ಅಸ್ಸಾಮ್‌ನಲ್ಲಿ ಒಬ್ಬ ಹುಡುಗ ಕೊಟ್ಟ ಚೀಟಿ ಅಮಿತಾಭ್ ಬಚ್ಚನ್ ಜೀವನಕ್ಕೆ ಕೊಟ್ಟಿತ್ತು ತಿರುವು
ನವದೆಹಲಿ, ಅ. 11: ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ 80ನೇ ಜನ್ಮದಿನ ಇಂದು. ಭಾರತ ಕಂಡ ಅತ್ಯಂತ ಯಶಸ್ವಿ ನಟರಲ್ಲಿ ಮತ್ತು ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಅವರು ಒಬ್ಬರು. ಬಿಗ್ ಬಿ ಎಂದೇ ಖ್ಯಾತರಾಗಿರುವ ಬಚ್ಚನ್ ಒಂದು ಕಾಲದಲ್ಲಿ ರಾಜಕೀಯಕ್ಕೆ ಕಾಲಿಟ್ಟು ಬಂದಷ್ಟೇ ವೇಗದಲ್ಲಿ ವಾಪಸ್ಸಾಗಿದ್ದರು.
ಅಮಿತಾಭ್ ಬಚ್ಚನ್ ಜೀವನಕ್ಕೆ ತಿರುವು ಸಿಗಲು ಆ ಒಂದು ಚೀಟಿ ಕಾರಣವಾಗಿತ್ತು. ಅಸ್ಸಾಮ್‌ನಲ್ಲಿ ಒಬ್ಬ ಹುಡುಗ ಕೊಟ್ಟ ಪತ್ರ ಬಿಗ್ ಬಿ ಪಥವನ್ನು ಬದಲಿಸಿತ್ತು. ಏನದು ಘಟನೆ? ಅದಕ್ಕೆ ಮುನ್ನ ಅಮಿತಾಭ್ ಬಚ್ಚನ್ ರಾಜಕೀಯಕ್ಕೆ ಪ್ರವೇಶ ಮಾಡಿದ ಸಂಗತಿಯನ್ನು ಸ್ಮರಿಸಬಹುದು.
ಮಾಜಿ ಪ್ರಧಾನಿ ಹಾಗು ದಿವಂಗತ ರಾಜೀವ್ ಗಾಂಧಿ ಮತ್ತು ಅಮಿತಾಭ್ ಬಚ್ಚನ್ ಇಬ್ಬರು ಬಹಳ ಕಾಲದಿಂದ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದವರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ರಾಜೀವ್ ಗಾಂಧಿ ದಿಢೀರ್ ಆಗಿ ರಾಜಕೀಯ ಪ್ರವೇಶ ಮಾಡಿದ್ದರು. ಆಗ ರಾಜೀವ್ ಗಾಂಧಿಗೆ ಬೆಂಬಲವಾಗಿ ಅಮಿತಾಭ್ ಬಚ್ಚನ್ ಕೂಡ ರಾಜಕೀಯಕ್ಕೆ ಧುಮುಕಿದ್ದರು.

1984ರ ಲೋಕಸಭಾ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಶೇ. 68 ಮತಗಳನ್ನು ಪಡೆದು ಅಭೂತಪೂರ್ವ ಎನ್ನುವಂಥ ಗೆಲುವು ಪಡೆದು ಸಂಸತ್ ಪ್ರವೇಶ ಮಾಡಿದ್ದರು. ಆದರೆ, ಕೇವಲ 3 ವರ್ಷ ಮಾತ್ರ ಅವರ ರಾಜಕೀಯ ಜೀವನ ಇದ್ದದ್ದು.
ರಾಜೀವ್ ಗಾಂಧಿ ವಿರುದ್ಧ ಬೋಫೋರ್ಸ್ ಹಗರಣದ ಸದ್ದು ಜೋರಾಗಿತ್ತು. ಈ ಹಗರಣದಲ್ಲಿ ಅಮಿತಾಭ್ ಬಚ್ಚನ್ ಹೆಸರೂ ಕೇಳಿಬಂದಿತ್ತು. ಅದಾದ ಬಳಿಕ 1987ರಲ್ಲಿ ಬಿಗ್ ಬಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಣ್ಣದ ಲೋಕಕ್ಕೆ ಮರಳಿದ್ದರು.

ರಾಜಕೀಯ ಬಿಡಲು ಕಾರಣವಾಗಿತ್ತು ಚೀಟಿ
ಅಮಿತಾಭ್ ಬಚ್ಚನ್ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬೋಫೋರ್ಸ್ ಹಗರಣದ ಕಾರಣಕ್ಕೆ ಎಂದು ಆಗ ಬಹುತೇಕ ಮಂದಿ ಭಾವಿಸಿದ್ದರು. ಆದರೆ, ವಾಸ್ತವದಲ್ಲಿ ಕಾರಣ ಅದಾಗಿರಲಿಲ್ಲ. ಅಸ್ಸಾಮ್‌ನಲ್ಲಿ ನಡೆದ ಒಂದು ಘಟನೆ ಬಚ್ಚನ್ ಜೀವನಕ್ಕೆ ತಿರುವು ಕೊಟ್ಟಿತ್ತು.
ಆ ಘಟನೆ ಬಗ್ಗೆ ಅಮಿತಾಭ್ ಬಚ್ಚನ್ ಒಮ್ಮೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದುಂಟು. ಅವರು ಸಂಸದರಾಗಿದ್ದಾಗ ಅಸ್ಸಾಮ್ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಮ್ಮೆ ಪ್ರಚಾರಕ್ಕೆ ಹೋಗಿದ್ದರು. ನಿಗದಿತ ಸ್ಥಳದ ಬದಲು ವಿಪಕ್ಷದ ಸಭೆ ನಡೆಯುತ್ತಿದ್ದ ಸ್ಥಳದ ಬಳಿ ಹೆಲಿಕಾಪ್ಟರ್ ಇಳಿದಿತ್ತು. ಆಗ ಜನರ ನೂಕುನುಗ್ಗಲು ನಡೆದು ಅಮಿತಾಭ್ ಬಚ್ಚನ್‌ಗೆ ಅಪಾಯವಾಗುವ ಸಂಭವ ಇತ್ತು. ಪೈಲಟ್ ಬೇಗನೇ ಹೆಲಿಕಾಪ್ಟರ್ ಚಾಲನೆ ಮಾಡಿ ಹೊರಡುವ ತರಾತುರಿಯಲ್ಲಿದ್ದರು.
ಆಗ ಒಬ್ಬ ವಿದ್ಯಾರ್ಥಿ ಹೇಗೋ ನುಸುಳಿಕೊಂಡು ಬಚ್ಚನ್ ಬಳಿ ಬಂದು ಒಂದು ಚೀಟಿಯನ್ನು ಕೊಡುತ್ತಾನೆ. ಆ ಚೀಟಿ ಅಮಿತಾಭ್ ಬಚ್ಚನ್ ಅವರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.
"ಬಚ್ಚನ್‌ಜಿ, ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ನಾನು ಬೇರೆ ಪಕ್ಷದ ಬೆಂಬಲಿಗನಾಗಿದ್ದೇನೆ. ದಯವಿಟ್ಟು ಈ ರಾಜ್ಯದಿಂದ ಈಗ ಹೋಗಿರಿ. ಎರಡು ಅಭಿಮಾನಗಳ ಮಧ್ಯೆ ಗೊಂದಲಕ್ಕೆ ನನ್ನನ್ನು ಸಿಲುಕಿಸಿ ಕಷ್ಟ ಮಾಡಬೇಡಿ" ಎಂದು ಆ ಹುಡುಗ ನೀಡಿದ ಕಾಗದದ ಗುಂಡಿನಲ್ಲಿ ಬರೆಯಲಾಗಿತ್ತು.
ಈ ಪತ್ರ ಬಿಗ್ ಬಿ ಅಮಿತಾಭ್ ಬಚ್ಚನ್ ಜೀವನಕ್ಕೆ ತಿರುವು ಕೊಟ್ಟಿತ್ತು. "ಆ ಭಾವನಾತ್ಮಕ ಮನವಿ ನನ್ನನ್ನು ಗಾಂಢ ಚಿಂತನೆಗೆ ಹಚ್ಚಿತು" ಎಂದು ಬಚ್ಚನ್ ಹೇಳಿಕೊಂಡಿದ್ದರು.
"25 ವರ್ಷಗಳ ಕಾಲ ಒಬ್ಬ ನಟನಾಗಿ ನಾನು ಪ್ರೇಕ್ಷಕರನ್ನು ಸಂಪಾದಿಸಿದ್ದೆ, ಅವರ ಅಭಿಮಾನ ಸಂಪಾದಿಸಿದೆ. ಒಮ್ಮೆಲೇ ನಾನು ರಾಜಕಾರಣಿಯಾಗಿ ಜನರನ್ನು ಒಪ್ಪಿಸಲು ಹೋಗಿದ್ದು ಸರಿ ಅಲ್ಲ ಅನಿಸಿತು. ನನ್ನ ಅಭಿಮಾನಿಗಳನ್ನು ಗೊಂದಲಕ್ಕೆ ಕೆಡವುತ್ತಿದ್ದೇನೆ ಎನಿಸಿತು" ಎಂದು ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.
ನಂತರದ ಜೀವನ
ರಾಜಕೀಯಕ್ಕೆ ಹೋಗಿ ಬಂದ ಬಳಿಕ ಅಮಿತಾಭ್ ಬಚ್ಚನ್ ಸಿನಿಮಾ ವೃತ್ತಿಜೀವನ ಹಲವು ವರ್ಷಗಳ ಕಾಲ ಏರುಪೇರಿಗೆ ಸಿಕ್ಕಿಹೋಯಿತು. ಅಗ್ನಿಪಥ್‌ನಂಥ ಕೆಲವೇ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗೆಲುವು ಪಡೆದವು. 2000ರ ಇಸವಿಯವರೆಗೂ ಅವರ ಹೆಚ್ಚಿನ ಸಿನಿಮಾಗಳು ಫೇಲ್ ಆದವು. ಬಚ್ಚನ್ ನೇಪಥ್ಯಕ್ಕೆ ಸರಿಯುವುದು ಖಚಿತ ಎಂದು ಭಾವಿಸುವಷ್ಟರಲ್ಲಿ ಬಚ್ಚನ್ ಥರಹೇವಾರಿ ಪಾತ್ರಗಳಲ್ಲಿ ನಟಿಸುತ್ತಾ ನಟನಾಗಿ ಮತ್ತೆ ಕಂಬ್ಯಾಕ್ ಮಾಡಿದರು.
(ಒನ್ಇಂಡಿಯಾ ಸುದ್ದಿ)
-
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications