• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು ಏಕೆ ಅನ್ನಿ ಎರ್ನಾಕ್ಸ್?

|
Google Oneindia Kannada News

ನವದೆಹಲಿ, ಅಕ್ಟೋಬರ್ 06: ಸಾಹಿತ್ಯ ವಲಯದಲ್ಲಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿಯು ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಮುಡಿಗೇರಿದೆ. "ಧೈರ್ಯ ಮತ್ತು ವೈದ್ಯಕೀಯ ತೀಕ್ಷ್ಣತೆಗೆ ಸಂಬಂಧಿಸಿದ ಅವರು ವೈಯಕ್ತಿಕ ಸ್ಮರಣೆಯ ಬೇರು, ಪ್ರತ್ಯೇಕತೆಗಳು ಮತ್ತು ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸಿದರು" ಎಂದು ಸ್ವೀಡಿಷ್ ಅಕಾಡೆಮಿ ಗುರುವಾರ ಹೇಳಿದೆ.

ಫ್ರೆಂಚ್ ಲೇಖಕಿ ಆಗಿರುವ 82 ವರ್ಷದ ಅನ್ನಿ ಎರ್ನಾಕ್ಸ್, ಆತ್ಮಚರಿತ್ರೆಯ ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಆತ್ಮಚರಿತ್ರೆಗಳ ಬರವಣಿಗೆಗೆ ಪೂರಕವಾಗಲು ಕಾಲ್ಪನಿಕ ಕಥೆಗಳನ್ನು ಬರೆಯುವುದನ್ನು ನಿಲ್ಲಿಸಿದರು.

ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊರಿಗೆ 2022ನೇ ಸಾಲಿನ ನೊಬೆಲ್ ಪ್ರಶಸ್ತಿಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊರಿಗೆ 2022ನೇ ಸಾಲಿನ ನೊಬೆಲ್ ಪ್ರಶಸ್ತಿ

ಅವರು ಬರೆದಿರುವ 20ಕ್ಕೂ ಹೆಚ್ಚು ಪುಸ್ತಕಗಳಲ್ಲಿ ಹೆಚ್ಚನವುಗಳು ಚಿಕ್ಕ ಪುಸ್ತಕಗಳೇ ಆಗಿವೆ. ಈ ಪುಸ್ತಕಗಳೆಲ್ಲ ಅವರು ಜೀವನದಲ್ಲಿ ಎದುರಿಸಿದ ಸತ್ಯ ಸಂಗತಿಗಳು, ನಿಜ ಘಟನೆಗಳು, ಹಾಗೂ ಸುತ್ತಲಿರುವವರ ಜೀವನವನ್ನೇ ಪ್ರತಿಬಿಂಬಿಸುವಂತಿವೆ. ಅವರು ಬರೆದ ಪುಸ್ತಕಗಳಲ್ಲಿ ಲೈಂಗಿಕ ಮುಖಾಮುಖಿ, ಗರ್ಭಪಾತ, ಅನಾರೋಗ್ಯ ಮತ್ತು ಆಕೆಯ ಪೋಷಕರ ಸಾವಿನ ರಾಜಿಯಾಗದ ನೈಜ ಘಟನೆಗಳನ್ನು ಆಧರಿಸಿಯೇ ಚಿತ್ರಿಸಲಾಗಿದೆ. ಬದುಕಿನ ಚಿತ್ರಣವನ್ನು ಬಿತ್ತರಿಸಿದ ಶ್ರೇಷ್ಠ ಸಾಹಿತಿ ಜೀವನದ ಹಾದಿ ಮತ್ತು ತಲುಪಿದ ಗುರಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

 ನೊಬೆಲ್ ಪ್ರಶಸ್ತಿಗೆೆ ಎರ್ನಾಕ್ಸ್ ಆಯ್ಕೆ ಏಕೆ?

ನೊಬೆಲ್ ಪ್ರಶಸ್ತಿಗೆೆ ಎರ್ನಾಕ್ಸ್ ಆಯ್ಕೆ ಏಕೆ?

"ಯಾವುದೇ ರೀತಿಯ ರಾಜಿಯಾಗದ ಸರಳವಾದ ಭಾಷೆಯಲ್ಲಿ ಸ್ವಚ್ಛವಾದ ಭಾವದಲ್ಲಿ ಸಾಮಾನ್ಯವಾಗಿ ಅನ್ನಿ ಎರ್ನಾಕ್ಸ್ ಬರೆದಿರುವ ಸಾಹಿತ್ಯಕ್ಕಾಗಿ ಅವರನ್ನು ಆಯ್ಕೆ ಮಾಡಲಾಗಿದೆ," ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ಹೇಳಿದ್ದಾರೆ. ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಪ್ರಕಟಣೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಅವರು ಪ್ರಶಂಸನೀಯ ಮತ್ತು ಸಹಿಷ್ಣುವಾದದ್ದನ್ನು ಸಾಧಿಸಿದ್ದಾರೆ," ಎಂದರು.

ಎರ್ನಾಕ್ಸ್ ತನ್ನ ಶೈಲಿಯನ್ನು "ಫ್ಲಾಟ್ ರೈಟಿಂಗ್" (ಎಕ್ರಿಚರ್ ಪ್ಲೇಟ್) ಎಂದು ವಿವರಿಸುತ್ತಾರೆ. ಅವರು ವಿವರಿಸುತ್ತಿರುವ ಘಟನೆಗಳ ವಸ್ತುನಿಷ್ಠ ನೋಟ, ವಿವರಣೆ ಅಥವಾ ಅಗಾಧ ಭಾವನೆಗಳಿಗೆ ಆಕಾರವಿಲ್ಲ ಎಂದಿದ್ದಾರೆ. ತಮ್ಮ ತಂದೆಯೊಂದಿಗಿನ ಸಂಬಂಧದ ಬಗ್ಗೆ "ಲಾ ಪ್ಲೇಸ್" (ಎ ಮ್ಯಾನ್ಸ್ ಪ್ಲೇಸ್) ಎಂಬ ಹೆಸರಿನ ಪುಸ್ತಕದಲ್ಲಿ "ಯಾವುದೇ ಸಾಹಿತ್ಯದ ನೆನಪುಗಳಿಲ್ಲ, ವ್ಯಂಗ್ಯದ ವಿಜಯೋತ್ಸವದ ಪ್ರದರ್ಶನಗಳಿಲ್ಲ. ಈ ತಟಸ್ಥ ಬರವಣಿಗೆಯ ಶೈಲಿ ನನಗೆ ಸ್ವಾಭಾವಿಕವಾಗಿ ಬರುತ್ತದೆ," ಅವರು ಉಲ್ಲೇಖಿಸಿದ್ದಾರೆ.

 ಸಾಹಿತಿ ಅನ್ನಿ ಎರ್ನಾಕ್ಸ್ ಬಗ್ಗೆ ತಿಳಿಯಿರಿ

ಸಾಹಿತಿ ಅನ್ನಿ ಎರ್ನಾಕ್ಸ್ ಬಗ್ಗೆ ತಿಳಿಯಿರಿ

1940ರಲ್ಲಿ ಜನಿಸಿದ ಮತ್ತು ನಾರ್ಮಂಡಿಯ ಯ್ವೆಟಾಟ್ ಎಂಬ ಸಣ್ಣ ಪಟ್ಟಣದಲ್ಲಿ ಅನ್ನಿ ಎರ್ನಾಕ್ಸ್ ಜನಿಸಿದರು. ಇವರ ಪೋಷಕರು ಪುಟ್ಟ ಕಿರಾಣಿ ಮತ್ತು ಕೆಫೆಯನ್ನು ಇಟ್ಟುಕೊಂಡಿದ್ದರು. ಬೋರ್ಡೆಕ್ಸ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಹೋದ ಎರ್ನಾಕ್ಸ್, ಅಲ್ಲಿಂದ ಶಾಲಾ ಶಿಕ್ಷಕರಾಗಿ ಅರ್ಹತೆ ಪಡೆದರು. ಆಧುನಿಕ ಸಾಹಿತ್ಯದಲ್ಲಿ ಉನ್ನತ ಪದವಿಯನ್ನು ಪಡೆದುಕೊಂಡರು. 1974ರಲ್ಲಿ ಅವರ ಮೊದಲ ಪುಸ್ತಕ "ಕ್ಲೀನ್ಡ್ ಔಟ್" ಪ್ರಕಟಣೆಯೊಂದಿಗೆ ಮಾದರಿ ಸಾಹಿತ್ಯಿಕ ವೃತ್ತಿಜೀವನ ಪ್ರಾರಂಭಿಸಿದರು.

ಅವರ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಅವರ ಬರವಣಿಗೆಯು "ತಮ್ಮ ಸ್ವಂತ ಜೀವನ ಅನುಭವವನ್ನು ಮಾತ್ರವಲ್ಲದೆ ಅವರ ಪೀಳಿಗೆಯ, ಆಕೆಯ ಪೋಷಕರು, ಮಹಿಳೆಯರು, ಸಾರ್ವಜನಿಕ ಜಾಗದಲ್ಲಿ ಎದುರಿಸಿದ ಅನಾಮಧೇಯರು, ಮರೆತುಹೋದವರ ಅನುಭವವನ್ನು ಅನ್ವೇಷಿಸುವುದನ್ನೇ ಒಳಗೊಂಡಿರುತ್ತದೆ".

ಕ್ಲೀನ್ಡ್ ಔಟ್, ವಾಟ್ ವೇ ಸೇ ಗೋಸ್, ಮತ್ತು ದಿ ಫ್ರೋಜನ್ ವುಮನ್ ಎಂಬ ಮೂರು ಕಾದಂಬರಿಗಳನ್ನು ಪ್ರಕಟಿಸಿದ ನಂತರ ಅವರು 1984ರ ಪುಸ್ತಕ "ಎ ಮ್ಯಾನ್ಸ್ ಪ್ಲೇಸ್"ನೊಂದಿಗೆ ಆತ್ಮಚರಿತ್ರೆಯ ಬರವಣಿಗೆ ಕಡೆಗೆ ಮುಖ ಮಾಡಿದರು.

 ದಿ ಇಯರ್ಸ್-2 ಪುಸ್ತಕ ಬಿಡುಗಡೆಗೊಳಿಸಿದ ಎರ್ನಾಕ್ಸ್

ದಿ ಇಯರ್ಸ್-2 ಪುಸ್ತಕ ಬಿಡುಗಡೆಗೊಳಿಸಿದ ಎರ್ನಾಕ್ಸ್

ಅನ್ನಿ ಎರ್ನಾಕ್ಸ್ ಬರೆದಿರುವ ಪುಸ್ತಕಗಳಲ್ಲಿ "ದಿ ಇಯರ್ಸ್" (ಲೆಸ್ ಅನ್ನೀಸ್) ಅತ್ಯಂತ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪುಸ್ತಕವಾಗಿದೆ. 2008ರಲ್ಲಿ ಪ್ರಕಟವಾದ ಪುಸ್ತಕವು ಎರಡನೇ ಜಾಗತಿಕ ಯುದ್ಧದ ಅಂತ್ಯದಿಂದ ಇಂದಿನವರೆಗೆ ತಮ್ಮನ್ನು ಮತ್ತು ವಿಶಾಲವಾದ ಫ್ರೆಂಚ್ ಸಮಾಜದ ಬಗ್ಗೆ ವಿವರಿಸುತ್ತದೆ. ಈ ಹಿಂದೆ ಬರೆದ ಪುಸ್ತಕಗಳಿಗಿಂತ ಭಿನ್ನವಾಗಿ, "ದಿ ಇಯರ್ಸ್" ನಲ್ಲಿ ಎರ್ನಾಕ್ಸ್ ತನ್ನನ್ನು ತಾನು ಮೂರನೇ ವ್ಯಕ್ತಿಯಾಗಿ ಬಿಂಬಿಸಿಕೊಂಡಿದ್ದಾರೆ. "ನಾನು" ಎನ್ನುವುದರ ಬದಲಿಗೆ "ಅವಳು" ಎಂದು ಕರೆದುಕೊಂಡಿದ್ದಾರೆ. ಇದೇ ಪುಸ್ತಕವು ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಮುಡಿಗೇರಿಸಿಕೊಂಡಿದೆ.

ಸಾಹಿತ್ಯ ಲೋಕದಲ್ಲಿ ನೊಬೆಲ್ ಪಡೆದವರು ಯಾರು?

ಸಾಹಿತ್ಯ ಲೋಕದಲ್ಲಿ ನೊಬೆಲ್ ಪಡೆದವರು ಯಾರು?

ಕಳೆದ ವರ್ಷ ಸಾಹಿತ್ಯ ವಲಯದಲ್ಲಿ ನೊಬೆಲ್ ಪ್ರಶಸ್ತಿಯು ತಾಂಜೇನಿಯಾದಲ್ಲಿ ಜನಿಸಿದ ಯುನೈಟೆಡ್ ಕಿಂಗ್ ಡಮ್ ಮೂಲದ ಬರಹಗಾರ ಅಬ್ದುಲ್ ರಝಾಕ್ ಗುರ್ನಾಹ್ ಮುಡಿಗೇರಿತ್ತು. ಅವರ ಕಾದಂಬರಿಗಳು ವ್ಯಕ್ತಿಗಳು ಮತ್ತು ಸಮಾಜಗಳ ಮೇಲೆ ವಲಸೆಯ ಪ್ರಭಾವ ಸಾರಿ ಹೇಳುವಂತಿತ್ತು. ಅವರು ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಆಫ್ರಿಕಾದ ಆರನೇ ಸಾಹಿತಿ ಎನಿಸಿಕೊಂಡರು. ಇದರ ಬೆನ್ನಲ್ಲೇ ನೊಬೆಲ್ ಪ್ರಶಸ್ತಿ ಎನ್ನುವುದು ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ಬರಹಗಾರರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂಬ ಟೀಕೆಗಳನ್ನು ಎದುರಿಸಿತು. ಅಲ್ಲದೇ ಪುರುಷರಿಗೆ ಹೆಚ್ಚಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದ ಆರೋಪವನ್ನೂ ಎದುರಿಸಿತ್ತು. ಇದುವರೆಗೂ ನೀಡಿರುವ 118 ಪ್ರಶಸ್ತಿಗಳಲ್ಲಿ ಕೇವಲ16 ಮಂದಿ ಮಹಿಳಾ ಸಾಧಕಿಯರಷ್ಟೇ ಇರುವುದನ್ನು ಇಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.

ಕಳೆದ 2021ರಲ್ಲಿ ಗುರ್ನಾಹ್ ಮತ್ತು 2020ರಲ್ಲಿ ಯುಎಸ್ ಕವಿ ಲೂಯಿಸ್ ಗ್ಲುಕ್ ಅವರಿಗೆ ಸಾಹಿತ್ಯ ವಲಯದ ನೊಬೆಲ್ ಪ್ರಶಸ್ತಿ ಅನ್ನು ನೀಡಿರುವುದು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿತ್ತು.

ಕಳೆದ 2018ರಲ್ಲಿ ನೊಬೆಲ್ ಪ್ರಶಸ್ತಿ ಸುತ್ತ ವಿವಾದ ಹುಟ್ಟಿದ್ದು ಹೇಗೆ?

ಕಳೆದ 2018ರಲ್ಲಿ ನೊಬೆಲ್ ಪ್ರಶಸ್ತಿ ಸುತ್ತ ವಿವಾದ ಹುಟ್ಟಿದ್ದು ಹೇಗೆ?

ಕಳೆದ 2018ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡುವ ಸ್ವೀಡಿಷ್ ಅಕಾಡೆಮಿ ಸದಸ್ಯರ ವಿರುದ್ಧವೇ ಲೈಂಗಿಕ ಲೈಂಗಿಕ ನಿಂದನೆ ಆರೋಪಗಳು ಕೇಳಿ ಬಂದಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಆ ವರ್ಷದ ನೊಬೆಲ್ ಪ್ರಶಸ್ತಿಯನ್ನು ಮುಂದೂಡಿಕೆ ಮಾಡಲಾಗಿತ್ತು. ಅಲ್ಲಿಂದ ಮುಂದೆ ಅಕಾಡೆಮಿ ಸದಸ್ಯರ ಸಮಿತಿಯನ್ನು ಪರಿಷ್ಕರಿಸಲಾಯಿತು. ಆದರೆ 2019ರಲ್ಲಿ ಸರ್ಬಿಯಾದ ಯುದ್ಧ ಅಪರಾಧಗಳಿಗೆ ಕ್ಷಮೆಯಾಚಿಸಿದ ಆಸ್ಟ್ರಿಯಾದ ಪೀಟರ್ ಹ್ಯಾಂಡ್ಕೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನೀಡಿದ್ದು, ಮತ್ತಷ್ಟು ಟೀಕೆಗಳನ್ನು ಎದುರಿಸುವಂತೆ ಮಾಡಿತು.

2022ನೇ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆ ಶುರು ಯಾವಾಗ?

2022ನೇ ಸಾಲಿನ ನೊಬೆಲ್ ಪ್ರಶಸ್ತಿ ಘೋಷಣೆ ಶುರು ಯಾವಾಗ?

ಪ್ರತಿರಕ್ಷಣಾ ವ್ಯವಸ್ಥೆಯ ಒಳನೋಟಕ್ಕೆ ಸಂಬಂಧಿಸಿದಂತೆ ನಡೆಸಿದ ಸಂಶೋಧನೆಗಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡುವುದರ ಮೂಲಕ ಈ ಸಾಲಿನ ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಯಿತು.

ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ:

ಮಂಗಳವಾರ ಭೌತಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಫ್ರೆಂಚ್‌ನ ಅಲೈನ್ ಆಸ್ಪೆಕ್ಟ್, ಅಮೇರಿಕನ್ ಜಾನ್ ಎಫ್. ಕ್ಲೌಸರ್ ಮತ್ತು ಆಸ್ಟ್ರಿಯನ್ ಆಂಟನ್ ಝೈಲಿಂಗರ್ ಅವರು ಪ್ರತ್ಯೇಕವಾದಾಗಲೂ ಚಿಕ್ಕ ಕಣಗಳು ಪರಸ್ಪರ ಸಂಪರ್ಕವನ್ನು ಉಳಿಸಿಕೊಳ್ಳಬಹುದು ಎಂದು ತೋರಿಸಿದರು. ಈ ವಿದ್ಯಮಾನವನ್ನು ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್ ಎಂದು ಕರೆಯಲಾಗುತ್ತದೆ, ಇದನ್ನು ವಿಶೇಷ ಕಂಪ್ಯೂಟಿಂಗ್ ಮತ್ತು ಎನ್‌ಕ್ರಿಪ್ಟ್ ಮಾಡಲು ಬಳಸಬಹುದು.

ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ:

ಅದೇ ರೀತಿ ಬುಧವಾರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕನ್ನರಾದ ಕ್ಯಾರೊಲಿನ್ ಆರ್. ಬರ್ಟೊಝಿ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಮತ್ತು ಡ್ಯಾನಿಶ್ ವಿಜ್ಞಾನಿ ಮೊರ್ಟೆನ್ ಮೆಲ್ಡಾಲ್ ಅವರಿಗೆ "ಅಣುಗಳನ್ನು ಒಟ್ಟಿಗೆ ಸ್ನ್ಯಾಪಿಂಗ್ ಮಾಡುವ" ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನೀಡಲಾಯಿತು. ಇದರಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ಹೆಚ್ಚು ನಿಖರವಾಗಿ ಗುರಿಪಡಿಸುವ ಜೀವಕೋಶಗಳನ್ನು ಅನ್ವೇಷಿಸುವ ಡಿಎನ್‌ಎ ನಕ್ಷೆಯನ್ನು ಮತ್ತು ಔಷಧಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ.

ಇನ್ನು ಉಳಿದಂತೆ 2022ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗುತ್ತದೆ.

 ನೊಬೆಲ್ ಪ್ರಶಸ್ತಿಯಲ್ಲಿ ಏನೆಲ್ಲಾ ಇರುವುದು?

ನೊಬೆಲ್ ಪ್ರಶಸ್ತಿಯಲ್ಲಿ ಏನೆಲ್ಲಾ ಇರುವುದು?

ಜಗತ್ತಿನ ಶ್ರೇಷ್ಠ ಪ್ರಶಸ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನರ್ ಅಥವಾ ಸುಮಾರು 9,00,000 ಡಾಲರ್ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುತ್ತು. ಈ ಹಣವು 1895ರಲ್ಲಿ ಬಹುಮಾನದ ಸೃಷ್ಟಿಕರ್ತರಾದ ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟು ಹೋಗಿರುವ ಮೃತ್ಯುಪತ್ರದತ್ತವಾದ ಆಸ್ತಿಯಿಂದ ಬರುತ್ತದೆ.

English summary
Annie Ernaux wins the 2022 Nobel Prize in literature ; Know Who is Annie Ernaux?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X