9 ಲಕ್ಷ ನೌಕರರಿಗೆ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ

Recommended Video

      ಕೇಂದ್ರ ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ ನೀಡಿದ ನರೇಂದ್ರ ಮೋದಿ ಸರ್ಕಾರ

      ನವದೆಹಲಿ, ಏಪ್ರಿಲ್ 29: 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ಸಿಕ್ಕ ಬೆನ್ನಲ್ಲೇ 9 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಿತವಾದ ಸುದ್ದಿ ಇಂದು ಬಂದಿದೆ.

      ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ ಸರ್ಕಾರಿ ಹುದ್ದೆ ಸೇರಿದ ಬಳಿಕ ಸ್ನಾತಕೋತ್ತರ ಪದವಿ ಪಡೆದವರಿಗೆ 5 ಪಟ್ಟು ಸಂಬಳ ಹೆಚ್ಚಾಗಲಿರುವ ಸುದ್ದಿ ಬಂದಿತ್ತು. ಈಗ 9 ಲಕ್ಷ ಉದ್ಯೋಗಿಗಳ ಮೂಲ ವೇತನ ಹೆಚ್ಚಳ ಮಾಡಿ ಆದೇಶ ನೀಡಲಾಗಿದೆ. ಇದರ ಜೊತೆಗೆ ಬಾಕಿ ಮೊತ್ತ ಕೂಡಾ ಕೈ ಸೇರಲಿದೆ.

      7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಕೋರಲಾಗಿದೆ.ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇತ್ತು.

      ಆದರೆ, ಈ ಬಗ್ಗೆ ಯಾವುದೇ ಘೋಷಣೆಯಾಗಲಿಲ್ಲ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೊಂಡು ಯಾವುದೇ ಘೋಷಣೆಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ಮೂಲ ವೇತನದಲ್ಲಿ ಎಷ್ಟು ಪ್ರಮಾಣ ಏರಿಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವೇತನ ಹೆಚ್ಚಳ ಸೌಲಭ್ಯ ಪಡೆಯಲು ಯಾರು ಯಾರು ಅರ್ಹರಾಗಲಿದ್ದಾರೆ ಎಂಬುದು ತಿಳಿದು ಬಂದಿದೆ... ಈ ಬಗ್ಗೆ ವಿವರ ಮುಂದಿದೆ...

      ಸೌಲಭ್ಯ ಪಡೆಯಲು ಯಾರು ಯಾರು ಅರ್ಹರು

      ಸೌಲಭ್ಯ ಪಡೆಯಲು ಯಾರು ಯಾರು ಅರ್ಹರು

      ಮೂಲ ವೇತನ ಏರಿಕೆ ಅಧಿಕೃತ ಪ್ರಕಟಣೆ ಹೊರಡಿಸಿದ ಬಳಿಕ ಈ ಸೌಲಭ್ಯವು ಗಡಿ ಭದ್ರತಾ ಪಡೆ(ಬಿಎಸ್ ಎಫ್), ಕೇಂದ್ರ ಕೈಗಾರಿಕಾ ಮೀಸಲು ಪಡೆ(ಸಿಐಎಸ್ ಎಫ್), ಇಂಡೋ ಟಿಬೇಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್ ಬಿ), ಭಾರತೀಯ ರೈಲ್ವೆ ಉದ್ಯೋಗಿಗಳು, ಐಟಿಎಸ್ ಅಲ್ಲದೆ, ಬಿಎಸ್ ಎನ್ ಎಲ್ ಡೆಪ್ಯುಟೇಷನ್ ಮೇಲೆ ಕಾರ್ಯ ನಿರ್ವಹಿಸುವವರಿಗೂ ಸಿಗಲಿದೆ.

      ಕನಿಷ್ಠ ವೇತನ ಏರಿಕೆ ನಿರೀಕ್ಷೆಯಲ್ಲಿ ನೌಕರ ವರ್ಗ

      ಕನಿಷ್ಠ ವೇತನ ಏರಿಕೆ ನಿರೀಕ್ಷೆಯಲ್ಲಿ ನೌಕರ ವರ್ಗ

      ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ.

      ಬಜೆಟ್ ನಲ್ಲಿ ಘೋಷಣೆ ನಿರೀಕ್ಷೆ ಸುಳ್ಳಾಯಿತು

      ಬಜೆಟ್ ನಲ್ಲಿ ಘೋಷಣೆ ನಿರೀಕ್ಷೆ ಸುಳ್ಳಾಯಿತು

      ಕೆಳ ಹಂತದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕನಿಷ್ಟ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. 7 ನೇ ವೇತನ ಆಯೋಗ ಮಾಡಿರುವ ಶಿಫಾರಸ್ಸು ಮೀರಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರು. ಸಂಬಳದಾರ ಮಧ್ಯಮ ವರ್ಗದವರಿಗೆ ಬಜೆಟ್ 2018ರಲ್ಲಿ ಅರುಣ್ ಜೇಟ್ಲಿ ಏನು ಕೊಟ್ಟಿಲ್ಲ ಎಂಬ ದೊಡ್ಡ ಆರೋಪ ಕೇಳಿ ಬಂದಿತ್ತು. ಇದನ್ನು ಸರಿದೂಗಿಸಲು ಮೋದಿ ಸರ್ಕಾರವು ಈ ಬಾರಿ ಸಂಬಳದಾರರಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರಿ ನೌಕರರರ ವೇತನ ಏರಿಕೆ ಬಗ್ಗೆ ಯಾವುದೇ ಹೇಳಿಕೆ ಇಲ್ಲ.

      ನಿವೃತ್ತಿ ವಯಸ್ಸು ಏರಿಕೆ ಬೇಡಿಕೆಯೂ ಇದೆ

      ನಿವೃತ್ತಿ ವಯಸ್ಸು ಏರಿಕೆ ಬೇಡಿಕೆಯೂ ಇದೆ

      2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಆದರೆ, ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಗೊಂದಲ ಮುಂದುವರೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+