ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

ನವದೆಹಲಿ, ಮೇ 20: ದಿನೇ ದಿನೇ ಹೊಸ ಸಮಸ್ಯೆಗಳನ್ನು ಹೊತ್ತು ತರುತ್ತಿರುವ ಕೊರೊನಾ ಸೋಂಕಿನ ನಿಗ್ರಹಕ್ಕೆ ಹೊಸ ಸಾಧ್ಯತೆಗಳ ಅನ್ವೇಷಣೆಗಳೂ ಮುಂದುವರೆಯುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಮತ್ತೊಂದು ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. "ಅನುಸರಿಸಲು ಅತಿ ಸರಳ" ಎಂದು ಈ ಮಾರ್ಗಸೂಚಿಯನ್ನು ಕರೆದಿದ್ದು, ಸೋಂಕಿನ ನಿಗ್ರಹದಲ್ಲಿ ಗಾಳಿಯ ಅವಶ್ಯಕತೆಯನ್ನು ಇದರಲ್ಲಿ ಎತ್ತಿಹಿಡಿಯಲಾಗಿದೆ.

ಒಬ್ಬ ಸೋಂಕಿತನಿಂದ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಡೆಯಲು ಸೋಂಕಿತನಿರುವ ಸ್ಥಳ ಹೇಗೆ ಮುಖ್ಯ ಪಾತ್ರ ವಹಿಸುತ್ತದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ. ಮನೆ ಅಥವಾ ಸೋಂಕಿತನಿರುವ ಪರಿಸರ ಹೇಗೆ ಸೋಂಕು ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದರ ಕುರಿತು ವಿವರಿಸಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಅವರ ಕಚೇರಿಯಿಂದ ಈ ಹೊಸ ಮಾರ್ಗಸೂಚಿ ರೂಪಿಸಲಾಗಿದೆ. ಇದರಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಮುಂದೆ ಓದಿ...

 ವೈರಸ್ ಹರಡುವಿಕೆಯ ಅಪಾಯವನ್ನೂ ಗಾಳಿ ಮೂಲಕ ತಡೆಯಬಹುದು

ವೈರಸ್ ಹರಡುವಿಕೆಯ ಅಪಾಯವನ್ನೂ ಗಾಳಿ ಮೂಲಕ ತಡೆಯಬಹುದು

ಮಾರ್ಗಸೂಚಿ ಪ್ರಕಾರ ಕೊರೊನಾ ಸೋಂಕಿನ ತಡೆಗೆ ಬಹುಮುಖ್ಯವಾಗಿ ಮೂರು ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಗಾಳಿ ಬೆಳಕಿನ ಚಲನೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ಹೇಗೆ ವಾಸನೆಯು ಗಾಳಿಯಿಂದ ದುರ್ಬಲವಾಗುತ್ತದೋ ಹಾಗೆಯೇ ವೈರಸ್‌ನ ಅಪಾಯಕಾರಿ ಸಾಂದ್ರತೆಯನ್ನೂ ಗಾಳಿ ಮೂಲಕವೇ ಕಡಿಮೆ ಮಾಡಬಹುದು ಎಂದು ಈ ಮಾರ್ಗಸೂಚಿ ವಿವರಿಸಿದೆ.

 ಎಂಜಲಿನ ಕಣಗಳು 10 ಮೀಟರ್‌ವರೆಗೂ ಹರಡಬಲ್ಲವು

ಎಂಜಲಿನ ಕಣಗಳು 10 ಮೀಟರ್‌ವರೆಗೂ ಹರಡಬಲ್ಲವು

ಸೋಂಕಿತರ ಎಂಜಲು ಅಥವಾ ಮೂಗಿನ ದ್ರವವು ಎರಡು ಮೀಟರ್ ಅಂತರದಲ್ಲಿ ನೆಲದ ಮೇಲೆ ಅಥವಾ ಇನ್ನಾವುದೇ ಮೇಲ್ಮೈಗೆ ಬಿದ್ದರೆ ಆ ಕಣಗಳು ಹತ್ತು ಮೀಟರ್‌ವರೆಗೂ ಗಾಳಿಯಲ್ಲಿ ಪಸರಿಸಬಲ್ಲವು ಎಂದು ಮಾರ್ಗಸೂಚಿ ತಿಳಿಸಿದೆ. ಸೋಂಕಿತನ ಎಂಜಲು ಹಾಗೂ ಸಿಂಬಳ ವೈರಸ್ ಹರಡುವಿಕೆಯ ಪ್ರಮುಖ ವಾಹಕಗಳಾಗಿದ್ದು, ಯಾವುದೇ ಲಕ್ಷಣಗಳಿಲ್ಲದ ಸೋಂಕಿತ ವ್ಯಕ್ತಿ ಸುಲಭವಾಗಿ ಈ ಮೂಲಕ ವೈರಸ್ ಹರಡಬಹುದಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿರದ ಸ್ಥಳಗಳಲ್ಲಿ ಸೋಂಕು ಬೇಗನೇ ಹರಡುತ್ತದೆ ಎಂದು ತಿಳಿಸಿದೆ.

 ಫ್ಯಾನ್ ಬಳಕೆ ಬಗ್ಗೆ ಸಲಹೆ

ಫ್ಯಾನ್ ಬಳಕೆ ಬಗ್ಗೆ ಸಲಹೆ

ಕಲುಷಿತ ಗಾಳಿಯು ನೇರವಾಗಿ ಹರಡುವ ಸಾಧ್ಯತೆಯಿರುವ ಜಾಗದಲ್ಲಿ ಫ್ಯಾನ್ ಅಳವಡಿಸಬಾರದು. ಕೊರೊನಾ ನಿಯಂತ್ರಣ ವಿಷಯದಲ್ಲಿ ಫ್ಯಾನ್ ಸ್ಥಳವೂ ನಿರ್ಣಾಯಕ ಎಂದು ಮಾರ್ಗಸೂಚಿ ಹೇಳಿದ್ದು, ಕೋಣೆಯ ಕಿಟಕಿಗಳು ಹಾಗೂ ಬಾಗಿಲುಗಳನ್ನು ಮುಚ್ಚಿದ್ದರೆ ಎಕ್ಸಾಸ್ಟ್ ಫ್ಯಾನ್ ಚಲನೆಯಲ್ಲಿರಲಿ. ಇದು ಒಳಗೆ ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಸಲಹೆ ನೀಡಿದೆ. ಕೆಲಸದ ಸ್ಥಳಗಳಲ್ಲಿಯೂ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡುವುದು ಒಳ್ಳೆಯದು. ಏಸಿ ಇದ್ದರೆ ಶುದ್ಧ ಗಾಳಿ ಒಳಬರಲು ಅನುಕೂಲವಾಗುತ್ತದೆ ಎಂದಿದೆ.

 ಡಬಲ್ ಲೇಯರ್ ಮಾಸ್ಕ್ ಬಗ್ಗೆ ಮಾತು

ಡಬಲ್ ಲೇಯರ್ ಮಾಸ್ಕ್ ಬಗ್ಗೆ ಮಾತು

ಸೋಂಕು ಹರಡುವುದನ್ನು ತಡೆಯುವಲ್ಲಿ ಮಾಸ್ಕ್ ಪಾತ್ರ ಅತಿ ಮುಖ್ಯ. ಇದೀಗ ಡಬಲ್ ಲೇಯರ್ ಮಾಸ್ಕ ಧರಿಸುವುದು ಅವಶ್ಯಕವಾಗಿದೆ ಎಂದು ಸರ್ಕಾರ ತಿಳಿಸಿದೆ. ಅಥವಾ N95 ಮಾಸ್ಕ ಧರಿಸುವುದು ಉತ್ತಮ ಎಂದು ವೈದ್ಯ ವಿಜಯ್ ರಾಘವನ್ ತಿಳಿಸಿದ್ದಾರೆ. ಸರ್ಜಿಕಲ್ ಮಾಸ್ಕ ಅನ್ನು ಒಮ್ಮೆ ಧರಿಸಬೇಕು. ಇದನ್ನೇ ಎರಡು ಧರಿಸಿದರೆ ಐದು ಬಾರಿ ಧರಿಸಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+