ಕ್ರಿಸ್ಮಸ್ ದಿನ ಬೆಂಗಳೂರಿನಲ್ಲಿ ಯಾವ ಚರ್ಚ್‌ಗೆ ಭೇಟಿ ನೀಡಬೇಕು ಎಂಬ ಗೊಂದಲವೇ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 22: ಯೇಸು ಕ್ರಿಸ್ತನ ಜನ್ಮದಿನವನ್ನು ಕ್ರಿಸ್ಮಸ್ ದಿನವಾಗಿ ಆಚರಿಸಲಾಗುತ್ತದೆ. ಪ್ರತಿವರ್ಷ ಡಿಸೆಂಬರ್ 25ರಂದು ಪ್ರಪಂಚದಾದ್ಯಂತ ಕ್ರಿಶ್ಚಿಯನ್ನರು ಸಂಭ್ರಮ ಸಡಗರದಿಂದ ಈ ದಿನವನ್ನು ಆಚರಿಸುತ್ತಾರೆ. ಅಮೆರಿಕ, ಯೂರೋಪ್ ದೇಶಗಳು ಸೇರಿದಂತೆ ಭಾರತದಲ್ಲಿಯೂ ಕ್ರಿಶ್ಚಿಯನ್ನರು ಈ ದಿನದಂದು ಚರ್ಚ್‌ಗಳಿಗೆ ಭೇಟಿ ನೀಡುತ್ತಾರೆ. ಕೇವಲ ಕ್ರಿಶ್ಚಿಯನ್ನರು ಅಷ್ಟೇ ಅಲ್ಲದೇ, ಅನ್ಯ ಧರ್ಮೀಯರೂ ಕ್ರಿಸ್ಮಸ್ ದಿನದಂತೆ ಚರ್ಚ್‌ಗಳಿಗೆ ಭೇಟಿ ನೀಡುವುದು ಕಂಡುಬರುತ್ತದೆ.
ಬಹು ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಭಾರತದ ಸಿಲಿಕಾನ್ ವ್ಯಾಲಿ ಹಲವು ಐತಿಹಾಸಿಕ ಚರ್ಚ್‌ಗಳನ್ನು ಹೊಂದಿವೆ. ಬೆಂಗಳೂರಿನ ಲಕ್ಷಾಂತರ ಮಂದಿ ಈ ಚರ್ಚ್‌ಗಳಿಗೆ ಭೇಟಿ ನೀಡುತ್ತಾರೆ. ನೀವು ಸಹ ಡಿಸೆಂಬರ್ 25ರಂದು ಚರ್ಚ್‌ಗಳಿಗೆ ಭೇಟಿ ನೀಡಬಯಸುವುದಾದರೆ, ಈ ಕೆಳಗಿನ ಐದು ಚರ್ಚ್‌ಗಳಿಗೆ ಭೇಟಿ ನೀಡಬಹುದು. ಈ ಚರ್ಚಗಳು ಐತಿಹಾಸಕ ಮಹತ್ವಗಳನ್ನು ಹೊಂದಿವೆ. ಅವುಗಳನ್ನು ನಿರ್ಮಿಸಿದ ವಿನ್ಯಾಸ ಹಾಗೂ ಗೋಡೆ ಮೇಲಿನ ಕಲಾಬಿತ್ತಿಗಳು ನಿಮ್ಮ ಮನಸ್ಸಿಗೆ ಮುದ ನೀಡಬಹುದು.

1 - ಸೇಂಟ್ ಮೇರಿ ಬೆಸಿಲಿಕಾ (St. Mary’s Basilica)
17 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಬೆಂಗಳೂರಿನ ಶಿವಾಜಿನಗರದಲ್ಲಿದೆ. ಶಿವಾಜಿನಗರ ಬಸ್ ನಿಲ್ದಾಣಕ್ಕೆ ಅತ್ಯಂತ ಸಮೀಪವಾಗಿರುವ ಚರ್ಚ್ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಗೋಥಿಕ್ ವಾಸ್ತುಶಿಲ್ಪದ ಶೈಲಿ, ಬಣ್ಣದ ಗಾಜಿನ ಕಿಟಕಿಗಳು, ವಿಸ್ತಾರವಾದ ಅಲಂಕೃತ ಒಳಾಂಗಣಗಳು ಈ ಚರ್ಚ್‌ನ ಪ್ರಮುಖ ಆಕರ್ಷಣೆಯಾಗಿದೆ.

2- ಸೇಂಟ್ ಪ್ಯಾಟ್ರಿಕ್ ಚರ್ಚ್ (St. Patrick’s Church)
ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸೇಂಟ್ ಪ್ಯಾಟ್ರಿಕ್ ಚರ್ಚ್ ಸಹ ಒಂದು. ಇದು ಬ್ರಿಗೇಡ್ ರೋಡ್‌ನಲ್ಲಿದೆ. 1844 ರಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಕಟ್ಟಡವು ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಅದರ ಕಮಾನಿನ ಪ್ರವೇಶದ್ವಾರ ಮತ್ತು ಕ್ರಿಸ್ತನ ಅಪೊಸ್ತಲರನ್ನು ಸಂಕೇತಿಸುವ ಹನ್ನೆರಡು ಸ್ತಂಭಗಳು ಎಲ್ಲರನ್ನೂ ಬೆರಗುಗೊಳಿಸುತ್ತವೆ. ಚರ್ಚ್‌ನ ಬಲಭಾಗದಲ್ಲಿ ಸೇಂಟ್ ಆಂಥೋನಿಗೆ ಸಮರ್ಪಿತವಾದ ದೇವಾಲಯವಿದೆ. ಈ ದೇಗುಲದಲ್ಲಿ ಪ್ರಾರ್ಥನೆಯು ಫಲ ನೀಡುತ್ತದೆ ಮತ್ತು ಸಂತನು ಭಕ್ತರನ್ನು ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸುತ್ತಾನೆ ಎಂದು ನಂಬಲಾಗಿದೆ.

3- ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ ಚರ್ಚ್ (Francis Xavier’s Cathedral Church)
ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ ಬೆಂಗಳೂರಿನ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಇದು ಕ್ಲೀವ್ ಲ್ಯಾಂಡ್ ಟೌನ್ನಲ್ಲಿದೆ. ಇದನ್ನು 1851 ರಲ್ಲಿ ನಿರ್ಮಿಸಲಾಯಿತು. ಆದರೆ 1905 ರಲ್ಲಿ, ಚರ್ಚ್‌ನ ಗೋಪುರದಿಂದ ಶಿಲುಬೆ ಬಿದ್ದಾಗ, ಕಟ್ಟಡವನ್ನು ಮರು ನಿರ್ಮಿಸಲಾಯಿತು. ಇದನ್ನು 1932 ರಲ್ಲಿ ಉದ್ಘಾಟಿಸಲಾಯಿತು.

4- ಹೋಲಿ ಟ್ರಿನಿಟಿ ಚರ್ಚ್ (Holy Trinity Church)
1852 ರಲ್ಲಿ ಹೋಲಿ ಟ್ರಿನಿಟಿ ಚರ್ಚ್ ಅನ್ನು ಸ್ಥಾಪಿಸಲಾಯಿತು. ಇದು ಬೆಂಗಳೂರಿನ ಪ್ರತಿಷ್ಠಿತ ಟ್ರಿನಿಟಿ ಸರ್ಕಲ್‌ನಲ್ಲಿದೆ. ದಕ್ಷಿಣ ಭಾರತದ ಅತಿದೊಡ್ಡ ಮಿಲಿಟರಿ ಚರ್ಚ್ ಎಂದು ಹೆಸರುವಾಸಿಯಾಗಿದೆ. ಬೆಂಗಳೂರಿನ ಅತ್ಯಂತ ಮಹತ್ವದ ಪ್ರೊಟೆಸ್ಟಂಟ್ ಚರ್ಚ್‌ಗಳಲ್ಲಿ ಒಂದಾಗಿದೆ. ಇದು ನಗರದ ಪ್ರಮುಖ ಹೆಗ್ಗುರುತಾಗಿದೆ. ‘ಒಂದು ನಿಲ್ದಾಣ, ಒಂದು ಚರ್ಚ್' ಎಂಬ ಈಸ್ಟ್ ಇಂಡಿಯಾ ಕಂಪನಿ ನೀತಿಯ ವಿರುದ್ಧದ ಪ್ರತಿಭಟನೆಯ ಫಲವಾಗಿ ಚರ್ಚ್ ಅಸ್ತಿತ್ವಕ್ಕೆ ಬಂದಿತು. ರಿನೈಜನ್ಸ್ ಶೈಲಿಯಲ್ಲಿ ನಿರ್ಮಿಸಲಾದ ಹೋಲಿ ಟ್ರಿನಿಟಿ ಚರ್ಚ್ ತನ್ನದೇ ಆದ ವಿಶಿಷ್ಠ ವಾಸ್ತುಶಿಲ್ಪವನ್ನು ಹೊಂದಿದೆ.

5- ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ (St. Mark’s Cathedral Church)
200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಹೃದಯ ಭಾಗವಾದ ಎಂಜಿ ರೋಡ್‌ನಲ್ಲಿದೆ. ಸೇಂಟ್ ಮಾರ್ಕ್ ಅಲಿಯಾಸ್ ಮಾರ್ಕ್ ದಿ ಇವಾಂಜೆಲಿಸ್ಟ್ ಹೆಸರನ್ನು ಈ ಚರ್ಚ್‌ಗೆ ಇಡಲಾಗಿದೆ. 1808 ರಲ್ಲಿ ಸ್ಥಾಪನೆಯಾದ ಈ ಚರ್ಚ್ ಅನ್ನು 1816 ರಲ್ಲಿ ಕಲ್ಕತ್ತಾದ ಬಿಷಪ್ ಅವರು ಉದ್ಘಾಟಿಸಿದ್ದಾರೆ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications