ದೈತ್ಯ ಕೊಂಬಿನ ಗೂಳಿನೊಂದಿಗೆ ಕಾರನ್ನು ಓಡಿಸಿದ ಭೂಪ: ಕಣ್ ರೆಪ್ಪೆ ಬಡಿಯದಂತೆ ವೀಡಿಯೋ ವೀಕ್ಷಿಸಿದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈ ಒಂದು ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ ಬಿಡಿ.
ಸಾಮಾನ್ಯವಾಗಿ ಗೂಳಿ ಮೇಲೆ ಮನುಷ್ಯ ಸವಾರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ತನ್ನ ಕಾರಿನೊಂದಿಗೆ ದೈತ್ಯ ಕೊಂಬಿನ ಗೂಳಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಣ್ ರೆಪ್ಪೆ ಬಡಿಯದಂತೆ ವಿಡಿಯೋ ವೀಕ್ಷಿಸಿದ್ದಾರೆ. ಮಾತ್ರವಲ್ಲದೆ ವೇಗವಾಗಿ ವಿಡಿಯೋ ವೈರಲ್ ಆಗಿದೆ.

ಹೇಳಿಕೇಳಿ ಗೂಳಿ ಅಂದರೆ ಜನ ಬೆಚ್ಚಿ ಬೀಳುತ್ತಾರೆ. ಯಾಕೆಂದರೆ ಅದು ಕೋಪಗೊಂಡರೆ ಮುಗಿತು ಕತೆ. ಅದರ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಹೆಣಗಾಡಬೇಕು. ಹೀಗಿರುವಾಗ ಅದನ್ನು ವ್ಯಕ್ತಿ ರಾಜಾರೋಷವಾಗಿ ಕಾರಿನಲ್ಲಿ ಕೂರಿಸಿಕೊಂಡು ಪ್ರಯಾಣ ಮಾಡಿದ್ದಾನೆ.
ವೀಡಿಯೋದಲ್ಲಿ ವ್ಯಕ್ತಿ ತನ್ನ ಜೊತೆಗಾರ ಗೂಳಿಯೊಂದಿಗೆ ಸವಾರಿ ಮಾಡಲು ಅನುಕೂಲವಾಗುವಂತೆ ತನ್ನ ವಾಹನವನ್ನು ಮಾರ್ಪಡಿಸಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಕ್ಲಿಪ್ ಅನ್ನು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಹಂಚಿಕೊಳ್ಳಲಾಗಿದೆ.
#Nebraska police pull over man with a #bull riding in the passenger’s seat
— Genesis Watchman Report (@ReportWatchman) August 31, 2023
🥴🤣#animals #nature #crazypeople pic.twitter.com/oe3hdlujbI
ಟ್ರಾಫಿಕ್‌ನಲ್ಲಿ ಶಾಂತವಾಗಿ ಚಾಲನೆ ಮಾಡುತ್ತಿರುವ ವ್ಯಕ್ತಿಯನ್ನು ವೀಡಿಯೊ ತೋರಿಸುತ್ತದೆ. ಮುಂಭಾಗದ ಸೀಟಿನಲ್ಲಿ ದೊಡ್ಡ ಗೂಳಿ ಇದೆ. ಬುಲ್‌ನ ತಲೆಯು ಕಾರಿನ ಮುಭಾಂಗದ ಕಿಟಕಿಯಿಂದ ಹೊರಗೆ ಕಾಣಿಸುತ್ತಿದೆ. ದಾರಿಯಲ್ಲಿ ಹೋಗುತ್ತಿರುವ ಜನರು ತಮ್ಮ ಫೋನ್‌ಗಳಲ್ಲಿ ಈ ವೀಡಿಯೊವನ್ನು ಸೆರೆಹಿಡಿಯುತ್ತಿರುವುದನ್ನು ಕಾಣಬಹುದು. ಈ ವೀಡಿಯೊ ಕೆಲವರಿಗೆ ವಿನೋದ ಮತ್ತು ಆಶ್ಚರ್ಯವನ್ನುಂಟು ಮಾಡಿದೆ.
ವ್ಯಕ್ತಿ ತನ್ನ ದೈತ್ಯ ಬುಲ್ ನೊಂದಿಗೆ ಕಾರಿನಲ್ಲಿ ಸವಾರಿ ಮಾಡಲು ಬೇಕಾದ ಮಾರ್ಪಾಡನ್ನು ಮಾಡಿದ್ದಾನೆ. ಕಾರಿನ ಒಂದು ಭಾಗವನ್ನು ಗೂಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ಭಾಗದ ಅಂದರೆ ಚಾಲನಾ ಸೀಟ್‌ನಲ್ಲಿ ವ್ಯಕ್ತಿ ಕುಳಿತುಕೊಂಡು ಕಾರ್ ಚಲಾಯಿಸುತ್ತಿದ್ದಾನೆ. ದೂರದಿಂದ ಈ ವೀಡಿಯೋ ಕಾರನ್ನು ಗೂಳಿಯ ತಲೆಯಿಂದ ನಿರ್ಮಿಸಲಾಗಿದೆ ಎಂದು ತೋರುತ್ತದೆ. ಮತ್ತೊಂದು ದೃಷ್ಟಿಯಿಂದ ಗೂಳಿಯೇ ಕಾರಿನ ಮೇಲೆ ಕುಳಿತಂತೆ ಕಾಣಿಸುತ್ತದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ನಾರ್ಫೋಕ್ ಪೋಲೀಸ್ ವಿಭಾಗಕ್ಕೆ ಬುಧವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹೆದ್ದಾರಿ 275 ರಲ್ಲಿ ಒಬ್ಬ ವ್ಯಕ್ತಿ ಕಾರಿನಲ್ಲಿ ತನ್ನ ಪಕ್ಕದಲ್ಲಿ ಗೂಳಿ ಕುಳಿತಿರುವ ಬಗ್ಗೆ ಕರೆ ಬಂದಿದೆ. ಪೊಲೀಸರು ಕಾರಿನ ಚಾಲಕನನ್ನು ಗುರುತಿಸಿ ಗೂಳಿಯೊಂದಿಗೆ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ವೀಡಿಯೊ ವೈರಲ್
ಇತ್ತೀಚೆಗೆ ಮತ್ತೊಂದು ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ 5 ಮೀಟರ್ ದೈತ್ಯ ಹಾವು ಆಸ್ಟ್ರೇಲಿಯನ್ ಕುಟುಂಬದ ಛಾವಣಿಯ ಮೇಲೆ ಮತ್ತು ಮರದೊಳಗೆ ತೆವಳುತ್ತಿರುವುದನ್ನು ನೋಡಲಾಗಿದೆ. ದೈತ್ಯಾಕಾರದ ಅಧಿಕ ಉದ್ದದ ಹೆಬ್ಬಾವು ಮನೆಯ ಛಾವಣಿಯಿಂದ ಮರಕ್ಕೆ ಸಾಗುತ್ತಿರುವುದನ್ನು ಕಾಣಬಹುದು. ಇದನ್ನು ಕಂಡು ದಿಗ್ಭ್ರಮೆಗೊಂಡ ಕುಟುಂಬ ಗಾಬರಿಯಲ್ಲೇ ವಿಡಿಯೋ ಮಾಡಿದೆ.
Normal things in Australia pic.twitter.com/KW3oN8zIwO
— Levandov (@Levandov_2) August 27, 2023
ವೀಡಿಯೋವನ್ನು ಕ್ವೀನ್ಸ್‌ಲ್ಯಾಂಡ್‌ನಿಂದ ಚಿತ್ರೀಕರಿಸಲಾಗಿದೆ. ಇದರಲ್ಲಿ ಹೆಬ್ಬಾವು ಮರದ ತುದಿಗಳ ಮೂಲಕ ಚುರುಕಾಗಿ ಮತ್ತೊಂದು ಮರಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ಊಟಕ್ಕೆ ಕುಳಿತಿದ್ದ ಮನೆಯವರು ಮನೆಯೊಂದರ ಮೇಲಿಂದ ಪಕ್ಕದ ಮರಕ್ಕೆ ಹಾವು ಚಲಿಸುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ವಿಡಿಯೋ ಹಿನ್ನೆಲೆಯಲ್ಲಿ "ಅದು ತುಂಬಾ ಸುಂದರವಾಗಿದೆ" ಎಂದು ಹೇಳುವುದನ್ನು ಕಾಣಬಹುದು. ಈ ಸಮಯದಲ್ಲಿ ಹೆಬ್ಬಾವು ನೋಡುಗರ ಕಡೆಗೆ ತನ್ನ ತಲೆಯನ್ನು ತಿರುಗಿಸುತ್ತದೆ. ಆ ವೇಳೆ ಮಗು ಅಳುವುದು ಸಹ ವಿಡಿಯೋದಲ್ಲಿ ಕೇಳಿಸುತ್ತದೆ.












Click it and Unblock the Notifications