
48 ಮಕ್ಕಳ ತಂದೆಗೆ ಮದುವೆಯಾಗಲು ಹುಡುಗಿ ಬೇಕಂತೆ!
ನ್ಯೂಯಾರ್ಕ್, ಆಗಸ್ಟ್ 16: ಮದುವೆಗೆ ಹೆಣ್ಣು ಬೇಕಾಗಿದೆ. 48 ಮಕ್ಕಳ ತಂದೆ ಆಗಿರುವ ವ್ಯಕ್ತಿಯೊಬ್ಬನಿಗೆ ಮದುವೆ ಆಗುವುದಕ್ಕೆ ಈಗ ಹೆಣ್ಣು ಬೇಕಂತೆ. ಸೋಷಿಯಲ್ ಮೀಡಿಯಾದಲ್ಲಿ ಈಗ ಇವನ ಮದುವೆ ಸುದ್ದಿಯೇ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿ ಬಿಟ್ಟಿದೆ.
ಇಡೀ ಊರಿನ ದೀಪ ಹಚ್ಚಿದವನ ಮನೆಯಲ್ಲೇ ಈಗ ಕತ್ತಲು ಆವರಿಸಿದೆಯಂತೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಲಾಸ್ ಏಂಜಲೀಸ್ ನಿವಾಸಿಯೊಬ್ಬರ ಕಥೆಯಿದು. ಹೆಸರಿಗೆ 48 ಮಕ್ಕಳ ತಂದೆ ಆಗಿರುವ ಕೈಲ್ ಗೋರ್ಡಿ ಇಂದಿಗೂ ಸಿಂಗಲ್. 31 ವರ್ಷದ ಗೋರ್ಡಿ ಈಗ ಮದುವೆಗಾಗಿ ಹೆಣ್ಣು ಹುಡುಕಾಟದಲ್ಲಿದ್ದಾರೆ.
ಕೊವಿಡ್-19 ರೋಗಿಗಳ ಗುದನಾಳದಲ್ಲಿ ರಕ್ತಸ್ರಾವಕ್ಕೆ ಸೈಟೊಮೆಗಾಲೊವೈರಸ್ ಕಾರಣ?
ಮದುವೆಯಾಗದೇ ಕೈಲ್ ಗೋರ್ಡಿ 48 ಮಕ್ಕಳ ತಂದೆ ಆಗಿದ್ದು ಹೇಗೆ?, ಈತನ ಉದ್ಯೋಗವನ್ನು ಕೇಳಿದಾಕ್ಷಣ ಹುಡುಗಿಯರು ಇವನನ್ನು Reject ಮಾಡುವುದು ಏಕೆ?, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಆಗುತ್ತಿರುವ ಕೈಲ್ ಗೋರ್ಡಿಯ ಅಸಲಿ ಕಹಾನಿ ಏನು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ಕೈಲ್ ಗೋರ್ಡಿ ಉದ್ಯೋಗವೇ ವೀರ್ಯ ದಾನ
ಯುನೈಟೆಡ್ ಸ್ಟೇಟ್ಸ್‌ನ ಲಾಸ್ ಏಂಜೆಲೀಸ್ ನಿವಾಸಿ ಆಗಿರುವ 31 ವರ್ಷದ ಕೈಲ್ ಗೋರ್ಡಿ ಉದ್ಯೋಗದಲ್ಲಿ ವೀರ್ಯ ದಾನಿ ಆಗಿದ್ದಾರೆ. ಇದುವರೆಗೂ 48 ಮಹಿಳೆಯರಿಗೆ ವೀರ್ಯ ದಾನ ಮಾಡಿರುವ ಈತ, 48 ಮಕ್ಕಳಿಗೆ ಪರೋಕ್ಷವಾಗಿ ತಂದೆಯಾಗಿದ್ದಾರೆ. ಇನ್ನೂ 10 ಮಹಿಳೆಯರು ಈತನಿಂದಲೇ ತಾಯ್ತನದ ಭಾಗ್ಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಈತನ ಇದೇ ಉದ್ಯೋಗ ಇಂದು ಕೈಲ್ ಗೋರ್ಡಿ ವೈಯಕ್ತಿಕ ಬದುಕಿಗೆ ಶಾಪವಾಗಿ ಬಿಟ್ಟಿದೆ.

ಹುಡುಗಿಯರಿಂದ ಈತ Reject ಆಗಿದ್ದು ಏಕೆ?
ಕೈಲ್ ಗೋರ್ಡಿ ವೀರ್ಯ ದಾನಿಯಾಗಿ ಉದ್ಯೋಗ ಮಾಡುತ್ತಿರುವುದೇ ಮದುವೆ ಆಗದಿರುವುದಕ್ಕೆ ಮುಖ್ಯ ಕಾರಣವಾಗಿದೆ. ಅದಕ್ಕಾಗಿ ಯುವತಿಯರು ಈತನೊಂದಿಗೆ ಡೇಟಿಂಗ್ ಹಾಗೂ ಮದುವೆಗೆ ರೆಡ್ ಸಿಗ್ನಲ್ ಪಾಸ್ ಮಾಡುತ್ತಿದ್ದಾರೆ. ವೀರ್ಯ ದಾನ ಮಾಡುವ ಈತನನ್ನು ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕೈಲ್ ಗೋರ್ಡಿ ತಿಳಿಸಿದ್ದಾರೆ.
"ಕೈಲ್ ಗೋರ್ಡಿ ನೊಂದ ಮಹಿಳೆಯರಿಗೆ ಸಹಾಯವಾಗುವಂತಹ ಕಾರ್ಯವನ್ನೇ ಮಾಡುತ್ತಿರುವುದನ್ನು ಹುಡುಗಿಯರು ಒಪ್ಪಿಕೊಳ್ಳುತ್ತಾರೆ. ಆದರೆ ಬೇರೊಬ್ಬ ಮಹಿಳೆಯೊಂದಿಗಿನ ಸಂಪರ್ಕದಿಂದ ತಂದೆ ಆಗಿರುವ ವ್ಯಕ್ತಿಯ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಹುಡುಗಿಯರ ಮಾತು," ಎಂದು ಗೋರ್ಡಿ ಹೇಳಿದ್ದಾರೆ.

ಕೈಲ್ ಗೋರ್ಡಿ ಮೂಲಕ ಜನರಿಗೆ ಹೇಗೆ ಸಹಾಯ?
ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಗರ್ಭಿಣಿಯಾಗಲು ಸಾಧ್ಯವಾಗದ ಮಹಿಳೆಯರಿಗೆ ಕೈಲ್ ಗೋರ್ಡಿ ಸಹಾಯ ಮಾಡುತ್ತಾರೆ. ಮಗುವಿಗೆ ಹಂಬಲಿಸುವವರಿಗೆ ಇವರು ತಮ್ಮ ವೀರ್ಯವನ್ನು ದಾನ ಮಾಡುತ್ತಾರೆ. ಈ ಸೇವೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕುತೂಹಲಕಾರಿ ಎಂದರೆ ಕೈಲ್ ಗೋರ್ಡಿಯು ವೀರ್ಯ ಬ್ಯಾಂಕ್‌ಗೆ ಹೋಗುವುದಿಲ್ಲ. ಅದರ ಬದಲಿಗೆ ತನ್ನ ವೀರ್ಯದ ಅಗತ್ಯವಿರುವ ಮಹಿಳೆಯರಿಗೆ ನೇರವಾಗಿ ನೀಡುತ್ತಾರೆ.
ದಾನಿಗಳು ಯಾರು ಎಂಬುದು ಗೊತ್ತೇ ಆಗುವುದಿಲ್ಲ ಎಂಬ ಕಾರಣಕ್ಕೆ ಕೆಲವು ಮಹಿಳೆಯರು ವೀರ್ಯ ಬ್ಯಾಂಕ್ ಅನ್ನು ಬಳಸಲು ಇಚ್ಛಿಸುವುದಿಲ್ಲ. ಅಲ್ಲದೇ ಪೋಷಕರಿಗೆ ಆ ಮಗುವಿನ ತಂದೆ ಯಾರು ಎಂಬುದರ ಹಿನ್ನೆಲೆಯೇ ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ಪೋಷಕರು ಈ ವೀರ್ಯ ಬ್ಯಾಂಕ್ ಅನ್ನು ಬಳಸುವುದಿಲ್ಲ ಎಂದು ಕೈಲ್ ಗೋರ್ಡಿ ಹೇಳಿದ್ದಾರೆ.

48 ಮಹಿಳೆಯರ ಮಡಿಲು ತುಂಬಿದ ಕೈಲ್ ಗೋರ್ಡಿ
ಕಳೆದ 8 ವರ್ಷಗಳಿಂದ ಕೈಲ್ ಗೋರ್ಡಿ ಈ ವೀರ್ಯ ದಾನದ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಇದುವರೆಗೂ 48ಕ್ಕೂ ಹೆಚ್ಚು ಮಹಿಳೆಯರಿಗೆ ವೀರ್ಯ ದಾನವನ್ನು ಮಾಡಿದ್ದಾರೆ. ಆದರೆ ಈ ಹಿಂದಿನ 10 ವರ್ಷಗಳಲ್ಲಿ ತಾವು ಯಾವುದೇ ಯುವತಿಯರೊಂದಿಗೆ ಡೇಟಿಂಗ್ ಮಾಡಿಲ್ಲ. ನನ್ನ ಉದ್ಯೋಗದ ಬಗ್ಗೆ ತಿಳಿಸುತ್ತಿದ್ದಂತೆ ಯಾವುದೇ ಯುವತಿಯನ್ನು ನನ್ನೊಂದಿಗೆ ಡೇಟಿಂಗ್ ಮಾಡುವುದಕ್ಕೆ ಒಪ್ಪುವುದಿಲ್ಲ ಎಂದು ಕೈಲ್ ಗೋರ್ಡಿ ಹೇಳಿದ್ದಾರೆ.