ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಪರರಿಗೆ ಸಿಹಿಸುದ್ದಿ ನೀಡಲಿದೆ ಬಜೆಟ್‌: ಏನು ಪ್ರಯೋಜನ?

|
Google Oneindia Kannada News

ನವದೆಹಲಿ, ಜನವರಿ 20: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್‌ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್‌ ಮೇಲೆ ಹಲವಾರು ನಿರೀಕ್ಷೆಗಳು ಇದೆ.

ಈಗಾಗಲೇ ಆಯಾ ವಲಯಕ್ಕೆ ಸಂಬಂಧಪಟ್ಟ ತಜ್ಞರು ಅಥವಾ ಸಂಘ-ಸಂಸ್ಥೆಗಳು ಸರ್ಕಾರದ ಮುಂದೆ ಬೇಡಿಕೆಗಳ, ನಿರೀಕ್ಷೆಗಳ ಪ್ರಸ್ತಾಪವನ್ನು ಇಟ್ಟಿದೆ. ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣವನ್ನು ಏರಿಕೆ ಮಾಡುವ ಒತ್ತಾಯವೂ ಕೇಳಿ ಬಂದಿದೆ. ಇನ್ನು ದ್ವಿಚಕ್ರ ವಾಹನ ಸೆಕೆಂಡ್‌ಹ್ಯಾಂಡ್ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವನ್ನು ಮಾಡಲಾಗುವುದೇ ಎಂಬ ಕಾತುರವೂ ಕೂಡಾ ಇದೆ.

ಬಜೆಟ್ 2022: ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣ ಏರಿಕೆಗೆ ಒತ್ತಾಯಬಜೆಟ್ 2022: ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣ ಏರಿಕೆಗೆ ಒತ್ತಾಯ

ಈ ನಡುವೆ ಸಂಬಳ ಪಡೆಯುವ ವೃತ್ತಿಪರರು ಕೂಡಾ ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದ್ದಾರೆ. ಸಂಬಳ ಪಡೆಯುವ ವೃತ್ತಿಪರರಿಗೆ ತೆರಿಗೆ ವಿನಾಯಿತಿ ಮಿತಿಯು ಹಲವಾರು ವರ್ಷಗಳವರೆಗೆ ಒಂದೇ ಆಗಿದೆ. ಮುಂಬರುವ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದು ಎಂಬ ಭರವಸೆಯನ್ನು ಈ ವಲಯವು ಹೊಂದಿದೆ. ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರಲಿರುವ ಹಿನ್ನೆಲೆಯಿಂದಾಗಿ ಈ ಹೆಚ್ಚಳದ ನಿರೀಕ್ಷೆ ಇದೆ. ಇದು ಮತದಾನದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆ ಹೆಚ್ಚಳ ಸಾಧ್ಯತೆ ಇದೆ. ಬಜೆಟ್ 2022 ರಲ್ಲಿ ಸಂಬಳ ಪಡೆಯುವ ವೃತ್ತಿಪರರಿಗೆ ಬೇರೆ ಯಾವ ಸಿಹಿಸುದ್ದಿ ಇದೆ ಎಂಬುವುದನ್ನು ನಾವು ತಿಳಿಯೋಣ ಬನ್ನಿ...

 ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ? ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ?

 ತೆರಿಗೆ ವಿನಾಯಿತಿ ಮಿತಿ

ತೆರಿಗೆ ವಿನಾಯಿತಿ ಮಿತಿ

ಪ್ರಸ್ತುತ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರೂ.ಗಳಾಗಿದ್ದು, ಕಳೆದ ಎಂಟು ವರ್ಷಗಳಿಂದ ಮಿತಿಯನ್ನು ಪರಿಷ್ಕರಣೆ ಮಾಡಿಲ್ಲ. ಈ ಮಿತಿಯನ್ನು ಆಗಿನ 2 ಲಕ್ಷದಿಂದ 50,000 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದೀಗ ತೆರಿಗೆದಾರರು ಈ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವಂತೆ ಕೋರುತ್ತಿದ್ದಾರೆ. ಹೆಚ್ಚೆಂದರೆ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಏರಿಸುವ ನಿರೀಕ್ಷೆ ಇದೆ.

 80C ಅಡಿಯಲ್ಲಿ ವಿನಾಯಿತಿಯ ವ್ಯಾಪ್ತಿ

80C ಅಡಿಯಲ್ಲಿ ವಿನಾಯಿತಿಯ ವ್ಯಾಪ್ತಿ

ಪ್ರಸ್ತುತ ಸೆಕ್ಷನ್ 80ಸಿ ಅಡಿಯಲ್ಲಿ ರೂ 1.5 ಲಕ್ಷ ವಿನಾಯಿತಿಯನ್ನು ಅನುಮತಿಸಲಾಗಿದೆ. ಇದನ್ನು 2014 ರಲ್ಲಿ ರೂ 1 ಲಕ್ಷದಿಂದ 1.5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸಂಬಳ ಪಡೆಯುವ ವೃತ್ತಿಪರರ ತೆರಿಗೆ ಉಳಿಸುವ ತಂತ್ರಕ್ಕೆ ಇದು ಸಹಾಯಕವಾಗಿದೆ. ಮುಂಬರುವ ಬಜೆಟ್‌ನಲ್ಲಿ ಈ ಮಿತಿಯನ್ನು 2 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಬಜೆಟ್ ವಿಶ್ಲೇಷಕರು ನಿರೀಕ್ಷಿಸಿದ್ದಾರೆ.

 3 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ತೆರಿಗೆ-ಮುಕ್ತ ಎಫ್‌ಡಿ

3 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ತೆರಿಗೆ-ಮುಕ್ತ ಎಫ್‌ಡಿ

ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ತೆರಿಗೆ ಮುಕ್ತ ಫಿಕ್ಸಿಡ್‌ ಡೆಪಾಸಿಟ್‌ಗಳ (ಎಫ್‌ಡಿ) ಲಾಕ್-ಇನ್ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದೆ. ಬ್ಯಾಂಕ್‌ಗಳು ಕೂಡ ಬಡ್ಡಿ ದರ ಇಳಿಕೆ ಮಾಡಿವೆ. ಪಿಪಿಎಫ್‌ ಮೇಲಿನ ಬಡ್ಡಿದರಗಳು ಪ್ರಸ್ತುತ ಫಿಕ್ಸಿಡ್‌ ಡೆಪಾಸಿಟ್‌ಗಿಂತ ಅಧಿಕವಾಗಿದೆ. ಇದಕ್ಕೆ ಕಾರಣ ಕಡಿಮೆ ಹೂಡಿಕೆ ಕೂಡಾ ಆಗಿರಬಹುದು. ಅಲ್ಪಾವಧಿಯಲ್ಲಿ ಎಫ್‌ಡಿ ಮಾಡುವ ಉತ್ತಮ ಆಯ್ಕೆಯನ್ನು ಸರ್ಕಾರವು ನೀಡುವ ನಿರೀಕ್ಷೆ ಇದೆ. ಅಂದರೆ ಫಿಕ್ಸಿಡ್‌ ಡೆಪಾಸಿಟ್‌ಗಳ (ಎಫ್‌ಡಿ) ಲಾಕ್-ಇನ್ ಅವಧಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಬಹುದು.

 ಗೃಹಭತ್ಯೆ (HRA) ಕೂಡಾ ಏರಿಕೆ ಸಾಧ್ಯತೆ

ಗೃಹಭತ್ಯೆ (HRA) ಕೂಡಾ ಏರಿಕೆ ಸಾಧ್ಯತೆ

ಸಾಮಾನ್ಯವಾಗಿ ಡಿಎ ಹೆಚ್ಚಳವಾದರೆ ಗೃಹಭತ್ಯೆ (HRA) ಕೂಡಾ ಏರಿಕೆ ಆಗುತ್ತದೆ. ಡಿಎ ಶೇ 25ಕ್ಕೆ ಹೆಚ್ಚಳವಾದರೆ ಗೃಹಭತ್ಯೆ (HRA) ಕೂಡಾ ಹೆಚ್ಚಳವಾಗಬಹುದು. ಪ್ರಸ್ತುತ ಗೃಹಭತ್ಯೆ ಶೇ 27ರಷ್ಟು ಇದೆ. ನಗರ ಶ್ರೇಣಿಕೃತ ಆದಾರದಲ್ಲಿ ಈ ಗೃಹಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಎಕ್ಸ್ ವರ್ಗಕ್ಕೆ ಮೂಲ ವೇತನದ ಶೇ 27ರಷ್ಟು, ವೈ ವರ್ಗಕ್ಕೆ ಮೂಲ ವೇತನದ ಶೇ 18ರಷ್ಟು, ಮೂಲ ಝಡ್ ವರ್ಗಕ್ಕೆ ಮೂಲ ವೇತನದ ಶೇ 9ರಷ್ಟು ಗೃಹಭತ್ಯೆ ಲಭ್ಯವಾಗಲಿದೆ. ಇನ್ನು ಕನಿಷ್ಠ ಗೃಹಭತ್ಯೆ ಮೂರು ವಿಭಾಗಗಳಿಗೆ 5,400 ರೂ, 3,600 ರೂ ಹಾಗೂ 1,800 ರೂ ಇದೆ. ತುಟ್ಟಿ ಭತ್ಯೆ ಶೇ 50ಕ್ಕೂ ಅಧಿಕವಾದರೆ ಗೃಹಭತ್ಯೆಯನ್ನು ಕ್ರಮವಾಗಿ ಶೆ 30, ಶೇ 20 ಹಾಗೂ ಶೇ 10ಕ್ಕೆ ಇಳಿಕೆ ಆಗಲಿದೆ. (ಒನ್‌ಇಂಡಿಯಾ ಸುದ್ದಿ)

English summary
Budget 2022: Good news for salaried professionals, Here's a details of Benefits on the cards. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X