14 ಜನರಿಗೆ ಮೂರೇ ಬೈಕ್: ಯುಪಿಯಲ್ಲಿ ತೊಂದರೆಗೆ ಸಿಲುಕಿದ ಸ್ಟಂಟ್

ಬರೇಲಿ ಜನವರಿ 11: ಉತ್ತರ ಪ್ರದೇಶದ ಬರೇಲಿಯಲ್ಲಿ ಹಲವಾರು ವ್ಯಕ್ತಿಗಳು ಬೈಕ್‌ಗಳಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ 14 ಜನರು ಮೂರು ಬೈಕ್‌ಗಳಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಒಂದು ಬೈಕ್‌ನಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರು ಆರು ಜನ ಕುಳಿತಿದ್ದಾರೆ. ಇನ್ನೆರೆಡು ಬೈಕ್ ಅಲ್ಲಿ ತಲಾ ನಾಲ್ವರು ಕುಳಿತಿರುವುದು ಕಂಡು ಬಂದಿದೆ.

ಈ ಘಟನೆ ಬರೇಲಿಯ ಡಿಯೋರಾನಿಯಾ ಪಿಎಸ್ ಪ್ರದೇಶದಲ್ಲಿ ವರದಿಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. "ಮಾಹಿತಿ ಬಂದ ನಂತರ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಬರೇಲಿಯ ಹಿರಿಯ ಪೊಲೀಸ್ ಅಧಿಕಾರಿ ಅಖಿಲೇಶ್ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಬೆಚ್ಚಿ ಬೀಳಿಸಿದ ಬೈಕ್ ಸ್ಟಂಟ್ ವಿಡಿಯೋ

ಯುವಕನೊಬ್ಬ ಬೈಕ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಹಂಚಿಕೋಮಡ ದೆಹಲಿ ಪೊಲೀಸರು ಜನರು ಸುರಕ್ಷಿತವಾಗಿರಲು ಮತ್ತು ಹೆಚ್ಚು ವೇಗವಾಗಿ ವಾಹನ ಚಲಾಯಿಸದಂತೆ ಮನವಿ ಮಾಡಿದ್ದರು.

3 bikes for 14 people: Stunt got into trouble in UP

ಹಂಚಿಕೊಂಡ 36 ಸೆಕೆಂಡುಗಳ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಲಾಗಿಲ್ಲ. ಆದರೆ ಬೈಕ್ ಸವಾರನ ಸಾಹಸವನ್ನು ಅವನ ಹಿಂದೆ ಬೈಕ್ ಸವಾರ ರೆಕಾರ್ಡ್ ಮಾಡುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಕಡಿಮೆ ಜನಸಂದಣಿ ಇರುವ ರಸ್ತೆಯಲ್ಲಿ ಒಬ್ಬ ವ್ಯಕ್ತಿ ತನ್ನ ಬೈಕ್ ಅನ್ನು ವೇಗದಲ್ಲಿ ಓಡಿಸುತ್ತಿರುವುದನ್ನು ಕಾಣಬಹುದು. ತಾಳ್ಮೆಯಿಲ್ಲದ ಸವಾರನು ತನ್ನ ಮುಂದೆ ಇರುವ ವಾಹನಗಳ ನಡುವೆ ವೇಗವಾಗಿ ನುಗ್ಗುತ್ತಾನೆ.

3 bikes for 14 people: Stunt got into trouble in UP

ವಿಡಿಯೋ ನಂತರ ಸವಾರನು ತನ್ನ ಸಮತೋಲನವನ್ನು ಕಳೆದುಕೊಂಡು ರಸ್ತೆಯಲ್ಲಿ ಜಾರಿಬೀಳುವುದನ್ನು ಕಾಣಬಹುದು. ಅಪಾಯಕಾರಿ ಸಾಹಸದ ನಂತರ, ಅವನು ನೆಲದ ಮೇಲೆ ಬೀಳುವ ಮೊದಲು ಅವನ ಬೈಕು ಅಲುಗಾಡುತ್ತಿರುವುದನ್ನು ಕಾಣಬಹುದು. ಅದೃಷ್ಟವಶಾತ್, ವ್ಯಕ್ತಿ ಹೆಲ್ಮೆಟ್ ಧರಿಸಿದ್ದಾನೆ. ಅವನ ತಲೆಯು ಮತ್ತೊಂದು ವಾಹನದ ಸೈಲೆನ್ಸರ್‌ಗೆ ಡಿಕ್ಕಿ ಹೊಡೆದು ಆತ ಸ್ವಲ್ಪದರಲ್ಲಿ ಪಾರಾಗಿದ್ದಾನೆ. ವ್ಯಕ್ತಿ ಬಿದ್ದ ಬಳಿಕ ಬೈಕು ಕೆಲವು ಮೀಟರ್‌ಗಳಷ್ಟು ದೂರ ಬಂದು ನಿಲ್ಲುತ್ತದೆ. ಈ ಭಯಾನಕ ವಿಡಿಯೋ ಹಂಚಿಕೊಂಡ ದೆಲಿ ಸಂಚಾರ ಪೊಲೀಸರು ಎಚ್ಚರಿಕೆಯಿಂದ ವಾಹನ ಸಂಚಾರ ಮಾಡುವಂತೆ ಮನವಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+