ಗ್ವಾಲಿಯಾರ್ ರಾಜಮನೆತನ ಜ್ಯೋತಿರಾಧಿತ್ಯ ಸಿಂಧಿಯಾ ಆಸ್ತಿ ವಿವರ

ಶಿವಪುರಿ, ಏಪ್ರಿಲ್ 22: ಮಧ್ಯಪ್ರದೇಶದ ಗುನಾ-ಶಿವಪುರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಗ್ವಾಲಿಯರ್ ರಾಜಮನೆತನ, ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಅಫಿಡವಿಟ್‍ನಲ್ಲಿ ಆಸ್ತಿ ಪ್ರಮಾಣ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗ್ವಾಲಿಯರ್ ನ ರಾಜವಂಶಸ್ಥರಾಗಿರುವ ಸಿಂಧಿಯಾ ಬಳಿ ಪೂರ್ವಿಕರಿಂದ ಸಿಕ್ಕಿರುವ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ಇದೆ.ಪಿತ್ರಾರ್ಜಿತವಾಗಿ ವಾರ್ಷಿಕ ಆದಾಯ 467,410 ರು ನಷ್ಟಿದ್ದು, 80 ಲಕ್ಷಕ್ಕೂ ಅಧಿಕ ಆಭರಣ ಹೊಂದಿದ್ದಾರೆ.

ಸಿಂಧಿಯಾ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಅರಮನೆ, ಕೋಟೆಗಳಿವೆ. ಬಿಎಂಡಬ್ಲ್ಯೂ ಕಾರು ಹೊಂದಿದ್ದಾರೆ. 40 ಎಕರೆ ವಿಸ್ತೀರ್ಣದ ಗ್ವಾಲಿಯರ್ ನ ಜಯ ವಿಲಾಸ್‍ ಅರಮನೆ, ರಾಣಿ ಮಹಲ್‍, ಹಿರ್ನವನ್‍ ಮಹಲ್‍, ಶಾಂತಿಕೇತನ್‍, ವಿಜಯ ಭವನ್‍, ಬೂಟ್‍ ಬಂಗ್ಲೆ, ಪಿಕ್ನಿಕ್ ಸ್ಪಾಟ್‍, ಹಾಗೂ ವಸತಿ ನಿಲಯಗಳಿವೆ. ಮಹಾರಾಷ್ಟ್ರದ ಶ್ರೀಗೊಂಡಾದಲ್ಲಿ 19 ಎಕರೆ ಹಾಗೂ ಲಿಂಬನ್‍ ಎಂಬ ಹಳ್ಳಿಯಲ್ಲಿ 53 ಎಕರೆ ಜಮೀನು ಇದೆ. ಇದಲ್ಲದೆ ಹಲವು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ.

Elections 2019: Guna Congress Candidate Jyotiraditya Scindia Assets

ಸಿಂಧಿಯಾ ಬಳಿ 301, 87,000 ರೂಪಾಯಿಗೂ ಹೆಚ್ಚು ಮೌಲ್ಯದ ಎಫ್‍ಡಿ ಮಾಡಿಸಿದ್ದಾರೆ. 3,33, 39,827 ರು ಚರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸಿಂಧಿಯಾ ವಾರ್ಷಿಕ ಆದಾಯ 151,56,720 ರು ಎಂದು ಕಳೆದ ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ ತೋರಿಸಿದ್ದಾರೆ. ಅವರ ಪತ್ನಿ ಪ್ರಿಯದರ್ಶಿನಿ ವಾರ್ಷಿಕ ಆದಾಯ 250,400 ರು ನಷ್ಟಿದೆ. ಜ್ಯೋತಿರಾಧಿತ್ಯ ಸಿಂಧಿಯಾ ತಮ್ಮ ಬಳಿ ಒಟ್ಟು 2,066 ಗ್ರಾಂ ಚಿನ್ನವಿದೆ ಎಂದು ಘೋಷಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+