ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ 2022: ಆಚರಣೆಯ ಹಿನ್ನೆಲೆ, ಯೇಸುಕ್ರಿಸ್ತನ ಜನನ, ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲಿದೆ

|
Google Oneindia Kannada News

ಕ್ರಿಸ್ಮಸ್.... ಕ್ರಿಸ್ಮಸ್.... ಕ್ರಿಸ್ಮಸ್.... ಸುಮಾರು ಒಂದು ತಿಂಗಳ ಹಿಂದಿನಿಂದಲೂ ಎಲ್ಲರೂ ಬಾಯಲ್ಲಿ ಕ್ರಿಸ್ಮಸ್ ಆಚರಣೆಯದ್ದೇ ಮಾತು. ಪ್ರಭು ಯೇಸು ಕ್ರಿಸ್ತನ ಹುಟ್ಟಿದ ದಿನವಾಗಿ ಕ್ರಿಸ್ಮಸ್ ಅನ್ನು ಆಚರಣೆ ಮಾಡಲಾಗುತ್ತದೆ. ಡಿಸೆಂಬರ್ 25ನೇ ತಾರೀಖು ಕ್ರಿಸ್ಮಸ್‌ ಅನ್ನು ವಿಶ್ವದೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕ್ರೈಸ್ತ ಸಮುದಾಯ ಒಂದು ತಿಂಗಳ ಮುಂಚಿತವಾಗಿ ಕ್ರಿಸ್ಮಸ್ ಆಚರಣೆಗೆ ಸಿದ್ದತೆ ಮಾಡಿಕೊಳ್ಳುತ್ತಾರೆ. ಚರ್ಚ್‌ಗಳಲ್ಲಿ, ಮನೆಗಳಲ್ಲಿ ಕಣ್ಮನ ಸೆಳೆಯುವಂತಹ ಅಲಂಕಾರ ಮಾಡಲಾಗುತ್ತದೆ. ಯೇಸು ಜನಿಸಿದ ದಿನ ಎಲ್ಲರೂ ಮನೆಗೆ ಹೊಸ ಅತಿಥಿ ಬಂದಷ್ಟೇ ಸಂತಸಗೊಂಡು ಹೊಸ ಬಟ್ಟೆ ಧರಿಸಿ, ಸಹಿ ಖಾದ್ಯಗಳನ್ನು ತಯಾರಿಸಿ ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡುತ್ತಾರೆ.

ಡಿಸೆಂಬರ್ ಕಳೆಯುತ್ತಾ ಬಂದರೂ ಹಿಮಾಲಯದಲ್ಲಿಲ್ಲ ಹಿಮ ಏಕೆ?ಡಿಸೆಂಬರ್ ಕಳೆಯುತ್ತಾ ಬಂದರೂ ಹಿಮಾಲಯದಲ್ಲಿಲ್ಲ ಹಿಮ ಏಕೆ?

ಚರ್ಚ್‌ಗಳಲ್ಲಿ ಮನೆಗಳಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಗಳೆಲ್ಲರೂ ಒಗ್ಗೂಡಿ ಪರಸ್ಪರ ಶುಭಕೋರುತ್ತಾರೆ. ಯೇಸು ಕ್ರಿಸ್ತ ಹುಟ್ಟಿದ ದಿನ ಹಲವಾರು ಒಳಿತಿನ ಕಾರ್ಯಗಳನ್ನ ಮಾಡಲಾಗುತ್ತದೆ. ಕೆಲವರು ಅನಾಥರಿಗೆ ಬಡಬಗ್ಗರಿಗೆ ದಾನ ಮಾಡುತ್ತಾರೆ, ಇನ್ನೂ ಕೆಲವರು ಗೋಶಾಲೆ, ಶಾಲೆ, ಚರ್ಚ್ ನಿರ್ಮಾಣದಂತಹ ಕಾರ್ಯಗಳಿಗೆ ಸಹಾಯ ಮಾಡುತ್ತಾರೆ. ಅಂದಹಾಗೆ ಪ್ರಪಂಚದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಕ್ರಿಸ್ಮಸ್ ಇತಿಹಾಸವೇನು? ಕ್ರಿಸ್ಮಸ್ ಆಚರಣೆಯ ಹಿನ್ನೆಲೆ ಏನು? ಡಿಸೆಂಬರ್ 25 ಯಾಕಿಷ್ಟು ಮಹತ್ವದ್ದಾಗಿದೆ. ಇಂತೆಲ್ಲಾ ವಿಚಾರಗಳನ್ನು ಇಂದು ನಾವು ನಿಮಗೆ ಸಂಕ್ಷಿಪ್ತವಾಗಿ ಹೇಳಲಿದ್ದೇವೆ.

ಯೇಸುವಿಗೆ ಕಠಿಣ ಶಿಕ್ಷೆ

ಯೇಸುವಿಗೆ ಕಠಿಣ ಶಿಕ್ಷೆ

ಯೇಸುಕ್ರಿಸ್ತ ಕ್ರೈಸ್ತ ಭಾಂಧವರ ಆರಾಧ್ಯ ದೈವ. ಯೇಸು ಜನರ ಒಳಿತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿ ಮತ್ತೆ ಹುಟ್ಟಿಬಂದ ಎಂದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಲಾಗುತ್ತದೆ. ಇಸ್ರೇಲಿಯಾದ ಬೆತ್ಲೆಹೆಮ್ ನಗರದಲ್ಲಿ ಕ್ರಿ.ಪೂ 4ರಲ್ಲಿ ಯೇಸು ಜನಿಸಿದ ಎಂದು ಹೇಳಲಾಗುತ್ತದೆ. ಜೋಸೆಫ್ ಮತ್ತು ಮೇರಿ ಮಾತ ಯೇಸುಕ್ರಿಸ್ತನ ತಂದೆ ತಾಯಿ. ಈ ದಂಪತಿಗೆ ದೇವರ ಆಶೀರ್ವಾದದಿಂದ ಯೇಸು ಜನಿಸಿದನು. ಕಥೆ ಪ್ರಕಾರ ಯೇಸು ತಂದೆ ಜೋಸೆಫ್ ವೃತ್ತಿಯಲ್ಲಿ ಬಡವನಾಗಿದ್ದರು. ಆದರೆ ತಂದೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಯೇಸು ಸಮಾಜ ಕಲ್ಯಾಣವನ್ನೂ ಮಾಡುತ್ತಿದ್ದರು. ಕಥೆ ಪ್ರಕಾರ ಯಹೂದಿ ಧರ್ಮಕ್ಕೆ ಸೇರಿದ ಯೇಸು ಜನರಿಗೆ ಭೋದಿಸುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಯೇಸುವಿನ ವಿರುದ್ಧ ಯಹೂದಿಗಳು ಧ್ವೇಷ ಸಾಧಿಸುತ್ತಿದ್ದರು.

ಮರುಜನ್ಮ ಪಡೆದ ಯೇಸು

ಮರುಜನ್ಮ ಪಡೆದ ಯೇಸು

ಆದರೂ ವಿರೋಧವನ್ನು ನಿರ್ಲಕ್ಷಿಸಿ ಯೇಸು ಸ್ಥಳದಿಂದ ಸ್ಥಳಕ್ಕೆ ಹೋಗಿ ಜನರಿಗೆ ಬೋಧನೆ ಮಾಡುತ್ತಿದ್ದರು. ಇದು ಯಹೂದಿಗಳ ಮೂಲಭೂತವಾದಿಗಳಿಗೆ ಸಹಿಸಲಾಗಲಿಲ್ಲ. ಹೀಗಾಗಿ ಯೇಸುವಿನನ್ನು ಸಾಯಿಸಲು ನಿರ್ಧರಿಸಿದರು. ಯೇಸುವನ್ನು ರೋಮನ್ ಗವರ್ನರ್‌ ಮುಂದೆ ಹಾಜರುಪಡಿಸಿದರು. ಬಳಿಕ ಯೇಸುವಿನನ್ನು ಶಿಲುಬೆಗೇರಿಸುವ ಮೂಲಕ ಶಿಕ್ಷೆ ನೀಡಿದರು. ಪ್ರಭು ಯೇಸುವನ್ನು ಎಷ್ಟೇ ಹಿಂಸಿಸಿ ಕೊಂದರೂ ಯೇಸು ಜನರಿಗೆ ಒಳಿತನ್ನೇ ಬಯಸಿದರು. ನಂತರ ಮತ್ತೆ ಹುಟ್ಟಿ ಬಂದರು. ಸಮಾಜದ ಒಳಿತಿಗಾಗಿ ಕೆಟ್ಟದರ ನಾಶಕ್ಕಾಗಿ ಯೇಸು ಮತ್ತೆ ಜನ್ಮ ತಾಳಿದ ಎಂದು ಕಥೆ ಹೇಳುತ್ತದೆ. 1870ರಲ್ಲಿ ಡಿಸೆಂಬರ್ 25ರಂದು ಅಮೇರಿಕಾ ಕ್ರಿಸ್‌ಮಸ್ ದಿವನ್ನು ಫೆಡರಲ್ ರಜಾದಿನವೆಂದು ಘೋಷಿಸಿತು. ಆದರೆ ಬೈಬಲ್‌ನಲ್ಲಿ ಯೇಸು ಕ್ರಿಸ್ತನ ಜನ್ಮ ದಿನಾಂಕದ ಬಗ್ಗೆ ಯಾವುದೇ ಉಲ್ಲೇಕವನ್ನು ಮಾಡಲಾಗಿಲ್ಲ. ಆದರೆ ಡಿಸೆಂಬರ್ 25ರಂದು ಯೇಸುಕ್ರಿಸ್ತನ ಹುಟ್ಟಿದನೆಂದು ಆಚರಿಸಲಾಗುತ್ತದೆ.

ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಣೆ

ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಣೆ

ಮೊದಲ ಬಾರಿಗೆ ಕ್ರಿಸ್ತಪೂರ್ವ 336ರಲ್ಲಿ ರೋಮ್‌ನಲ್ಲಿ ಆಚರಿಸಲಾಯಿತು. ಬಳಿಕ ಪೋಪ್‌ ಜೂಲಿಯಸ್ ಯೇಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್ 25ರಂದು ಆಚರಸಿದಲು ಅಧಿಕೃತವಾಗಿ ಘೋಷಣೆ ಮಾಡಿದರು. ಅಂದಿನಿಂದ ಪಾಶ್ಚಿಮಾತ್ಯ ದೇಶದಲ್ಲಿ ಕ್ರಿಸ್‌ಮಸ್‌ನ್ನು ರಜಾದಿನವಾಗಿ ಆಚರಿಸಲಾಗುತ್ತದೆ.

ಕ್ರಿಸ್ಮಸ್ ಆಚರಣೆಗೆ ಭರದಿಂದ ಸಾಗಿದ ಸಿದ್ಧತೆ

ಕ್ರಿಸ್ಮಸ್ ಆಚರಣೆಗೆ ಭರದಿಂದ ಸಾಗಿದ ಸಿದ್ಧತೆ

ಉತ್ತರ ಯುರೋಪ್‌ನಲ್ಲಿ ಫರ್ ಎಂಬ ಕ್ರಿಸ್‌ಮಸ್‌ ವೃಕ್ಷವನ್ನು ಅಲಂಕರಿಸಿ ಹಬ್ಬವನ್ನು ಆಚರಿಸುವ ಪದ್ಧತಿ ರೂಢಿಯಾಯಿತು. ಆದರೆ ಈ ಮರ ಎಲ್ಲರಿಗೂ ಖರೀದಿಗೆ ಸಾಧವಾಗದೇ ಇದ್ದಾಗ ಹಲವರು ಚೆರ್ರಿ ಮರವನ್ನು ಅಲಂಕಾರಕ್ಕೆ ಬಳಕೆ ಮಾಡತೊಡಗಿದರು. ಈ ಮರಕ್ಕೆ ಪಿರಾಮಿಡ್ ಆಕಾರ ನೀಡಿ ಬಾಲ್, ಬೆಲ್, ಸ್ಟಾರ್‌, ಗೊಂಬೆಗಳು, ಚಾಕಲೇಟ್‌ಗಳಿಂದ ಸಿಂಗರಿಸುತ್ತಿದ್ದರು. ಕ್ರಮೇಣ ಕ್ರಿಸ್‌ಮಸ್ ವೃಕ್ಷ ಹೆಚ್ಚಾಗಿ ಲಭ್ಯವಾಗಲು ಪ್ರಾರಂಭಿಸಿದಾಗ ಜನ ಅದನ್ನೇ ಅಲಂಕರಿಸುವುದನ್ನು ರೂಢಿಸಿಕೊಂಡಿದ್ದಾರೆ. ಈ ಮರವನ್ನು ಮನೆಯಲ್ಲಿ ಅಲಂಕರಿಸುವುದರಿಂದ ದೃಷ್ಟ ಶಕ್ತಿಗಳನ್ನು ನಿಯಂತ್ರಿಸಲಾಗುತ್ತದೆ ಎಂದು ನಂಬಲಾಗುತ್ತದೆ.

ಕ್ರಿಸ್‌ಮಸ್ ಆಚರಣೆಗೆ ಭರದಿಂದ ಸಿದ್ಧತೆಗಳು ಸಾಗಿವೆ. ಆಚರಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು ಚರ್ಚ್‌ಗಳು ಕಣ್ಮನ ಸೆಳೆಯುವಂತೆ ಅಲಂಕಾರಗೊಂಡಿವೆ. ಇನ್ನೂ ಮಾಲ್‌ಗಳು ಸಿಂಗಾರಗೊಂಡು ಜನರನ್ನು ಆಕರ್ಷಿಸುತ್ತಿವೆ.

English summary
Merry Christmas 2022: Christmas will be celebrated on December 25, 2022. Learn about the history of Christmas celebration, birth of Jesus Christ, background of Christmas celebration, Christmas tree decoration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X