ಮೋಹಕ ರ್‍ಯಾಂಪ್ ವಾಕ್ ಮೂಲಕ ಮೋಡಿ ಮಾಡಿದ ಬಾತುಕೋಳಿ: ವಿಡಿಯೋ!
ಬಾತುಕೋಳಿಯೊಂದು ರ್‍ಯಾಂಪ್ ವಾಕ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಂತರ್ಜಾಲವನ್ನು ನಗುವಿನ ಗಣಿ ಅಂದರೆ ತಪ್ಪಾಗಲಾರದು. ಯಾಕೆಂದ್ರ ನಿತ್ಯ ಇದರಲ್ಲಿ ನಗು ತರಿಸುವ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲಸದ ಒತ್ತಡದಿಂದ ಬೇಸತ್ತಿದ್ದರೆ ಇಂತಹ ಒಂದು ವಿಡಿಯೋವನ್ನು ನೋಡಿದರೆ ಸಾಕು. ಮೈಂಡ್ ಫ್ರೀ ಆಗಿಬಿಡುತ್ತದೆ.
ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಬಾತುಕೋಳಿಯೊಂದು ರ್‍ಯಾಂಪ್‌ನಲ್ಲಿ ಮಾಡೆಲ್‌ನಂತೆ ಸ್ಟೈಲಿಶ್ ವಾಕ್ ಮಾಡುವುದನ್ನು ಕಾಣಬಹುದು. ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ (Buitengebieden) ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ ಮತ್ತು ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
14 ಸೆಕೆಂಡುಗಳ ವಿಡಿಯೊದಲ್ಲಿ, ಬಾತುಕೋಳಿಯು ಖಾಲಿ ಬೀದಿಯಲ್ಲಿ ಅತ್ಯಂತ ಒಯ್ಯಾರದಿಂದ ಮತ್ತು ಬಿನ್ನಾಣದಿಂದ ನಡೆಯುತ್ತಿರುವುದು ಕಂಡುಬರುತ್ತದೆ. ಕ್ಲಿಪ್ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ವಿಡಿಯೊ ಇಂಟರ್ನೆಟ್‌ನಲ್ಲಿ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದೆ. ಜೊತೆಗೆ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋಕ್ಕೆ "ಟಾಪ್ ಮಾಡೆಲ್" ಎಂದು ಬ್ಯೂಟೆಂಗೆಬೀಡೆನ್ ಟ್ವಿಟರ್‌ನಲ್ಲಿ ಶೀರ್ಷಿಕೆ ನೀಡಿದ್ದಾರೆ.

ವಿಡಿಯೊವನ್ನು ಫೆಬ್ರವರಿ 10 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಕ್ಲಿಪ್ 1.2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕ್ಲಿಪ್ ಅನ್ನು ವೀಕ್ಷಿಸಿದ ನಂತರ ನೆಟಿಜನ್‌ಗಳು ಸಂತೋಷಪಟ್ಟಿದ್ದಾರೆ ಮತ್ತು ಅವರು ಅದನ್ನು ವ್ಯಕ್ತಪಡಿಸಲು ಕಾಮೆಂಟ್‌ಗಳ ವಿಭಾಗದಲ್ಲಿ ಟ್ವೀಟ್ ಮಾಡಿದ್ದಾರೆ.
Top model.. 😅 pic.twitter.com/IWrbNPzxmS
— Buitengebieden (@buitengebieden) February 9, 2023
"ಅಯ್ಯೋ..ಏನು ಒಯ್ಯಾರದ ಕ್ಯಾಟ್‌ವಾಕ್. ಈ ಬಾತುಕೋಳಿ ಟಾಪ್ ಮಾಡೆಲ್‌ಗಳಿಗೇನು ಕಮ್ಮಿ ಇಲ್ಲ"ಎಂದು ನೆಟ್ಟಗರು ಕಾಮೆಂಟ್ ಮಾಡಿದ್ದಾರೆ. "ಈ ಬಾತುಕೋಳಿ ಹಿಂದಿನ ಜೀವನದಲ್ಲಿ ಮಾಡೆಲ್ ಆಗಿರಬೇಕು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ತುಂಬಾ ಮುದ್ದಾಗಿದೆ, ವಾಕ್ ಇಷ್ಟವಾಯಿತು" ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಿಂದೆಯೂ ಕಾಗೆಯೊಂದು ಅತ್ಯಂತ ಬಿನ್ನಾಣದಿಂದ ನಡೆದುಕೊಂಡು ಹೋಗುತ್ತಿರುವ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.












Click it and Unblock the Notifications