Poll Of Poll ಮತಗಟ್ಟೆ ಸಮೀಕ್ಷೆ: ಕಳಚಿದ ನಿತೀಶ್ ಕುಮಾರ್ ಕಿರೀಟ, ಬಿಹಾರಕ್ಕೆ ಮತ್ತೆ 'ಯಾದವ' ಬಲ
ಪಾಟ್ನಾ, ನ 7: ಬಿಹಾರ ಅಸೆಂಬ್ಲಿ ಚುನಾವಣೆ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ವಿವಿಧ ಮಾಧ್ಯಮಗಳ ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದೆ. ಇದರ ಪ್ರಕಾರ, ಲಾಲೂ ಕುಟುಂಬದ ರಾಜ್ಯಭಾರ ದಶಕಗಳ ನಂತರ ಮತ್ತೆ ಬಿಹಾರದಲ್ಲಿ ಮತ್ತೆ ಬರಲಿದೆ.
Recommended Video
ಸಮೀಕ್ಷೆಯ ಪ್ರಕಾರ, ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಬಿಹಾರದಲ್ಲಿ ಗೋಚರಿಸಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡು ಬಿಹಾರ ಸುತ್ತಾಡಿದ್ದ ತೇಜಸ್ವಿ ಯಾದವ್ ಅವರ ಪರಿಶ್ರಮಕ್ಕೆ ಮತದಾರ ಫಿದಾ ಆಗಿದ್ದಾನೆ.
ರಾಜ್ಯದಲ್ಲಿ ಕಾಣದ ಅಭಿವೃದ್ದಿ, ನಿರುದ್ಯೋಗ, ಯುವಕರ ಆಕ್ರೋಶ, ಸಿಎಂ ನಿತೀಶ್ ಕುಮಾರ್ ಕಾರ್ಯಶೈಲಿಯನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಂಡು ಬಂದ, ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಇದರಲ್ಲಿ ಯಶಸ್ವಿಯನ್ನು ಕಾಣುವತ್ತ ಸಾಗುತ್ತಿದೆ.
243 ಸದಸ್ಯ ಬಲದ ಬಿಹಾರ ಅಸೆಂಬ್ಲಿಗೆ ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯ ಫಲಿತಾಂಶ ನವೆಂಬರ್ ಹತ್ತರಂದು ಹೊರಬೀಳಲಿದೆ. ವಿವಿಧ ವಾಹಿನಿ/ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಎಲ್ಲಾ ಫಲಿತಾಂಶ ಈ ಕೆಳಗಿನಂತಿದೆ:

ಟಿವಿ 9, ಭಾಅರತ್ ವರ್ಷ್ ನಡೆಸಿದ ಸಮೀಕ್ಷೆ
ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 115-125
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 110-120
ಎಲ್ಜೆಪಿ : 3-5
ಇತರರು : 10-15

ಟುಡೇಸ್ ಚಾಣಕ್ಯ ಸಮೀಕ್ಷೆ
ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 180+
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 55+
ಎಲ್ಜೆಪಿ : 0
ಇತರರು : 08+

ಇಂಡಿಯಾ ಟುಡೇ - ಏಕ್ಸಿಸ್ ಸಮೀಕ್ಷೆ
ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 139-161
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 69-91
ಎಲ್ಜೆಪಿ : 3-5
ಇತರರು : 3-5

ರಿಪಬ್ಲಿಕ್ - ಜನ್ ಕೀ ಬಾತ್ ಸಮೀಕ್ಷೆ
ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 118-138
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 91-117
ಎಲ್ಜೆಪಿ : 5-8
ಇತರರು : 0-6

ಟೈಮ್ಸ್ ನೌ - ಸಿವೋಟರ್ ಸಮೀಕ್ಷೆ
ಆರ್ಜೆಡಿ - ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ: 120
ಜೆಡಿಯು - ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ: 116
ಎಲ್ಜೆಪಿ : 1
ಇತರರು : 6











Click it and Unblock the Notifications