ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರಲು ಕಾರಣವೇನು?

|
Google Oneindia Kannada News

ನವದೆಹಲಿ, ನವೆಂಬರ್ 20: ಸೆಪ್ಟೆಂಬರ್ ಮಧ್ಯಭಾಗದಲ್ಲಿ 97,000ಕ್ಕೂ ಅಧಿಕ ದೈನಂದಿನ ಪ್ರಕರಣಗಳು ದಾಖಲಾಗುತ್ತಿದ್ದ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಅದರ ಅರ್ಧದಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದ ದೇಶದಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ಕಡಿಮೆಯಾಗುತ್ತಿದೆ ಎಂದೇ ಅನೇಕರು ನಂಬುತ್ತಿದ್ದಾರೆ. ಆದರೆ ದೇಶದಲ್ಲಿ ನಿಜಕ್ಕೂ ಸೋಂಕು ಇಳಿಕೆಯಾಗಿದೆಯೇ ಅಥವಾ ವ್ಯವಸ್ಥೆಯಲ್ಲಿನ ಲೋಪಗಳ ಕಾರಣಕ್ಕಾಗಿ ಪ್ರಕರಣಗಳ ಸಂಖ್ಯೆ ಸರಿಯಾಗಿ ದಾಖಲಾಗುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ದೇಶದಲ್ಲಿ ಶುಕ್ರವಾರದ ವೇಳೆಗೆ ಸೋಂಕಿನ ಸಂಖ್ಯೆ 9 ಮಿಲಿಯನ್ ಪ್ರಕರಣಗಳನ್ನು ದಾಟಿದೆ. ಭಾರತದಲ್ಲಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದಾಗ ಈ ವೇಳೆಗಾಗಲೇ ಅದು ಅಮೆರಿಕವನ್ನು ಹಿಂದಿಕ್ಕಿ ಹೋಗಿರಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಕೆಲವು ವಾರಗಳಿಂದ ದಿನಕ್ಕೆ 50,000ಕ್ಕಿಂತಲೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಇನ್ನೊಂದೆಡೆ ಅಮೆರಿಕದಲ್ಲಿ ಸೋಂಕು ಹೆಚ್ಚುತ್ತಲೇ ಇದೆ.

ಹಿಮಾಚಲಪ್ರದೇಶದ ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪಾಸಿಟಿವ್ಹಿಮಾಚಲಪ್ರದೇಶದ ಈ ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪಾಸಿಟಿವ್

ಪರಿಣತರ ಪ್ರಕಾರ ಭಾರತವು ಕೋವಿಡ್ ಸೋಂಕಿನ ಮೇಲೆ ನಿಯಂತ್ರಣವನ್ನೇನೂ ಸಾಧಿಸಿಲ್ಲ. ದೇಶದಲ್ಲಿನ ಕಡಿಮೆ ಪರೀಕ್ಷೆ ಪ್ರಮಾಣ ಮತ್ತು ಪ್ರಶ್ನಾರ್ಹ ಕಿಟ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು ಚರ್ಚೆಗೆ ಒಳಗಾಗಿದೆ. ಮುಂದೆ ಓದಿ.

ಶೇ 50ರಷ್ಟು ತಪ್ಪು ವರದು

ಶೇ 50ರಷ್ಟು ತಪ್ಪು ವರದು

ದೇಶದಲ್ಲಿ ಕೋವಿಡ್ ಪರೀಕ್ಷೆಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಸ್ತುತ ದಿನಕ್ಕೆ ಸುಮಾರು 1 ಮಿಲಿಯನ್ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಅಧಿಕ ಸೋಂಕಿನ ಪ್ರಕರಣಗಳಿರುವ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ಕಡಿಮೆ. ಅಲ್ಲದೆ, ವೈದ್ಯಕೀಯ ವಲಯ ಹೆಚ್ಚು ಭರವಸೆ ಹೊಂದಿಲ್ಲದ ಆಂಟಿಜೆನ್ ಪರೀಕ್ಷೆಯ ಮೂಲಕವೇ ಈ ಅರ್ಧದಷ್ಟು ಪರೀಕ್ಷೆಗಳು ನಡೆದಿವೆ. ಅದರಲ್ಲಿ ಶೇ 50ರಷ್ಟು ತಪ್ಪು ನೆಗೆಟಿವ್ ವರದಿ ಬರುವ ಸಾಧ್ಯತೆಯೇ ಹೆಚ್ಚು.

ದಾಖಲಾದ ಪ್ರಕರಣಗಳೇ ಹೆಚ್ಚು

ದಾಖಲಾದ ಪ್ರಕರಣಗಳೇ ಹೆಚ್ಚು

ಒಂದು ವೇಳೆ ತಪಾಸಣೆಗಳು ಸರಿಯಾಗಿದ್ದರೆ, ದೇಶದಲ್ಲಿ ವರದಿಯಾಗಿರುವ ಪ್ರಕರಣಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ನಮೂದಾಗಿರುತ್ತಿದ್ದವು. ದಾಖಲಾಗಿರುವುದಕ್ಕಿಂತಲೂ ಹೆಚ್ಚು ಪ್ರಕರಣಗಳು ದೇಶದಲ್ಲಿವೆ. ಮದುವೆಗಳು, ಹಬ್ಬ ಹರಿದಿನ ಹಾಗೂ ಉತ್ತರ ಭಾಗದ ಅಧಿಕ ಜನಸಂದ್ರತೆ ಇರುವಲ್ಲಿನ ಹೊಂಜಿನ ವಾತಾವರಣಗಳಿಂದ ಸೋಂಕು ತೀವ್ರವಾಗುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕೊವಿಡ್ 19 ಲಸಿಕೆ 2021ರ ಮಧ್ಯದೊಳಗೆ ಸಿಗುವುದು ಅನುಮಾನ: WHOಕೊವಿಡ್ 19 ಲಸಿಕೆ 2021ರ ಮಧ್ಯದೊಳಗೆ ಸಿಗುವುದು ಅನುಮಾನ: WHO

ಮತ್ತಷ್ಟು ಅಪಾಯ ಮುಂದೆ ಇದೆ

ಮತ್ತಷ್ಟು ಅಪಾಯ ಮುಂದೆ ಇದೆ

ರಾಪಿಡ್ ಆಂಟಿಜೆನ್ ಟೆಸ್ಟ್‌ಗಳು ವಿಶ್ವಾಸಾರ್ಹವಲ್ಲ. ಅವು ಸಂವೇದನಾಶೀಲವಾಗಿಲ್ಲ ಮತ್ತು ರೋಗಿಗಳಿಗೆ ಚಿಕಿತ್ಸೆಯೂ ಸಿಗುತ್ತಿಲ್ಲ ಎಂದು ಪ್ರೊಗ್ರೆಸ್ಸಿವ್ ಮೆಡಿಕೊಸ್ ಆಂಡ್ ಸೈಂಟಿಸ್ಟ್ಸ್ ಫೋರಂನ ಅಧ್ಯಕ್ಷ ಹರ್ಜಿತ್ ಸಿಂಗ್ ಭಟ್ಟಿ ಹೇಳಿದ್ದಾರೆ. ಮುಂಬರುವ ತಿಂಗಳುಗಳು ಸೋಂಕು ಹರಡುವುದರಲ್ಲಿ ಮತ್ತಷ್ಟು ಅಪಾಯಕಾರಿಯಾಗಿರಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆರ್‌ಟಿ ಪಿಸಿಆರ್ ಹೆಚ್ಚು ನಿಖರ

ಆರ್‌ಟಿ ಪಿಸಿಆರ್ ಹೆಚ್ಚು ನಿಖರ

ಅಮೆರಿಕ, ಬ್ರಿಟನ್‌ನಂತಹ ಹೆಚ್ಚು ಸೋಂಕಿತರು ಇರುವ ದೇಶಗಳಲ್ಲಿ ವಿಶ್ವಾಸಾರ್ಹ ಫಲಿತಾಂಶವನ್ನು ಪಡೆದುಕೊಳ್ಳಲು ವ್ಯಾಪಕವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈ ಪರೀಕ್ಷೆ ಸಮರ್ಪಕವಾಗಿ ವೈರಸ್ ಇರುವಿಕೆಯನ್ನು ಪತ್ತೆಮಾಡಬಲ್ಲದು. ರಾಪಿಡ್ ಆಂಟಿಜೆನ್ ಪರೀಕ್ಷೆಗಳಿಂದ ಅತಿ ಹೆಚ್ಚು ಸೋಂಕಿನ ಹೊಡೆತಕ್ಕೆ ಒಳಗಾದ ಪ್ರದೇಶದಲ್ಲಿ ಸೋಂಕಿತರನ್ನು ತಕ್ಷಣವೇ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಪರಿಣತರು ಹೇಳುತ್ತಾರೆ. ಆದರೆ ವೈರಸ್‌ ಹರಡುವಿಕೆಯನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ಆರ್‌ಟಿ-ಪಿಸಿಆರ್ ಪರೀಕ್ಷೆಗಳೇ ಅನಿವಾರ್ಯ.

ಆಕ್ಸ್‌ಫರ್ಡ್ ಕೊರೊನಾ ಲಸಿಕೆ 2 ಡೋಸ್‌ಗೆ ಗರಿಷ್ಠ 1000 ರೂ ಬೆಲೆಆಕ್ಸ್‌ಫರ್ಡ್ ಕೊರೊನಾ ಲಸಿಕೆ 2 ಡೋಸ್‌ಗೆ ಗರಿಷ್ಠ 1000 ರೂ ಬೆಲೆ

ಆಂಟಿಜೆನ್ ಪರೀಕ್ಷೆ ಹೆಚ್ಚಳ

ಆಂಟಿಜೆನ್ ಪರೀಕ್ಷೆ ಹೆಚ್ಚಳ

ರಾಪಿಡ್ ಆಂಟಿಜೆನ್ ಪರೀಕ್ಷೆಗಳು ಸುಳ್ಳು ನೆಗೆಟಿವ್ ಪ್ರಮಾಣವನ್ನು ಹೆಚ್ಚಿಸಬಹುದು. ಆರ್‌ಟಿ-ಪಿಸಿಆರ್ ಮಾದರಿಯ ಪರೀಕ್ಷೆಯನ್ನೇ ನಡೆಸಬೇಕು. ಆದರೆ ಅದು ಭಾರತದಲ್ಲಿ ಸಾಕಷ್ಟು ನಡೆಯುತ್ತಿಲ್ಲ. ಕಳೆದ ವಾರ ಭಾರತದಲ್ಲಿನ ದೈನಂದಿನ ಪರೀಕ್ಷೆಗಳಲ್ಲಿ ಶೇ 49ರಷ್ಟು ಆಂಟಿಜೆನ್ ಪರೀಕ್ಷೆಗಳಾಗಿವೆ. ಆಗಸ್ಟ್ ಮಧ್ಯಭಾಗದಿಂದ ಅದು ಶೇ 25-30ರಷ್ಟು ಹೆಚ್ಚಳವಾಗಿದೆ. ದೇಶದ ಅನೇಕ ಜನದಟ್ಟಣೆ ಇರುವ ರಾಜ್ಯಗಳಲ್ಲಿ ವಿವರವಾದ ಪರೀಕ್ಷಾ ದತ್ತಾಂಶಗಳನ್ನು ನಿರಂತರವಾಗಿ ನೀಡುತ್ತಿಲ್ಲ. ಇದರಿಂದ ಅತಿ ಹೆಚ್ಚು ಸೋಂಕಿಗೆ ಒಳಗಾದ ಪ್ರದೇಶ ಅಥವಾ ಅವರ ತಪಾಸಣಾ ವಿವರಗಳ ಬಗ್ಗೆ ಪಕ್ಕಾ ಮಾಹಿತಿ ಸಿಗುತ್ತಿಲ್ಲ ಎನ್ನುತ್ತಾರೆ ನವದೆಹಲಿ ಮೂಲದ ಪೀಪಲ್ಸ್ ಹೆಲ್ತ್ ಮೂವ್‌ಮೆಂಟ್‌ನ ಟಿ. ಸುಂದರರಾಮನ್.

Recommended Video

Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada

English summary
India is witnessing less Covid-19 cases since few weeks. Experts says less testing and Rapid Antigen tests are main reasons for the less count in infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X