ಈ ರಾಜ್ಯದಲ್ಲಿ ಆರಂಭವಾಗಲಿದೆ BSNL 4G ಸೇವೆ
ಇತ್ತೀಚಿಗೆ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಬೆಲೆಯಲ್ಲಿ ಏರಿಕೆ ಮಾಡಿದ್ದವು. ಇದರ ಬಿಸಿ ಗ್ರಾಹಕರಿಗೆ ನುಂಗಲಾದ ತುತ್ತಿನಂತೆ ಪರಿಣಮಿಸುತ್ತಿದೆ. ಈ ಮಧ್ಯೆ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಈಗ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಈಗ ಬಿಎಸ್‌ಎನ್‌ಎಲ್ ಹೊಸ ಸೇವೆಯನ್ನು ಆರಂಭಿಸಿದೆ.
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಬಿಎಸ್‌ಎನ್‌ಎಲ್ ತನ್ನ ಬಳಕೆದಾರರಿಗೆ ಹೈ ಸ್ಪೀಡ್ ಇಂಟರ್ನೆಟ್ ನೀಡಲು ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಕಂಪನಿಯು ದೇಶಾದ್ಯಂತ 10 ಸಾವಿರ 4ಜಿ ಟವರ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಇನ್ನೇನು ಕೆಲವೇ ದಿನಗಳಲ್ಲಿ 4ಜಿ ಸೇವೆಯನ್ನು ಬಿಎಸ್‌ಎನ್‌ಎಲ್ ಆರಂಭಿಸಲಿದೆ.

ಯಾವ ರಾಜ್ಯದಲ್ಲಿ ಸದ್ಯ ಈ ಸೇವೆ ಲಭ್ಯ
ಈಗಾಗಲೇ ದಕ್ಷಿಣ ಭಾರತದ ತಮಿಳುನಾಡಿನ ಅನೇಕ ನಗರಗಳಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಕಂಪನಿ ಗುಡ್ ನ್ಯೂಸ್ ನೀಡಿದೆ. ಈ ರಾಜ್ಯದ ಹಲವು ಭಾಗಗಳಲ್ಲಿ 4ಜಿ ಸೇವೆಯನ್ನು ಆರಂಭಿಸಲು ಕಂಪನಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಪ್ರದೇಶದ ಜನರು ಇನ್ನೇನು ಕೆಲವೇ ದಿನಗಳಲ್ಲಿ ಈ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.
ಖಾಸಗಿ ಕಂಪನಿಗಳ ಬೆಲೆ ಏರಿಕೆಯ ನಂತರ, BSNL ಹೆಚ್ಚಿನ ಬಳಕೆದಾರರ ತನ್ನತ್ತ ಸೆಳೆಯಲು ಈಗ ಹೊಸ ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ನಿರಂತರವಾಗಿ ಅಗ್ಗದ ಮತ್ತು ಕೈಗೆಟುಕುವ ಯೋಜನೆಗಳನ್ನು ನೀಡುತ್ತಿದೆ. ಬಿಎಸ್‌ಎನಲ್ 4G ಇಂಟರ್ನೆಟ್ ಸಂಪರ್ಕ ಕ್ಷೇತ್ರದಲ್ಲಿ ತನ್ನ ಕೆಲಸದ ವೇಗವನ್ನು ಹೆಚ್ಚಿಸಿದೆ. ತಮಿಳುನಾಡಿನಲ್ಲಿ 4G ಸೇವೆಯನ್ನು ಪ್ರಾರಂಭಿಸುವುದರೊಂದಿಗೆ, ಇತರ ರಾಜ್ಯಗಳಲ್ಲೂ ಈ ಕಂಪನಿಯ ಬಳಕೆದಾರರ ನಿರೀಕ್ಷೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯಲು ಈಗಾಗಲೇ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಬಿಎಸ್‌ಎನ್‌ಎಲ್ ಕಂಪನಿ ಕೈಗೆಟಕುವ ದರದಲ್ಲಿ ಹಲವು ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಕಡಿಮೆ ವ್ಯಾಲಿಡಿಟಿಯ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ ಈ ಕಂಪನಿಯ ನೆಟ್‌ವರ್ಕ್‌ನಲ್ಲಿ 4ಜಿ ಸೇವೆಗಳ ಆನಂದವನ್ನು ಸಹ ಬಳಕೆದಾರರಿಗೆ ನೀಡಲಿದೆ.
ಕಡಿಮೆ ವ್ಯಾಲಿಡಿಟಿ ಸಹ ಲಭ್ಯ
ಬಿಎಸ್‌ಎನ್‌ಎಲ್ ಅಗ್ಗದ ಅಲ್ಪಾವಧಿಯ ಯೋಜನೆಗಳನ್ನು ಮಾತ್ರವಲ್ಲದೆ, ಕಂಪನಿಯು ದೀರ್ಘಾವಧಿಯ ಮಾನ್ಯತೆಯೊಂದಿಗೆ ಅಗ್ಗದ ಮತ್ತು ಕೈಗೆಟುಕುವ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಬಿಎಸ್‌ಎನ್‌ಎಲ್ ಪಟ್ಟಿಯಲ್ಲಿ ಕಡಿಮೆ ಬೆಲೆಯಲ್ಲಿ 300 ದಿನಗಳ ದೀರ್ಘಾವಧಿಯನ್ನು ಹೊಂದಿರುವ ಕೆಲವು ಯೋಜನೆಗಳಿವೆ. ಬಿಎಸ್‌ಎನ್‌ಎಲ್ ಇದಕ್ಕಾಗಿ ಹಲವು ಉತ್ತಮ ಯೋಜನೆಗಳನ್ನು ಹೊಂದಿದೆ.
ಬಿಎಸ್‌ಎನ್‌ಎಲ್ ತನ್ನ ಕೋಟಿಗಟ್ಟಲೆ ಬಳಕೆದಾರರಿಗೆ ತನ್ನ ಪಟ್ಟಿಯಲ್ಲಿ 797 ರೂಪಾಯಿಗಳ ಯೋಜನೆಯನ್ನು ಸೇರಿಸಿದೆ. ಈ ಯೋಜನೆಯಲ್ಲಿ ನಿಮಗೆ 300 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗಿದೆ. ಜಿಯೋ ಮತ್ತು ಏರಟೇಲ್ ನಂತಹ ದೊಡ್ಡ ಕಂಪನಿಗಳು ನಿಮಗೆ ಕೇವಲ 84 ದಿನಗಳು ಅಥವಾ 90 ದಿನಗಳ ವ್ಯಾಲಿಡಿಟಿಯನ್ನು ನೀಡುವ ಬೆಲೆಯಲ್ಲಿ, ಬಿಎಸ್‌ಎನ್‌ಎಲ್ ಮಾನ್ಯತೆ ನೀಡಲಿದೆ.
ಬಿಎಸ್‌ಎಲ್ ತನ್ನ ಬಳಕೆದಾರರಿಗೆ ಹೈ ಸ್ಪೀಡ್ ಇಂಟರ್ನೆಟ್ ಹಾಗೂ ಉಚಿತ ಕರೆಗಳು ಹಾಗೂ ಉಚಿತ 100 ಎಸ್‌ಎಂಎಸ್‌ಗಳನ್ನು ನೀಡುವ ಸಾಧ್ಯತೆ ಇದೆ.












Click it and Unblock the Notifications