ಬೆಳಗಾದ್ರೆ ಎಣ್ಣೆ ಬೇಕಂತೆ ಏನು ಮಾಡೋಣ: ಇದ್ಯಾವ್ದೋ ಗುರು 'ಕುಡುಕ ಹುಂಜ'
ಮುಂಬೈ ಜೂನ್ 06: ಮದ್ಯಪಾನ ಮನುಷ್ಯನನ್ನು ಕೆಡಿಸುತ್ತದೆ ಎಂದು ಹೇಳಲಾಗುತ್ತದೆ. ಯಾರಾದರೂ ಒಮ್ಮೆ ಮದ್ಯದ ಚಟಕ್ಕೆ ಬಿದ್ದರೆ, ಅದನ್ನು ಬಿಡುವುದು ಅಷ್ಟು ಸುಲಭವಲ್ಲ. ಮನುಷ್ಯ ಮದ್ಯದ ಚಟಕ್ಕೆ ಬಿದ್ದರೆ ಅದನ್ನು ಬಿಡುವ ಮಾತೇ ಇಲ್ಲ ಎನ್ನವಾಗ ಇದಕ್ಕೆ ಪ್ರಾಣಿಗಳೂ ಕೂಡ ಸೇರಿಕೊಂಡರೆ ಹೇಗಿರುತ್ತದೆ? ಹೌದು ಪ್ರಾಣಿಗಳೂ ಈ ಮದ್ಯಕ್ಕೆ ಹುಚ್ಚೆದ್ದು ಕುಣಿಯುತ್ತಿವೆ ಅಂದ್ರೆ ನೀವು ನಂಬಲೇಬೇಕು. ಮದ್ಯಪಾನ ಮಾಡದೇ ಇರಲು ಸಾಧ್ಯವಿಲ್ಲದ ಮಹಾರಾಷ್ಟ್ರ ಹುಂಜಯೊಂದು ಭಾರೀ ಸುದ್ದಿಯಲ್ಲಿದೆ.
ಅಸಲಿಗೆ ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದ ಮದ್ಯವ್ಯಸನಿ ಹುಂಜ ಸುದ್ದಿ ತೀವ್ರ ವೈರಲ್ ಆಗುತ್ತಿದೆ. ಈ ಹುಂಜದ ವಿಶೇಷತೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹುಂಜ ಮದ್ಯಪಾನವನ್ನು ತುಂಬಾನೇ ಇಷ್ಟಪಡುತ್ತದೆ. ಎಷ್ಟರ ಮಟ್ಟಿಗೆ ಅಂದ್ರೆ ನಿತ್ಯ ಅದು ಮದ್ಯೆ ಕುಡಿಯದೇ ಇದ್ದರೆ ಏನನ್ನೂ ತಿನ್ನಲು ಅಥವಾ ಕುಡಿಯಲು ನಿರಾಕರಿಸುತ್ತದೆ. ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಪಿಪಾರಿ ಗ್ರಾಮದಲ್ಲಿನ ಹುಂಜ ಭಾರೀ ಸುದ್ದಿಯಲ್ಲಿದೆ. ರೈತನ ಮನೆಯಲ್ಲಿ ವಾಸಿಸುವ ಈ ಹುಂಜ ಮದ್ಯವಿಲ್ಲದೆ ದಿನವನ್ನು ಪ್ರಾರಂಭಿಸುವುದಿಲ್ಲ.

ಹುಂಜಕ್ಕೆ ಪ್ರತಿನಿತ್ಯ ಮದ್ಯ ಬೇಕು
ಸಾಮಾನ್ಯವಾಗಿ ಎಲ್ಲರೂ ಕೋಳಿ ಮಾಂಸವನ್ನು ಇಷ್ಟಪಡುತ್ತಾರೆ. ಹೀಗಾಗಿ ರೈತ ಭಾವು ಕಾಟೋರೆ ಕೋಳಿ ಸಾಗಣೆ ಮಾಡುತ್ತಾರೆ. ಇವರೂ ಕೂಡ ಕೋಳಿ ಮಾಂಸವನ್ನು ಇಷ್ಟಪಡುತ್ತಾರೆ. ಇವುಗಳಲ್ಲಿ ಒಂದು ಹುಂಜ ಮದ್ಯದ ಚಟಕ್ಕೆ ಒಳಗಾಗಿದೆ. ಅದೆಷ್ಟರ ಮಟ್ಟಿಗೆ ಅಂದರೆ ಅದು ಪ್ರತಿದಿನ ಮದ್ಯಪಾನ ಮಾಡದೆ ಬದುಕಲು ಸಾಧ್ಯವಿಲ್ಲ. ಹುಂಜದ ಈ ಚಟದಿಂದಾಗಿ ಅದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಫೇಮಸ್ ಆಗಿದೆ. ಇಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಹುಂಜದ ಮಾಲೀಕ ತನ್ನ ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟಿಲ್ಲ, ಆದರೆ ತನ್ನ ಕುಡುಕ ಹುಂಜಕ್ಕಾಗಿ ಮದ್ಯವನ್ನು ಖರೀದಿಸಲು ಪ್ರತಿನಿತ್ಯ ಅಂಗಡಿಗೆ ಹೋಗುತ್ತಾನೆ.

ಮಾಲೀಕನಿಗೆ ಬೇಕಾದ ಮದ್ಯ ಹುಂಜಕ್ಕೆ ಏಕೆ?
ಈಗ ನೀವು ಯೋಚಿಸುತ್ತಿರಬೇಕು, ಮಾಲೀಕ ಮದ್ಯ ಸೇವಿಸದಿದ್ದರೆ, ಈ ಹುಂಜಕ್ಕೆ ಮದ್ಯ ಹೇಗೆ ಚಟವಾಯಿತು? ವಾಸ್ತವವಾಗಿ, ಕೆಲವು ತಿಂಗಳುಗಳ ಹಿಂದೆ ಭಾವು ಕಟೋರೆ ಅವರು ಕೋಳಿ ರೋಗದಿಂದಾಗಿ ತಮ್ಮ ಅನೇಕ ಕೋಳಿಗಳನ್ನು ಕಳೆದುಕೊಂಡಿದ್ದರು. ಹೀಗಿರುವಾಗ ಯಾರೋ ನೀಡಿದ ಮಾಹಿತಿ ಮೇರೆಗೆ ತನ್ನ ಕೆಲ ಕೋಳಿಗಳಿಗೆ ಮದ್ಯಪಾನ ಮಾಡಿ ಚಿಕಿತ್ಸೆ ಕೊಡಿಸತೊಡಗಿದ್ದಾರೆ. ಇದರ ನಂತರ, ಉಳಿದ ಕೋಳಿಯಂತೆ, ಈ ಹುಂಜ ಕೂಡ ಗುಣಮುಖವಾಯಿತು. ಆದರೆ ಅದು ಕುಡಿತದ ಚಟಕ್ಕೆ ಬಿದ್ದಿದೆ. ಈ ಹುಂಜಕ್ಕೆ ಆಲ್ಕೋಹಾಲ್ ಸಿಗದಿದ್ದರೆ, ಅದು ಧಾನ್ಯ ಮತ್ತು ನೀರನ್ನು ಸಹ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತದೆ.

ಮದ್ಯ ನೀಡದೆ ಧಾನ್ಯ ಮತ್ತು ನೀರು ಮುಟ್ಟದ ಹುಂಜ
ತನ್ನ ಹುಂಜದ ಮದ್ಯದ ಚಟವನ್ನು ಪೂರೈಸಲು ರೈತ ಭಾವು ಪ್ರತಿದಿನ ಮದ್ಯವನ್ನು ಖರೀದಿಸುತ್ತಾರೆ. ಈ ಹುಂಜ ಈಗ ಕುಟುಂಬದ ಸದಸ್ಯರಂತೆ ಮಾರ್ಪಟ್ಟಿರುವುದರಿಂದ ಅದನ್ನು ಪ್ರತಿನಿತ್ಯ ಈಡೇರಿಸಬೇಕಿದೆ ಎನ್ನುತ್ತಾರೆ ರೈತ ಭಾವು. 'ಹುಂಜ ಮದ್ಯವಿಲ್ಲದೆ ನೀರು ಸಹ ಕುಡಿಯುವುದಿಲ್ಲ, ನಾನು ಮದ್ಯಕ್ಕಾಗಿ ಪ್ರತಿ ತಿಂಗಳು 2,000 ರೂ. ಖರ್ಚು ಮಾಡುತ್ತೇನೆ' ಎಂದು ಭಾವು ಹೇಳುತ್ತಾರೆ.

ವೈದ್ಯರ ನೀಡಿದ ಆ ಸಲಹೆ ಏನು?
ವ್ಯಸನದಿಂದ ಮುಕ್ತಿ ಹೊಂದಲು ಪ್ರಯತ್ನಿಸಲಾಗುತ್ತಿದೆ ಎಂದು ಭಾವು ತಿಳಿಸಿದರು. ಹುಂಜ ಮದ್ಯದ ವ್ಯಸನದಿಂದ ಹೊರಬರಬೇಕಾದರೆ, ಮದ್ಯದ ವಾಸನೆ ಮತ್ತು ಕ್ರಮೇಣ ಮದ್ಯದ ಪ್ರಮಾಣವನ್ನು ಕಡಿಮೆ ಮಾಡುವ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸಬೇಕು ಎಂದು ವೈದ್ಯರು ಭಾವು ಕಾಟೋರೆಗೆ ತಿಳಿಸಿದ್ದಾರೆ. ಇದನ್ನು ಭಾವು ಸದ್ಯ ರೂಢಿಸಿದ್ದಾರೆ.












Click it and Unblock the Notifications