ಮೋದಿಗೆ ಚಿಗುಟಿದ ರಾಹುಲ್ ನ ಕಾಲೆಳೆದು ಟ್ವಿಟ್ಟರ್ ನಲ್ಲಿ ಭಾರೀ ತಮಾಷೆ

Posted By:
Subscribe to Oneindia Kannada
   ಮೋದಿಯನ್ನ ತೆಗಳಲು ಹೋದ ರಾಹುಲ್ ಗಾಂಧಿಗೆ ಟ್ವಿಟ್ಟರ್ ನಲ್ಲಿ ಮಂಗಳಾರತಿ | Oneindia Kannada

   "ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಧ್ವಂಸ ಮಾಡಿದವರು ನರೇಂದ್ರ ಮೋದಿ. ನಮ್ಮ ಜೇಬಿನಲ್ಲಿದ್ದ ಐನೂರು- ಸಾವಿರ ರುಪಾಯಿ ನೋಟನ್ನು ನೀರವ್ ಮೋದಿಯ ಜೇಬು ತುಂಬಿಸಿದರು. ಮೂವತ್ತು ಸಾವಿರ ಕೋಟಿ ರುಪಾಯಿ ಹಣ ತೆಗೆದುಕೊಂಡು ನೀರವ್ ಮೋದಿ ದೇಶ ಬಿಟ್ಟು ಹೋಗುವಂತಾಯಿತು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ ಆರೋಪಕ್ಕೆ ಭಾರೀ ಪ್ರತಿಕ್ರಿಯೆ ಬಂದಿದೆ.

   ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಹಲವರು, ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಾಕಿದ್ದಾರೆ. ಹಾಗೆ ಟ್ವಿಟ್ಟರ್ ನಲ್ಲಿ ಬಂದ ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ.

   'ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಧ್ವಂಸ ಮಾಡಿದ ಪ್ರಧಾನಿ ನರೇಂದ್ರ ಮೋದಿ'

   ಘೋಸ್ ಸ್ಪಾಟ್

   ನಿಮ್ಮ ಮಾತಿನ ಅರ್ಥ ನೀರವ್ ಮೋದಿ ಮೂವತ್ತು ಸಾವಿರ ಕೋಟಿ ರುಪಾಯಿಯನ್ನು ಎರಡು ಸಾವಿರ ರುಪಾಯಿ ನೋಟುಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಅಂತಲೇ. ಅಷ್ಟು ದೊಡ್ಡ ಮೊತ್ತದ ನಗದು ತೆಗೆದುಕೊಂಡು ಹೋಗುವುದಕ್ಕೆ ಎಷ್ಟು ವಿಮಾನಗಳನ್ನು ಬಾಡಿಗೆಗೆ ಪಡೆದಿರಬೇಕು?

   ಅಲ್ಕಾ ದ್ವಿವೇದಿ

   ಟ್ವಿಟ್ಟರ್ ನಲ್ಲಿ ಹ ಹ ಹ ಬಟನ್ ಇರಬೇಕಿತ್ತು.

   ರಾಹುಲ್ ಗಾಂಧಿ 'ವಿಚಿತ್ರ ಉತ್ತರ'ಕ್ಕೆ ಮುಸಿಮುಸಿ ನಕ್ಕ ವಿದ್ಯಾರ್ಥಿಗಳು

   ಸೆಂತಮಿಳ್ ಅರಸು

   ರಾಹುಲ್ ಗಾಂಧಿ ಅವರೇ ನೀರವ್ ಮೋದಿಗೆ ಸಾಲ ಕೊಟ್ಟಿದ್ದು ನಿಮ್ಮದೇ ಸರಕಾರ ಅನ್ನೋದನ್ನು ಮರೆಯಬೇಡಿ.

   ಶ್ರೀನಿವಾಸ್ ಪಟ್ನಾಯಕ್

   ಈ ಜನ ಹಗರಣಗಳನ್ನು ಮಾಡ್ತಾರೆ ಮತ್ತು ಬೇರೆಯವರ ಮೇಲೆ ಆರೋಪ ಹೊರೆಸುತ್ತಾರೆ.2004ರಿಂದ 2014ರ ವರೆಗೆ ಕಾಂಗ್ರೆಸ್ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇತ್ತು. ಆಗ ನಡೆದ ಹಗರಣಕ್ಕೆ ಈಗ ಮೋದಿ ಅವರ ಮೇಲೆ ಆರೋಪ ಹೊರೆಸುತ್ತಿದ್ದಾರೆ ಎಂಬರ್ಥದ ಟ್ವೀಟ್ ಮಾಡಿದ್ದಾರೆ.

   ಮಾಯಾ

   ಅಂದಹಾಗೆ, ಬುದ್ಧಿವಂತ ರಾಹುಲ್ ಗಾಂಧಿ ಹೇಳ್ತಾರೆ, ನೀರವ್ ಮೋದಿ ತಮ್ಮ ಹಣವನ್ನು 500- 1000 ರುಪಾಯಿ ನೋಟಿನಲ್ಲಿ ತೆಗೆದುಕೊಂಡು ಹೋದರು ಅಂತ. ಅದಕ್ಕೆ ಯಾವುದೇ ಬೆಲೆಯಿಲ್ಲ. ನೀರವ್ ಮೋದಿ ಏನಾದರೂ ರದ್ದಿ ಮಾರ್ತಾರಾ? ‌'ಅಪ್' ಅನ್ನೋ ಸಿನಿಮಾದಲ್ಲಿರುವಂತೆ ಬಲೂನ್ ನಲ್ಲಿ 30 ಸಾವಿರ ಕೋಟಿ ರುಪಾಯಿ ತೆಗೆದುಕೊಂಡು ಹೋದರು ಅಂದುಕೊಳ್ತೀರಾ?

   ಸಾಹಿಲ್

   ರಾಹುಲ್ ಗಾಂಧಿ ಅವರ ಹೇಳಿಕೆಯ ಅರ್ಥ, ವಂಚಕರು 30 ಸಾವಿರ ಕೋಟಿ ಹಣವನ್ನು ಮುಂಡಾ ಮೋಚಿ ದೇಶ ಬಿಡ್ತಾ ಇದ್ದಾರೆ ಮತ್ತು ಜನ ಸಾಮಾನ್ಯರು ಸರತಿಯಲ್ಲಿ ನಿಂತು ಕಷ್ಟ ಪಡ್ತಿದ್ದಾರೆ. ಹೇಳಿಕೆಯನ್ನು ತಿರುಚುವುದು ಸುಳ್ಳುಗಾರನ ಅನುಯಾಯಿಗಳ ಜನ್ಮ ಸಿದ್ಧ ಹಕ್ಕು.

   ಸ್ಯಾಫ್ರನ್

   ಹೆಂಡತಿ ಇಲ್ಲ ಅಂದರೆ ಮನುಷ್ಯನ ಖರ್ಚು ಎಷ್ಟು ಕಡಿಮೆ ಆಗಿಬಿಡುತ್ತದೆ. ನೋಟು ನಿಷೇಧದ ವೇಳೆ ನಾಲ್ಕು ಸಾವಿರ ತಗೊಂಡಿದ್ದು, ಈ ವರೆಗೆ ಅದರಲ್ಲೇ ಅವರ ಜೀವನ ನಡೆಯುತ್ತಿದೆ.

   ರಾಕೇಶ್ ಶಾರ್ದಾ

   ಅರವತ್ತು ವರ್ಷಗಳ ಭ್ರಷ್ಟ ಆಡಳಿತದಲ್ಲಿ ದೇಶವನ್ನು ಲೂಟಿ ಹೊಡೆದು, ನಾಶ ಮಾಡಿತು ಕುಟುಂಬ. ಗೊತ್ತಿರುವ ಯಾವ ಆದಾಯವೂ ಇಲ್ಲದೆ ರಾಹುಲ್ ಗಾಂಧಿ ರಾಜರಂತೆ ಬದುಕುವುದಕ್ಕೆ ಹೇಗೆ ಸಾಧ್ಯ?

   ಜತನ್ ಆಚಾರ್ಯ

   ಸದಾ ಮನರಂಜನೆ ಕೊಡ್ತಾರೆ (ಎವರ್ ಗ್ರೀನ್ ಎಂಟರ್ ಟೇನರ್).

   ಸಂಜಯ್ ಭಾವ್ ಸಾರ್

   ನೋಡಿ, ರಾಹುಲ್ ಗಾಂಧಿ ಎಂಥ ಬುದ್ಧಿವಂತರು.. ಅವರು ಭಾರತೀಯ ಕಾಂಗ್ರೆಸ್ ನ ಐನ್ ಸ್ಟೀನ್, ಮಹಾನ್ ಪ್ರತಿಭಾವಂತ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Congress president Rahul Gandhi trolled in twitter for his comment about Nirav Modi and PM Narendra Modi. Rahul Gandhi criticised the decision of demonetisation.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ