ಸಂವಿಧಾನ ದಿನ: ಮರೆಯಲಾಗದ ಅಂಬೇಡ್ಕರ್ ರ ಹತ್ತು ಮಾತುಗಳು

ನವದೆಹಲಿ,

ನವೆಂಬರ್
26:
ವಿಶ್ವದ
ಅತಿದೊಡ್ಡ
ಪ್ರಜಾಪ್ರಭುತ್ವ
ದೇಶವಾದ
ಭಾರತಕ್ಕೆ
ಸಂವಿಧಾನ
ರಚಿಸಿ,
ದೇಶಕ್ಕೆ
ಭದ್ರ
ಬುನಾದಿ
ಒದಗಿಸುವಲ್ಲಿ
ಪ್ರಮುಖ
ಪಾತ್ರ
ವಹಿಸಿದ್ದವರು,
ಸಂವಿಧಾನ
ರಚನಾ
ಕರಡು
ಸಮಿತಿಯ
ಅಧ್ಯಕ್ಷರಾಗಿದ್ದವರು,
ಮಹಾನ್
ಮಾನವತಾವಾದಿ
'ಡಾ.ಬಿ.ಆರ್.ಅಂಬೇಡ್ಕರ್'
ರವರು.
ಇವರನ್ನು
ಭಾರತದ
ಸಂವಿಧಾನ
ಶಿಲ್ಪಿ
ಎಂದೇ
ಕರೆಯುತ್ತಾರೆ.

id="toptextpromo">
id='are-slot-1'
class='oiad
oi-axt
oiadv'>

ಭಾರತದ

ಸಂವಿಧಾನವು
ನವೆಂಬರ್
26,
1949
ರಲ್ಲಿ
ಸಂವಿಧಾನ
ರಚನಾ
ಸಭೆಯಲ್ಲಿ
ಅಂಗೀಕರಿಸಲ್ಪಟ್ಟಿತು.
ಜನೇವರಿ
26,
1950
ರಂದು
ಜಾರಿಗೆ
ತರಲಾಯಿತು.
ದಿನ
ಸಂವಿಧಾನವನ್ನು
ಇಡೀ
ಭಾರತ
ಒಪ್ಪಿಕೊಂಡ
ದಿನದ
ನೆನಪಿಗಾಗಿ
ಪ್ರಧಾನಿ
ನರೇಂದ್ರ
ಮೋದಿಯವರ
ಘೋಷಣೆಯಂತೆ
2015
ರಿಂದ
'ಸಂವಿಧಾನ
ದಿನ'ವನ್ನಾಗಿ
ಆಚರಿಸಲಾಗುತ್ತದೆ.

id='are-slot-2'
class='oiad
oi-axt
oiadv'>

 ಶೋಷಿತ ವರ್ಗಗಳು, ನನ್ನ ಕಣ್ಣುಗಳು

ಶೋಷಿತ ವರ್ಗಗಳು, ನನ್ನ ಕಣ್ಣುಗಳು

1) ಮಹಿಳೆಯರಿಗೆ ಸಮಾನತೆಯನ್ನು ಹಾಗೂ ಗೌರವವನ್ನು ನೀಡದ ಸಮಾಜ ಎಂದೂ ಆದರ್ಶ ಸಮಾಜವಾಗಾರದು.

2) ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ.

 ಚಿಂತನೆ ಇಲ್ಲದ ವ್ಯಕ್ತಿ ಇದ್ದೂ ಸತ್ತಂತೆ

ಚಿಂತನೆ ಇಲ್ಲದ ವ್ಯಕ್ತಿ ಇದ್ದೂ ಸತ್ತಂತೆ

3) ಮನುಷ್ಯ ಚಿರಂಜೀವಿ ಆಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ.

4) ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ. ಇಲ್ಲವಾದರೆ ಎರಡೂ ಸಾಯುತ್ತವೆ.

 ನಮ್ಮ ಸಾಧನೆಗಳು ಮಾತನಾಡುವಂತಿರಬೇಕು

ನಮ್ಮ ಸಾಧನೆಗಳು ಮಾತನಾಡುವಂತಿರಬೇಕು

5) ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತವೆ.

6) ಸತ್ತ ಮೇಲೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, "ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ."

 ಶಿಕ್ಷಣವೇ ಶಕ್ತಿ

ಶಿಕ್ಷಣವೇ ಶಕ್ತಿ

7) ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ, ಅಂದು ಭಾರತ ಜಗತ್ತಿನ ಗುರುವಾಗಲಿದೆ.

8) ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಅರಿಯಬೇಕು.

 ಆದರ್ಶ ಬದುಕು ಅಳವಡಿಸಿಕೊಳ್ಳಬೇಕು

ಆದರ್ಶ ಬದುಕು ಅಳವಡಿಸಿಕೊಳ್ಳಬೇಕು

9) ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು.

10) ನನ್ನ ಜೈಕಾರ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+