Bengaluru PG: ಬೆಂಗಳೂರಲ್ಲಿ ಪಿಜಿ ಓನರ್‌ ಆಗೋದೇ ಬಿ.ಟೆಕ್‌ ವಿದ್ಯಾರ್ಥಿನಿಯ ಡ್ರೀಮ್‌ ಜಾಬ್‌, ಇದಕ್ಕೆ 3 ಕಾರಣ

ಸಾಮಾನ್ಯವಾಗಿ ಯಾರಾದರೂ ನಿನ್ನ ಡ್ರೀಮ್‌ ಜಾಬ್‌ ಏನು? ಅಂತ ಕೇಳಿದಾಗ ಅನೇಕರು ಐಎಎಸ್‌, ಐಪಿಎಸ್‌, ಡಾಕ್ಟರ್‌, ಇಂಜಿನಿಯರ್‌ ಸೇರಿದಂತೆ ಹಲವು ಉದ್ಯೋಗಗಳ ಹೆಸರನ್ನ ಹೇಳ್ತಾರೆ. ಇನ್ನು ಸರ್ಕಾರಿ ಕೆಲಸ, ಐಟಿ ಕೆಲಸ ಅಂತಾನೂ ಕನಸು ಕಟ್ಟಿಕೊಂಡೋರನ್ನ ನೋಡಿರ್ತೀವಿ. ಆದ್ರೆ, ದೆಹಲಿ ಮೂಲಕ ಬಿ.ಟೆಕ್‌ ವಿದ್ಯಾರ್ಥಿನಿ ತಮ್ಮ ಡ್ರೀಮ್‌ ಜಾಬ್‌ ಬಗ್ಗೆ ಹೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಷ್ಟಕ್ಕೂ ಆ ವಿದ್ಯಾರ್ಥಿನಿಯ ಡ್ರೀಮ್‌ ಜಾಬ್‌ ಏನಪ್ಪಾ ಅಂದ್ರೆ ನಮ್ಮ ಬೆಂಗಳೂರಿನಲ್ಲಿ ಪೇಯಿಂಗ್‌ ಗೆಸ್ಟ್‌ (ಪಿಜಿ) ಓನರ್‌ ಆಗುವುದಂತೆ. ಇದಕ್ಕೆ ಕಾರಣ ಏನು ಎಂಬುದನ್ನೂ ರಿವೀಲ್‌ ಮಾಡಿರುವುದು ಅಚ್ಚರಿ ಮೂಡಿಸಿದೆ.

ಹೌದು ಬೆಂಗಳೂರಿನಲ್ಲಿ ಪೇಯಿಂಗ್‌ ಗೆಸ್ಟ್‌ಗೆ ಮಾಲೀಕರಾಗುವುದೇ ನನ್ನ ಕನಸಿನ ಉದ್ಯೋಗ ಎಂದು ವಿದ್ಯಾರ್ಥಿನಿಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಕಾಮೆಂಟ್‌ಗಳ ಸುರಿಮಳೆಯೇ ಹರಿದಿದೆ. ಇಷ್ಟಕ್ಕೂ ಆ ವಿದ್ಯಾರ್ಥಿನಿಗೆ ಪಿಜಿ ಓನರ್‌ ಆಗಬೇಕು ಅಂತ ಕನಸು ಕಾಣೋದಕ್ಕೂ ಬಲವಾದ ಕಾರಣಗಳಿವೆಯಂತೆ. ಅದನ್ನೂ ಆಕೆ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾದ್ರೆ ಇವರಿಗೆ ಪಿಜಿ ಓನರ್‌ ಡ್ರೀಮ್‌ ಜಾಬ್‌ ಆಗಿದ್ದು ಏಕೆ ಎಂಬುದಕ್ಕೆ ಕಾರಣ ಇಲ್ಲಿದೆ ನೋಡಿ..

Bengaluru Rent B Tech Student Says Being A PG Owner In City Is Her Dream Job

ಮೊನಾಲಿಕಾ ಪಟ್ನಾಯಕ್‌ ಎಂಬ ಹೆಸರಿನ ಖಾತೆಯಿಂದ ಈ ರೀತಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. "ನನ್ನ ಕನಸಿನ ಕೆಲಸವೆಂದರೆ ಬೆಂಗಳೂರಿನಲ್ಲಿ ಪಿಜಿ ಮಾಲೀಕರಾಗುವುದು. ಏನನ್ನೂ ಮಾಡಂಗಿಲ್ಲ. ಪ್ರತಿ ತಿಂಗಳ ಕೊನೆಯಲ್ಲಿ ಮಜಾ ಮಾಡುವಷ್ಟು ಬಾಡಿಗೆ ಪಡೆಯಬಹುದು ಹಾಗೂ ಭದ್ರತಾ ಠೇವಣಿ ಹಿಂತಿರುಗಿಸುವುದಿಲ್ಲ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದಕ್ಕೆ ಪಿಜಿ ಬದುಕು ಕಂಡವರು ಮುಗಿಬಿದ್ದು ಕಾಮೆಂಟ್‌ ಮಾಡಿದ್ದಾರೆ. ನೀವು ಹೇಳಿದ್ದು, ನೂರಕ್ಕೆ ನೂರರಷ್ಟು ನಿಜ, ಸುಮ್ನೆ ತಿಂಗಳಿಡೀ ಕೆಲಸಕ್ಕೆ ಹೋಗಿ ದುಡಿಯುವ ಬದಲು ಪಿಜಿ ಕಟ್ಟಿ ಮಾಲೀಕರಾದರೆ ಕೈತುಂಬಾ ಹಣ ಬರುತ್ತೆ ಎಂದು ಈಕೆಗೆ ಸಾಥ್‌ ಕೊಟ್ಟಿದ್ದಾರೆ.

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಪಿಜಿ ಉದ್ಯಮ!

ಐಟಿ ಸಿಟಿ, ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ ಎನಿಸಿಕೊಂಡಿರುವ ಬೆಂಗಳೂರನ್ನು ಪಿಜಿ ಸಿಟಿ ಎಂದರೆ ತಪ್ಪಾಗೋದಿಲ್ಲ. ಏಕೆಂದರೆ ಒಂದೆಡೆ ಐಟಿ ಕಂಪನಿಗಳಿಗೆ ಹೆಸರುವಾಸಿಯಾದಂತೆ ನಗರದಲ್ಲಿ ಪಿಜಿಗಳು ಗಲ್ಲಿ ಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಸಾಮಾನ್ಯವಾಗಿ ಹೊರರಾಜ್ಯದಿಂದ ಉದ್ಯೋಗ ಅರಸಿ ಬಂದವರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಈ ಪೇಯಿಂಗ್‌ ಗೆಸ್ಟ್‌ಗಳೇ (ಪಿಜಿ) ಆಶ್ರಯತಾಣವಾಗಿವೆ. ಬಾಡಿಗೆ ಮನೆಗಳ ತಲೆನೋವಿನ ಬದಲಿಗೆ ಮೂರು ಹೊತ್ತಿನ ಊಟ, ವೈಫೈ ಸೇರಿದಂತೆ ಹಲವು ಸೌಕರ್ಯಗಳಿರುವ ಪಿಜಿಗಳಲ್ಲಿ ಉಳಿಯಲು ಜನ ಮುಗಿಬೀಳುತ್ತಿದ್ದಾರೆ.

ಈ ಹಿನ್ನೆಲೆ ಬೆಂಗಳೂರು ಪಿಜಿ ನಡೆಸುವುದು ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಐಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಪಿಜಿಗಳದ್ದೇ ಕಾರುಬಾರು. ಒಂದೇ ಕೋಣೆಯಲ್ಲಿ ಟು ಶೇರಿಂಗ್‌, ಮೂವರು ಶೇರಿಂಗ್‌, ನಾಲ್ಕು ಶೇರಿಂಗ್‌ ಸೇರಿ ಹಲವು ಆಯ್ಕೆಗಳಿವೆ. ಪಿಜಿಯಲ್ಲಿ ಸಿಂಗಲ್‌ ಆಗಿ ಇರಬೇಕಂದ್ರೆ ಕಾಸು ಕೂಡ ಜಾಸ್ತಿ ಕೊಡಬೇಕು. ಇನ್ನೂ ಕೆಲವೆಡೆ ಕೋಲಿವಿಂಗ್‌ ಪಿಜಿಗಳು ಕೂಡ ಇವೆ. ಆಯ್ಕೆಗಳೇನೇ ಇರಲಿ, ಇದಂತೂ ಒಳ್ಳೆಯ ಸಂಪಾದನೆಯ ಮಾರ್ಗ ಅನ್ನೋದಂತೂ ಸತ್ಯ.

Bengaluru Rent B Tech Student Says Being A PG Owner In City Is Her Dream Job

ಕನಿಷ್ಠ ನಾಲ್ಕು ಮಂದಿ ಇರುವ ಒಂದು ಕೋಣೆಯಿಂದಲೇ ತಿಂಗಳಿಗೆ ಏನಿಲ್ಲ ಅಂದ್ರೂ 20,000 ರೂಪಾಯಿಯಿಂದ 30,000 ರೂಪಾಯಿವರೆಗೆ ಬಾಡಿಗೆ ವಸೂಲಿ ಮಾಡಬಹುದು. ಒಂದು ಕಟ್ಟಡದಲ್ಲಿ ಒಂದೈದು ಕೋಣೆಗಳಿದ್ದರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಸಂಪಾದಿಸಬಹುದು. ಇದನ್ನು ಕಂಡುಕೊಂಡ ಜನ ಬೆಂಗಳೂರಿನಲ್ಲಿ ಪಿಜಿ ಕಟ್ಟಿಕೊಂಡ್ರೆ ಸಾಕಪ್ಪ ಅಂತ ಕನಸು ಕಾಣೋರೂ ಹೆಚ್ಚಾಗಿದ್ದಾರೆ. ಬೆಂಗಳೂರಿನಲ್ಲಿರುವ ಬಹುತೇಕ ಪಿಜಿ ಮಾಲೀಕರು ಆಂಧ್ರಪ್ರದೇಶದವರೇ ಆಗಿರುವುದು ಅಚ್ಚರಿಯ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+