• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಲವು ದೇಶಗಳಲ್ಲಿ ಮಾತ್ರ ಕೊರೊನಾದಿಂದ ಸಾವು ಹೆಚ್ಚಿದೆ: ಏಕೆ?

|

ಜಗತ್ತಿನಾದ್ಯಂತ ಇಲ್ಲಿಯವರೆಗೂ 30,79,972 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮಾರಣಾಂತಿಕ ಕೋವಿಡ್-19 ನಿಂದ ಈವರೆಗೂ 2,12,265 ಮಂದಿ ಸಾವನ್ನಪ್ಪಿದ್ದಾರೆ.

   ಪ್ರಚಾರಕ್ಕಾಗಿ 2000 ಜನರಿಗೆ ಊಟ ಹಾಕಿಸುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ರೇಣುಕಾಚಾರ್ಯ

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಭಾರತದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಭಾರತದಲ್ಲಿ ಇಲ್ಲಿಯವರೆಗೂ 29,689 ಜನರಲ್ಲಿ ಸೋಂಕು ತಗುಲಿದೆ. 940 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.

   ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

   ಕೊರೊನಾ ವೈರಸ್ ನಿಂದಾಗಿ ಯು.ಎಸ್.ಎ, ಸ್ಪೇನ್, ಇಟಲಿ, ಫ್ರಾನ್ಸ್, ಯು.ಕೆ ಅಕ್ಷರಶಃ ಜರ್ಜರಿತಗೊಂಡಿವೆ. ಈ ದೇಶಗಳಲ್ಲಿ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಿದೆ. ಆದರೆ, ಟರ್ಕಿ, ಜರ್ಮನಿ, ರಷ್ಯಾ, ಇರಾನ್, ಸಿಂಗಾಪುರ್, ಜಪಾನ್ ಮುಂತಾದ ದೇಶಗಳಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಿದ್ದರೂ, ಸಾವಿನ ಪ್ರಮಾಣ ಮಾತ್ರ ಕಮ್ಮಿ ಇದೆ. ಹೀಗೇಕೆ.?

   ಪರೀಕ್ಷಾ ಪ್ರಮಾಣ ಒಂದೇ ಇಲ್ಲ.!

   ಪರೀಕ್ಷಾ ಪ್ರಮಾಣ ಒಂದೇ ಇಲ್ಲ.!

   ಕೋವಿಡ್-19 ಪರೀಕ್ಷಾ ಪ್ರಮಾಣ ಎಲ್ಲಾ ದೇಶಗಳಲ್ಲೂ ಒಂದೇ ರೀತಿ ಇಲ್ಲ. ಯು.ಎಸ್.ಎ, ಇಟಲಿ, ಸ್ಪೇನ್ ನಲ್ಲಿ ಹೆಚ್ಚು ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಆದ್ರೆ, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಡಿಮೆ ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲಿ ದೇಶಗಳ ನಡುವೆ ಅಂತರ ಹೆಚ್ಚಿದೆ.

   ಡೆಮೋಗ್ರಫಿ ಅಂಶ

   ಡೆಮೋಗ್ರಫಿ ಅಂಶ

   ಕೆಲವು ದೇಶಗಳ ಜನರಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಇದೆ. ರೋಗ ನಿರೋಧಕ ಶಕ್ತಿ ಹೊಂದಿರುವ ದೇಶಗಳಲ್ಲಿ ಸಾವಿನ ಪ್ರಮಾಣ ಕಮ್ಮಿ ಇದೆ. ಇನ್ನು, ವಯಸ್ಸಾದವರಿಗೆ ಕೋವಿಡ್-19 ಹೆಚ್ಚು ಅಪಾಯಕಾರಿ. ಹೀಗಾಗಿ, ಸೋಂಕಿಗೆ ಒಳಗಾಗಿ ಮೃತಪಟ್ಟವರ ಪೈಕಿ ವಯಸ್ಸಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

   ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

   ಆರೋಗ್ಯ ವ್ಯವಸ್ಥೆ

   ಆರೋಗ್ಯ ವ್ಯವಸ್ಥೆ

   ಸ್ಪೇನ್, ಇಟಲಿ, ಯು.ಎಸ್.ಎ ನಲ್ಲಿ ಆರೋಗ್ಯ ವ್ಯವಸ್ಥೆಗೆ ಯಾವುದೇ ಕೊರತೆಯಿಲ್ಲ. ಹೀಗಾಗಿ, ದಿಢೀರ್ ಅಂತ ಕೊರೊನಾ ವೈರಸ್ ಬಂದೆರಗಿದರೂ, ಆ ದೇಶಗಳು ಸಮರ್ಥವಾಗಿ ನಿಭಾಯಿಸಿವೆ. ಆದರೆ, ಭಾರತವೂ ಸೇರಿದಂತೆ ಹಲವು ದೇಶಗಳ ಆರೋಗ್ಯ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿವೆ. ಇಲ್ಲಿ ಏನಾದರೂ ಕೊರೊನಾ ಅಟ್ಟಹಾಸ ಮೆರೆದರೆ ಅಪಾಯ ಕಟ್ಟಿಟ್ಟಬುತ್ತಿ.

   ಯಾವ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚು.?

   ಯಾವ ದೇಶದಲ್ಲಿ ಸಾವಿನ ಪ್ರಮಾಣ ಹೆಚ್ಚು.?

   ಜಾನ್ ಹಾಪ್ ಕಿನ್ಸ್ ಟ್ರ್ಯಾಕರ್ ಪ್ರಕಾರ, ಬೆಲ್ಜಿಯಂ ನಲ್ಲಿ (15.4%) ಸಾವಿನ ಪ್ರಮಾಣ ಹೆಚ್ಚು. ಫ್ರಾನ್ಸ್ 14.1%, ಯು.ಕೆ ಮತ್ತು ಇಟಲಿ 13.5% ಸಾವಿನ ಪ್ರಮಾಣ ಹೊಂದಿದೆ.

   ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

   English summary
   Coronavirus Crisis: Why Covid-19 death rates are higher in Some Countries?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X