Get Updates
Get notified of breaking news, exclusive insights, and must-see stories!

ಬೆಂಗಳೂರು 141% ಮಳೆ: ಶುದ್ಧ ನೀರಿನ ಕೊರತೆ, ಅನೇಕ ರೋಗಗಳಿಂದ ಅಪಾಯ?

ಬೆಂಗಳೂರಿನ ಈಗಾಗಲೇ ಕೊರೊನಾ ವೈರಸ್‌ನ ವಿರುದ್ಧ ಹೋರಾಡುತ್ತಿರುವ ನಗರವಾಸಿಗಳು ದಾಖಲೆಯ ಮಳೆಗೆ ತತ್ತರಿಸಿದ್ದಾರೆ. ನೀರಿನ ಬಿಕ್ಕಟ್ಟು ತೀವ್ರಗೊಂಡಿದೆ. ಸಂತ್ರಸ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಮಾಲಿನ್ಯದಿಂದಾಗಿ ಲಕ್ಷಾಂತರ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ನೀರು ಇಳಿಮುಖವಾದ ನಂತರ ಅನೇಕ ರೋಗಗಳು ಹರಡುವ ಅಪಾಯವಿದೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ ತಜ್ಞರು.

ವೈದ್ಯಕೀಯ ತಜ್ಞರಾದ ಡಾ. ಅರವಿಂದ್ ಎಸ್. ಎನ್. " ಮಳೆ ಮತ್ತು ಪ್ರವಾಹದಿಂದಾಗಿ ಅತಿಸಾರ, ಕಾಲರಾ, ಟೈಫಾಯಿಡ್, ಗ್ಯಾಸ್ಟ್ರೋ ಎಂಟರೈಟಿಸ್, ಚರ್ಮ ರೋಗಗಳು, ಕಣ್ಣಿನ ಸೋಂಕುಗಳು, ಹೆಪಟೈಟಿಸ್-ಎ, ಡೆಂಗ್ಯೂ, ಲೆಪ್ಟೊಸ್ಪೈರೋಸಿಸ್, ಮಲೇರಿಯಾ ಇತ್ಯಾದಿಗಳು ಹರಡುವ ಅಪಾಯವಿದೆ. ವೈರಲ್ ಸೋಂಕಿನ ಪ್ರಕರಣಗಳು ಸಹ ಹೆಚ್ಚಾಗಬಹುದು. ಮಕ್ಕಳು, ಗರ್ಭಿಣಿಯರು ಮತ್ತು ವಯಸ್ಸಾದವರು ಸೇರಿದಂತೆ ದುರ್ಬಲ ದೈಹಿಕ ರೋಗನಿರೋಧಕ ಶಕ್ತಿ ಹೊಂದಿರುವ ಜನರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ," ಎಂದಿದ್ದಾರೆ.

ಮುಂಜಾಗ್ರತಾ ಕ್ರಮಗಳ ಜೊತೆಗೆ ಸೊಳ್ಳೆಗಳ ಕಾಟ ತಪ್ಪಿಸಲು ಪೀಡಿತ ಪ್ರದೇಶದ ಜನರು ಸೊಳ್ಳೆ ಪರದೆಗಳನ್ನು ಬಳಸಬೇಕು. ಪ್ರವಾಹದ ಸಮಯದಲ್ಲಿ ಹಾವು ಕಡಿತದ ಪ್ರಕರಣಗಳು ಸಹ ಹೆಚ್ಚಾಗುತ್ತವೆ. ಸ್ನೇಕ್ ಆಂಟಿ ವೆನಮ್ ಚುಚ್ಚುಮದ್ದು ಹೇರಳವಾಗಿ ಲಭ್ಯವಾಗುವಂತೆ ಮಾಡಬೇಕು. ಹಾವು ವಿಷಕಾರಿಯಾಗಿರಲಿ, ಇಲ್ಲದಿರಲಿ ಈ ಚುಚ್ಚುಮದ್ದು ತುಂಬಾ ಪರಿಣಾಮಕಾರಿ. ಕಾಲರಾ ಬಗ್ಗೆಯೂ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. ಒಂದು ನಿರ್ಧಿಷ್ಟ ರೀತಿಯ ಬ್ಯಾಕ್ಟೀರಿಯಾದಿಂದ ಕಾಲರಾ ಹರಡುತ್ತದೆ.

 ಬೆಂಗಳೂರು ಮಳೆ: ಆರೋಗ್ಯ ಇಲಾಖೆ ಪಾತ್ರವೇನು?

ಬೆಂಗಳೂರು ಮಳೆ: ಆರೋಗ್ಯ ಇಲಾಖೆ ಪಾತ್ರವೇನು?

ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರು ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಇಲಾಖೆಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಮಾನವ ಸಂಪನ್ಮೂಲ, ಪರೀಕ್ಷಾ ಕಿಟ್‌ಗಳು, ಅಗತ್ಯ ಔಷಧಿಗಳು, ಉಪಕರಣಗಳು ಇತ್ಯಾದಿಗಳನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಸಿದ್ಧವಾಗಿಟ್ಟುಕೊಳ್ಳುವಂತೆ ಆರೋಗ್ಯ ಆಯುಕ್ತ ರಂದೀಪ್ ಡಿ. ಬುಧವಾರ ಎಲ್ಲಾ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕ್ಷಿಪ್ರ ಸ್ಪಂದನಾ ತಂಡ ಸಿದ್ಧವಾಗಿರುತ್ತದೆ. ವರ್ಧಿತ ರೋಗ ಕಣ್ಗಾವಲು ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಕಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಜಾಗೃತರಾಗಿರುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ. ಎಲ್ಲಾ ಹಂತಗಳಲ್ಲಿ ನಿಕಟ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಬೆಂಗಳೂರಿನ ಭಾರಿ ಮಳೆ ಪೀಡಿತ ಪ್ರದೇಶಗಳಲ್ಲಿ ಮಳೆ

ಬೆಂಗಳೂರಿನ ಭಾರಿ ಮಳೆ ಪೀಡಿತ ಪ್ರದೇಶಗಳಲ್ಲಿ ಮಳೆ

ಬೆಂಗಳೂರಿನ ಭಾರಿ ಮಳೆ ಪೀಡಿತ ಪ್ರದೇಶಗಳಲ್ಲಿ ಸತತ ಎರಡನೇ ದಿನವಾದ ಮಂಗಳವಾರವೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇತ್ತು. ಸೋಮವಾರ ರಾತ್ರಿ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೆ ನೀರು ನುಗ್ಗಿ ವಾಹನಗಳು ಭಾಗಶಃ ಜಲಾವೃತಗೊಂಡಿದ್ದರಿಂದ ಜನರು ತೊಂದರೆ ಅನುಭವಿಸಿದರು. ಸತತ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಬೆಳಗ್ಗೆ ಬಿಸಿಲಿದ್ದರೂ ಸಂಜೆಯ ನಂತರ ಮತ್ತೆ ಮೋಡ ಕವಿದಿತ್ತು. ಶುಕ್ರವಾರದವರೆಗೂ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರದಿಂದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ.

 ಐಟಿ ಕಂಪನಿಗಳ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಕಚೇರಿಗೆ

ಐಟಿ ಕಂಪನಿಗಳ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಕಚೇರಿಗೆ

ಐಟಿ ಕಾರಿಡಾರ್ ಮಳೆಯಿಂದ ಹೆಚ್ಚು ಹಾನಿಗೊಳಗಾಗಿದೆ. ಮಂಗಳವಾರವೂ ಹೆಚ್ಚಿನ ಸಂಖ್ಯೆಯ ಐಟಿ ವೃತ್ತಿಪರರು ಮತ್ತು ಕೆಲವು ಕಂಪನಿಗಳ ಹಿರಿಯ ಅಧಿಕಾರಿಗಳು ಟ್ರ್ಯಾಕ್ಟರ್ ಮೂಲಕ ಕಚೇರಿಗೆ ತಲುಪಿದರು. ಆದಾಗ್ಯೂ, ಅನೇಕ ಸಾಫ್ಟ್‌ವೇರ್ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಹೈಬ್ರಿಡ್ ಅಥವಾ ಪರ್ಯಾಯ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಂಪನಿಗಳು ಮನೆಯಿಂದ ಕೆಲಸ ಮಾಡಲು ಸಹ ಆಶ್ರಯಿಸಿದವು. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ಗಳು ಕಾಣಸಿಗುವುದಿಲ್ಲ, ಆದರೆ ಮಳೆ ಪೀಡಿತ ಪ್ರದೇಶಗಳ ಜನರಿಗೆ ಟ್ರ್ಯಾಕ್ಟರ್‌ಗಳು ಮಾತ್ರ ಸಾರಿಗೆ ಸಾಧನವಾಗಿ ಉಳಿದಿವೆ.

 ಜೂನ್ 1ರಿಂದ ನಗರದಲ್ಲಿ ವಾಡಿಕೆಗಿಂತ ಶೇ.141 ರಷ್ಟು ಹೆಚ್ಚು ಮಳೆ

ಜೂನ್ 1ರಿಂದ ನಗರದಲ್ಲಿ ವಾಡಿಕೆಗಿಂತ ಶೇ.141 ರಷ್ಟು ಹೆಚ್ಚು ಮಳೆ

ನಗರದ ಹಲವು ಭಾಗಗಳಲ್ಲಿ ಯಮಲೂರು, ರೇನ್‌ಬೋ ಡ್ರೈವ್ ಲೇಔಟ್, ಸನ್ನಿ ಬ್ರೂಕ್ಸ್ ಲೇಔಟ್, ಮಾರತ್ತಹಳ್ಳಿ ಹೀಗೆ ಐಟಿ ವೃತ್ತಿಪರರು ಹಾಗೂ ಕಾರ್ಮಿಕರು ಮತ್ತು ಶಾಲಾ ಮಕ್ಕಳು ಮುಳುಗಿದ ರಸ್ತೆಗಳನ್ನು ದಾಟಲು ದೋಣಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಬೇಕಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಮಂಗಳವಾರ ಬೋಟ್‌ಗಳು, ಟ್ರ್ಯಾಕ್ಟರ್‌ಗಳ ಮೂಲಕ ಹಾನಿಗೊಳಗಾದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವಲ್ಲಿ ನಿರತವಾಗಿವೆ. ಈ ವರ್ಷದ ಮುಂಗಾರು ಅವಧಿಯಲ್ಲಿ ಜೂನ್ 1ರಿಂದ ನಗರದಲ್ಲಿ ವಾಡಿಕೆಗಿಂತ ಶೇ.141 ರಷ್ಟು ಹೆಚ್ಚು ಮಳೆಯಾಗಿದೆ. ಸೋಮವಾರ ನೀರು ಹರಿಸಲು ಆಡಳಿತ ಮಂಡಳಿ ಹರಸಾಹಸ ಪಟ್ಟಿದ್ದರೂ ಸೋಮವಾರ ರಾತ್ರಿ ಸುರಿದ ಮಳೆ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+