• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಸಿವಿನ ದವಡೆಗೆ ಸಿಲುಕಿರುವ ಬೀದಿ ನಾಯಿಗಳಿಗೆ ಆಹಾರ ಕೊಡಿ ಪ್ಲೀಸ್

By ರಾ ಸೋಮನಾಥ್
|

[ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಇಡೀ ದೇಶವೇ ಲಾಕ್ ಡೌನ್ ಆಗಿದೆ. ದಿನಸಿ ಮತ್ತು ಔಷಧಿ ಅಂಗಡಿಗಳನ್ನು ಹೊರತು ಪಡಿಸಿದರೆ, ಮಿಕ್ಕೆಲ್ಲಾ ವ್ಯಾಪಾರ-ವಹಿವಾಟು ಸ್ತಬ್ಧವಾಗಿದೆ. ಹೋಟೆಲ್, ಬೀದಿಬದಿ ಕ್ಯಾಂಟೀನ್, ಕಲ್ಯಾಣ ಮಂಟಪ, ಬೇಕರಿ ಬಂದ್ ಆಗಿರುವ ಕಾರಣ ಅವುಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಬೀದಿ ನಾಯಿಗಳಿಗೆ ಇದೀಗ ಆಹಾರ-ನೀರು ಇಲ್ಲದಂತಾಗಿದೆ. ಹೀಗಾಗಿ, ಓಮ್ನಿ ವ್ಯಾನ್ ನಲ್ಲಿ ಹಾಲು, ಬಿಸ್ಕತ್ತುಗಳನ್ನು ತುಂಬಿಸಿಕೊಂಡು ಹಸಿವಿನಿಂದ ಒದ್ದಾಡುತ್ತಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ ಪ್ರಾಣಿ ಹಕ್ಕು ಕಾರ್ಯಕರ್ತ ಸೋಮನಾಥ್. ಕೊರೊನಾ ಸಂಕಟದ ಈ ದಿನಗಳಲ್ಲಿ ಯಾವುದೇ ಆಹಾರ ಮೂಲವಿಲ್ಲದೆ ಹಸಿವಿನ ದವಡೆಗೆ ಸಿಲುಕಿರುವ ಬೀದಿ ನಾಯಿಗಳಿಗೆ ನೀರು ಆಹಾರ ನೀಡಿ ಎಂದು ಮನವಿ ಮಾಡಿ ಸೋಮನಾಥ್ ಬರೆದಿರುವ ಲೇಖನ ಇಲ್ಲಿದೆ]

ಮನುಷ್ಯನ ಪಾಪಕ್ಕೆ ಮತ್ತು ಭೂಮಿ ತಾಯಿಯ ಶಾಪಕ್ಕೆ ಅನ್ಯಾಯವಾಗಿ ಡಂಡ ಕಟ್ಟುತ್ತಿರುವ ಮನುಷ್ಯನ ಹೊರತಾದ ಬೇರೆ ಯಾವುದಾದರೂ ಜೀವಿಯಿದ್ದರೆ ಅದು ಬೀದಿ ನಾಯಿಗಳು ಮಾತ್ರ. ಏಕೆಂದರೆ ಮನುಷ್ಯನ ದಯೆ, ಕರುಣೆಯಿಲ್ಲದೆ ತನ್ನ ಅಸ್ತಿತ್ವವೇ ಇಲ್ಲ ಎಂಬಂತಿರುವುದು ಇದೊಂದಕ್ಕೆ ಮಾತ್ರ.

ಬೆಂಗಳೂರಿನ ಜೆಪಿನಗರದಲ್ಲಿ 11 ಬೀದಿ ನಾಯಿಗಳಿಗೆ ವಿಷವುಣಿಸಿದ ಪಾಪಿಗಳು

ಹುಲ್ಲು ಸೊಪ್ಪು ತಿಂದು ಬದುಕುವಂತಿದ್ದರೆ, ನಾಯಿಗಳಿಗೆ ಮನುಷ್ಯನ ಹಂಗೇ ಇರುತ್ತಿರಲಿಲ್ಲ. ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಕಳೆದ ಐದಾರು ದಿನಗಳಿಂದ ಕಸದ ತೊಟ್ಟಿಗಳನ್ನೇ ನಂಬಿ ಬದುಕಿದ್ದ ಇವಕ್ಕೆ ಆಹಾರವಿರಲಿ, ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ.

ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್

ತಮ್ಮ ಹಸಿವನ್ನು ಕೂಡ ಹೇಳಿಕೊಳ್ಳಲು ಬಾಯಿಲ್ಲದೆ ಹಸಿದು ಹಸಿದೇ ನಿತ್ರಾಣಗೊಂಡು ನಡೆಯಲೂ ಆಗದೆ, ನಿಂತಲ್ಲೇ ಕುಸಿದು ಬೀಳುತಿರುವ, ಬಿದ್ದಲ್ಲೇ ಏಳಲಾಗದೆ ತೆವಳಲೆತ್ನಿಸುವ, ಇನ್ನೇನು ಬದುಕಲಾರವು ಎಂಬ ದುರ್ಗತಿಯಲ್ಲಿರುವ ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಪ್ರತಿಯೊಂದು ಊರಿನ ಅನಾಥ ಬೀದಿನಾಯಿಗಳ ಪಾಲಿಗೆ ಆ ದೇವರು ಕೂಡ ಮೂಕನಾದ ಹಾಗಿದೆ.

ಅದ್ಯಾವ ಶಾಪವೋ.!

ಅದ್ಯಾವ ಶಾಪವೋ.!

ಯಾವ ತಪ್ಪನ್ನೂ ಮಾಡದ ಈ ಮೂಕಜೀವಿಗಳಿಗೆ ಅದ್ಯಾವ ಶಾಪವೋ, ಅದೇನು ಶಿಕ್ಷೆಯೋ ಅರ್ಥವಾಗುತ್ತಿಲ್ಲ. ನಾನಂತೂ ಸಾಧ್ಯವಾದಷ್ಟು ಹಾಲಿನ ಗಂಜಿ, ಬಿಸ್ಕತ್ತುಗಳನ್ನು ನನ್ನ ವ್ಯಾನಿಗೆ ತುಂಬಿಸಿಕೊಂಡು ಹೊತ್ತು ಗೊತ್ತಿಲ್ಲದೆ ಸಾವಿನಂಚಿನ ಇಂಥ ಶ್ವಾನಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದೇನೆ. ಎಷ್ಟಿದ್ದರೂ ಸಾಲುತ್ತಿಲ್ಲ.

ಪ್ರಾಣಿ ಹಕ್ಕು ಕಾರ್ಯಕರ್ತ ಸೋಮನಾಥ್

ಪ್ರಾಣಿ ಹಕ್ಕು ಕಾರ್ಯಕರ್ತ ಸೋಮನಾಥ್

ನನ್ನಂಥೆ ಬೆಂಗಳೂರಿನ ನೂರಾರು ಪ್ರಾಣಿ ಹಕ್ಕು ಕಾರ್ಯಕರ್ತರು ನೀರುˌ ಬಿಸ್ಕತ್ ಪ್ಯಾಕೆಟ್ಟುಗಳನ್ನು ಹಿಡಿದು ಪ್ರಾಣವೊಂದರ ಉಳಿವಿಗಾಗಿ ಪರಿತಪಿಸುತ್ತಿರುವ ದೃಶ್ಯಾವಳಿಗಳು ಮನುಷ್ಯರಾದ ಯಾರನ್ನಾದರೂ ಕಾಡಲೇಬೇಕು.

ಬೀದಿ ನಾಯಿಗಳಿಗೆ ನೀರು, ಆಹಾರ ಕೊಡಿ

ಬೀದಿ ನಾಯಿಗಳಿಗೆ ನೀರು, ಆಹಾರ ಕೊಡಿ

ತಮ್ಮಲ್ಲಿ ಈ ಮೂಲಕ ನಾನು ಕೈಮುಗಿದು ಕೇಳಿಕೊಳ್ಳುವುದಿಷ್ಟೆ. ದಯವಿಟ್ಟು ಕೊರೊನಾ ಸಂಕಟದ ಈ ದಿನಗಳಲ್ಲಿ ಯಾವುದೇ ಆಹಾರ ಮೂಲವಿಲ್ಲದೆ ಹಸಿವಿನ ದವಡೆಗೆ ಸಿಲುಕಿರುವ ಈ ಅನಾಥ ಬೀದಿ ನಾಯಿಗಳಿಗೆ ನೀರು ಆಹಾರ ನೀಡಿ. ನಿಮ್ಮ ಸ್ನೇಹಿತರಿಗೂ ಮನವಿ ಮಾಡಿ.

ಪ್ರಾಣಿ ಹಕ್ಕು ಕಾರ್ಯಕರ್ತರನ್ನು ಸಂಪರ್ಕಿಸಿ

ಪ್ರಾಣಿ ಹಕ್ಕು ಕಾರ್ಯಕರ್ತರನ್ನು ಸಂಪರ್ಕಿಸಿ

ಶ್ವಾನಗಳಿಗೆ ಹಾಲು ಬಿಸ್ಕತ್ ಅಥವಾ ಗಂಜಿ ಕೊಡಲು ಇಚ್ಛಿಸುವವರು ದಯವಿಟ್ಟು ಪ್ರಾಣಿ ಹಕ್ಕು ಕಾರ್ಯಕರ್ತರನ್ನು ಸಂಪರ್ಕಸಿ. ಸಹಸ್ರಾರು ಮೂಕ ಜೀವಿಗಳು ಹಸಿವಿನಿಂದ ಸಾಯುವುದು ಯಾವ.? ನೀವೇ ಹೇಳಿ...

English summary
Coronavirus: Please provide food and water to Stray Dogs requests Somanath, Animal Welfare Activist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X