮುದ್ರಕ್ಕೆ ಸೇರಿಸುವ ಸಾಹಸದಲ್ಲಿ ಮನುಷ್ಯ ಯಶಸ್ಸು ಕಂಡ ಕಾಲವದು. ಬರೋಬ್ಬರಿ 2 ಶತಮಾನ ಹಿಂದೆಯೇ ಮಾನವ ಇಂತಹ ಸಾಹಸ ಮಾಡಿದ್ದ ಎಂಬುದೇ ಅಚ್ಚರಿ ಸಂಗತಿ. ಅಷ್ಟಕ್ಕೂ ಸೂಯೆಜ್ ಕಾಲುವೆ ಇತಿಹಾಸ ಏನು ಹೇಳುತ್ತದೆ..? ಅದು ನಿರ್ಮಾಣವಾಗಿದ್ದು ಹೇಗೆ ಎಂಬುದನ್ನ ಮುಂದೆ ತಿಳಿಯೋಣ.

ನೂರಾರು ಅಡಿ ಮರಳು ತೆಗೆಯಬೇಕು..!

ನೂರಾರು ಅಡಿ ಮರಳು ತೆಗೆಯಬೇಕು..!

ಸೂಯೆಜ್ ಕಾಲುವೆ ಇತಿಹಾಸಕ್ಕಿಂತ ಮೊದ್ಲು ಈಗ ಬೋಟ್ ಸುಗಮವಾಗಿ ಸಂಚರಿಸಲು ಬೇಕಾದ ಪರಿಸ್ಥಿತಿ ತಿಳಿಯೋಣ. ಮೊದಲೇ ಹೇಳಿದಂತೆ ಸೂಯೆಜ್ ಕಾಲುವೆ ಮಾನವ ನಿರ್ಮಿತವಾಗಿದೆ. ಅದರಲ್ಲೂ ಸಮುದ್ರ-ಸಮುದ್ರದ ನಡುವೆ ಕೊಂಡಿ ಬೆಸೆದ ಜಾಗ ಇದು. ಹೀಗಾಗಿ ನೂರಾರು ಸವಾಲು ಸೂಯೆಜ್ ಕಾಲುವೆಯನ್ನು ಆವರಿಸಿದೆ. ಅದರಲ್ಲೂ ಸದ್ಯದ ಸ್ಥಿತಿಯಲ್ಲಿ ‘ಎವರ್ ಬಾಕ್ಸ್ ಗ್ರೀನ್‌' ಹಡಗನ್ನು ಸೂಯೆಜ್ ಕಾಲುವೆಯಿಂದ ಮುಂದಕ್ಕೆ ಸಾಗುವಂತೆ ಮಾಡಲು ಹರಸಾಹಸ ಮಾಡಬೇಕಿದೆ. ನೂರಾರು ಅಡಿ ಆಳದಲ್ಲಿ ಮರಳನ್ನು ಅಗೆದು, ಈ ಬೃಹತ್ ಹಡಗು ಸಂಚಾರ ಮಾಡಲು ದಾರಿ ಮಾಡಿಕೊಡಬೇಕಿದೆ. ಇಲ್ಲವಾದರೆ ಇನ್ನೂ ಹಲವು ವಾರಗಳ ಕಾಲ ಇದೇ ಪರಿಸ್ಥಿತಿ ಮುಂದುವರಿದು, ಲಕ್ಷಾಂತರ ಕೋಟಿ ನಷ್ಟ ಸಂಭವಿಸಲಿದೆ.

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು

ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.

1869ರಲ್ಲಿ ಕಾಲುವೆ ನಿರ್ಮಾಣ..!

1869ರಲ್ಲಿ ಕಾಲುವೆ ನಿರ್ಮಾಣ..!

ಇಡೀ ಜಗತ್ತು ನೆಪೋಲಿಯನ್‌ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನು ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!

ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು ‘ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನ ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.

English summary
Experts are working to clear Suez Canal block, but they need dig hundreds of feet sand to make ship way clear on canal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X