• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲಕ್ರಮೇಣ ಲಸಿಕೆ ಪ್ರತಿಕಾಯ ತಗ್ಗುತ್ತದೆ, ಪ್ರತಿರಕ್ಷಣಾ ವ್ಯವಸ್ಥೆ ಬ್ಯಾಕಪ್ ನೀಡಲಿದೆ

|
Google Oneindia Kannada News

ನವದೆಹಲಿ, ಆಗಸ್ಟ್‌ 30: ಕೊರೊನಾ ಲಸಿಕೆಯಿಂದ ಉತ್ಪತ್ತಿಯಾದ ಪ್ರತಿಕಾಯಗಳು ಕಾಲಕ್ರಮೇಣ ಕ್ಷೀಣಿಸುತ್ತವೆ. ಆದರೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬೂಸ್ಟರ್‌ ಲಸಿಕೆ ಅವಲಂಬಿಸದ ಬ್ಯಾಕಪ್ ಯೋಜನೆಯನ್ನು ಹೊಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಪೆನಿಸೆಲ್ವಿಯಾ ಯೂನಿವರ್ಸಿಟಿ ನಡೆಸಿದ ಅಧ್ಯಯನ ಈ ಅಂಶದ ಮೇಲೆ ಬೆಳಕು ಚೆಲ್ಲಿದೆ.

ಪೆರೆಲ್ಮಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು mRNA ಲಸಿಕೆ ಪಡೆದ ನಂತರದ ಆರು ತಿಂಗಳ ಅವಧಿಯಲ್ಲಿ 61 ಜನರನ್ನು ಟ್ರ್ಯಾಕ್ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲಸಿಕೆ ಪಡೆದವರಲ್ಲಿ ಕಾಲಕ್ರಮೇಣ ಲಸಿಕೆಯಿಂದ ಉತ್ಪತ್ತಿಯಾದ ಪ್ರತಿಕಾಯಗಳು ಕ್ಷೀಣಿಸಿರುವುದು ಗೋಚರಿಸಿದೆ. ಆದರೆ ಲಸಿಕೆಯು ಬಿ ಹಾಗೂ ಟಿ ಜೀವಕೋಶಗಳ ರೂಪದಲ್ಲಿ ದೀರ್ಘಕಾಲದ ರೋಗನಿರೋಧಕವನ್ನು ಸೃಷ್ಟಿಸಿರುವುದು ಕಂಡುಬಂದಿದೆ. ಇದು ಕ್ರಮೇಣ ಏರಿಕೆಯಾಗಿದ್ದು, ಗಂಭೀರವಾದ ಅನಾರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

'ಇದು ಆಶ್ಚರ್ಯಕರ ಸಂಗತಿ' ಎಂದು ಇನ್‌ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿ ನಿರ್ದೇಶಕ ಜಾನ್ ವ್ಹೆರಿ ತಿಳಿಸಿದ್ದಾರೆ. ಈ ಸಂಶೋಧನೆಯನ್ನು ಆಗಸ್ಟ್‌ 23ರಂದು ಬಿಡುಗಡೆ ಮಾಡಲಾಗಿದೆ.

ಕೊರೊನಾ ಸೋಂಕಿನ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳು ಸದ್ಯಕ್ಕೆ ಡೆಲ್ಟಾ ರೂಪಾಂತರದ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿಲ್ಲ ಎನ್ನಲಾಗುತ್ತಿದೆ. ಈ ಕಳವಳದೊಂದಿಗೆ ಆರೋಗ್ಯಾಧಿಕಾರಿಗಳು ದೇಹದಲ್ಲಿನ ಪ್ರತಿಕಾಯ ಮಟ್ಟವನ್ನು ಹೆಚ್ಚಿಸಲು ಮೂರನೇ ಡೋಸ್ ಲಸಿಕೆ ನೀಡುವ ಆಲೋಚನೆಯನ್ನು ಮಾಡುತ್ತಿದ್ದಾರೆ.

ವರ್ಷವಾದರೂ ಕೋವಿಡ್‌ ಸೋಂಕಿತರಿಗೆ ಕಾಡಬಹುದು ಆಯಾಸ, ಉಸಿರಾಟದ ಸಮಸ್ಯೆ: ಅಧ್ಯಯನವರ್ಷವಾದರೂ ಕೋವಿಡ್‌ ಸೋಂಕಿತರಿಗೆ ಕಾಡಬಹುದು ಆಯಾಸ, ಉಸಿರಾಟದ ಸಮಸ್ಯೆ: ಅಧ್ಯಯನ

ಎರಡನೇ ಡೋಸ್ ಪಡೆದ ಐದು ತಿಂಗಳ ನಂತರ ಹೆಚ್ಚುವರಿ ಲಸಿಕೆ ನೀಡಲು ಆರಂಭಿಸಬೇಕೇ ಎಂಬ ಕುರಿತು ಆಲೋಚನೆ ಸಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಮೂರನೇ ಡೋಸ್ ಲಸಿಕೆ ದೇಹದಲ್ಲಿ ಪ್ರತಿಕಾಯ ವೃದ್ಧಿಗೆ ಹಾಗೂ ಕೊರೊನಾ ಸೋಂಕನ್ನು ದೀರ್ಘಕಾಲ ತಡೆಯುವಲ್ಲಿ ಉತ್ತಮ ಭರವಸೆ ನೀಡಿದೆ. ಆದರೆ ದೇಹವು ತನ್ನದೇ ಆದ ನೈಸರ್ಗಿಕ ಬೆಂಬಲ ಹೊಂದಿದ್ದು, ಪ್ರತಿಕಾಯಗಳ ಮಟ್ಟ ಕಡಿಮೆಯಾದಾಗಲೂ ಕೊರೊನಾ ವಿರುದ್ಧ ರಕ್ಷಣೆ ನೀಡುತ್ತದೆ. ಹೀಗಾಗಿ ಮೂರನೇ ಡೋಸ್ ಲಸಿಕೆ ನೀಡುವ ಅನಿವಾರ್ಯತೆ ಕುರಿತು ಎರಡನೇ ಯೋಚನೆ ಮಾಡುವುದು ಒಳಿತು ಎಂದು ವೆರ್ರಿ ಹೇಳಿದ್ದಾರೆ.

ದೇಹದಲ್ಲಿ ಪ್ರತಿಕಾಯಗಳು ಕ್ಷೀಣಿಸಿ ಸೌಮ್ಯ ಸ್ವರೂಪದಲ್ಲಿ ಸೋಂಕು ತಗುಲಿದರೆ, ಬಿ ಜೀವಕೋಶ ತಕ್ಷಣವೇ ಪ್ರತಿಕ್ರಿಯಿಸಿ ಹೊಸ ಪ್ರತಿಕಾಯಗಳ ಸೃಷ್ಟಿಗೆ ತಂತಾನೇ ನೆರವು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

 Covid Antibodies Wane Over Time Immune System Has Backup Says Study

ಮೂಗು ಹಾಗೂ ಗಂಟಲಿನ ಒಳಭಾಗದ ಮೇಲ್ಮೈನಲ್ಲಿರುವ ಪ್ರತಿಕಾಯಗಳು ಕೊರೊನಾ ಸೋಂಕನ್ನು ನಿರ್ಬಂಧಿಸುತ್ತವೆ. ಆದರೆ ರಕ್ಷಣಾತ್ಮಕ ಪ್ರತಿಕಾಯಗಳು ಮಸುಕಾದಂತೆ, ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ ಕನಿಷ್ಠ ಹೊಸ ಪ್ರತಿಕಾಯಗಳು ಪ್ರತಿಕ್ರಿಯೆಗೆ ಪ್ರಚೋದಿಸುವವರೆಗೆ ಎಂದು ಮಾಹಿತಿ ನೀಡಿದ್ದಾರೆ.

ಮಾಡೆರ್ನಾ ಹಾಗೂ ಫೈಜರ್ ಲಸಿಕೆಗಳು ಈ ಸೋಂಕು ನಿರ್ಬಂಧಿತ ಪ್ರತಿಕಾಯಗಳ ಬಿ ಜೀವಕೋಶವನ್ನು ಸೃಷ್ಟಿಮಾಡುವಲ್ಲಿ ಸಮರ್ಥವಾಗಿದೆ. ಇದು ಕೊರೊನಾ ಸೌಮ್ಯ ಪ್ರಕರಣದಲ್ಲಿ ಆಲ್ಫಾ, ಬೆಟಾ ಹಾಗೂ ಡೆಲ್ಟಾ ರೂಪಾಂತರಗಳನ್ನೂ ನಿರ್ಬಂಧಿಸಬಲ್ಲವು ಎಂಬುದನ್ನು ವೆರಿ ತಂಡ ಕಂಡುಕೊಂಡಿದೆ.

ಹೆಚ್ಚಿನ ಮಟ್ಟದ ಲಸಿಕೆ ಪ್ರೇರಿತ ಟಿ ಕೋಶಗಳು ವೈರಸ್ ಸೋಂಕಿತ ಕೋಶಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಕೊಲ್ಲುವಲ್ಲಿ ಸಾಮರ್ಥ್ಯ ಹೊಂದಿರುವ ಒಂದು ವಿಧದ ಬಿಳಿ ರಕ್ತಕಣವನ್ನು ಸೃಷ್ಟಿಸಬಲ್ಲದಾಗಿದೆ. ಇದು ಸೋಂಕಿನಿಂದ ರಕ್ಷಣೆಗೆ ಹೆಚ್ಚುವರಿ ರಕ್ಷಾ ಕವಚವಾಗಿ ಕೆಲಸ ನಿರ್ವಹಿಸುತ್ತದೆ ಎಂದಿದ್ದಾರೆ.

ಆಲ್ಫಾಗೆ ಹೋಲಿಸಿದರೆ ಡೆಲ್ಟಾ ರೂಪಾಂತರಿಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುಆಲ್ಫಾಗೆ ಹೋಲಿಸಿದರೆ ಡೆಲ್ಟಾ ರೂಪಾಂತರಿಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚು

ತೀವ್ರವಾದ ಕೊರೊನಾಸ ಸೋಂಕು, ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಸಾವಿನ ಪ್ರಮಾಣ ತಗ್ಗಿಸುವಲ್ಲಿ ರೋಗನಿರೋಧಕ ಶಕ್ತಿ ಎಷ್ಟು ಪರಿಣಾಮಕಾರಿ ಎಂಬುದನ್ನು ಈ ಅಧ್ಯಯನ ಒಳಗೊಂಡಿದೆ. ಲಸಿಕೆ ಪಡೆದ ನಂತರವೂ ಸೋಂಕು ಕಾಣಿಸಿಕೊಂಡರೆ, ಸೋಂಕಿನ ಗಂಭೀರತೆ ಕಡಿಮೆಯಾಗಲು ಏನು ಕಾರಣ ಎಂಬುದನ್ನೂ ವಿವರಿಸಿದೆ.

ಲಸಿಕೆ ಪಡೆದ ನಂತರವೂ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆಯೇ ಎಂಬ ದೃಷ್ಟಿಯಲ್ಲಿ ಪರೀಕ್ಷೆ ನಡೆಸಿದರೆ, ಲಸಿಕೆ ಪಡೆದ ಕೆಲವು ಕಾಲದ ನಂತರ ಪ್ರತಿಕಾಯ ಮಟ್ಟ ತಗ್ಗಿರುವುದು ಕಂಡುಬಂದಿದೆ. ಆದರೆ ಸೋಂಕಿನ ಗಂಭೀರತೆಯನ್ನು ತಡೆಯುವಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಗಮನಿಸುವುದಾದರೆ, ಲಸಿಕೆಗಳ ಪರಿಣಾಮ ಬೆಳಕಿಗೆ ಬರುತ್ತದೆ. ಲಸಿಕೆಯಿಂದ ಸೃಷ್ಟಿಯಾದ ಕೆಲವು ಪ್ರತಿಕಾಯಗಳು ನಿಮಗೆ ಸೋಂಕಿನಿಂದ ದೀರ್ಘಕಾಲ ರಕ್ಷಣೆ ನೀಡಬಲ್ಲದು. ಬಿ ಹಾಗೂ ಟಿ ಜೀವಕೋಶಗಳು ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ತಡೆಯಲು ಸಮರ್ಥವಾಗಿವೆ ಎಂಬುದರ ಬಗ್ಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.

ಈ ರೋಗನಿರೋಧಕ ಬ್ಯಾಕಪ್‌ಗಳು ಕೊರೊನಾ ಲಕ್ಷಣಗಳ ಅವಧಿಯನ್ನು ತಗ್ಗಿಸುತ್ತವೆ. ಸೋಂಕು ಗಂಭೀರವಾಗದಂತೆ ತಡೆಯಲಿವೆ ಹಾಗೂ ಸೋಂಕು ಇತರರಿಗೆ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಲಸಿಕೆ ಪಡೆಯದವರಿಂದಲೇ ಸಮಸ್ಯೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಜನರು ಲಸಿಕೆಯನ್ನು ಪಡೆದುಕೊಳ್ಳಲೇಬೇಕಿದೆ ಎಂದು ತಂಡ ಪ್ರತಿಪಾದಿಸಿದೆ.

English summary
Antibodies against the coronavirus wane over time, but the immune system has a backup plan that doesn't rely on boosters, according to a study by scientists at the University of Pennsylvania
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X