ಉಪ ಸಮರ: ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿದ್ದ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ ಸಿಕ್ಕಿದೆ. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ಬಹುತೇಕ ಎಲ್ಲರಿಗೂ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳ ಕೊರತೆ ಎದುರಿಸಿದರೂ ಬಿಜೆಪಿಯಂತೆ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟಾರೆ ಕಣದಲ್ಲಿ 165 ಮಂದಿ ಸ್ಪರ್ಧಿಗಳಿದ್ದಾರೆ.

ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿತ್ತು. ನವೆಂಬರ್ 21ರ ನಂತರ ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದಂತೆ 165 ಮಂದಿ ಅಭ್ಯರ್ಥಿಗಳಿದ್ದು, 156 ಪುರುಷ, 9 ಮಹಿಳಾ ಸ್ಪರ್ಧಿಗಳಿದ್ದಾರೆ.

ಶಿವಾಜಿನಗರದಲ್ಲಿ ಅತ್ಯಧಿಕ 19, ಹೊಸಕೋಟೆಯಲ್ಲಿ 17 ಸ್ಪರ್ಧಿಗಳಿದ್ದರೆ, ಕೆ. ಆರ್ ಪೇಟೆ ಹಾಗೂ ಯಲ್ಲಾಪುರದಲ್ಲಿ ಕನಿಷ್ಠ 7 ಮಂದಿ ಸ್ಪರ್ಧಿಗಳಿದ್ದಾರೆ.

By Polls 2019 Candidate List: BJP, Congress, JDS Candidates final List

ನಾಮಪತ್ರ ಹಿಂಪಡೆಯುವುದರಲ್ಲಿ ಹುಣಸೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆ ದಾಖಲಾಗಿದೆ. ಕೊನೆ ದಿನದಂದು 11 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ.

ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪು ನೀಡಿದ್ದು, ಅರ್ನಹತೆಯನ್ನು ಎತ್ತಿ ಹಿಡಿದರೂ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 15 ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಹಿರೇಕೆರೂರು ಬಿ.ಸಿ ಪಾಟೀಲ್ ಬಿ.ಎಚ್ ಬನ್ನಿಕೋಡ್ ದೇವೇಂದ್ರಪ್ಪ ಜಯಪ್ಪ(ಯುಪಿಪಿ)
ಯಲ್ಲಾಪುರ ಶಿವರಾಮ ಹೆಬ್ಬಾರ್ ಭೀಮಣ್ಣ ನಾಯಕ್ ಚೈತ್ರಾ ಗೌಡ
ರಾಣೆಬೆನ್ನೂರು ಅರುಣ್ ಕುಮಾರ್ ಪೂಜಾರಿ ಕೆ.ಬಿ ಕೋಳಿವಾಡ ಮಲ್ಲಿಕಾರ್ಜುನ ಹಲಗೇರಿ
ವಿಜಯನಗರ ಆನಂದ್ ಸಿಂಗ್ ವಿ.ವೈ ಘೋರ್ಪಡೆ ಎನ್. ಎಂ ನಬಿ
ಚಿಕ್ಕಬಳ್ಳಾಪುರ ಡಾ. ಕೆ ಸುಧಾಕರ್ ಎಂ. ಅಂಜನಪ್ಪ ರಾಧಾಕೃಷ್ಣ
ಕೆ. ಆರ್ ಪುರ ಬೈರತಿ ಬಸವರಾಜು ಎಂ.ನಾರಾಯಣ ಸ್ವಾಮಿ ಸಿ ಕೃಷ್ಣಮೂರ್ತಿ
ಯಶವಂತಪುರ ಎಸ್. ಟಿ ಸೋಮಶೇಖರ್ ಪಿ. ನಾಗರಾಜ್ ಟಿ.ಎನ್ ಜವರಾಯಿಗೌಡ
ಶಿವಾಜಿನಗರ ಎಂ. ಸರವಣ ರಿಜ್ವಾನ್ ಅರ್ಷದ್ ತನ್ವೀರ್ ಅಹ್ಮದ್
ಹೊಸಕೋಟೆ ಎಂಟಿಬಿ ನಾಗರಾಜ್ ಪದ್ಮಾವತಿ ಸುರೇಶ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ
ಕೆ. ಆರ್ ಪೇಟೆ ನಾರಾಯಣ ಗೌಡ ಕೆ. ಬಿ ಚಂದ್ರಶೇಖರ್ ದೇವರಾಜ್ ಬಿ. ಎಲ್
ಹುಣಸೂರು ಎಚ್ ವಿಶ್ವನಾಥ್ ಎಚ್. ಪಿ ಮಂಜುನಾಥ್ ಸೋಮಶೇಖರ್
ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ ಎಂ. ಶಿವರಾಜು ಡಾ. ಗಿರೀಶ್ ನಾಶಿ
ಗೋಕಾಕ ರಮೇಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ ಅಶೋಕ್ ಪೂಜಾರಿ
ಕಾಗವಾಡ ಶ್ರೀಮಂತ ಪಾಟೀಲ ಭರಮಗೌಡ ಕಾಗೆ ಶ್ರೀಶೈಲ ತುಗಶೆಟ್ಟಿ
ಅಥಣಿ ಮಹೇಶ್ ಕುಮಟಳ್ಳಿ ಜಿ.ಬಿ ಮಂಗ್ಸೂಳಿ ನಾಗನಾಥ ರಾವ್ (ಯುಪಿಪಿ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+