ಆರ್ಡರ್ ಮಾಡಿದ ಫುಡ್ ತಿನ್ನುವಾಗ ಹುಷಾರ್! ಸತ್ತ ಇಲಿಯ ಆಹಾರ ತಿಂದ ವ್ಯಕ್ತಿ ಆಸ್ಪತ್ರೆಗೆ ದಾಖಲು!
ಮುಂಬೈ ಜನವರಿ 17: ಮನೆಯಲ್ಲಿ ಕುಳಿತು ಏನ್ ಬೇಕಾದರೂ ತರಿಸಿಕೊಳ್ಳುವ ಕಾಲ ಇದು. ಸಣ್ಣ ಪಿನ್‌ಯಿಂದ ಹಿಡಿದು ಮನೆಯನ್ನೇ ಆನ್‌ಲೈನ್‌ನಲ್ಲಿ ಕೊಂಡುಕೊಂಡುಬಿಡಬಹುದು. ಇನ್ನೂ ಆಹಾರ ವಿಚಾರವಂತೂ ಹೇಳುವ ಹಾಗೇ ಇಲ್ಲ. ಆನ್‌ಲೈನ್‌ನಲ್ಲಿ ಯಾವ ಆಹಾರ ಬೇಕಾದರು ಸಿಗುತ್ತದೆ. ಆರ್ಡರ್ ಮಾಡಿದರೆ ಸಾಕು ಕೆಲ ನಿಮಿಷಗಳಲ್ಲಿ ಮನೆಗೆ ಬಂದು ತಲುಪುತ್ತದೆ.
ಆದರೆ ಇತ್ತೀಚೆಗೆ ಹೀಗೆ ಆರ್ಡರ್ ಮಾಡಿ ತರಿಸಿಕೊಳ್ಳುವ ಆಹಾರದಲ್ಲಿ ಜಿರಳೆ, ಹಲ್ಲಿ, ಹಾವು, ಕೋಳಿ ತಲೆ, ಹುಳುಗಳು ಹಾಗೂ ಇಲಿ ಸಿಗುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇಂಥಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇವೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇದಕ್ಕೆ ಕಡಿವಾಣ ಮಾತ್ರ ಬಿದ್ದಿಲ್ಲ. ಇಂತಹ ಮತ್ತೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಗ್ರಾಹಕ ಆಸ್ಪತ್ರೆ ಸೇರಿದ್ದಾನೆ.

ಹೌದು.. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವ್ಯಕ್ತಿಯೊಬ್ಬರು ಮುಂಬೈ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ ಆಹಾರವನ್ನು ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ರಾಜೀವ್ ಶುಕ್ಲಾ ಅವರು ತಾವು ಆರ್ಡರ್ ಮಾಡಿದ ಆಹಾರದಲ್ಲಿ ಸತ್ತ ಇಲಿಯನ್ನು ವೀಕ್ಷಿಸದೆ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಅವರು ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
I Rajeev shukla (pure vegetarian) from prayagraj visited Mumbai, on 8th Jan'24 night ordered veg meal box from BARBEQUE NATION, worli outlet that a contained dead mouse, hospitalised for 75 plus hours. complaint has not been lodged at nagpada police station yet.
— rajeev shukla (@shukraj) January 14, 2024
Please help pic.twitter.com/Kup5fTy1Ln
X (ಹಿಂದೆ ಟ್ವಿಟರ್)ನಲ್ಲಿ ರಾಜೀವ್ ಶುಕ್ಲಾ ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ. ರಾಜೀವ್ ಶುಕ್ಲಾ ಅವರು ಜನವರಿ 8, 2024 ರಂದು ಮುಂಬೈಗೆ ಭೇಟಿ ನೀಡಿದ್ದರು. ಈ ವೇಳೆ ಜನಪ್ರಿಯ ರೆಸ್ಟೋರೆಂಟ್ ಬಾರ್ಬೆಕ್ಯು ನೇಷನ್‌ನ ವರ್ಲಿ ಔಟ್‌ಲೆಟ್‌ನಿಂದ ವೆಜ್ ಮೀಲ್ ಅನ್ನು ಆರ್ಡರ್ ಮಾಡಿದ್ದಾರೆ. ಈ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಆದರೆ ಅವರು ಆಹಾರವನ್ನು ಸೇವಿಸಿದ್ದರಿಂದ 75 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವಾಗ ತಾವು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಶುಕ್ಲಾ ಅವರು ಆರ್ಡರ್ ರಸೀದಿ, ವಿತರಿಸಿದ ಪ್ಯಾಕೇಜ್ ಮತ್ತು ಆಹಾರದಲ್ಲಿ ಸತ್ತ ಇಲಿ ಇರುವ ಸ್ಪಷ್ಟವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ತಮ್ಮ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.
Hi Rajeev. We regret any inconvenience you may have experienced. We believe Mr. Paresh from our Regional Office, in Mumbai is already in touch with you to understand the details of the situation and work towards a resolution.
— Barbeque Nation (@BarbequeNation) January 16, 2024
ಈ ಘಟನೆ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದೆ. ಹಲವಾರು X ಬಳಕೆದಾರರು ವಿವಿಧ ಅಧಿಕಾರಿಗಳ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದಾರೆ. ಶುಕ್ಲಾ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಬಾರ್ಬೆಕ್ಯು ನೇಷನ್ ಕೂಡ ಪ್ರತಿಕ್ರಿಯಿಸಿದೆ, "ಹಾಯ್ ರಾಜೀವ್. ನೀವು ಅನುಭವಿಸಿದ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಮುಂಬೈನಲ್ಲಿರುವ ನಮ್ಮ ಪ್ರಾದೇಶಿಕ ಕಚೇರಿಯಿಂದ ಶ್ರೀ ಪರೇಶ್ ಅವರು ಪರಿಸ್ಥಿತಿಯ ವಿವರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಬಗ್ಗೆ ಕೆಲಸ ಮಾಡಲು ಈಗಾಗಲೇ ನಿಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾವು ನಂಬುತ್ತೇವೆ" ಎಂದಿದೆ.
ಜೊತೆಗೆ "ನಿಮ್ಮ ಕಾಳಜಿಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ಬದ್ಧರಾಗಿದ್ದೇವೆ" ಎಂದು ಬಾರ್ಬೆಕ್ಯು ನೇಷನ್ ಪ್ರತಿಕ್ರಿಯಿಸಿದೆ.
ದಿ ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ಆಹಾರದಲ್ಲಿ ಜಿರಳೆಗಳೂ ಇವೆ ಎಂದು ಶುಕ್ಲಾ ಹೇಳಿದ್ದಾರೆ. ಇದರಿಂದ ಅವರಿಗೆ ಫುಡ್ ಪಾಯ್ಸನ್ ಆಗಿದ್ದು, ನಾಯರ್ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಬಗ್ಗೆ ದೂರು ನೀಡಲು ಶುಕ್ಲಾ ಬಾರ್ಬೆಕ್ಯು ನೇಷನ್‌ಗೆ ಇಮೇಲ್ ಮಾಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
-
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications