ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Anand Mahindra : ಹ್ಯಾಂಡಲ್ ಹಿಡಿಯದೇ ಸೈಕಲ್ ಸವಾರಿ: ಆನಂದ್ ಮಹೀಂದ್ರಾ ಶ್ಲಾಘನೆ

|
Google Oneindia Kannada News

ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಕಾರು ಮತ್ತು ಬೈಕ್ ಸ್ಟೆಂಟ್‌ಗಳನ್ನು ಮಾಡುವ ತುಂಬಾ ಜನರನ್ನು ನಾವು ನೋಡಿದ್ದೇವೆ. ಸ್ಟೆಂಟ್ ಮಾಡಲು ದುಬಾರಿ ಬೈಕ್ ಹಾಗೂ ಕಾರುಗಳನ್ನು ಖರೀದಿ ಮಾಡುವವರಿದ್ದಾರೆ. ಮಾತ್ರವಲ್ಲದೇ ಸ್ಟೆಂಟ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳನ್ನು ಆಯ್ಕೆ ಮಾಡಿಕೊಂಡು ರಸ್ತೆಯಲ್ಲಿ ವಾಹನ ಸವಾರರಿಗೆ ತೊಂದರೆ ಕೊಡುವವರಿದ್ದಾರೆ. ಹೆದ್ದಾರಿಗಳಲ್ಲಿ ಅಪಾಯಕಾರಿ ಸ್ಟೆಂಟ್ ಮಾಡುವ ಮೂಲಕ ಜೀವಕ್ಕೆ ಕುತ್ತು ತಂದುಕೊಂಡಿರುವವರನ್ನು ನಾವು ನೋಡಿದ್ದೇವೆ, ಅಂಥವರ ಬಗ್ಗೆ ಕೇಳಿದ್ದೇವೆ. ಆದರೆ ಜೀವನ ನಡೆಸಲು ಹಳ್ಳಿಗಾಡಿನ ಜನ ಸ್ಟೆಂಟ್ ಮಾಡ್ತಾರೆ ಅನ್ನೋ ವಿಚಾರ ಈ ವೈರಲ್ ವಿಡಿಯೋದಿಂದ ಗೊತ್ತಾಗಿದೆ.

ತಲೆ ಮೇಲೆ ಗಂಟು ಹೊತ್ತುಕೊಂಡು ಸೈಕಲ್ ತುಳಿಯುವ ಯುವಕನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೋಂಡಿದ್ದಾರೆ. ಸೈಕಲ್ ಸವಾರಿ ಮಾಡುವ ಯುವಕ ತಲೆಯ ಮೇಲೆ ಬಟ್ಟೆಯ ಗಂಟನ್ನು ಹಿಡಿದುಕೊಂಡಿದ್ದಾನೆ. ತನ್ನ ಎರಡೂ ಕೈಗಳಿಂದ ಬಟ್ಟೆ ಗಂಟನ್ನು ಹಿಡಿದುಕೊಂಡಿದ್ದಾನೆ. ಆದರೆ ಸೈಕಲ್ ಹ್ಯಾಂಡಲ್ ನ್ನು ಮಾತ್ರ ಈತ ಹಿಡಿದುಕೊಂಡಿಲ್ಲ. ಪೆಡ್ಲಿಂಗ್ ಮಾಡ್ತಾ ಬ್ಯಾಲೆನ್ಸ್ ಮಾಡಿಕೊಂಡು ಹ್ಯಾಂಡಲ್ ಹಿಡಿಯದೇ ವೇಗವಾಗಿ ಸೈಕಲ್ ಸವಾರಿ ಮಾಡುತ್ತಾನೆ. ಹ್ಯಾಂಡಲ್ ಹಿಡಿಯದೇ ಸೈಕಲ್ ಸವಾರಿ ಮಾಡುವ ಈತನ ಬ್ಯಾಲೆನ್ಸ್ ಗೆ ಜನ ಮಾರು ಹೋಗಿದ್ದಾರೆ.

ಜೊತೆಗೆ ಯುವಕನು ಹಳ್ಳಿಯ ಸಮೀಪವಿರುವ ಕಿರಿದಾದ ರಸ್ತೆಯ ಮೂಲಕ ಪೆಡಲ್ ಮಾಡುವುದನ್ನು ನೋಡಬಹುದು. ತನ್ನ ಕೈಗಳನ್ನು ಬಳಸದೆ ಆರಾಮವಾಗಿ ತಿರುವುಗಳನ್ನು ನ್ಯಾವಿಗೇಟ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಜೊತೆಗೆ ಅವನ ಗಮನವೆಲ್ಲ ಬಟ್ಟೆಯ ಗಂಡು ಹಿಡಿಯುವುದರ ಮೇಲೆಯೇ ಇರುವುದು ಗಮನಿಸಬಹುದು. ಯುವಕನನ್ನು ಹಿಂಬಾಲಿಸುತ್ತಿರುವ ವಾಹನದೊಳಗಿಂದ ವಿಡಿಯೋ ಚಿತ್ರೀಕರಿಸಲಾಗಿದೆ. ಬೈಸಿಕಲ್‌ನಲ್ಲಿರುವ ವ್ಯಕ್ತಿ ರಸ್ತೆ ಬಿಟ್ಟು ಹಳ್ಳಿಯ ಕಡೆಗೆ ತಿರುಗಿದಾಗ ವೀಡಿಯೊ ಕೊನೆಗೊಳ್ಳುತ್ತದೆ. ಟ್ವಿಟರ್ ಬಳಕೆದಾರರು ಯುವ ಬೈಸಿಕಲ್ ಸವಾರನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ, ಇದನ್ನು ಕಂಡು ಕೆಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

 Anand Mahindra posts video of human segway with built-in gyroscope in body

ಈ ವೀಡಿಯೊವನ್ನು ಮೂಲತಃ ಪ್ರಫುಲ್ ಎಂಬಿಎ ಚಾಯ್ ವಾಲಾ ಅವರು ಪೋಸ್ಟ್ ಮಾಡಿದ್ದಾರೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಮಹೀಂದ್ರಾ ಅವರು "ಈ ಮನುಷ್ಯ ಮಾನವ ಸೆಗ್ವೇ, ಅವನ ದೇಹದಲ್ಲಿ ಗೈರೊಸ್ಕೋಪ್ ಅನ್ನು ನಿರ್ಮಿಸಲಾಗಿದೆ. ಸಮತೋಲನದಲ್ಲಿ ಅಪಾರ ಪ್ರಜ್ಞೆಯನ್ನು ಹೊಂದಿದ್ದಾನೆ. ನನಗೆ ನೋವಿನ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಅವರಂತಹ ಅನೇಕರು ಪ್ರತಿಭಾವಂತ ಜಿಮ್ನಾಸ್ಟ್‌ಗಳು/ಕ್ರೀಡಾಪಟುಗಳಿದ್ದಾರೆ. ಆದರೆ ಅವರು ಗುರುತಿಸಲ್ಪಡುವುದಿಲ್ಲ ಅಥವಾ ತರಬೇತಿ ಪಡೆಯಲಾಗುತ್ತಿಲ್ಲ" ಎಂದು ಬರೆದಿದ್ದಾರೆ.

ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದ ಯುವಕ: ವಾಹನಗಳನ್ನು ನಿಲ್ಲಿಸಿ ಹೀಗೆ ಮಾಡುತ್ತಿದ್ದಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದ ಯುವಕ: ವಾಹನಗಳನ್ನು ನಿಲ್ಲಿಸಿ ಹೀಗೆ ಮಾಡುತ್ತಿದ್ದ

ಟ್ವಿಟರ್ ಬಳಕೆದಾರರು ಯುವ ಬೈಸಿಕಲ್ ಸವಾರನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ, ಇದನ್ನು ಕಂಡು ಕೆಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

 Anand Mahindra posts video of human segway with built-in gyroscope in body

"ರತ್ನಗಳನ್ನು ಹುಡುಕಲು ನಾವು ಹಳ್ಳಿಗಳನ್ನು ಅನ್ವೇಷಿಸಬೇಕಾಗಿದೆ" ಎಂದು ಬಳಕೆದಾರರೊಬ್ಬ ಟ್ವೀಟ್ ಮಾಡಿದ್ದಾರೆ.

"ನಾನು ನೋಡುತ್ತಿರುವ ಈ ದೃಶ್ಯ ತುಂಬಾ ಚೆನ್ನಾಗಿದೆ. ಅವನು ತನ್ನ ಬಾಲ್ಯ ಜೀವನವನ್ನು ನೆನಪಿಸಿದ. ಕರ್ವ್‌ಗಳಲ್ಲಿ ಆತ ಸಮತೋಲನ ಕಾಯ್ದುಕೊಳ್ಳುವ ರೀತಿ ಅದ್ಬುತವಾಗಿದೆ. ನಾನು ಚಿಕ್ಕವನಿದ್ದಾಗ ಇಂತಹ ರಸ್ತೆಗಳನ್ನು ನೋಡಿದ್ದೆ. ಈಗ ಭಾರತ ಬದಲಾಗುತ್ತಿದೆ." ಎಂದು ಮತ್ತೊಬ್ಬರು ಹೇಳಿದರು. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವೀಡಿಯೊವನ್ನು ಸುಮಾರು 4 ಲಕ್ಷ ಬಾರಿ ವೀಕ್ಷಿಸಲಾಗಿದೆ.

English summary
Anand Mahindra posts video of human segway; The video shows the young man pedalling through a narrow road near a village and navigating the turns effortlessly without using his hands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X