• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನ್ ಭೀಕರ ಸಂಘರ್ಷದ ನಡುವೆ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ..!

|
Google Oneindia Kannada News

ತಾಲಿಬಾನ್ ಹಾಗೂ ಅಮೆರಿಕ ಸಂಘರ್ಷದಲ್ಲಿ ಬರೀ ಜೀವ ಕಳೆದುಕೊಳ್ಳುತ್ತಿರುವವರ ಬಗ್ಗೆ ಮಾತ್ರ ವರದಿಗಳು ಹೊರ ಬೀಳುತ್ತಿದ್ದವು. ಆದ್ರೆ ಇದೀಗ ಸಿಹಿ ಸುದ್ದಿಯೊಂದನ್ನು ಅಮೆರಿಕ ಸೇನಾ ಪಡೆ ನೀಡಿದ್ದು, ಅಫ್ಘಾನಿಸ್ತಾನದ ಮಹಿಳೆಯೊಬ್ಬರು ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಂದಹಾಗೆ ಕಾಬೂಲ್ ಏರ್ಪೋರ್ಟ್‌ ಮೂಲಕ ಅಫ್ಘಾನ್ ಜನರನ್ನ ಅಮೆರಿಕ ಸ್ಥಳಾಂತರ ಮಾಡುತ್ತಿದೆ. ಈ ರೀತಿ ಅಫ್ಘಾನ್ ಜನರನ್ನ ಸ್ಥಳಾಂತರಿಸುವ ಸಂದರ್ಭದಲ್ಲೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಕಾಬೂಲ್‌ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್‌ನ ವಾಯುನೆಲೆಗೆ ಹಾರಿದ 'ಸಿ-17' ವಾಯುಪಡೆ ವಿಮಾನದಲ್ಲಿ ಅಫ್ಘಾನ್ ಮೂಲದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಸಲುವಾಗಿ ಅಮೆರಿಕ ರ್‍ಯಾಮ್‌ಸ್ಟೈನ್ ವಾಯುನೆಲೆಯನ್ನು ಬಳಸಿಕೊಳ್ಳುತ್ತಿದೆ. ಇದೇ ರೀತಿ ಶನಿವಾರ ಏರ್‌ಲಿಫ್ಟ್ ನಡೆಸುವ ಸಂದರ್ಭ ಅಧಿಕಾರಿಗಳು ಸ್ವಲ್ಪ ಗಲಿಬಿಲಿಗೊಳ್ಳುವ ಘಟನೆ ನಡೆದಿತ್ತು. ಶನಿವಾರ ವಿಮಾನ ಹಾರಾಡುವಾಗ ಹೆರಿಗೆ ನೋವು ಕಾಣಿಸಿಕೊಂಡಿದೆ.

ಆದರೆ ವಿಮಾನದಲ್ಲಿ ವಾಯು ಒತ್ತಡವನ್ನ ಹೆಚ್ಚಿಸುವ ಉದ್ದೇಶದಿಂದ, ವಿಮಾನ ಹಾರಾಟದ ಎತ್ತರವನ್ನೂ ಹೆಚ್ಚಿಸಲು ಕಮಾಂಡರ್ ನಿರ್ಧರಿಸಿದ್ದರು. ಹೀಗೆ ಮಾಡುವ ಮೂಲಕ ದೇಹಾರೋಗ್ಯದಲ್ಲಿ ಸ್ಥಿರತೆ ಕಾಪಾಡಿ ಜೀವ ಉಳಿಸಬಹುದು. ಹೀಗೆ ತಮಗೆ ತಿಳಿದಿರುವ ಎಲ್ಲಾ ಉಪಾಯಗಳನ್ನು ಮಾಡಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಹಿಳೆಯನ್ನ ರ್‍ಯಾಮ್‌ಸ್ಟೈನ್‌ ವಾಯುನೆಲೆಗೆ ಕರೆತರಲಾಗಿತ್ತು.

ವಾಯುನೆಲೆ ವಿಮಾನದಲ್ಲೇ ಹೆರಿಗೆ

ವಾಯುನೆಲೆ ವಿಮಾನದಲ್ಲೇ ಹೆರಿಗೆ

ಮತ್ತೊಂದು ಕಡೆ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಮಹಿಳೆಯನ್ನು ಕರೆತಂದ ತಕ್ಷಣ ಅಮೆರಿಕದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ವಿಮಾನದಲ್ಲೇ ಮಹಿಳೆಗೆ ಚಿಕಿತ್ಸೆ ಆರಂಭಿಸಿ, ಹೆರಿಗೆ ಮಾಡಿಸಿದ್ದಾರೆ. ಆ ಮಹಿಳೆಗೆ ಹೆಣ್ಣು ಮಗು ಜನಿಸಿದೆ ತಾಯಿ ಮತ್ತು ಮಗುವನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಆರೋಗ್ಯವಾಗಿದ್ದಾರೆ ಅಂತಾ ಅಮೆರಿಕದ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯ ಉದ್ದೇಶದಿಂದ ಮಹಿಳೆ ಹೆಸರನ್ನ ಬಹಿರಂಗಪಡಿಸಿಲ್ಲ. ಆದ್ರೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಮೆರಿಕ ವಾಯುಪಡೆ ಪೋಸ್ಟ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.

Image: @AirMobilityCmd

ವಿಮಾನ ಏರಲು ಜನರ ಫೈಟಿಂಗ್

ವಿಮಾನ ಏರಲು ಜನರ ಫೈಟಿಂಗ್

ಒಂದು ಕಡೆ ಜನರು ಹಾಗೂ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಅಮೆರಿಕ ಅವಸರ ಮಾಡುತ್ತಿದ್ದರೆ, ಇತ್ತ ವಿಮಾನ ಹತ್ತಲು ಜನರು ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಸಾವಿರ ಜನ ದಿಢೀರ್ ವಿಮಾನ ನಿಲ್ದಾಣಕ್ಕೆ ನುಗ್ಗಿ ಬಂದಿದ್ದು, ಕುರಿಗಳಂತೆ ತುಂಬಿ ಜನರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ತಾಲಿಬಾನ್ ದಾಳಿಯ ಭಯದಲ್ಲಿ ಜನ ಕುಟುಂಬ ಸಮೇತ ಗಂಟುಮೂಟೆ ಕಟ್ಟಿ ತಾವು ಹುಟ್ಟಿ ಬೆಳೆದ ಜಾಗ ಖಾಲಿ ಮಾಡುತ್ತಿದ್ದಾರೆ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ.

ಅಮೆರಿಕ ವಶದಲ್ಲಿ ಏರ್ಪೋರ್ಟ್

ಅಮೆರಿಕ ವಶದಲ್ಲಿ ಏರ್ಪೋರ್ಟ್

ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್ ತನ್ನ ವಶಕ್ಕೆ ಪಡೆದಾಗಿದೆ. ಆದರೆ ಅಫ್ಘಾನ್‌ನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಈಗಲೂ ಅಮೆರಿಕದ ವಶದಲ್ಲಿದ್ದು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಜನರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಸುತ್ತಮುತ್ತ ಗುಂಡಿನ ಮೊರೆತ ಕೇಳಿಬಂದಿದ್ದು ಅಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಜಾಗ ಖಾಲಿ ಮಾಡಲು ಅಮೆರಿಕ ಸೇನೆ ಪರದಾಡುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಎಲ್ಲವೂ ಅಮೆರಿಕದ ಎಡವಟ್ಟು..!

ಎಲ್ಲವೂ ಅಮೆರಿಕದ ಎಡವಟ್ಟು..!

ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.

Image: @AirMobilityCmd

English summary
A Afghan women gave birth to baby girl while US forces airlifting her from the Kabul airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X