Amazon Forest: 31 ದಿನಗಳ ಕಾಲ ಎರೆ ಹುಳು ತಿಂದು ತನ್ನದೇ ಮೂತ್ರ ಕುಡಿದು ಬದುಕಿದ್ದ ವ್ಯಕ್ತಿ
ಅಮೆಜಾನ್ ಕಾಡಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದುಹೋಗಿದ್ದ ಅಸಾಧಾರಣ ಕಥೆ ಇದು
ಅಮೆಜಾನ್ ಅರಣ್ಯದಲ್ಲಿ ವ್ಯಕ್ತಿಯೊಬ್ಬ 31 ದಿನಗಳ ಕಾಲ ಎರೆ ಹುಳು ತಿಂದು ತನ್ನದೇ ಮೂತ್ರ ಕುಡಿದು ಬದುಕಿದ್ದಾನೆ. ಅಮೆಜಾನ್ ಕಾಡಿನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದುಹೋಗಿದ್ದ ವ್ಯಕ್ತಿಯ ಅಸಾಧಾರಣ ಕಥೆ ಇದು. ಬೊಲಿವಿಯನ್ ವ್ಯಕ್ತಿಯೊಬ್ಬರು ಅಮೆಜಾನ್ ಕಾಡಿನಲ್ಲಿ ಕಳೆದುಹೋಗಿ ಒಂದು ತಿಂಗಳು ಕೀಟಗಳು ಮತ್ತು ಹುಳುಗಳನ್ನು ತಿನ್ನುವ ಮೂಲಕ ಬದುಕುಳಿದಿದ್ದಾರೆ.
ಜನವರಿ 25 ರಂದು ಉತ್ತರ ಬೊಲಿವಿಯಾದಲ್ಲಿ ಬೇಟೆಯಾಡುವ ಪ್ರವಾಸದಲ್ಲಿ 30 ವರ್ಷ ವಯಸ್ಸಿನ ಜೊನಾಟನ್ ಅಕೋಸ್ಟಾ ಎಂಬಾತ ತನ್ನ ಸ್ನೇಹಿತರಿಂದ ಬೇರ್ಪಟ್ಟು ಕಳೆದು ಹೋಗಿದ್ದನು. ಸುಮಾರು ಒಂದು ತಿಂಗಳ ನಂತರ, ಹುಡುಕಾಟ ಮತ್ತು ಪಾರುಗಾಣಿಕಾ ತಂಡಗಳು ಆತನನ್ನು ಪತ್ತೆ ಹಚ್ಚಿವೆ.

ಪತ್ತೆಯಾದಾಗ ಅಕೋಸ್ಟಾ ಅವರು 17 ಕೆಜಿ ತೂಕವನ್ನು ಕಳೆದುಕೊಂಡಿದ್ದರು. ಕಾಡಿನಲ್ಲಿ 31 ದಿನಗಳನ್ನು ಕಳೆದ ನಂತರ ನಿರ್ಜಲೀಕರಣಗೊಂಡಿದ್ದರು. ಪತ್ತೆಯಾದ ಬಳಿಕ ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಗಡ್ಡ ಮತ್ತು ಕೂದಲನ್ನು ಬೋಳಿಸಿಕೊಂಡರು. ಅವರು ಈಗ ಬೇಟೆಯನ್ನು ಬಿಟ್ಟು ದೇವರಿಗೆ ಸಂಗೀತ ಕಾರ್ಯಕ್ರಮ ಮಾಡುವುದಾಗಿ ತನ್ನ ಜೀವನವನ್ನು ಮುಡಿಪಾಗಿಡಲು ಪ್ರತಿಜ್ಞೆ ಮಾಡಿದ್ದಾರೆ.
ಅಕೋಸ್ಟಾ ಅವರು ಕಾಡಿನಲ್ಲಿ ಹೇಗೆ ಜೀವಂತವಾಗಿದ್ದರು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಯಾವ ಕಷ್ಟಗಳನ್ನು ಅನುಭವಿಸಿದರು ಎಂದು ವಿವರಿಸಿದ್ದಾರೆ. ಅವರು ಕಾಡಿನಲ್ಲಿ ಹುಳು, ಕ್ರಿಮಿಕೀಟ, ಪಪ್ಪಾಯಿಯಂತಹ ಕಾಡು ಹಣ್ಣುಗಳನ್ನು ತಿಂದು ಬದುಕಿದೆ ಎಂದು ಹೇಳಿಕೊಂಡಿದ್ದಾರೆ.

ಬಾಯಾರಿಕೆಯಾದಾಗ ದೇವರಲ್ಲಿ ಮಳೆಗಾಗಿ ಕೇಳಿದೆ. ಮಳೆ ಬಾರದಿದ್ದರೆ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಂದು ಬಾರಿ ತಾವು ತಮ್ಮ ರಬ್ಬರ್ ಬೂಟುಗಳಲ್ಲಿ ಮಳೆನೀರನ್ನು ಸಂಗ್ರಹಿಸುತ್ತಿರುವುದಾಗಿ ಎಂದರು. ಆದರೆ ನೀರು ಸಿಗದೇ ಇದ್ದಾಗ ತಮ್ಮ ಮೂತ್ರವನ್ನು ಕುಡಿಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಜಾಗ್ವಾರ್ ಸೇರಿದಂತೆ ಕಾಡಿನಲ್ಲಿ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಮತ್ತು ವಿವಿಧ ಜೀವಿಗಳನ್ನು ಅವರು ಹೇಗೆ ಎದುರಿಸಿದರು ಎಂಬುದರ ಕುರಿತು ಅವರು ವಿವರಿಸಿದ್ದಾರೆ.
ಇದೇ ರೀತಿಯ ಘಟನೆಯಲ್ಲಿ, ಕೆರಿಬಿಯನ್ ದ್ವೀಪದ ಡೊಮಿನಿಕಾದ ವ್ಯಕ್ತಿಯೊಬ್ಬರು ಕೊಲಂಬಿಯಾದ ಸಮುದ್ರದ ಹಾಯಿದೋಣಿಯಲ್ಲಿ ಕಳೆದುಹೋದ 24 ದಿನಗಳ ನಂತರ ಬದುಕುಳಿದರು. "ನನಗೆ ಆಹಾರವಿಲ್ಲ. ದೋಣಿಯಲ್ಲಿ ಕೆಚಪ್ ಬಾಟಲಿಯಿತ್ತು, ಬೆಳ್ಳುಳ್ಳಿ ಪುಡಿ ಮತ್ತು ಮ್ಯಾಗಿ ಇತ್ತು. ಹಾಗಾಗಿ ಸಮುದ್ರದಲ್ಲಿ 24 ದಿನ ಬದುಕಲು ನಾನು ಅದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿದೆ" ಎಂದು 47 ವರ್ಷದ ಎಲ್ವಿಸ್ ಫ್ರಾಂಕೋಯಿಸ್ ಹೇಳಿದ್ದರು.












Click it and Unblock the Notifications