• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಕುಮಾರಸ್ವಾಮಿ ಮೌನದ ಹಿಂದಿನ ಮರ್ಮವೇನು?

|
   ಎಚ್ ಡಿ ಕುಮಾರಸ್ವಾಮಿ ಮೌನದ ಹಿಂದಿನ ಕಾರಣವೇನು?

   ಲೋಕಸಭಾ ಚುನಾವಣೆ ನಂತರ ವಿಶ್ರಾಂತಿಗಾಗಿ ರೆಸಾರ್ಟ್ ಸೇರಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೆಸಾರ್ಟ್‌ನಿಂದ ಹೊರ ಬಂದು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅವರ ಕಾರ್ಯದರ್ಶಿ ರಘುಕುಮಾರ್ ಮದುವೆಯ ಬೀಗರ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಬರದಿಂದ ಜನ ತತ್ತರಿಸುತ್ತಿದ್ದರೂ ಮುಖ್ಯಮಂತ್ರಿಗಳು ದುಬಾರಿ ರೆಸಾರ್ಟ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಕೇಳಿ ಬಂದಿದ್ದವು. ಆದರೆ ಮುಖ್ಯಮಂತ್ರಿಗಳು ಮಾತ್ರ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅದರಲ್ಲೂ ಮಾಧ್ಯಮಗಳಿಂದ ದೂರವೇ ಇದ್ದು ಬಿಟ್ಟಿದ್ದರು.

   ಜೆಡಿಎಸ್ ನಾಯಕರ ಮೇಲೆ ಬೆಂಕಿ ಉಗುಳಿದ ಸಿದ್ದರಾಮಯ್ಯ

   ಲೋಕಸಭಾ ಚುನಾವಣೆ ಮುಗಿದಿದ್ದರೂ ಅದರ ಕಾವು ಇನ್ನೂ ಕೂಡ ಹಾಗೆಯೇ ಇರುವುದರಿಂದ ಮತ್ತು ಚುನಾವಣಾ ಫಲಿತಾಂಶ ಬರಬೇಕಾಗಿರುವುದರಿಂದ ಮಗನ ರಾಜಕೀಯ ಭವಿಷ್ಯ ಏನಾಗಬಹುದೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈಗಾಗಲೇ ಗುಪ್ತಚರ ಮಾಹಿತಿ ಪಡೆದುಕೊಂಡಿದ್ದಲ್ಲದೆ, ಜ್ಯೋತಿಷಿಗಳನ್ನು ಕೂಡ ಭೇಟಿ ಮಾಡಿ ಭವಿಷ್ಯ ಕೇಳಿದ್ದಾರೆ.

   ಇಷ್ಟೇ ಅಲ್ಲದೆ, ತಮ್ಮ ಹರಕೆಯಂತೆ ದೇವಾಲಯಗಳಿಗೂ ಹೋಗಿ ಬಂದಿದ್ದಾರೆ. ಆದರೂ ಅವರಿಗೆ ನೆಮ್ಮದಿ ಮಾತ್ರ ಸಿಕ್ಕಿಲ್ಲ. ಇದೆಲ್ಲ ಜಂಜಾಟಗಳ ನಡುವೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಮೈತ್ರಿ ಪಾಲನೆ ಮಾಡಿ ಚುನಾವಣೆಯಲ್ಲಿ ಪ್ರಚಾರ ನಡೆಸಬೇಕಾಗಿದ್ದ ಸಿಎಂ ಕುಮಾರಸ್ವಾಮಿಗಳು ಸದ್ಯ ದೂರವಾಗಿದ್ದಾರೆ.

   ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣ: ಎಚ್. ವಿಶ್ವನಾಥ್

   ಇಷ್ಟರಲ್ಲೇ ಅಲ್ಲಿಗೆ ತೆರಳಿ ಸಭೆಗಳನ್ನು ನಡೆಸಿ ಮೈತ್ರಿ ಅಭ್ಯರ್ಥಿ ಪರ ಮಾತನಾಡಬೇಕಾಗಿತ್ತು. ಆದರೆ ಅದ್ಯಾಕೋ ಮೌನಕ್ಕೆ ಜಾರಿದ್ದಾರೆ. ಇದು ಬಹುಶಃ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.

   ನಾಯಕರಲ್ಲಿಯೇ ಕಿತ್ತಾಟವಿರುವುದು ಬಯಲಾಗಿದೆ

   ನಾಯಕರಲ್ಲಿಯೇ ಕಿತ್ತಾಟವಿರುವುದು ಬಯಲಾಗಿದೆ

   ಮುಖ್ಯಮಂತ್ರಿಯಾಗಿ ಒಂದು ವರ್ಷವಾಗುತ್ತಾ ಬಂದಿದ್ದು, ಅವರಿಗೆ ಅದು ಮುಳ್ಳಿನ ನಡಿಗೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಅವಧಿ ಪೂರ್ಣ ಸರ್ಕಾರ ನಡೆಸಿದ ಇತಿಹಾಸವಿಲ್ಲ. ಅದರಲ್ಲೂ ಆಡಳಿತಾವಧಿಯಲ್ಲಿ ಲೋಕಸಭಾ ಚುನಾವಣೆ ಬಂದಿರುವುದು ಮೈತ್ರಿ ಧರ್ಮ ಪಾಲನೆಗೊಂದು ಸತ್ವ ಪರೀಕ್ಷೆಯಾಗಿತ್ತು. ಜತೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಒಗ್ಗಟ್ಟಾಗಿಲ್ಲ. ನಾಯಕರಲ್ಲಿಯೇ ಕಿತ್ತಾಟವಿದೆ ಎಂಬುದು ಕೂಡ ಈ ಚುನಾವಣೆಯಲ್ಲಿ ಬಯಲಾಗಿದೆ. ಫಲಿತಾಂಶದ ಬಳಿಕ ಒಳಜಗಳಗಳು ಭುಗಿಲೇಳುವ ಎಲ್ಲ ಲಕ್ಷಣಗಳು ಈಗ ಕಾಣಲಾರಂಭಿಸಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸುವುದಕ್ಕಿಂತ ಎರಡು ಪಕ್ಷಗಳ ನಾಯಕರನ್ನು ಒಟ್ಟಾಗಿ ಮುನ್ನಡೆಸುವುದೇ ಸವಾಲ್ ಆಗಿ ಪರಿಣಮಿಸಿದೆ.

   ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಕೂಗು

   ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಕೂಗು

   ಇದರ ನಡುವೆ ಬಿಜೆಪಿ ಕೂಡ ಸರ್ಕಾರ ಬೀಳಿಸಲು ಏನೆಲ್ಲ ತಂತ್ರಗಳನ್ನು ಮಾಡಬಹುದು ಎಂಬುದರಲ್ಲಿಯೇ ಮಗ್ನವಾಗಿದೆ. ಇನ್ನು ಲೋಕಸಭಾ ಚುನಾವಣೆ ಫಲಿತಾಂಶ ದೇಶದ ರಾಜಕಾರಣಕ್ಕೆ ಸಂಬಂಧಿಸಿದ್ದಾಗಿದ್ದರೂ ಕರ್ನಾಟಕದ ರಾಜಕೀಯದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ. ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಕೂಗುಗಳು ಕೂಡ ಹೆಚ್ಚಾಗುತ್ತಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಶೀತಲ ಸಮರಕ್ಕೂ ದಾರಿ ಮಾಡಿಕೊಡುತ್ತಿದೆ.

   ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದನ್ನು ಕಾಯ್ತಿದ್ದೇನೆ: ಎಂಬಿ ಪಾಟೀಲ್

   ಮೌನಮುರಿದ ಜೆಡಿಎಸ್ ರಾಜ್ಯ ಅಧ್ಯಕ್ಷ ವಿಶ್ವನಾಥ್

   ಮೌನಮುರಿದ ಜೆಡಿಎಸ್ ರಾಜ್ಯ ಅಧ್ಯಕ್ಷ ವಿಶ್ವನಾಥ್

   ಜೆಡಿಎಸ್‌ನ ರಾಜ್ಯ ಅಧ್ಯಕ್ಷರಾಗಿ ಪಕ್ಷಕ್ಕೆ ಮತ್ತು ತಮ್ಮ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಷ್ಠರಾಗಿರುವ ಎಚ್.ವಿಶ್ವನಾಥ್ ಅವರು ಇದೀಗ ಮೌನಮುರಿದಿದ್ದಾರೆ. ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರದು ಎಣ್ಣೆ ಸೀಗೆಕಾಯಿ ಸಂಬಂಧ. ಹೀಗಿರುವಾಗ ಮೇಲಿಂದ ಮೇಲೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಕೇಳಿಸುತ್ತಿದ್ದರೆ ಅವರು ಬಾಯಿ ಮುಚ್ಚಿ ಕೂರುವ ಅಸ್ಸಾಮಿ ಅಂತು ಅಲ್ಲವೇ ಅಲ್ಲ. ಹೀಗಾಗಿ "ಕಾಂಗ್ರೆಸ್ ಶಾಸಕರು ಹಾಗೂ ಮಂತ್ರಿಗಳು ತಮ್ಮ ವರ್ತನೆ ಬಿಡಬೇಕು. ಸುಖಾ ಸುಮ್ಮನೆ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ಕೊಡೋದನ್ನು ನಿಲ್ಲಿಸಬೇಕು. 2022ಕ್ಕೆ ಸಿಎಂ ಆಗಲಿ ಯಾರು ಬೇಡ ಅಂತಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿದ್ದು ಮತ್ತು ಸಿಎಂ ಆಗೋ ವಾತಾವರಣ ಕಲ್ಪಿಸಿದ್ದು ನಾನು" ಎಂದಿದ್ದಾರೆ.

   ಪ್ರಬಲ ನಾಯಕರಿಂದ ಆರೋಪಗಳ ಸುರಿಮಳೆ

   ಪ್ರಬಲ ನಾಯಕರಿಂದ ಆರೋಪಗಳ ಸುರಿಮಳೆ

   ವಿಶ್ವನಾಥ್ ಮಾತಿಗೂ ಅಷ್ಟೇ ಖಡಕ್ ಆಗಿ ಉತ್ತರಿಸಿರುವ ಸಿದ್ದರಾಮಯ್ಯ, ವಿಶ್ವನಾಥ್ ಅವನಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇರುವಾಗ ಎರಡು ಪಕ್ಷಗಳ ಪ್ರಬಲ ನಾಯಕರು ಹೀಗೆ ಆರೋಪಗಳ ಮಳೆ ಸುರಿಸುತ್ತಿದ್ದು, ಇವರಿಂದ ಸುಭದ್ರ ಸರ್ಕಾರ ನೀಡಲು ಸಾಧ್ಯನಾ? ಮೈತ್ರಿ ಮುಂದುವರೆದು ಸರ್ಕಾರ ಆಡಳಿತ ಪೂರ್ಣಗೊಳಿಸುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಭುಗಿಲೇಳುವುದು ಸಾಮಾನ್ಯ. ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿದ್ದಾರೆ. ಮಾಧ್ಯಮಗಳಿಂದ ದೂರವಿದ್ದಾರೆ.

   English summary
   Chief Minister Kumaraswamy is right now silent. No one knows secret behind it. We will get the answer after the election results.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X