ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ರೋಗದ ಲಕ್ಷಣಗಳೇನು: ಸಾವನ್ನೇ ಗೆದ್ದವರು ಹೇಳಿದ್ದಾರೆ ನೋಡಿ..

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ನಲುಗುತ್ತಿದೆ. ಪ್ರಪಂಚದಾದ್ಯಂತ ಇಲ್ಲಿಯವರೆಗೂ ಒಟ್ಟು 16,17,559 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 96,918 ಮಂದಿಯನ್ನು ಕೊರೊನಾ ಬಲಿ ಪಡೆದಿದ್ದರೆ, 365,728 ಮಂದಿ ಸಾವನ್ನೇ ಗೆದ್ದು ಬಂದಿದ್ದಾರೆ.

ಹಾಗೆ ಕೊರೊನಾ ವೈರಸ್ ವಿರುದ್ಧ ಹೋರಾಡಿ, ಸಾವಿನ ದವಡೆಯಿಂದ ಬಚಾವ್ ಆಗಿ ಬಂದವರು ತಮ್ಮ ಕರಾಳ ಅನುಭವಗಳನ್ನು ಬಿಚ್ಚಿಡುವ ಮೂಲಕ ಉಳಿದವರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ಬಂದರೆ ಹಾಗಾಗುತ್ತೆ, ಹೀಗಾಗುತ್ತೆ ಅಂತ ಹಲವರು ಹೇಳ್ತಿದ್ದಾರೆ ನಿಜ. ಆದ್ರೆ, ಕೊರೊನಾ ವೈರಸ್ ಸೋಂಕು ತಗುಲಿದರೆ ಏನೇನಾಗುತ್ತೆ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂತ ರೋಗ ಗೆದ್ದವರೇ ಬಹಿರಂಗ ಪಡಿಸಿದ್ದಾರೆ.

ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ? ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

ಕೊರೊನಾ ವೈರಸ್ ನ ಬಗ್ಗುಬಡಿಯುವಲ್ಲಿ ಯಶಸ್ವಿಯಾದವರು ಪಟ್ಟಿ ಮಾಡಿರುವ ಕೆಲ ರೋಗ ಲಕ್ಷಣಗಳ ಪಟ್ಟಿ ಇಲ್ಲಿದೆ, ಒಮ್ಮೆ ನೋಡಿಕೊಳ್ಳಿ...

ಸೈನಸ್ ಸಮಸ್ಯೆ

ಸೈನಸ್ ಸಮಸ್ಯೆ

ಕೊರೊನಾ ವೈರಸ್ ಕಾಣಿಸಿಕೊಂಡರೆ, ಶೀತ ಮತ್ತು ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದರ ಜೊತೆಗೆ ಸೈನಸ್ ಸಮಸ್ಯೆ ಕೂಡ ಉಲ್ಬಣವಾಗುತ್ತದೆ. ''ತಲೆ ಭಾರ, ಕಣ್ಣು ಮತ್ತು ಕಿವಿಯಲ್ಲಿ ಉರಿ ಮತ್ತು ಗಂಟಲು ನೋವು ನನಗೆ ತುಂಬಾ ಬಾಧಿಸುತ್ತಿತ್ತು. ಸೈನಸ್ ಸಮಸ್ಯೆ ವಿಪರೀತವಾಯಿತು'' ಎಂದು ವುಹಾನ್ ನಗರದ ಓರ್ವ ರೋಗಿ ತಿಳಿಸಿದ್ದಾರೆ.

ಕಿವಿ ನೋವು

ಕಿವಿ ನೋವು

ಕೊರೊನಾ ಸೋಂಕಿತ ಮತ್ತೋರ್ವ ರೋಗಿಗೆ ಕಿವಿಯಲ್ಲಿ ಅತೀವ ನೋವು ಕಾಣಿಸಿಕೊಂಡಿತ್ತು. ಕೊರೊನಾ ವೈರಸ್ ಹಾವಳಿಯಿಂದ ಒಳ ಮತ್ತು ಮಧ್ಯ ಕಿವಿಯ ನಡುವೆ ಸಾಗುವ ಯುಸ್ಟಾಚಿಯನ್ ಟ್ಯೂಬ್ ಮುಚ್ಚಿ ಹೋಗಲಿದ್ದು, ಅದರಿಂದ ಕಿವಿಯಲ್ಲಿ ಹೆಚ್ಚು ಒತ್ತಡ ಸೃಷ್ಟಿಯಾಗುತ್ತದೆ.

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

ತಲೆ ಸಿಡಿತ

ತಲೆ ಸಿಡಿತ

ಬಹುತೇಕ ಕೊರೊನಾ ಸೋಂಕಿತರಲ್ಲಿ ತಲೆ ನೋವು ಕಾಣಿಸಿಕೊಂಡಿದೆ. ಹಾಗಂತ ತಲೆ ನೋವು ಬಂದ ಕೂಡಲೆ ಕೋವಿಡ್-19 ಪಾಸಿಟಿವ್ ಇರಬಹುದು ಎಂದು ಆತಂಕಕ್ಕೊಳಗಾಗಬೇಡಿ. ಇನ್ನು, ಅಲರ್ಜಿಯಾದಾಗ ಉಂಟಾಗುವಂತೆ ಕೆಲವರ ಕಣ್ಣಲ್ಲಿ ಉರಿ ಮತ್ತು ಕಡಿತದ ಅನುಭವ ಕೂಡ ಆಗಿದೆ.

ಜಾಯಿಂಟ್ ಪೇನ್

ಜಾಯಿಂಟ್ ಪೇನ್

ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಉಸಿರಾಟದ ಸಮಸ್ಯೆ ಕೂಡ ಅನೇಕ ಕೊರೊನಾ ಪೀಡಿತರನ್ನು ಕಾಡಿದೆ. ಇವೆಲ್ಲದರ ಜೊತೆಗೆ ಜಾಯಿಂಟ್ ಪೇನ್ ಕೂಡ ಕೆಲವರನ್ನು ಬಾಧಿಸಿದೆ.

ಎದೆ ಬಿಗಿದ ಅನುಭವ

ಎದೆ ಬಿಗಿದ ಅನುಭವ

ಸುಸ್ತು, ಹಸಿವಾಗದೇ ಇರುವುದು, ನೆಗಡಿ, ಆಲಸ್ಯ, ಜಡತ್ವ, ಅತೀವ ಕೆಮ್ಮು, ಎದೆ ಭಾಗದಲ್ಲಿ ಬಿಗಿದಂತಹ ಅನುಭವ ಹಲವು ಕೊರೊನಾ ಪೀಡಿತರಿಗೆ ಆಗಿದೆ. ಇವುಗಳ ಪೈಕಿ ಯಾವುದಾದರೂ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡರೆ, ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ. ಅದರಿಂದ, ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಒಳಿತು.

English summary
Here is the list of Covid 19 symptoms as explained by Coronavirus Survivors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X