Hazelnut Health Benefits: ಅಬ್ಬಾಬ್ಬ ಹ್ಯಾಝೆಲ್ನಟ್ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಮಾಹಿತಿ
ರುಚಿಯಾದ ಹ್ಯಾಝೆಲ್ನಟ್ ಸೌಂದರ್ಯ ಮತ್ತು ಸ್ವಾಸ್ಥ್ಯಕ್ಕಾಗಿ ನೈಸರ್ಗಿಕ ಪದಾರ್ಥಗಳಲ್ಲಿ ಒಂಕದಾಗಿದೆ. ಹ್ಯಾಝೆಲ್ನಟ್ಸ್ ಆರೋಗ್ಯಕ್ಕೆ ಶಕ್ತಿಯಾಗಿ ಹೊರಹೊಮ್ಮಿದೆ. ಹ್ಯಾಝೆಲ್ನಟ್ ನಲ್ಲಿ ವಿಟಮಿನ್ ಇ ತುಂಬಿದೆ, ಇದು ಉತ್ಕರ್ಷಣ ನಿರೋಧಕವಾಗಿದ್ದು, ಚರ್ಮ ಮತ್ತು ಕೂದಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉನ್ನತ ಮಟ್ಟ ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗುತ್ತದೆ. ಹ್ಯಾಝೆಲ್ನಟ್ ತುಂಬಾ ಸಿಹಿ ಆಗಿರುವುದು. ಇದನ್ನು ಹಸಿಯಾಗಿ, ಹುಡಿ ಮಾಡಿ ಅಥವಾ ಹುರಿದು ತಿನ್ನಬಹುದು. ಇದನ್ನು ಹಲವಾರು ಖಾದ್ಯಗಳಿಗೆ ರುಚಿ ಹೆಚ್ಚಿಸುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ. ಕಾಫಿ ಮತ್ತು ಕೇಕ್ ಗಳಿಗೆ ರುಚಿ ಹೆಚ್ಚಿಸುವ ಸಲುವಾಗಿ ಹ್ಯಾಝೆಲ್ನಟ್ ನ್ನು ಬಳಕೆ ಮಾಡಲಾಗುತ್ತದೆ. ಇದು ಸಿಹಿ ತಿಂಡಿಗಳಿಗೆ ಅಲಂಕಾರಕ್ಕಾಗಿ ಬಳಕೆ ಮಾಡುವರು. ಇದರಿಂದ ಬೆಣ್ಣೆ, ತೈಲ, ಹಿಟ್ಟು ಇತ್ಯಾದಿಗಳನ್ನು ತಯಾರಿಸಿಕೊಳ್ಳುವರು.ಇದು ಯಾವುದೇ ಆಹಾರಕ್ರಮಕ್ಕೆ ಸೂಕ್ತವಾದ ಸೇರ್ಪಡೆಯಾಗಿದೆ. ಹ್ಯಾಝೆಲ್ನಟ್ ಹತ್ತು ಹಲವು ಪ್ರಯೋಜನಗಳು ಇಲ್ಲಿವೆ ನೋಡಿ.

ಹ್ಯಾಝೆಲ್ನಟ್ ಆರೋಗ್ಯಕರ ಪ್ರಯೋಜನೆಗಳು ಇಲ್ಲವೆ
ಕ್ಯಾನ್ಸರ್ ತಡೆಗಟ್ಟಲು ಸಹಾಯಕ
ಹೌದು, ಹ್ಯಾಝೆಲ್ನಟ್ ನಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ಕ್ಯಾನ್ಸರ್ ತಡೆಗಟ್ಟಬಹುದು. ಕ್ಯಾನ್ಸರ್ ಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಪರಿಣಾಮವನ್ನು ಇದು ತಗ್ಗಿಸುವಲ್ಲಿ ಸಹಾಯಕವಾಗಿದೆ. ಹ್ಯಾಝೆಲ್ನಟ್ ಬೀಜಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇದೆ. ಇದನ್ನು ಪ್ರೊನ್ಟೋಸಯಾನಿಡಿನ್ ಗಳು ಎಂದು ಕರೆಯಲಾಗುತ್ತದೆ. ಹ್ಯಾಝೆಲ್ನಟ್ ಉನ್ನತ ಮಟ್ಟದ ವಿಟಮಿನ್ ಇ ಇದೆ. ಇದೊಂದು ರೀತಿಯ ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದೆ. ಕ್ಯಾನ್ಸರ್ ಗೆ ಸಂಬಂಧಿಸಿದ ಅಂಗಾಂಶಕ್ಕೆ ಆಗುವ ಹಾನಿಯನ್ನು ಇದು ತಡೆಯುವುದು.
ಮೂಳೆಯ ಆರೊಗ್ಯ ಹೆಚ್ಚಿಸುವುದು
ಹ್ಯಾಝೆಲ್ನಟ್ ನಲ್ಲಿ ಇರುವಂತಹ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂನಿಂದಾಗಿ ಇದು ಮೂಳೆಯ ಆರೋಗ್ಯ ಮತ್ತು ಮೂಳೆ ಬಲಗೊಳಿಸಲು ಸಹಾಯಕವಾಗಿದೆ. ಹ್ಯಾಝೆಲ್ನಟ್ ನಿಂದ ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸುವುದು ಮತ್ತು ಅಸ್ಥಿರಂಧ್ರತೆ ಮತ್ತು ಸಂಧಿವಾತದಂತಹ ಸಮಸ್ಯೆಯನ್ನು ಇದು ಕಡಿಮೆ ಮಾಡುವುದು. ಹ್ಯಾಝೆಲ್ನಟ್ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯಕರ ಆರೋಗ್ಯ ನಿಮ್ಮದಾಗುತ್ತದೆ.
ಮಧುಮೇಹ ನಿಯಂತ್ರಿಸಲು ಸಹಾಯಕ
ಹೌದು, ಇದೀನ ಜೀವನದ ಆಹಾರ ಶೈಲಿಯಿಂದಾಗಿ ಹಲವಾರು ಮಂದಿ ಮಧುಮೇಹದಿಂದ ಬಳಲುತ್ತಿರುತ್ತಾರೆ. ಈಗಾಗಲೇ ಹಲವು ಅಧ್ಯಯನಗಳ ಮೂಲಕ ತಿಳಿದಿರುವ ವಿಚಾರವೆಂದರೆ ಹ್ಯಾಝೆಲ್ನಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುವುದು. ಇನ್ನೂ ಇನ್ಸುಲಿನ್ ಸೂಕ್ಷ್ಮತೆಯನ್ನು ಇದು ಸುಧಾರಣೆ ಮಾಡಲು ಸಹಾಯಕವಾಗಿದೆ. ಇನ್ನೂ ಸಂಶೋಧನೆಯಲ್ಲಿ ಭಾಗಿಯಾದವರಿಗೆ 15 ಗ್ರಾಂ ವಾಲ್ ನಟ್, 7.5 ಗ್ರಾಂ ಬಾದಾಮಿ ಮತ್ತು 7.5 ಗ್ರಾಂ ಹ್ಯಾಝೆಲ್ನಟ್ ನೀಡಲಾಯಿತು. ಇದರ ಪರಿನಾಮವಾಗಿ ಅವರ ಇನ್ಸುಲಿನ್ ಮಟ್ಟ ಗಣನೀಯವಾಗಿ ತಗ್ಗಿರುವುದನ್ನು ಕಂಡುಕೊಳ್ಳಲಾಗಿದೆ. ಇದು ಇನ್ಸುಲಿನ್ ಸೂಕ್ಷ್ಮತೆಗೆ ತುಂಬಾ ಪರಿಣಾಮಕಾರಿ ಆಗಿದೆ.

ಬೊಜ್ಜಿನ ಅಪಾಯ ಕಡಿಮೆ ಮಾಡುತ್ತದೆ.
ದಿನನಿತ್ಯದ ಆಹಾರ ಶೈಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೊರಗಿನ ತಿಂಡಿಗಳನ್ನೆ ಹೆಚ್ಚು ಸೇವಿಸುತ್ತಾರೆ. ಹೀಗಾಗಿ ದೇಹದ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆಗಳು ಉಂಟಾಗಿರುತ್ತವೆ. ಇನ್ನೂ ಬೊಜ್ಜು ಕರಗಿಸುವುದರಲ್ಲಿ ಹ್ಯಾಝೆಲ್ನಟ್ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ. ಹ್ಯಾಝೆಲ್ನಟ್ ಸೇವನೆ ಮಾಡಿದ ವೇಳೆ ಇದು ಚಯಾಪಚಯ ಕ್ರಿಯೆ ವೃದ್ಧಿಸುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು.
ಹ್ಯಾಝೆಲ್ನಟ್ ಸೇವನೆಯಿಂದಾಗಿ ಚಯಾಪಚಯ ಕ್ರಿಯೆಯು ಹೆಚ್ಚಾದರೆ ಆಗ ದೇಹದಲ್ಲಿ ಕ್ಯಾಲರಿಯು ಅಧಿಕ ದಹಿಸುವುದು ಮತ್ತು ಇದು ಶಕ್ತಿಯಾಗಿ ಪರಿವರ್ತನೆ ಆಗುವುದು.ಹ್ಯಾಝೆಲ್ನಟ್ ಬೊಜ್ಜಿನ ಅಪಾಯ ಕಡಿಮೆ ಮಾಡುತ್ತದೆ ಎಂದು ಅಧ್ಯಯಗಳ ಮೂಲಕ ತಿಳಿದು ಬಂದಿದೆ. ಹ್ಯಾಝೆಲ್ನಟ್ ಸೇವನೆಯಿಂದ ಚಯಾಪಚಯ ಕ್ರಿಯೆಗೆ ವೇಗ ನೀಡುತ್ತದೆ. ಹ್ಯಾಝೆಲ್ನಟ್ ನಲ್ಲಿ ಉನ್ನತ ಮಟ್ಟ ಪ್ರೋಟೀನ್, ಕೊಬ್ಬು ಮತ್ತು ನಾರಿನಾಂಶಗಳು ಇವೆ. ಇದು ಹೊಟ್ಟೆ ತುಂಬಿದಂತೆ ಮಾಡುವುದು.

ಹೃದಯದ ಆರೋಗ್ಯವನ್ನ ಹೆಚ್ಚಿಸುತ್ತದೆ.
ಹೌದು, ಹ್ಯಾಝೆಲ್ನಟ್ ನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳು ಇವೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚು ಮಾಡಿ, ಕೆಟ್ಟ ಕೊಲೆಸ್ಟ್ರಾಲ್ ನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹ್ಯಾಝೆಲ್ನಟ್ ಸೇವಿಸುವುದರಿಂದ ಅಪಧಮನಿಗಳಲ್ಲಿ ಪದರಗಳು ನಿರ್ಮಾಣವಾಗುವುದು ತಡೆಯಬಹುದು. ಈ ಕಾರಣದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ದೂರ ಆಗುವುದು. ನಿಯಮಿತವಾಗಿ ಹ್ಯಾಝೆಲ್ನಟ್ ಸೇರಿಸಿಕೊಂಡರೆ ಆಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಅಪಾಯವು ಕಡಿಮೆ ಮಾಡಲು ಸಹಾಯಕವಾಗುತ್ತದೆ.
-
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ












Click it and Unblock the Notifications