ಶಿವಮೊಗ್ಗದಲ್ಲೂ 'ಅಮೃತಧಾರೆ', ತಾಯಿ ಎದೆ ಹಾಲಿನ ಬ್ಯಾಂಕ್
ನವಜಾತ ಶಿಶುಗಳಿಗೆ ಅಮೃತವಾಗಿರುವ ತಾಯಿ ಎದೆ ಹಾಲು ಒದಗಿಸುವ 'ಅಮೃತಧಾರೆ' ಎದೆಹಾಲಿನ ಬ್ಯಾಂಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದು ಜಿಲ್ಲೆಯ ಮತ್ತು ಸುತ್ತಮುತ್ತಲ ಜಿಲ್ಲೆಯ ಎದೆಹಾಲು ವಂಚಿತ ಶಿಶುಗಳಿಗೆ ಮರುಜೀವ ಲಭಿಸಿದಂತಾಗಿದೆ. ನವಜಾತ ಮಕ್ಕಳಿಗೆ ತಾಯಿಯ ಎದೆ ಹಾಲು ಅಮೃತವಾಗಿರುತ್ತದೆ, ಇದು ಶಿಶುಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ಶಿಶುಗಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಸಹಕಾರಿಯಾಗಿದೆ.
ಆದರೆ ಕೆಲವೂಮ್ಮೆ ತಾಯಿಯ ಅನಾಆರೋಗ್ಯ ಅಥಾವ ಶಿಶುವಿನ ಆರೋಗ್ಯ ಸಮಸ್ಯೆಯಿಂದ ಅನೇಕ ಶಿಶುಗಳು ಹುಟ್ಟುತ್ತಲೇ ಈ ಅಮೃತದಿಂದ ವಂಚಿತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನವಜಾತ ಶಿಶಿಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಗುವಿನ ತಾಯಿಯಿಂದಲೇ ಅಥವಾ ಬೇರೆ ತಾಯಿಯಿಂದ ಹಾಲನ್ನು ದಾನವಾಗಿ ಪಡೆದು ಪಾಶ್ಚರೀಕರಿಸಿ ಶಿಶುಗಳಿಗೆ ನೀಡುವ ಹೊಸ ಯೋಜನೆಯೇ 'ಅಮೃತಧಾರೆ'.

ಮಲೆನಾಡು ಭಾಗದಲ್ಲಿ ನಿರ್ಮಿಸಿರುವ ಮೊದಲನೇಯ ಹಾಗೂ ರಾಜ್ಯದ 3ನೇ 'ಅಮೃತಧಾರೆ' ತಾಯಿ ಎದೆ ಹಾಲಿನ ಬ್ಯಾಂಕ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ನಡೆಯುತ್ತಿದೆ. ಶಿಶುಗಳಿಗೆ ತಾಯಿಯ ಹಾಲನ್ನು ಒದಗಿಸಲು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ತಾಯಿ ಹಾಲಿನ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.
ಎಷ್ಟು ಶಿಶುಗಳಿಗೆ ಹಾಲು ಪೂರೈಕೆ?; ಮೇ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ 'ಅಮೃತಧಾರೆ' ಎದೆ ಹಾಲಿನ ಬ್ಯಾಂಕ್ ಆರಂಭವಾಯಿತು. ಜುಲೈ ತನಕ 376 ತಾಯಂದಿರು ಹಾಲನ್ನು ದಾನ ಮಾಡಿದ್ದಾರೆ. ಒಟ್ಟು 127 ನವಜಾತ ಶಿಶುಗಳಿಗೆ ಹಾಲನ್ನು ನೀಡಿ ಪೋಷಿಸಲಾಗಿದೆ. ಹಾಲನ್ನು ಪಾಶ್ಚರೀಕರಿಸಿದ ಬಳಿಕ 6 ತಿಂಗಳವರೆಗೆ ಅದನ್ನು ಬಳಸಬಹುದಾಗಿದೆ. ದಾನಿಗಳು ನೀಡಿದ ಹಾಲನ್ನು ಮಗುವಿನ ತಾಯಿಯ ಒಪ್ಪಿಗೆ ಮೇರೆಗೆ ನೀಡಲಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಯಿತು. ತೃತೀಯ ಆರೈಕೆ ಸೌಲಭ್ಯಗಳಲ್ಲಿ ನೆಲೆಗೊಂಡಿರುವ ಎಸ್‌ಎನ್‌ಸಿಯುಗಳು ಮತ್ತು ನವಜಾತ ತೀವ್ರ ನಿಗಾ ಘಟಕಗಳಲ್ಲಿ ವಿಶೇಷ ಆರೈಕೆಯ ಸುಧಾರಿತ ಪ್ರವೇಶದ ಹೊರತಾಗಿಯೂ, ಅನಾರೋಗ್ಯ ಮತ್ತು ಅಕಾಲಿಕ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಗಮನಾರ್ಹ ಅಂತರವಿದೆ. ಎಲ್ಲಾ ನವಜಾತ ಶಿಶುಗಳು ಮತ್ತು ಶಿಶುಗಳು ಕೇವಲ ತಾಯಿ ಹಾಲನ್ನು ಮಾತ್ರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸೌಲಭ್ಯಗಳಲ್ಲಿ ಸೂಕ್ತವಾದ ಸ್ತನ್ಯಪಾನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಈ ಅಂತರದ ಹೆಚ್ಚಿನ ಭಾಗವನ್ನು ನಿವಾರಿಸಬಹುದು. ತಾಯಿ ಹಾಲು ಅತ್ಯುತ್ತಮ ಪೋಷಣೆಯನ್ನು ಒದಗಿಸುತ್ತದೆ, ಸಾಮಾನ್ಯ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ನರ-ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪ್ರಭಾವದ ಜೊತೆಗೆ ಅನಾರೋಗ್ಯ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ. ಏಕೆಂದರೆ ಇದು ನವಜಾತ ಶಿಶುವಿನ ಎಲ್ಲಾ ಅಗತ್ಯಗಳನ್ನು, ಅತ್ಯುತ್ತಮ ಪೋಷಣೆ ಮತ್ತು ರಕ್ಷಣಾತ್ಮಕ ಸೋಂಕು ನಿವಾರಕ ವಸ್ತುಗಳನ್ನು ಒದಗಿಸುತ್ತದೆ. ಆದರೆ ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಹಾಲನ್ನು ಹೊಂದಿರುವುದಿಲ್ಲ. ಈ ಸಮಯದಲ್ಲಿ ಶಿಶುಗಳ ಸುಧಾರಿತ ಬದುಕುಳಿಯುವಿಕೆ ಮತ್ತು ಯೋಗಕ್ಷೇಮಕ್ಕಾಗಿ ಆರೋಗ್ಯ ಸೌಲಭ್ಯಗಳಲ್ಲಿ ದಾಖಲಾದ ಎಲ್ಲಾ ಶಿಶುಗಳಿಗೆ ಸುರಕ್ಷಿತ ಎದೆಹಾಲು ನಿರಂತರ ಪೂರೈಕೆಯ ಅವಶ್ಯಕತೆಯಿದೆ. ಅಮೃತಧಾರೆ ತಾಯಿ ಹಾಲಿನ ಬ್ಯಾಂಕ್‌ನಿಂದ ತಾಯಂದಿರಿಂದ ನೈಸರ್ಗಿಕ ಹಾಲುಣಿಸುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಎಲ್ಲಾ ಶಿಶುಗಳಿಗೆ ಉಚಿತ ಎದೆಹಾಲನ್ನು ಒದಗಿಸುವ ಪ್ರಯತ್ನವಾಗಿದೆ.
ಒಟ್ಟಾರೆ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಪೌಷ್ಠಿಕಾಂಶ ವಿಧಾನದ ಅಗತ್ಯವಿದೆ. ಈ ಎಲ್ಲಾ ಶಿಶುಗಳು ಬದುಕುಳಿಯುವಿಕೆ ಮತ್ತು ಅರಿವಿನ ಬೆಳವಣಿಗೆಯ ವಿಷಯದಲ್ಲಿ ದುರ್ಬಲವಾಗಿರುತ್ತವೆ. ಸಾಮಾನ್ಯವಾಗಿ ಅವರ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಆಹಾರ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಈ ನವಜಾತ ಶಿಶುಗಳ ಬೆಳವಣಿಗೆಗೆ ಮತ್ತು ಪೋಷಣೆಯನ್ನು ಮಾಡಲು ಶಿಶುಗಳಿಗೆ ನೇರ ಹಾಲುಣಿಸುವಿಕೆಯು ಸಾಧ್ಯವಾಗುವುದಿಲ್ಲ. ಹಾಗಾಗಿ ಅದೇ ಜೈವಿಕ ತಾಯಿಯಿಂದ ಅಥಾವ ದಾನ ಮಾಡಿ ತಾಯಿಯ ಎದೆ ಹಾಲನ್ನು ಪಾಶ್ಚರೀಕರಿಸಿ ಶಿಶುವಿಗೆ ನೀಡಿ ಆರೈಕೆ ಮಾಡಲಾಗುತ್ತದೆ. ದುರ್ಬಲ ಶಿಶುಗಳಿಗೆ ಡಿಹೆಚ್‌ಎಂ (ಡೋನರ್ ಹ್ಯೂಮನ್ ಮಿಲ್ಕ್) ನಿಂದ ಪ್ರಯೋಜನಗಳು ಸಾಕಷ್ಟಿವೆ ಎಂದು ಜಾಗತಿಕ ಪುರಾವೆಗಳು ಹೇಳುತ್ತವೆ.
ಹಾಲುಣಿಸುವ ಮಹಿಳೆ ತನ್ನ ಹೆಚ್ಚುವರಿ ಹಾಲು ದಾನ ಮಾಡಲು ಸಿದ್ಧರಿದ್ದರೆ ಅವರು ಸಂಭಾವ್ಯ ದಾನಿಯಾಗಿದ್ದಾರೆ. ಹಿಂದಿನ ಮತ್ತು ದೈಹಿಕ ಪರೀಕ್ಷೆಯಿಂದ ಖಚಿತವಾದಂತೆ ಉತ್ತಮ ಆರೋಗ್ಯ ಹೊಂದಿದ ತಾಯಂದಿರು ದಾನ ಮಾಡಬಹುದು. ತಮ್ಮ ಸ್ವಂತ ಶಿಶುಗಳಿಗೆ ಸಮರ್ಪಕವಾಗಿ ಹಾಲುಣಿಸಿದ ನಂತರ ಹೆಚ್ಚುವರಿ ಹಾಲನ್ನು ಸ್ರವಿಸುವ ತಾಯಂದಿರು ದಾನ ಮಾಡಬಹುದು. ಎದೆಹಾಲು ದಾನವು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ.
ಅವಧಿಪೂರ್ವ ಹಾಗೂ ಕಡಿಮೆ ತೂಕದ ಶಿಶುಗಳಿಗೆ ಈ ಎದೆಹಾಲು ಉಪಯಕ್ತವಾಗಿದೆ. ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್ ಅಥವಾ ಜಠರಗರುಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಅನಾರೋಗ್ಯದ ನವಜಾತ ಶಿಶುಗಳು, ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆಹಾರವನ್ನು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರು, ಪರಿತ್ಯಕ್ತ ಶಿಶುಗಳು ಮತ್ತು ತಾಯಿ ಇಲ್ಲದ ಶಿಶುಗಳಿಗೆ ಅಮೃತಧಾರೆ ಹೆಚ್ಚು ಉಪಯುಕ್ತವಾಗಿದೆ. ಅಮೃತಧಾರೆಯಿಂದ ನವಜಾತ ಶಿಶುಗಳಿಗೆ ಹೆಚ್ಚು ಅನೂಕೂಲ ಆಗುತ್ತದೆ. ಈ ಯೋಜನೆಗೂ ಮುನ್ನ ಶಿಶುವಿಗೆ ಪೌಡರ್ ಹಾಲನ್ನು ನೀಡಲಾಗುತ್ತಿತ್ತು, ಈ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾದರೆ ಅದನ್ನು ಸಹ ತಡೆಯಬುದಾಗಿದೆ.
ಡಾ. ಸಿದ್ಧನಗೌಡ ಪಟೇಲ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮೆಗ್ಗಾನ್ ಆಸ್ಪತ್ರೆ ಮಾತನಾಡಿ, "ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ರೂ. 75 ಲಕ್ಷ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರ ಸಹಾಯದಿಂದ ಇದನ್ನು ಸ್ಥಾಪಿಸಲಾಗಿದೆ. ಈ ತಾಯಿಯ ಎದೆ ಹಾಲು ಕೇಂದ್ರ ನಮ್ಮ ಮಲೆನಾಡು ಭಾಗದ 5 ಜಿಲ್ಲೆಗಳಲ್ಲಿ ಮೊದಲನೆಯದು. ಸಾವಿರಾರು ನವಜಾತ ಶಿಶುಗಳಿಗೆ ಅನುಕೂಲವಾಗಲಿದೆ. ಕಡಿಮೆ ತೂಕ, ತಾಯಿಯ ಮರಣ, ಜನನದಲ್ಲೇ ಕಾಯಿಲೆಯಿರುವ ಮಕ್ಕಳನ್ನು ಐಸಿಯುನಲ್ಲಿ ಇರಿಸಿಕೊಂಡು, ಅಮೃತಧಾರೆ ಮೂಲಕ ಹಾಲನ್ನು ನೀಡಿ ಪೋಷಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಚಿತ್ರ ಮತ್ತು ಬರಹ: ಮನೋಜ್ ಎಂ., ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications