ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ನಿಮಗೆ ಈ ಮಹತ್ವದ ಅಂಶಗಳು ಗೊತ್ತಿರಲಿ

|
Google Oneindia Kannada News

ಕೊರೊನಾ ವೈರಸ್ ಹಾವಳಿ ಸದ್ಯಕ್ಕೆ ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ. ಚೀನಾದಿಂದ ಬೇರೆ ದೇಶಗಳಿಗೂ ಹರಡುತ್ತಿರುವುದು ವರದಿಯಾಗುತ್ತಿದೆ. ಅದು ವ್ಯಾಪಿಸದಂತೆ ತಡೆಯಲು ಎಲ್ಲ ದೇಶಗಳೂ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಕೊರೊನಾ ವೈರಸ್ ತಗುಲಿದ್ದರೆ ಹೇಗೆ ತಿಳಿಯುತ್ತದೆ? ಅದರ ಗುಣಲಕ್ಷಣಗಳೇನು? ಅಂತಹ ಲಕ್ಷಣ ಕಂಡುಬಂದಾಗ ಏನು ಮಾಡಬೇಕು? ವೈರಸ್ ಬಾರದಂತೆ ತಡೆಯುವುದು ಹೇಗೆ ಮುಂತಾದ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ.

ಕೊರೊನಾ ವೈರಸ್ ಕೊರಗು: ಚೀನಾದಿಂದ ಭಾರತಕ್ಕೆ ಬಂದ 645 ಮಂದಿ ನಿಟ್ಟುಸಿರುಕೊರೊನಾ ವೈರಸ್ ಕೊರಗು: ಚೀನಾದಿಂದ ಭಾರತಕ್ಕೆ ಬಂದ 645 ಮಂದಿ ನಿಟ್ಟುಸಿರು

ಹಾಗೆಯೇ ಅನೇಕರು ಇದು ಸಹಜವಾದ ವೈರಸ್ ಅಷ್ಟೇ. ಆದರೆ ಸೂಕ್ತ ಔಷಧ ನೀಡದ ಕಾರಣ ಭೀತಿ ಹರಡಿದೆ ಎಂದು ಹೇಳುತ್ತಿದ್ದಾರೆ. ಕೆಲವರು ಅದಕ್ಕೆ ಇದೇ ಸರಿಯಾದ ಮದ್ದು ಎಂದೂ ಒಂದೊಂದು ಸಲಹೆಗಳನ್ನು ನೀಡುತ್ತಿದ್ದಾರೆ. ಕೊರೊನಾ ವೈರಸ್ ಕುರಿತು ಸಾಕಷ್ಟು ಊಹಾಪೋಹಗಳಿವೆ. ಅದು ಹೀಗೆ ಹರಡುತ್ತದೆ, ಅದನ್ನು ಹೀಗೆ ತಡೆಯಬಹುದು ಎಂಬ ಸಂದೇಶಗಳು ಹರಿದಾಡುತ್ತಿವೆ. ಕೊರೊನಾ ಕುರಿತಾದ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೊನಾವೈರಸ್ ಬಗ್ಗೆ ಬಿಬಿಸಿ ಪ್ರಕಟಿಸಿರುವ ಕೆಲವು ಮಹತ್ವದ ಮಾಹಿತಿಗಳು ಇಲ್ಲಿವೆ.

ಮುಖ ಕವಚ ಪ್ರಯೋಜನಕಾರಿಯೇನಲ್ಲ

ಮುಖ ಕವಚ ಪ್ರಯೋಜನಕಾರಿಯೇನಲ್ಲ

ವೈರಸ್ ಕುರಿತಾದ ಭೀತಿ ಮೂಡಿದಾಕ್ಷಣ ಜನರು ಮುಖಕ್ಕೆ ಮಾಸ್ಕ್ ಧರಿಸುವುದನ್ನು ಆರಂಭಿಸುತ್ತಾರೆ. ವೈರಸ್ ತಗುಲಿದ ಜನರ ಗಾಳಿ ಸೋಕದಂತೆ ತಡೆಯಲು ಇದು ಅಗತ್ಯ. ಆದರೆ ಮಾಸ್ಕ್ ಹಾಕಿಕೊಂಡರೆ ಕೊರೊನಾ ವೈರಸ್ ತಗುಲುವುದಿಲ್ಲ ಎನ್ನಲಾಗದು. ಮುಖಗವಸುಗಳು ಸಾಮಾನ್ಯವಾಗಿ ಸಡಿಲವಾಗಿರುತ್ತದೆ. ಹಾಗೆಯೇ ಅವು ಕಣ್ಣುಗಳನ್ನು ಮುಚ್ಚಲಾರವು ಮತ್ತು ದಿನವಿಡೀ ಅದನ್ನು ಧರಿಸಿರಲು ಸಾಧ್ಯವಿಲ್ಲ. ಮಾಸ್ಕ್ ಧರಿಸುವುದರಿಂದ ಹೆಚ್ಚು ಬೆವರುತ್ತಾರೆ. ಹೀಗಾಗಿ ನಿರಂತರವಾಗಿ ಅದನ್ನು ಬದಲಿಸುತ್ತಿರಬೇಕಾಗುತ್ತದೆ.

ಸೀನು ಬಂದಾಗ ಹೀಗೆ ಮಾಡಿ

ಸೀನು ಬಂದಾಗ ಹೀಗೆ ಮಾಡಿ

ಕೊರೊನಾ ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ವಸ್ತ್ರದಿಂದ ಮುಚ್ಚಿಕೊಳ್ಳಿ. ಟಿಶ್ಯೂ ಬಳಸಿದ್ದರೆ ಅದನ್ನು ಕಸದಬುಟ್ಟಿಗೆ ಹಾಕಿ. ಬಳಿಕ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ. ಸೋಪು ಅಥವಾ ಹ್ಯಾಂಡ್ ವಾಶ್‌ಗಳಿಂದ ಆಗಾಗ್ಗೆ ಕೈತೊಳೆದುಕೊಳ್ಳುತ್ತಿರಿ. ಕೆಮ್ಮುವ ಮತ್ತು ಸೀನುವ ಜನರಿಂದ ಕನಿಷ್ಠ ಒಂದು ಮೀಟರ್ ದೂರವನ್ನಾದರೂ ಕಾಪಾಡಿಕೊಳ್ಳಿ.

ತುಮಕೂರು ಯುವಕನಿಗೆ ಕೊರೊನಾ ಶಂಕೆ: ಬಂತು ವೈದ್ಯಕೀಯ ವರದಿತುಮಕೂರು ಯುವಕನಿಗೆ ಕೊರೊನಾ ಶಂಕೆ: ಬಂತು ವೈದ್ಯಕೀಯ ವರದಿ

ಇವುಗಳಿಂದಲೂ ಲಾಭವಿಲ್ಲ

ಇವುಗಳಿಂದಲೂ ಲಾಭವಿಲ್ಲ

ಬೆಳ್ಳುಳ್ಳಿ ತಿನ್ನುವುದರಿಂದ, ಮೌತ್‌ವಾಶ್ ಬಳಸಿ ಬಾಯಿ ಮುಕ್ಕಳಿಸುವುದರಿಂದ, ಲವಣದಲ್ಲಿ ಮೂಗು ತಿಕ್ಕಿ ತೊಳೆಯುವುದರಿಂದ, ಮೂಗಿನ ಅಡಿಯಲ್ಲಿ ಎಳ್ಳೆಣ್ಣೆ ಹಚ್ಚುವ ಮೂಲಕ ವೈರಸ್ ತಗುಲುವುದರಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದಾವುದೂ ವೈರಸ್ ತಡೆಯಲು ಸಹಕರಿಸುವುದಿಲ್ಲ ಎಂದು ಡಬ್ಲ್ಯೂಎಚ್‌ಒ ಹೇಳಿದೆ.

ಪ್ರಾಣಿಗಳನ್ನು ದೂರ ಇರಿಸಬೇಕಿಲ್ಲ

ಪ್ರಾಣಿಗಳನ್ನು ದೂರ ಇರಿಸಬೇಕಿಲ್ಲ

ನಿಮ್ಮ ಮುದ್ದಿನ ನಾಯಿ ಅಥವಾ ಬೆಕ್ಕು ಕೂಡ ಹೊಸ ಕೊರೊನಾ ವೈರಸ್‌ ಸೋಂಕುಗೆ ತುತ್ತಾಗುತ್ತವೆ ಎನ್ನುವುದಕ್ಕೆ ಇರುವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಪ್ರಾಣಿಗಳಿಂದ ವೈರಸ್ ಹರಡುತ್ತದೆ ಎಂಬ ಆತಂಕ ಬೇಡ. ವೈರಸ್ ಭೀತಿಯಿಂದ ಅವುಗಳಿಂದ ದೂರವಿರುವುದು, ಮನೆಯಿಂದ ಹೊರಹಾಕುವುದು ಮುಂತಾದವುಗಳನ್ನು ಮಾಡುವ ಅಗತ್ಯವಿಲ್ಲ. ಸಾಕುಪ್ರಾಣಿಗಳು ಮತ್ತು ಮನುಷ್ಯರ ನಡುವೆ ಕೆಲವು ಬ್ಯಾಕ್ಟೀರಿಯಾಗಳ ಹರಡುವಿಕೆ ಇದ್ದೇ ಇರುತ್ತದೆ. ಮನುಷ್ಯರಿಗೆ ಹರಡುವ ಮುನ್ನ ವೈರಸ್ ಪ್ರಾಣಿಗಳಲ್ಲಿ ಇರುವುದು ಗೊತ್ತಾಗದೆಯೂ ಇರಬಹುದು. ಏವಿಯನ್ ಫ್ಲೂ, ಎಬೊಲಾ, ಸಾರ್ಸ್‌ನಂತಹ ವೈರಸ್‌ಗಳು ಹೀಗೆ ಹರಡಿದ್ದಿದೆ. ಅದರ ಅರ್ಥ ಪ್ರಾಣಿಗಳು ವೈರಸ್ ಹರಡುವ ಅತ್ಯಂತ ಅಪಾಯಕಾರಿ ಮೂಲಗಳು ಎಂದು ಹೇಳಲಾಗದು.

ರಾಜ್ಯದಲ್ಲಿ ಕರೋನಾ ವೈರಸ್ ಭೀತಿ: ರಸ್ತೆಗೆ ಇಳಿದ 15 LED ವಾಹನಗಳುರಾಜ್ಯದಲ್ಲಿ ಕರೋನಾ ವೈರಸ್ ಭೀತಿ: ರಸ್ತೆಗೆ ಇಳಿದ 15 LED ವಾಹನಗಳು

ಶ್ವಾಸಕೋಶದ ಸಮಸ್ಯೆಯಿಂದ ಹೆಚ್ಚು ಸಾವು

ಶ್ವಾಸಕೋಶದ ಸಮಸ್ಯೆಯಿಂದ ಹೆಚ್ಚು ಸಾವು

ಕೊರೊನಾ ವೈರಸ್‌ನ ಲಕ್ಷಣಗಳಲ್ಲಿ ಕೆಮ್ಮು, ಅಧಿಕ ಉಷ್ಣತೆಯಂತಹ ಅಪಾಯಕಾರಿಯಲ್ಲದ ಲಕ್ಷಣಗಳೂ ಇವೆ. ಇವುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆದರೆ ಕೊರೊನಾ ವೈರಸ್ ಕೆಲವು ಜನರನ್ನು ತೀವ್ರ ಅನಾರೋಗ್ಯಕ್ಕೆ ಈಡುಮಾಡುತ್ತದೆ. ನ್ಯುಮೋನಿಯಾ, ಉಸಿರಾಟದ ಸಮಸ್ಯೆಗಳು ಎದುರಾಗುತ್ತವೆ. ಚೀನಾದಲ್ಲಿ ಅನೇಕರು ಶ್ವಾಸಕೋಶದ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ.

ಚಳಿಗಾಲದ ವೈರಸ್‌ಗಿಂತ ಅಪಾಯವೇನಲ್ಲ

ಚಳಿಗಾಲದ ವೈರಸ್‌ಗಿಂತ ಅಪಾಯವೇನಲ್ಲ

ಬ್ರಿಟನ್‌ನಲ್ಲಿ ಚಳಿಗೆ ಸಂಬಂಧಿಸಿದಂತೆ ವ್ಯಾಪಿಸುವ ಫ್ಲೂ, ಪ್ರತಿ ವರ್ಷ ಸರಾಸರಿ 600 ಜನರನ್ನು ಬಲಿತೆಗೆದುಕೊಳ್ಳುತ್ತದೆ. ಇದು ನಿರ್ದಿಷ್ಟ ಅವಧಿಯಲ್ಲಿ ಬರುವಂಥಹದ್ದು. ಅದನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೊರೊನಾ ವೈರಸ್ ಈ ಸಮಸ್ಯೆಗಿಂತ ದೊಡ್ಡದೇನಲ್ಲ ಎಂದು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಪ್ರೊ. ಜೊನಾಥನ್ ಬಾಲ್ ಹೇಳಿದ್ದಾರೆ. ಫ್ಲೂ ಮತ್ತು ಕೊರೊನಾ ವೈರಸ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಉತ್ತಮ ಆಹಾರ ಸೇವಿಸಿ ಎಂದು ಸಲಹೆ ನೀಡುತ್ತಾರೆ.

ಔಷಧಿ ಇನ್ನೂ ಸಿಕ್ಕಿಲ್ಲ

ಔಷಧಿ ಇನ್ನೂ ಸಿಕ್ಕಿಲ್ಲ

ಆದರೆ, ಕೊರೊನಾ ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ನಿಖರವಾಗಿ ತಿಳಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೂ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಬ್ರಿಟನ್‌ನಲ್ಲಿ ಸಲಹೆ ನೀಡಲಾಗಿದೆ. ಇದಕ್ಕೆ ಇದುವರೆಗೂ ನಿರ್ದಿಷ್ಟ ಔಷಧ ಅಥವಾ ಲಸಿಕೆ ಸಿಕ್ಕಿಲ್ಲ. ಆಂಟಿಬಯಾಟಿಕ್‌ಗಳೂ ಕೆಲಸ ಮಾಡುತ್ತಿಲ್ಲ. ಹೊಸ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ವಿಜ್ಞಾನಿಗಳು ಶ್ರಮವಹಿಸುತ್ತಿದ್ದಾರೆ. ಅದನ್ನು ಕಂಡು ಹಿಡಿದ ಬಳಿಕ ಹಲವು ಪರೀಕ್ಷೆಗಳು ನಡೆಯಬೇಕಿದೆ. ಅಸ್ತಮಾ, ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮತ್ತು ಹಿರಿಯ ನಾಗರಿಕರಿಗೆ ಕೊರೊನಾ ಪರಿಣಾಮ ಹೆಚ್ಚು ತಟ್ಟುತ್ತದೆ.

ಸೋಂಕಿತರೊಂದಿಗೆ ಸಮೀಪ ಸಂಪರ್ಕ ಬೇಡ

ಸೋಂಕಿತರೊಂದಿಗೆ ಸಮೀಪ ಸಂಪರ್ಕ ಬೇಡ

ಚೀನಾದ ಆಹಾರದಿಂದ ಸೋಂಕು ಹರಡುತ್ತದೆ ಎನ್ನುವುದು ಸತ್ಯವಲ್ಲ. ಚೀನಾದ ಉತ್ಪನ್ನಗಳನ್ನು ಖರೀದಿಸುವವರು, ಚೀನಾ ಆಹಾರ ಪದ್ಧತಿಯತ್ತ ಒಲವು ಹೊಂದಿರುವವರು ಅದರಿಂದ ದೂರ ಇರಬೇಕಾಗಿಲ್ಲ. ಲೋಟ, ಪಾತ್ರೆ, ಬಾಗಲಿನ ಚಿಲಕ, ಪೆಟ್ಟಿಗೆ ಮುಂತಾದ ವಸ್ತುಗಳ ಮೇಲೆ ಹೆಚ್ಚು ಸಮಯ ಬದುಕುವ ಶಕ್ತಿ ಈ ವೈರಸ್‌ಗೆ ಇಲ್ಲ. ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಮೀಪದ ಸಂಪರ್ಕ ಹೊಂದಿದ್ದರೆ, ಎರಡು ಮೀಟರ್ ಅಂತರದೊಳಗೆ 15 ನಿಮಿಷಕ್ಕೂ ಹೆಚ್ಚು ಸಮಯ ಇದ್ದರೆ ಅಪಾಯ ಖಚಿತ.

English summary
People spreading informations on coronavirus without cross checking its truth. Here is some important things you need to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X