• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರಿ ‌ಶಾಲಾ‌ ಮಕ್ಕಳಿಗೆ ಕೇಳಿ ಕತೆಯ ಮೂಲಕ ಸೆಲೆಬ್ರಿಟಿಗಳಿಂದ ನೆರವು

|
Google Oneindia Kannada News

ಕೇಳಿ ಕತೆಯ 2014ರಲ್ಲಿ ಪ್ರಯಾಣ ಆರಂಭಿಸಿದ್ದು, ಇದು ಕನ್ನಡ ಸಾಹಿತ್ಯ ಮತ್ತು ಚಲನಚಿತ್ರ ರಂಗದ ನಡುವೆ ನಡೆದ ಮೊದಲ ವಿಶಿಷ್ಟ ಸಹಯೋಗವಾಗಿದೆ. ಕನ್ನಡದ ಕೆಲವು ಅತ್ಯುತ್ತಮ ಸಣ್ಣ ಕತೆಗಳಿಗೆ ಚಿತ್ರರಂಗದ ಪ್ರತಿಭಾನ್ವಿತರು ಧ್ವನಿ ನೀಡುವುದರ ಮೂಲಕ ಕೇಳಿ ಕತೆಯ ಆಡಿಯೋ ಸಿ.ಡಿ ರೂಪದಲ್ಲಿ ಹೊರಬಂತು. ಈ ಆಡಿಯೋ ಪುಸ್ತಕವು ಐಟಿ ಮತ್ತು ಬ್ಯಾಂಕಿಂಗ್ ವಲಯದ ವಿವಿಧ ಸಮಾನಾಸಕ್ತ ವೃತ್ತಿಪರರ ಪರಿಕಲ್ಪನೆಯ ಕೂಸು.

ಈ ಆಡಿಯೋ ಪುಸ್ತಕದಿಂದ ಬರುವ ಸಂಪೂರ್ಣ ಆದಾಯವನ್ನು ಗಡಿನಾಡಿನಲ್ಲಿ ಓದುವ ಸರಕಾರೀ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಲಾಗುತ್ತದೆ. ಮೊದಲ ಆವೃತ್ತಿಯಲ್ಲಿ ಬಂದ ಲಾಭದಿಂದ ಗಡಿನಾಡಿನ 9 ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗಲಾಗಿದೆ.

ಇದೀಗ ಕೇಳಿ ಕತೆಯ ಎರಡನೇ ಆವೃತ್ತಿಯಲ್ಲಿ ಅಥಣಿಯ ಹದಿನಾರು ಹುಡುಗಿಯರಿಗೆ ಒಂದು ಬಾರಿಯ ವಿದ್ಯಾರ್ಥಿ ವೇತನ ನೀಡುವ ಮೂಲಕ ಬೆಂಬಲಿಸಲಾಗಿದೆ. ಈ ಹದಿನಾರೂ ವಿದ್ಯಾರ್ಥಿನಿಯರು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದವರಾಗಿದ್ದಾರೆ. ಈ ಆಡಿಯೋ ಪುಸ್ತಕದ ಮಾರಾಟದಿಂದ ಗಳಿಸಿದ ಲಾಭವು ಮತ್ತೊಮ್ಮೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಬಾಲಕಿಯರ ಶಿಕ್ಷಣವನ್ನು ಬೆಂಬಲಿಸುವ ಕಡೆಗೆ ಹೋಗುತ್ತಿದೆ.

ಕೇಳಿ ಕತೆಯ ತಂಡದ ಮುಕುಂದ್ ಸೆತ್ಲೂರ್ ಪ್ರತಿಕ್ರಿಯೆ

ಕೇಳಿ ಕತೆಯ ತಂಡದ ಮುಕುಂದ್ ಸೆತ್ಲೂರ್ ಪ್ರತಿಕ್ರಿಯೆ

"ಬರಹಗಾರರು ಮತ್ತು ಸಿನೆಮಾ, ಸಂಗೀತ ಕ್ಷೇತ್ರದಿಂದ ನಮಗೆ ಸಾಕಷ್ಟು ಬೆಂಬಲ ದೊರೆತಿದೆ. ಪ್ರೇಕ್ಷಕರು ಸಹ ನಮ್ಮ ಉದ್ದೇಶವನ್ನು ಉತ್ಸಾಹದಿಂದ ಬೆಂಬಲಿಸಿದರು. ಈ ಬೆಂಬಲದ ಫಲವಾಗಿ ಇಂದು ಹದಿನಾರು ಶಾಲಾ ವಿದ್ಯಾರ್ಥಿನಿಯರಿಗೆ ನೆರವಾಗಲು ಸಾಧ್ಯವಾಗಿದೆ" ಎಂದು ಕೇಳಿ ಕತೆಯ ತಂಡದ ಮುಕುಂದ್ ಸೆತ್ಲೂರ್ ಹೇಳಿದರು.

ವಿವೇಕ್ ಶಾನಭಾಗ್ ಬೆಂಬಲ

ವಿವೇಕ್ ಶಾನಭಾಗ್ ಬೆಂಬಲ

"ಗಡಿ ಜಿಲ್ಲೆಗಳ ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸುವುದು ಒಂದು ಉದಾತ್ತ ಕಾರಣವಾಗಿದ್ದು, ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪೋಷಿಸುವಲ್ಲಿ ಬಹಳ ಸಹಕರಿಸುತ್ತದೆ. ಕೇಳಿ ಕಥೆಯ ತಂಡದ ನಿಜವಾದ ಕಾಳಜಿ ಮತ್ತು ಸಮರ್ಪಣಾ ಮನೋಭಾವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಪ್ರಯತ್ನದಲ್ಲಿ ನಾನು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತೇನೆ." ಎಂದು ವಿವೇಕ್ ಶಾನಭಾಗ್ ಹೇಳಿದರು

ಗಾಯಕಿ ಪಲ್ಲವಿ ಅರುಣ್

ಗಾಯಕಿ ಪಲ್ಲವಿ ಅರುಣ್

ಕಳೆದ ಎರಡು ಆವೃತ್ತಿಗಳಲ್ಲಿ ಕೇಳಿ ಕಥೆಯ ಜೊತೆ ಗುರುತಿಸಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕಥೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ ಮತ್ತು ಮುಖ್ಯವಾಗಿ ಇದರಿಂದ ಬರುವ ಲಾಭವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರಿಗೆ ಶಿಕ್ಷಣ ನೀಡುವಲ್ಲಿ ಸಹಕಾರಿ ಯಾಗುತ್ತದೆ." ಎಂದು ಸಂಗೀತ ನಿರ್ದೇಶಕಿ ಹಾಗು ಗಾಯಕಿ ಪಲ್ಲವಿ ಅರುಣ್ ಹೇಳಿದ್ದಾರೆ.

ಒಟ್ಟು 14 ಸಣ್ಣ ಕಥೆಗಳು ಎರಡು ಸಂಪುಟಗಳಲ್ಲಿ ಲಭ್ಯ

ಒಟ್ಟು 14 ಸಣ್ಣ ಕಥೆಗಳು ಎರಡು ಸಂಪುಟಗಳಲ್ಲಿ ಲಭ್ಯ

ಕೇಳಿ ಕತೆಯ, ಕನ್ನಡ ಆಡಿಯೋ ಬುಕ್ ಆಗಿದ್ದು ಈಗ ಒಟ್ಟು 14 ಸಣ್ಣ ಕಥೆಗಳು ಎರಡು ಸಂಪುಟಗಳಲ್ಲಿ ಲಭ್ಯವಿದೆ. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಶಾಲಾ ಬಾಲಾಕಿಯರ ಶಿಕ್ಷಣಕ್ಕೆ ಬೆಂಬಲವಾಗಿ, ಕನ್ನಡ ಸಾಹಿತ್ಯ ಮತ್ತು ಚಲನಚಿತ್ರ ತಾರೆಯರ ಜಗತ್ತನ್ನು ಒಟ್ಟೂಗೂಡಿಸುವ ವಿಶಿಷ್ಟ ಪ್ರಯತ್ನ ಇದು.

ಕೇಳಿ ಕತೆಯ ಮೂಲಕ ಸೆಲೆಬ್ರಿಟಿಗಳ ನೆರವು

ಕೇಳಿ ಕತೆಯ ಮೂಲಕ ಸೆಲೆಬ್ರಿಟಿಗಳ ನೆರವು

ಸರ್ಕಾರಿ ‌ಶಾಲಾ‌ ಮಕ್ಕಳಿಗೆ ಕೇಳಿ ಕತೆಯ ಮೂಲಕ ಸೆಲೆಬ್ರಿಟಿಗಳ ನೆರವು
ಕಥೆಗಳ ಪಟ್ಟಿ ಇಲ್ಲಿದೆ.


ಸಂಚಿಕೆ 1

ಕತೆ- ಲೇಖಕರು - ಓದಿದವರು(ಆಡಿಯೋ ಬುಕ್ ದನಿ)

 • ಡೇರ್ ಡೆವಿಲ್ ಮುಸ್ತಫಾ- ಪೂರ್ಣಚಂದ್ರ ತೇಜಸ್ವಿ-ಸುಚೇಂದ್ರ ಪ್ರಸಾದ್
 • ಪುಟ್ಟಜ್ಜಿ ಕತೆಗಳು-ನಾ. ಡಿಸೋಜಾ- ಎಮ್ ಡಿ ಪಲ್ಲವಿ
 • ದಗಡೂ ಪರಬನ ಅಶ್ವಮೇಧ-ಜಯಂತ್ ಕಾಯ್ಕಿಣಿ-ಪ್ರಕಾಶ್ ರೈ
 • ಮಸೀದಿ ಬಿದ್ದ ಮೂರನೇ ದಿನ-ರವಿ ಬೆಳಗೆರೆ-ಟಿ ಎಸ್ ನಾಗಾಭರಣ
 • ಕೆಂಪು ಗಿಣಿ-ವಸುಧೇಂದ್ರ-ಕಿಶೋರ್
 • ಕಾಯಕವೇ ಕೈಲಾಸ -ವಿಕ್ರಂ ಹತ್ವಾರ್- ರಕ್ಷಿತ್ ಶೆಟ್ಟಿ
ಸಂಚಿಕೆ 2

ಸಂಚಿಕೆ 2

ಸರ್ಕಾರಿ ‌ಶಾಲಾ‌ ಮಕ್ಕಳಿಗೆ ಕೇಳಿ ಕತೆಯ ಮೂಲಕ ಸೆಲೆಬ್ರಿಟಿಗಳ ನೆರವು
ಸಂಚಿಕೆ 2

 • ಯಾರೂ ಅರಿಯದ ವೀರ- ಕುವೆಂಪು- ವಶಿಷ್ಠ ಸಿಂಹ
 • ಡಾಂಬರು ಬಂದುದು-ದೇವನೂರು ಮಹಾದೇವ-ಧನಂಜಯ
 • ಒಗಟು-ವೈದೇಹಿ-ಶೃತಿ ಹರಿಹರನ್
 • ನಿರ್ವಾಣ -ವಿವೇಕ ಶಾನಭಾಗ-ಅಚ್ಯುತ್ ಕುಮಾರ್
 • ಕತೆಯಾದಳು ಹುಡುಗಿ-ಯಶವಂತ ಚಿತ್ತಾಲ-ರಾಜ್ ಶೆಟ್ಟಿ
 • ಗಾಂಧೀಜಿ ಮತ್ತು ಕಾಗೆಗಳು-ಬೋಳುವಾರು ಮಹಮದ್ ಕುಂಇ-ಗಿರಿಜಾ ಲೋಕೇಶ್
 • ಬೇಲಿ ದೆವ್ವ -ಕೆ.ವಿ ತಿರುಮಲೇಶ್ -ಗಿರಿಜಾ ಲೋಕೇಶ್

ಕೇಳಬಹುದು ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಕೇಳಿ ಕತೆಯದ ಎಲ್ಲಾ ಕತೆಗಳು ಹೊಸ ವೆಬ್ ಸೈಟಿನಲ್ಲಿ ಲಭ್ಯವಿದೆ. ನೀವು ಕತೆಗಳ ಮಾದರಿ ನೋಡಬಹುದು. ಕೇಳಬಹುದು ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಕೇಳಿ ಕತೆಯ ಕನ್ನಡದ ಸಣ್ಣ ಕಥೆಗಳ ಮಹತ್ವವನ್ನು ಪುನರುಚ್ಚರಿಸುತ್ತದೆ ಮತ್ತು ಮಾಹಿತಿಗಳ ಮಹಾಪೂರವೇ ಹರಿದು ಬರುತ್ತಿರುವ ಕಾಲಘಟ್ಟದಲ್ಲಿ ಸರಳವಾಗಿ, ಸಮಾಧಾನವಾಗಿ ಕತೆಗಳನ್ನ ಕೇಳುವ ಆನಂದವನ್ನ ಜೀವಂತವಾಗಿಟ್ಟಿದೆ. ಈ ಪೀಳಿಗೆಯ ಜೀವನ ಶೈಲಿಗೆ ಹೊಂದುವಂತೆ ಇದನ್ನ ಆಡಿಯೋ ಪುಸ್ತಕದ ರೂಪದಲ್ಲಿ ಪ್ಯಾಕೇಜ್ ಮಾಡಲಾಗಿದ್ದು ನಿಮ್ಮ ಮೊಬೈಲುಗಳಲ್ಲೇ ಕೇಳಬಹುದಾಗಿದೆ.

   ಅಪ್ಪು ಸಾವಿನ ಅನುಮಾನಕ್ಕೆ ವೈದ್ಯರು ಕೊಟ್ಟ ಸ್ಪಷ್ಟನೆ ಏನು? | Oneindia Kannada
   English summary
   Celebrities from Kannada Literature and film industry support girls studying in government schools through ‘Keli Katheya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion