ವೈರಲ್ ವಿಡಿಯೋ; ಬಾಲಕಿ ಜೊತೆ ಕಣ್ಣಾಮುಚ್ಚಾಲೆ ಆಡಿದ ನಾಯಿ!

ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಿ ಬಾಲಕಿ ಹೇಳಿದಂತೆ ಗೋಡೆ ಬಳಿ ಹೋಗಿ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತದೆ. ಈ ದೃಶ್ಯ ನೋಡುಗರನ್ನು ಬೆರಗುಗೊಳಿಸಿದೆ.

ಅವಳು ಮರೆಮಾಗುವ ತನಕ ಸಾಕು ನಾಯಿ ತನ್ನ ಕಣ್ಣುಗಳನ್ನು ಗೋಡೆ ಬಳಿ ಮುಚ್ಚಿಕೊಳ್ಳುತ್ತದೆ. ನಂತರ ಅವಳನ್ನು ಹುಡುಕಲು ಕೋಣೆಗೆ ಹೋಗುತ್ತದೆ. ಈ ವಿಡಿಯೋವನ್ನು ತನ್ಸು ಯೆಗೆನ್ ಅವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸದ್ಯ 1 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

Dog played hide and seek with the girl video goes viral

ವಿಡಿಯೋದಲ್ಲಿ ಪುಟ್ಟ ಹುಡುಗಿ ನಾಯಿಗೆ ಸೂಚನೆಗಳನ್ನು ನೀಡುತ್ತಾಳೆ. ಹುಡುಗಿ ಹೇಳಿದಂತೆ ಅದು ತಪ್ಪದೇ ಅನುಸರಿಸುತ್ತದೆ. ನಾಯಿ ಕೊಂಚ ದೂರ ಹೋಗಿ ಗೋಡೆಗೆ ಮುಖ ಮಾಡಿ ತನ್ನ ಕಣ್ಣುಗಳನ್ನು ಮುಚ್ಚುತ್ತದೆ ಮತ್ತು ಹುಡುಗಿ ತನ್ನನ್ನು ಕೋಣೆಯಲ್ಲಿ ಮರೆಮಾಡುವವರೆಗೂ ಕಾಯುತ್ತದೆ. ಅವಳು ಮರೆಯಾದ ನಂತರ ನಾಯಿಯನ್ನು ಕರೆಯುತ್ತಾಳೆ.

ಆಗ ನಾಯಿ ಅವಳನ್ನು ಹುಡುಕಲು ಪ್ರಾರಂಭಿಸುತ್ತದೆ. ಈ ಅದ್ಬುತ ದೃಶ್ಯವನ್ನು ಕಂಡು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ನಾಯಿ ಇಷ್ಟು ಉತ್ತಮವಾಗಿ ಸೂಚನೆಯನ್ನು ಪಾಲಿಸಲು ಹೇಗೆ ಸಾಧ್ಯ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮ್ಮ ಬಾಲ್ಯವನ್ನು ನೆನೆಪಿಸಿಕೊಂಡಿದ್ದಾರೆ.

Dog played hide and seek with the girl video goes viral

"'ಹೈಡ್ ಅಂಡ್ ಸೀಕ್' ಆಟವನ್ನು ಆಡಲು ಉತ್ತಮ ಸ್ನೇಹಿತ" ಎಂದು ವಿಡಿಯೋಕ್ಕೆ ಶೀರ್ಷಿಕೆಯನ್ನು ಬರೆಯಲಾಗಿದೆ.

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ವಿಡಿಯೋಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ತಮ್ಮ ಸಾಕುಪ್ರಾಣಿಗಳ ಬಗ್ಗೆ ಸಿಹಿ ಕಥೆಗಳನ್ನು ಹಂಚಿಕೊಂಡರೆ, ಇತರರು ಈ ವಿಡಿಯೋವನ್ನು 'ಸ್ವೀಟ್' ಮತ್ತು 'ಅಸಾಧಾರಣ' ಎಂದು ಕರೆದಿದ್ದಾರೆ.

ಕೆಳಗಿನ ಕೆಲವು ಕಾಮೆಂಟ್‌ಗಳನ್ನು ನೋಡಿ:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+