Dwarakish: ದ್ವಾರಕೀಶ್ ಮೊದಲ ಹೆಸರು ಏನು? ನಟನೆಗೆ ಮೊದಲು ಇವರು ವೃತ್ತಿ ಏನು?
ಕನ್ನಡ ಚಿತ್ರರಂಗಂದ ಹಿರಿಯ ನಟ ನಿರ್ಮಾಪಕ ದ್ವಾರಕೀಶ್ ಬೆಳ್ಳಿ ತೆರೆಯ ಮೇಲೆ ತಮ್ಮ ಪ್ರಂಡ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರು. ಸಾಲು ಸಾಲು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಇವರು ಕನ್ನಡ ಚಿತ್ರರಂಗವನ್ನು ಆಳಿದವರು. ಬರೀ ನಟನಾಗಿ ಅಷ್ಟೇ ಅಲ್ಲದೇ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ದ್ವಾರಕೀಶ್ ತಮ್ಮ ಛಾಪು ಮೂಡಿಸಿದವರು.
1964ರಲ್ಲಿ ದ್ವಾರಕೇಶ್ ಮೊದಲ ಬಾರಿಗೆ ಬಣ್ಣ ಹಚ್ಚಿಕೊಂಡರು. ವೀರ ಸಂಕಲ್ಪ ಚಿತ್ರದ ಮೂಲಕ ದ್ವಾರಕೀಶ್ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡರು. ಎರಡೇ ವರ್ಷ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಂತೆ ದ್ವಾರಕೀಶ್ ಹೊಸ ಸಾಹಸಕ್ಕೆ ಕೈ ಹಾಕಿದರು. ಇವರು 1966 ಮಮತೆಯ ಬಂಧನದ ಮೂಲಕ ಚಿತ್ರವನ್ನು ನಿರ್ಮಾಣ ಮಾಡಲು ಆರಂಭಿಸಿದರು.

ದ್ವಾರಕೀಶ್ 1969ರಲ್ಲಿ ಮೊದಲ ಬಾರಿಗೆ ಫುಲ್ ಪ್ಲೆಡ್ಜ್ ನಿರ್ಮಾಪಕರಾಗಿ ಗುರುತಿಸಿಕೊಂಡರು. ಇವರು ಡಾ.ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಚಿತ್ರವನ್ನು ನಿರ್ಮಾಣ ಮಾಡಿದರು. 1985ರಲ್ಲಿ ದ್ವಾರಕೇಶ್ ನೀ ಬರೆದ ಕಾದಂಬರಿ ಮೂಲಕ ನಿರ್ದೇಶಕರೂ ಆದರು.
ದ್ವಾರಕೀಶ್ ಮೊದಲ ಹೆಸರು ಏನು?
ಖ್ಯಾತ ನಟ ಖ್ಯಾತ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ದ್ವಾರಕೀಶ್ ಅವರ ಹೆಸರು ಇದಲ್ಲಾ. ಇದನ್ನು ಬೆಳ್ಳಿ ತೆರೆಗೆ ಬಂದಾಗ ಇಟ್ಟಿದ್ದು. ಇವರ ಹೆಸರು ದ್ವಾರಕನಾಥ್. ಅಗಸ್ಟ್ 19, 1942ರಲ್ಲಿ ಹುಣಸೂರಿನಲ್ಲಿ ಇವರು ಜನಸಿದರು. ಇವರಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿದಾಗ ನಿರ್ಮಾಪಕ ಸಿವಿ ಶಿವಶಂಕರ್ ಅವರು ದ್ವಾರಕನಾಥ್ ಎಂಬ ಹೆಸರನ್ನು ಬದಲಿಸಿ ದ್ವಾರಕೇಶ್ ಮರು ನಾಮಕರಣ ಮಾಡಿದರು.
ದ್ವಾರಕೀಶ್ ಅವರಿಗೆ ನಟನೆಯ ಬಗ್ಗೆ ಅಪಾರ ಒಲವಿತ್ತು. ಈ ಆಸೆಯನ್ನು ಇವರು ತಮ್ಮ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಬಳಿ ಹಂಚಿಕೊಂಡಿದ್ದರು. ದ್ವಾರಕೀಶ್ ವ್ಯಾಪಾರವನ್ನು ಅರ್ಧಕ್ಕೆ ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದರು.
ಉದ್ಯೋಗ ಏನು?
ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಧಮಿಕ ಶಿಕ್ಷಣವನ್ನು ಪುರೈಸಿ, ಸಿಪಿಸಿ ಪಾಲಿಟೆಕ್ನಿಕ್, ಡಿಪ್ಲೋಮ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ತಮ್ಮ ವ್ಯಾಸಂಗ ಮುಗಿಯುತ್ತಿದ್ದಂತೆ ದ್ವಾರಕೀಶ್ ತಮ್ಮ ಸಹೋದರನ ಜೊತೆಗೂಡಿ ಭಾರತ ಅಟೋ ಸ್ಪೇರ್ಸ್ ಎಂಬ ಅಂಗಡಿಯನ್ನು ಮೈಸೂರಿನಲ್ಲಿ ತೆರೆದರು.
ಇಲ್ಲಿಂದ ಚಿತ್ರರಂಗದಲ್ಲಿ ದ್ವಾರಕೇಶ್ ತಮ್ಮ ಹೆಜ್ಜೆಯ ಗುರುತುಗಳನ್ನು ಮೂಡಿಸುತ್ತಾ ಸಾಗಿದರು. ಆರಂಭದಲ್ಲಿ ಬಣ್ಣದ ಬದುಕನಲ್ಲಿ ನೆಲೆ ಕಟ್ಟುಕೊಳ್ಳಬೇಕೆಂಬ ಆಸೆಯನ್ನು ಹೊತ್ತಿದ್ದ ದ್ವಾರಕೀಶ್ ಹಂತ ಹಂತವಾಗಿ ಚಿತ್ರೋದ್ಯಮದಲ್ಲಿ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಸಾಗಿದರು. ತಮ್ಮ ಪ್ರಚಂಡ ನಟನೆಯ ಜೊತೆಗೆ ದ್ವಾರಕೀಶ್ ನಿರ್ಮಾಣ, ನಿರ್ಮಾಪಕರಾಗಿಯೂ ಗುರುತಿಸಿಕೊಂಡರು.
ಆರಂಭದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದ ದ್ವಾರಕೀಶ್, ಆರಂಭದಲ್ಲಿ ನಿರ್ಮಾಪಕರಾಗಿ ಯಶಸ್ಸು ಕಾಣಲಿಲ್ಲ. 1969ರಲ್ಲಿ ಸ್ವಂತವಾಗಿ ನಿರ್ಮಾಣ ಮಾಡಿದ ಮೇಯರ್ ಮುತ್ತಣ್ಣ ಇವರಿಗೆ ಹೆಸರು ಹಾಗೂ ಕೀರ್ತಿಯನ್ನು ತಂದಿತು. ಇಲ್ಲಿಂದ ದ್ವಾರಕೀಶ್ ಸಿನಿಮಾ ಪಯಣ ಆರಂಭಿಸಿ ಹಿಂತಿರುಗಿ ನೋಡಲೇ ಇಲ್ಲ.
ಕನ್ನಡ ಚಿತ್ರರಂಗದ ಖ್ಯಾತ ಜೋಡಿಯಲ್ಲಿ ಒಂದಾಗಿರುವ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಹಲವು ಹಿಟ್ ಚಿತ್ರಗಳನ್ನು ನೀಡಿದೆ. ಕಳ್ಳಾ ಕುಳ್ಳ, ಗುರು ಶಿಷ್ಯರು, ರಾಯಂದು ಬಂದರು ಮಾವನ ಮನೆಗೆ, ಕಿಟ್ಟು ಪುಟ್ಟು, ಹಿಟ್ ಸಿನಿಮಾ ಕೊಟ್ಟಿತು. ಇವರು ನಿರ್ಮಿಸಿದ ಆಪ್ತಮಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತು.












Click it and Unblock the Notifications