ಮೈಸೂರು ದಸರಾ ವಿಷಯದಲ್ಲಿ ಪಿಹೆಚ್‌ಡಿ, ಡಾ. ವಿ. ರಂಗನಾಥ್ ಸಾಧನೆ
ಸುಮಾರು ನಾಲ್ಕು ಶತಮಾನಗಳನ್ನು ಸವೆಸಿ ಐದನೇ ಶತಮಾನದತ್ತ ಸಾಗುತ್ತಿರುವ ಮೈಸೂರು ದಸರಾ ಪ್ರತಿವರ್ಷವೂ ಹಲವು ಹೊಸತನಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡು ಅದ್ಧೂರಿತನವನ್ನು ಇಮ್ಮಡಿ ಮಾಡಿಕೊಂಡು ಮುಂದೆ ಸಾಗುತ್ತಿದೆ. ಆಳರಸರ ಕಾಲದ ದಸರಾ ಇವತ್ತು ಸಾಂಸ್ಕೃತಿಕ ಸಂಗಮವಾಗಿ ನಾಡಹಬ್ಬವಾಗಿ ಪ್ರಜ್ವಲಿಸುತ್ತಿದೆ. ಇಂತಹ ದಸರಾದ ಬಗ್ಗೆ ಅಧ್ಯಯನ ಮಾಡಿ ಡಾ. ವಿ. ರಂಗನಾಥ್ ಪಿಹೆಚ್‌ಡಿ ಪದವಿಪಡೆದಿರುವುದು ವಿಶೇಷವಾಗಿದೆ.
ದಸರೆಗೆ ಪೌರಾಣಿಕ ಮತ್ತು ಐತಿಹಾಸಿಕ ಎರಡರ ಬೆಸುಗೆಯಿದೆ. ಇವತ್ತಿಗೂ ದಸರೆಯನ್ನು ಹಲವೆಡೆ ಆಚರಿಸಲಾಗುತ್ತಿದೆಯಾದರೂ ಅಲ್ಲಿನ ಆಚರಣೆಗೂ ಮೈಸೂರಿನಲ್ಲಿ ಆಚರಿಸಲ್ಪಡುವ ದಸರೆಗೂ ಭಿನ್ನತೆ ಮತ್ತು ವಿಶಿಷ್ಟತೆ ಕಂಡು ಬರುತ್ತದೆ. ಇಲ್ಲಿನ ದಸರೆಯಲ್ಲಿ ಸಂಪ್ರದಾಯದ ಲೇಪನದೊಂದಿಗೆ ರಾಜಪಾರಂಪರ್ಯದ ವೈಭವ, ಇತಿಹಾಸದ ಮೇಳೈಕೆ ಸಾಂಸ್ಕೃತಿಕ ಉತ್ಸವವಾಗಿ ಗಮನಸೆಳೆಯುತ್ತಿದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ
ಮೈಸೂರು ದಸರಾದ ಬಗ್ಗೆ ತಿಳಿಯುತ್ತಾ ಹೋದಷ್ಟು ಮಹತ್ವದ ವಿಚಾರಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಈಗಾಗಲೇ ಡಾ. ವಿ. ರಂಗನಾಥ್ ' ಮೈಸೂರು ದಸರಾ ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾ ಪ್ರಬಂಧವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಂಡಿಸಿ, ಪಿ. ಎಚ್. ಡಿ ಪದವಿಯನ್ನು ಪಡೆದಿದ್ದಾರೆ. ಮೈಸೂರು ದಸರಾದ ಬಗ್ಗೆ ಥೇಟ್ ವಿದ್ಯಾರ್ಥಿಯಂತೆಯೇ ಅಧ್ಯಯನ ಮಾಡಿದ ಡಾ. ವಿ. ರಂಗನಾಥ್ ಅವರ ಬದುಕೇ ಇತರರಿಗೆ ಮಾದರಿ.
ಅವರ ಬಗ್ಗೆ ಒಂದಿಷ್ಟು ಹೇಳುವುದಾದರೆ ಮೊದಲಿಗೆ ಕೆಲವು ದಶಕಗಳ ಹಿಂದೆ ಮೈಸೂರಿನಲ್ಲಿ 'ಆರತಿ' ಎಂಬ ದಿನಪತ್ರಿಕೆ ಮತ್ತು 'ಜನರಂಜಿನಿ' ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು. ಆದರೆ ಸಣ್ಣ ಪತ್ರಿಕೆ ನಡೆಸಿ ಜೀವನ ನಡೆಸುವುದು ಕಷ್ಟದ ಕೆಲಸವಾಗಿದ್ದರಿಂದ ಸರಕಾರಿ ಕೆಲಸದತ್ತ ಮುಖ ಮಾಡಿದರು. ಮದುವೆಯಾಯಿತು. ಮಕ್ಕಳಾದವು. ಆ ನಂತರ ಅವರ ಬದುಕಿನಲ್ಲೊಂದು ತಿರುವು ಕಾಣಿಸಿತು.

ಮಗನ ಪಾಠ ಹೇಳುತ್ತಾ ಓದು ಪುನಾರಂಭ
ಅದು 1998ರ ದಿನಗಳು. ಅವರ ಮಗ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಈ ವೇಳೆ ಕಚೇರಿ ಕೆಲಸ ಮುಗಿಸಿ ಬರುತ್ತಿದ್ದ ಅವರಿಗೆ ಪತ್ನಿ ನಂದಿನಿ ಮಗನಿಗೆ ಪಾಠ ಹೇಳಿಕೊಡುವಂತೆ ತಾಕೀತು ಮಾಡಿದರು. ಅದು ಸರಿ ಎನಿಸಿತು. ಅದರಂತೆ ಮಗನಿಗೆ ಪಾಠ ಹೇಳಿಕೊಡುತ್ತಾ ತಾವೇಕೆ ಓದಬಾರದು ಎಂಬ ಆಲೋಚನೆ ಬಂತು. ಅವತ್ತಿನಿಂದ ಅವರು ಕೂಡ ಓದಲು ಆರಂಭಿಸಿದರು. ಅದಾಗಲೇ 1987ರಲ್ಲಿ ಬಿ.ಎಸ್‌ಸಿ. ಓದಿ ಕೆಲಸಕ್ಕೆ ಸೇರಿದ್ದ ಅವರು, ಎಲ್‌ಎಲ್‌ಬಿ ಓದಿದ್ದರೂ ಪರೀಕ್ಷೆ ಬರೆದಿರಲಿಲ್ಲ. ಹಾಗಾಗಿ ಮಗನಿಗೆ ಪಾಠಹೇಳುತ್ತಲೇ ಎಲ್‌ಎಲ್‌ಬಿ ಪರೀಕ್ಷೆಗೆ ಸಿದ್ಧರಾದರು. ಮಗ ಶ್ರೀಹರಿ ಮೂರನೇ ತರಗತಿಗೆ ಬರುವ ವೇಳೆಗೆ ಎಲ್‌ಎಲ್‌ಬಿ ಮುಗಿಸಿದರು. ಬಳಿಕ ಎಂ.ಎ ಇತಿಹಾಸದಲ್ಲಿಯೂ ಉತ್ತೀರ್ಣರಾದರು.

ಹಲವು ಪದವಿಗಳ ಸರದಾರರು
ಆ ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ. ಅದರ ನಂತರ ಪತ್ರಿಕೋದ್ಯಮ ಹಾಗು ಸಮೂಹ ಮಾಧ್ಯಮದಲ್ಲಿ ಪೋಸ್ಟ್‌ಗ್ರಾಜ್ಯುಯೇಟ್ ಡಿಪ್ಲೊಮಾ ಮಾಡಿದರು. ಮಗ ಪ್ರೌಢಶಾಲೆಗೆ ಬಂದ ಬಳಿಕ ಅವನಿಗೆ ಓದು ಹೇಳಿಕೊಡುತ್ತಲೆ ಎಂ.ಎ. ಕನ್ನಡ ಮುಗಿಸಿದರು. ಹೀಗಿರುವಾಗಲೇ ಅವರು ಸುಮಾರು ಹನ್ನೊಂದು ವರ್ಷಕ್ಕೂ ಹೆಚ್ಚು ದಸರಾದ ಒಂದು ಭಾಗವಾಗಿ ಎಲ್ಲಾ ಐಎಎಸ್ ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡಿದ್ದರು. ಆಗ ದಸರಾದ ಬಗ್ಗೆಯೇ ಒಂದು ವ್ಯವಸ್ಥಿತ ಅಧ್ಯಯನ ಮಾಡಬೇಕೆಂದು ಪಿ.ಎಚ್.ಡಿ ಮಾಡಲು ನಿರ್ಧರಿಸಿ ಅದನ್ನು ಮುಗಿಸಿದರು. ಈ ನಡುವೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಗೀತ ಕೊಡುಗೆಗಳು ಎಂಬುದರ ಬಗ್ಗೆ ಡಿ.ಲಿಟ್ ಪದವಿ ಮುಗಿಸಿದ ಅವರಿಗೆ ಅಭಿನಂದನ ಗ್ರಂಥವೂ ಸಲ್ಲಿಕೆಯಾಗಿದೆ.

ದಸರಾ ಬಗ್ಗೆ ತೀವ್ರ ಅಧ್ಯಯನ
2007ರಲ್ಲಿ ರಂಗನಾಥ ಅವರು ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ಪಾಲಿಕೆ ಆಯುಕ್ತರಾಗಿದ್ದ ಸೆಲ್ವಕುಮಾರ್ , ಅವರ ಪದವಿಗಳ ಪಟ್ಟಿನೋಡಿ ನೀವು ದಸರಾ ವಿಭಾಗದಲ್ಲಿ ಕೆಲಸ ಮಾಡಲು ತಿಳಿಸಿದರು. ಅಲ್ಲಿಂದಲೇ ಅವರಿಗೆ ಮೈಸೂರು ದಸರಾದ ಬಗೆಗೆ ಆಸಕ್ತಿ ಮೂಡಿತು. ಅದರಂತೆ ಅವರು ದಸರಾದ ಬಗೆಗೆ ತೀವ್ರ ಅಧ್ಯಯನ ಆರಂಭಿಸಿದರು. ಐದು ವರ್ಷಗಳ ಕಾಲ ದಸರಾದ ಬಗ್ಗೆ ಸಂಶೋಧನೆ ಮಾಡಿದ ಅವರು ಸುಮಾರು 150 ಪುಸ್ತಕಗಳ ಪರಾಮರ್ಶೆ, 84 ಪುಸ್ತಕಗಳ ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಸರಾ ನಡೆಯುವ ಎಲ್ಲ ಸ್ಥಳಗಳಿಗೆ ತೆರಳಿ ಮಾಹಿತಿ ಕಲೆ ಹಾಕಿರುವುದು ಇವರ ವಿಶೇಷತೆಯಾಗಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications