ಅಲರ್ಜಿಯಾ, ಕೋವಿಡ್ ರೋಗವಾ? ಗೊಂದಲ ನಿವಾರಿಸಿಕೊಳ್ಳಿ
ಎರಡು ವರ್ಷಗಳ ಹಿಂದೆ ಕೋವಿಡ್ ರೋಗ ಬಂದ ಬಳಿಕ ಜಗತ್ತು ಬದಲಾಗಿ ಹೋಗಿದೆ. ಜನರ ಪರಿಸ್ಥಿತಿ ಬದಲಾಗಿದೆ. ಅಂತೆಯೇ ರೋಗ ತಂದ ವೈರಸ್ ಕೂಡ ಬಹಳಷ್ಟು ರೂಪಾಂತರ ಮಾಡಿದೆ. ಅದರ ವರ್ತನೆಯ ಮರ್ಮವನ್ನೇ ತಿಳಿಯದಾಗಿದೆ.
ಇದು ಕೋವಿಡ್‌ನ ರೋಗಲಕ್ಷಣ, ಗುಣಲಕ್ಷಣ ಎಂದು ಭಾವಿಸುತ್ತಿರುವಂತೆಯೇ ಹೊಸ ರೋಗ ಲಕ್ಷಣವೇ ತಲೆದೋರಿರುತ್ತದೆ. ಅದರಲ್ಲೂ ಡೆಲ್ಟಾ ರೂಪಾಂತರಿ ಕೋವಿಡ್ ವೈರಸ್ ಅಂತೂ ಭೂಮಿಯನ್ನು ನರಕವಾಗಿಸಿತು.
ಹೊಸ ತಳಿ, ಹೊಸ ರೂಪಾಂತರಗಳಿಂದ ಮುಂದಡಿ ಇಡುತ್ತಾ ಹೋಗುತ್ತಿರುವ ಕೋವಿಡ್‌ನ ಜಾಡನ್ನು ತಿಳಿಯುವುದೇ ವಿಜ್ಞಾನಿಗಳಿಗೆ ತಲೆ ಕೆಡಿಸಿದೆ. ಓಮೈಕ್ರಾನ್ ರೂಪಾಂತರಿ ವೈರಸ್‌ನಿಂದ ಉದ್ಭವವಾದ ಕೋವಿಡ್ ಕೋಟ್ಯಂತರ ಮಂದಿಗೆ ಸೋಂಕು ತಂದಿತು. ಆದರೆ, ಎರಡನೇ ಅಲೆಯ ಡೆಲ್ಟಾ ರೂಪಾಂತರಿಯಷ್ಟು ಅದು ಅಪಾಯಕಾರಿ ಎನಿಸಲಿಲ್ಲ.
ಮುಂಬರುವ ಅಲೆಗಳು ಡೆಲ್ಟಾದಷ್ಟು ಡೇಂಜರ್ ಅಲ್ಲ ಎಂದು ತಜ್ಞರು ಭಾವಿಸಿದ್ದಾರಾದರೂ ಅಂದಾಜು ಮಾಡಿದ ರೀತಿಯಲ್ಲೇ ಪರಿಸ್ಥಿತಿ ಎದುರಾಗುತ್ತದೆ ಎಂದು ನಂಬಿಕೊಂಡಿರಲು ಅಸಾಧ್ಯ. ಸಾರ್ಸ್ ಕೋವಿಡ್ ವೈರಸ್‌ಗೆ ಹರಡಲು ದೇಹವೇ ಮಾಧ್ಯಮ. ಅದಕ್ಕೆ ಏನು ಮಾಡಬೇಕೋ ಆ ಕೆಲಸವನ್ನು ರೂಪಾಂತರಗೊಂಡಾದರೂ ಮಾಡುತ್ತದೆ. ಹೀಗಾಗಿ, ರೂಪಾಂತರಗೊಳ್ಳುವುದೇ ಅದರ ನಿರಂತರ ಕೆಲಸ. ಇಂಥ ರೂಪಾಂತರಿಗಳಲ್ಲೊಂದು ಡೆಲ್ಟಾ ರೀತಿ ಅಪಾಯ ಸೃಷ್ಟಿಸುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ?
ಇದೀಗ ಓಮೈಕ್ರಾನ್‌ನ ಇನ್ನಷ್ಟು ರೂಪಾಂತರಿಗಳು ತಲೆದೋರುತ್ತಿವೆ. ಜಗತ್ತಿನಾದ್ಯಂತ ಪ್ರಕರಣಗಳು ಹೆಚ್ಚುತ್ತಿವೆ. ಆತಂಕ ಎಂದರೆ ಕೋವಿಡ್ ರೋಗಲಕ್ಷಣ ಅಲ್ಲವೆಂದು ನಾವು ಈವರೆಗೂ ಕಂಡುಕೊಂಡಿದ್ದೆವೋ ಅಂಥವು ಈಗ ತಲೆದೋರಿವೆ. ಉಸಿರಾಟದ ತೊಂದರೆಯ ಕೆಲ ಲಕ್ಷಣಗಳು ಓಮೈಕ್ರಾನ್ ಸೋಂಕಿನಿಂದ ಬರುತ್ತಿವೆ. ಇದು ತಜ್ಞರನ್ನು ಕಳವಳಕ್ಕೀಡು ಮಾಡಿದೆ.

ಓಮೈಕ್ರಾನ್ ಮತ್ತು ಅಲರ್ಜಿ
ಡೆಲ್ಟಾ ರೂಪಾಂತರಿ ವೈರಸ್‌ನಿಂದ ಉಂಟಾದ ಸೋಂಕು ಬಹಳ ಗಂಭೀರ ಸ್ತರದ್ದಾಗಿತ್ತು. ಸಾವಿನ ಪ್ರಮಾಣ ಹೆಚ್ಚೇ ಇತ್ತು. ಓಮೈಕ್ರಾನ್‌ನಿಂದ ಸೋಂಕಿನ ಸಂಖ್ಯೆ ಹೆಚ್ಚಾದರೂ ರೋಗದ ತೀವ್ರತೆ ಕಡಿಮೆ ಇತ್ತು. ಸಾವಿನ ಸಂಖ್ಯೆಯೂ ಕಡಿಮೆ ಇತ್ತು. ಇದರಿಂದ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿತ್ತು.
ಡೆಲ್ಟಾ ವೈರಸ್ ನಮ್ಮ ದೇಹದ ಕೆಳ ಶ್ವಾಸನಾಳದಲ್ಲಿ ಸೋಂಕು ಉಂಟು ಮಾಡಿದರೆ, ಓಮೈಕ್ರಾನ್ ಮೇಲ್ಭಾಗದ ಶ್ವಾಸನಾಳವನ್ನು ಆವರಿಸಿತ್ತು. ಇದರಿಂದ ಜ್ವರ, ಗಂಟಲು ನೋವು, ನೆಗಡಿ, ಸೀನು, ತಲೆನೋವು, ಮೈಕೈ ನೋವು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕುತೂಹಲವೆಂದರೆ ಅಸ್ತಮಾ ಇತ್ಯಾದಿ ರೋಗಿಗಳಿಗೆ ಕಾಣಿಸಿಕೊಳ್ಳುವ ಅಲರ್ಜಿ ಲಕ್ಷಣಗಳೂ ಇದೇ ತೆರನಾಗಿರುತ್ತವೆ. ಶ್ವಾಸನಾಳದ ಮೇಲ್ಭಾಗಕ್ಕೆ ಅಲರ್ಜಿ ಅದಾಗಲೂ ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಸೀನುವುದು, ಕೆಮ್ಮುವುದು, ಸುಸ್ತಾಗುವುದು, ತಲೆನೋವು ಇತ್ಯಾದಿ ಲಕ್ಷಣಗಳು ಇರುತ್ತವೆ. ಈಗ ಓಮೈಕ್ರಾನ್ ರೂಪಾಂತರಿಯಲ್ಲೂ ಅವೇ ರೋಗಲಕ್ಷಣಗಳಿವೆ.

ವ್ಯತ್ಯಾಸ ಏನಿದೆ?
ಅಲರ್ಜಿ ಎಂಬುದು ಸಾಮಾನ್ಯವಾಗಿ ಮರಗಳ ಹೂವಿನ ಪರಾಗ ಅಥವಾ ಧೂಳು ಅಥವಾ ಹೊಗೆ ಅಥವಾ ದಟ್ಟ ವಾಸನೆ ಅಥವಾ ಕೆಲ ಆಹಾರವಸ್ತು ಇತ್ಯಾದಿಯಿಂದ ಉಂಟಾಗಬಹುದು. ಈ ವಸ್ತುವಿನ ಸಂಪರ್ಕ ಬಂದ ಕೆಲ ಹೊತ್ತಿನಲ್ಲೇ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಅಂದರೆ ರೋಗಲಕ್ಷಣ ತಲೆದೋರಲು ಹೆಚ್ಚು ಸಮಯ ತಗುಲುವುದಿಲ್ಲ.
ಆದರೆ, ಓಮೈಕ್ರಾನ್ ಸೋಂಕು ತಗುಲಿದರೆ ಎರಡರಿಂದ ನಾಲ್ಕು ದಿನಗಳ ಬಳಿಕ ರೋಗಲಕ್ಷಣ ಕಾಣಿಸುತ್ತದೆ. ಆದರೆ, ಒಂದು ರೀತಿಯ ಸುಸ್ತಾಗುವ ರೀತಿಯಲ್ಲಿ ಭಾಸವಾಗುತ್ತದೆ. ಅಲರ್ಜಿಯಲ್ಲಿ ಈ ರೀತಿ ಸುಸ್ತಾಗುವಿಕೆ ಕಾಣಿಸುವುದಿಲ್ಲ

ಓಮೈಕ್ರಾನ್, ಅಲರ್ಜಿ ವ್ಯತ್ಯಾಸ ಗುರುತಿಸುವ ಲಕ್ಷಣಗಳು
ಕೋವಿಡ್-19 ರೋಗದಲ್ಲಿ ಇರುವ ಸಾಮಾನ್ಯ ಲಕ್ಷಣ ಎಂದರೆ ಜ್ವರ. ದೇಹದೊಳಗೆ ಅಡಿ ಇಟ್ಟ ಈ ವೈರಸ್ ವಿರುದ್ಧ ದೇಹದ ಪ್ರತಿಕಾಯಗಳು ಪ್ರತಿರೋಧ ಒಡ್ಡುತ್ತಿರುವ ಪರಿಣಾಮವೇ ದೇಹದೊಳಗೆ ಉಷ್ಣಾಂಶ ಏರುವುದು. ಅಲರ್ಜಿ ಆದವರಿಗೆ ಜ್ವರ ಲಕ್ಷಣ ಇರುವುದಿಲ್ಲ.
ಹಾಗೆಯೇ, ಕೋವಿಡ್ ಬಂದರೆ ವಾಸನೆ ಮತ್ತು ರುಚಿ ಗ್ರಹಿಕೆಯ ಶಕ್ತಿ ಕಡಿಮೆ ಆಗುತ್ತದೆ. ಅಲರ್ಜಿ ಬಂದವರಿಗೆ ವಾಸನಾ ಶಕ್ತಿ ಕಡಿಮೆ ಆಗುತ್ತದಾದರೂ ಮೂಗು ಕಟ್ಟಿಕೊಂಡಿರುವುದು ಅದಕ್ಕೆ ಕಾರಣ. ಅದು ಹೆಚ್ಚು ಹೊತ್ತು ಇರುವುದಿಲ್ಲ. ಕೋವಡ್ ಬಂದವರೆಗೆ ಈ ಸಮಸ್ಯೆ ತುಸು ದೀರ್ಘವಾಗಿರುತ್ತದೆ.
ಹಾಗೆಯೇ, ಅಲರ್ಜಿ ಬಂದವರಿಗೆ ಕಣ್ಣು ತುರಿಕೆ ಮತ್ತು ಕಣ್ಣೀರು ಸುರಿಯುವ ಲಕ್ಷಣ ತಲೆದೋರಬಹುದು. ಇದು ಕೋವಿಡ್ ಸೋಂಕಿತರಲ್ಲಿ ಇರುವುದಿಲ್ಲ.

ಅಲರ್ಜಿ ರೋಗಲಕ್ಷಣ ಪತ್ತೆ ಮಾಡುವುದು
ನಮಗೆ ಬಹಳ ಕಾಲದಿಂದ ಅಲರ್ಜಿ ಸಮಸ್ಯೆ ಇದ್ದರೆ ಅನೇಕ ಬಾರಿ ರೋಗಲಕ್ಷಣಗಳನ್ನು ಎದುರಿಸಿರುತ್ತೇವೆ. ಬಹುತೇಕ ಒಂದೇ ಮಾದರಿಯಲ್ಲಿ ಈ ರೋಗಲಕ್ಷಣಗಳಿರುತ್ತವೆ. ಹೀಗಾಗಿ, ಇದು ಅಲರ್ಜಿಯಿಂದ ಆಗಿದ್ದು ಎಂದು ಸುಲಭವಾಗಿ ಗುರುತಿಸಲು ಸಾಧ್ಯ.
ಒಂದು ವೇಳೆ ಕೋವಿಡ್ ಬಂದು ಅಲರ್ಜಿಗಳಿಗೆ ಔಷಧ ತೆಗೆದುಕೊಂಡಲ್ಲಿ ಕೆಮ್ಮು, ಮೂಗು ಕಟ್ಟಿಕೊಳ್ಳುವುದು ಇತ್ಯಾದಿ ಸಮಸ್ಯೆ ನಿವಾರಣೆ ಆಗುತ್ತದೆಯೇ ಹೊರತು ಜ್ವರ, ಮೈಕೈ ನೋವು ಹಾಗೇ ಉಳಿದುಕೊಳ್ಳುತ್ತದೆ.
ಪರೀಕ್ಷೆ ಮಾಡಿಸಿ, ಸುರಕ್ಷಿತವಾಗಿರಿ
ಒಂದು ವೇಳೆ ಅಲರ್ಜಿ ರೋಗಲಕ್ಷಣಗಳು ಕಾಣಿಸಿಕೊಂಡು, ಅವರು ಕೋವಿಡ್‌ನಿಂದ ಆಗಿದ್ದಾ ಅಥವಾ ಅಲರ್ಜಿಯಾ ಎಂಬ ಗೊಂದಲ ಇದ್ದಲ್ಲಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.
ಈಗ ಕೋವಿಡ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕಚೇರಿಗಳೆಲ್ಲಾ ಮತ್ತೆ ಶುರುವಾಗಿವೆ. ಹಲವೆಡೆ ಜನಜಾತ್ರೆಯೇ ಸೇರುತ್ತಿದೆ. ಆದರೆ, ವೈರಸ್ ಸೋಂಕು ಹರಡಲು ಇದೇ ಸಾಕು. ಅಂತೆಯೇ ಈಗ ಸೋಂಕು ಹೆಚ್ಚುತ್ತಿದೆ.
ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಬಹಳ ಹುಷಾರಾಗಿರಿ. ಹೊರಗೆ ಹೋಗುವುದಾಗ ಆದಷ್ಟೂ ಮೂಗು ಮತ್ತು ಬಾಯಿ ಮುಚ್ಚಿರುವ ರೀತಿ ಮಾಸ್ಕ್ ಧರಿಸುವುದು, ಧೂಳಿನಲ್ಲಿ ಹೆಚ್ಚು ಕಾಲ ಕಳೆಯದಿರುವುದು, ಮಲಗುವ ಮುನ್ನ ಸ್ನಾನ ಮಾಡುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಿ.
(ಒನ್ಇಂಡಿಯಾ ಸುದ್ದಿ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications