Get Updates
Get notified of breaking news, exclusive insights, and must-see stories!

10,000 ಸಾಲ ಮಾಡಿ ಬಿಸಿನೆಸ್ ಶುರು ಮಾಡಿದ ವ್ಯಕ್ತಿ ಕೈಯಲ್ಲಿ ಈಗ 14,000 ಕೋಟಿ, ಅವರ ಕಥೆ ಗೊತ್ತಾ?

ಬೆಂಗಳೂರು, ಅಕ್ಟೋಬರ್‌ 13: ಇತ್ತೀಚಿನ ದಿನಗಳಲ್ಲಿ, ಸ್ಟಾರ್ಟ್ಅಪ್ ಸಂಸ್ಕೃತಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದರಲ್ಲಿ ಪ್ರತಿದಿನ ನಾವು ಭಾರತೀಯ ಉದ್ಯಮಿಗಳ ಯಶಸ್ಸಿನ ಕಥೆಗಳನ್ನು ಕೇಳುತ್ತೇವೆ. ಆದರೆ ತಮ್ಮ ಕಠಿಣ ಪರಿಶ್ರಮದ ಮೂಲಕ ಅದೂ ಸಾಲದಿಂದ ವ್ಯವಹಾರ ಜಗತ್ತಿನಲ್ಲಿ ಯಶಸ್ವಿಯಾದ ಅನೇಕ ಭಾರತೀಯ ಉದ್ಯಮಿಗಲೂ ನಮ್ಮ ನಡುವೆ ಇದ್ದಾರೆ.

ಅವರಲ್ಲಿ ಅಗ್ರಗಣ್ಯರು ರಾಜೇಶ್‌ ಮೆಹ್ತಾ. ಒಂದು ಕಾಲದಲ್ಲಿ ಅಂಗಡಿಗಳಿಗೆ ಹೋಗಿ ಚಿನ್ನದ ಆಭರಣಗಳನ್ನು ಮಾರಾಟ ಮಾಡುತ್ತದ್ದವರು. ಆದರೆ ಈಗ ಭಾರತದ ಪ್ರಮುಖ ಚಿನ್ನ ರಫ್ತುದಾರರಾಗಿದ್ದಾರೆ. ರಾಜೇಶ್ ಮೆಹ್ತಾ ಕೇವಲ 10,000 ರೂ. ಸಾಲದಿಂದ ಚಿನ್ನದ ವ್ಯವಹಾರವನ್ನು ಪ್ರಾರಂಭಿಸಿದವರು. ಈಗ ಅವರ ವ್ಯಾಪಾರ ಸಾಮ್ರಾಜ್ಯವು ಈಗ 13,800 ಕೋಟಿ ರೂ.ಗೆ ಬೆಳೆದಿದೆ.

A person who took a loan of 10,000 and started a business now has 14,000 crores in hand

ರಾಜೇಶ್ ಮೆಹ್ತಾ ಅವರು ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಮಾಲೀಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಇದು ಚಿನ್ನದ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಅವುಗಳನ್ನು ರಫ್ತು ಮಾಡುತ್ತದೆ. ಅಲ್ಲದೆ ರಾಜೇಶ್ ಮೆಹ್ತಾ ಅವರ ಕಂಪನಿಯು ಚಿನ್ನದ ಆಭರಣಗಳು, ಪದಕಗಳು ಮತ್ತು ನಾಣ್ಯಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತದೆ.

ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ನ ಉತ್ಪಾದನಾ ಘಟಕವು ಪ್ರತಿ ವರ್ಷ 400 ಟನ್‌ಗಳಷ್ಟು ಚಿನ್ನದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಅತ್ಯುತ್ತಮವಾದ ಸರಳ ಮತ್ತು ಸ್ಟಡ್ಡ್ ಆಭರಣಗಳು, ಪದಕಗಳು ಮತ್ತು ನಾಣ್ಯಗಳು ಸೇರಿವೆ. ಬಾಲ್ಯದಲ್ಲಿ, ರಾಜೇಶ್ ಮೆಹ್ತಾ ಅವರು ವೈದ್ಯರಾಗಲು ಬಯಸಿದ್ದರು. ಆದರೆ ವಿಧಿ ಅವರಿಗೆ ಸಂಪೂರ್ಣವಾಗಿ ವಿಭಿನ್ನವಾದ ಹಣೆಬರಹವನ್ನು ಬರೆದಿತ್ತು. ರಾಜೇಶ್ ಮೆಹ್ತಾ ಮೂಲತಃ ಗುಜರಾತಿನವರಾದರೂ ಓದಿದ್ದು ಬೆಂಗಳೂರಿನಲ್ಲೇ.

ಅವರ ತಂದೆ ಜಸ್ವಂತರಿ ಮೆಹ್ತಾ ಆಭರಣ ವ್ಯಾಪಾರಕ್ಕಾಗಿ ಕರ್ನಾಟಕಕ್ಕೆ ಬಂದಿದ್ದರು. ತನ್ನ ಅಧ್ಯಯನದ ಸಮಯದಲ್ಲಿ ಕೇವಲ 16 ನೇ ವಯಸ್ಸಿನಲ್ಲಿ ರಾಜೇಶ್ ತನ್ನ ಕುಟುಂಬದ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ತನ್ನ ತಂದೆ ಮತ್ತು ಅವನ ಅಣ್ಣನೊಂದಿಗೆ ಕೆಲಸಕ್ಕೆ ನೆರವಾಗಲು ಪ್ರಾರಂಭಿಸಿದರು.

ಮುಂದೆ ರಾಜೇಶ್ ಮೆಹ್ತಾ ಅವರು ವ್ಯಾಪಾರದಲ್ಲಿ ಏನಾದರೂ ದೊಡ್ಡದನ್ನು ಮಾಡಬೇಕೆಂದು ಬಯಸಿದರು. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ತಮ್ಮ ಸಹೋದರನಿಂದ 2,000 ರೂ.ಗಳನ್ನು ಮತ್ತು ಬ್ಯಾಂಕಿನಿಂದ 8,000 ರೂ. ಸಾಲವಾಗಿ ಪಡೆದರು. 1982 ರಲ್ಲಿ ಮೆಹ್ತಾ ಅವರು ಸಾಲ ಪಡೆದ ಹಣದಿಂದ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು.

ಆರಂಭದಲ್ಲಿ ರಾಜೇಶ್ ಮೆಹ್ತಾ ಚೆನ್ನೈನಿಂದ ಆಭರಣ ಖರೀದಿಸಿ ಗುಜರಾತ್‌ನ ರಾಜ್ ಕೋಟ್ ನಲ್ಲಿ ಮಾರಾಟ ಮಾಡುತ್ತಿದ್ದರು. ಆರಂಭದಲ್ಲಿ ಅವರು ಈ ಕೆಲಸವನ್ನು ಸಣ್ಣ ಪ್ರಮಾಣದಲ್ಲಿ ಮಾಡಿದರು. ಆದರೆ ಅವರು ಈ ಕೆಲಸದಲ್ಲಿ ಬೆಳವಣಿಯಾಗಲು ಪ್ರಾರಂಭಿಸಿದಾಗ ಅವರು ಗುಜರಾತ್‌ನಲ್ಲಿ ಸಗಟು ವ್ಯಾಪಾರಿಗಳಿಗೆ ಆಭರಣಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ನಂತರ ರಾಜೇಶ್ ಮೆಹ್ತಾ ತಮ್ಮ ವ್ಯವಹಾರವನ್ನು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗೆ ವಿಸ್ತರಿಸಿದರು. ಅವರು 1989 ರಲ್ಲಿ ಚಿನ್ನಾಭರಣ ಉದ್ಯಮಕ್ಕೆ ಪ್ರವೇಶಿಸಿ ಬೆಂಗಳೂರಿನ ತಮ್ಮ ಸಣ್ಣ ಗ್ಯಾರೇಜ್‌ನಲ್ಲಿ ಚಿನ್ನಾಭರಣ ತಯಾರಿಕಾ ಘಟಕವನ್ನು ಪ್ರಾರಂಭಿಸಿದಾಗ ಅವರ ಜೀವನದಲ್ಲಿ ಮಹತ್ವದ ತಿರುವು ಬಂದಿತು. ಈ ಘಟಕದಲ್ಲಿ ಮೆಹ್ತಾ ಅವರು ಸರಕುಗಳನ್ನು ತಯಾರಿಸಿದರು. ಅವುಗಳನ್ನು ಬ್ರಿಟನ್, ದುಬೈ, ಓಮನ್, ಕುವೈತ್, ಅಮೇರಿಕಾ ಮತ್ತು ಯುರೋಪ್ಗೆ ರಫ್ತು ಮಾಡಿದರು. ಅಲ್ಲಿಂದ ನಡೆದಿದ್ದೇಲ್ಲವು ಇತಿಹಾಸ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+