18ನೇ ಶತಮಾನದ ದೇವನಹಳ್ಳಿಯ ಐತಿಹಾಸಿಕ ಕೋಟೆಗಿಲ್ಲ ಕಾಯಕಲ್ಪ: ಪುರಾತತ್ವ ಇಲಾಖೆ ನಿರ್ಲಕ್ಷ್ಯ!

ದೇವನಹಳ್ಳಿ, ಮಾರ್ಚ್ 8: ಇತಿಹಾಸ ಪ್ರಸಿದ್ಧ ವಾಸ್ತುಶಿಲ್ಪ, ಕೋಟೆ ಕೊತ್ತಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಯ್ದಿರಿಸುವಂತಹ ಕೆಲಸ ಭಾರತ ಸರಕಾರದಿಂದ ಸಾಗುತ್ತಿದೆ. ಅಂತೆಯೇ ರಾಜ್ಯದ ಹಲವು ಅಪರೂಪದ ವಾಸ್ತುಶಿಲ್ಪ ಹಾಗೂ ಕೆತ್ತನೆಗಳನ್ನು ಸರಕಾರ ಉಳಿಸಿ ಸಂರಕ್ಷಿಸುತ್ತಿದೆ. ಮಾತ್ರವಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟೆಯನ್ನು ಸಂರಕ್ಷಿಸಲು ಮುಂದಾಗಿದ್ದು, ಕೋಟೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿ ನಿಯಮ 1985ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಿಲಾಗಿದೆ. ಆದರೆ ಶತಮಾನಗಳ ಇತಿಹಾಸವುಳ್ಳ ದೇವನಹಳ್ಳಿ ಕೋಟೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಒಂದೆರಡು ಕಡೆ ಕೌಂಪೌಂಡ್ ನಿರ್ಮಿಸಿ ಮೂರ್ನಾಲ್ಕು ನಾಮಫಲಕ ಹಾಗೂ ಮಾಹಿತಿ ಫಲಕಗಳನ್ನು ಹಾಕಿ ತನ್ನ ಕೈತೊಳೆದುಕೊಂಡಂತೆ ಕಾಣುತ್ತಿದೆ.

 ಕಾವಲುಗಾರರ ಕಣ್ತಪ್ಪಿಸಿ ಕೆಲವು ಅನೈತಿಕ ಚಟುವಟಿಕೆಗಳು

ಕಾವಲುಗಾರರ ಕಣ್ತಪ್ಪಿಸಿ ಕೆಲವು ಅನೈತಿಕ ಚಟುವಟಿಕೆಗಳು

ಕೋಟೆಯು ಮೇಲ್ಭಾಗದ ಕೆಲವೆಡೆ ಶಿಥಿಲಾವಸ್ಥೆಗೆ ತಲುಪಿದ್ದರೂ ಪುರಾತತ್ವ ಇಲಾಖೆ ಕ್ರಮ ಕೈಗೊಂಡಿಲ್ಲ. ಇನ್ನು ಕೋಟೆ ಕಾಯಲು ನೇಮಿಸಿರುವ ಕಾವಲುಗಾರರ ಕಣ್ತಪ್ಪಿಸಿ ಕೆಲವು ಅನೈತಿಕ ಚಟುವಟಿಕೆಗಳು ನಡೆಯುವ ಸ್ಥಳವಾಗಿಯೂ ಕೋಟೆ ಮಾರ್ಪಡುತ್ತಿದೆ. ಕೋಟೆಯ ಯಾವ ಮಗ್ಗುಲಲ್ಲೂ ಕಸ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಮಾಡದೆ ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಕೋಟೆಯ ಯಾವ ಕಡೆಯೂ ಶೌಚಕ್ಕೂ ವ್ಯವಸ್ಥೆ ಮಾಡದಿರುವ ಕಾರಣ ಮಕ್ಕಳು ಅಪರೂಪದ ಕೋಟೆಯ ಗೋಡೆಗಳ ಪಕ್ಕದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

 ಇತ್ತೀಚೆಗೆ ಸುರಿದ ಮಳೆಯಿಂದ ಗೋಡೆ ಕುಸಿದಿದೆ

ಇತ್ತೀಚೆಗೆ ಸುರಿದ ಮಳೆಯಿಂದ ಗೋಡೆ ಕುಸಿದಿದೆ

ವಿಪರ್ಯಾಸವೆಂದರೆ ಕೋಟೆಯೊಳಗೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ಇದೆ. ಆದರೆ ಕೋಟೆಯಲ್ಲಿ ದಿನದಿಂದ ದಿನಕ್ಕೆ ಕಾಂಕ್ರಿಟ್ ಗೋಡೆಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನು ದೇವನಹಳ್ಳಿಯ ಐತಿಹಾಸಿಕ ಕೋಟೆಯ ಒಂದು ಕಡೆಯ ಗೋಡೆ ಇತ್ತೀಚೆಗೆ ಸುರಿದ ಮಳೆಯಿಂದ ಕುಸಿದಿದೆ.

ಆದರೂ ಸಹ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಕೋಟೆಯನ್ನು ಭದ್ರಪಡಿಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕೋಟೆ ಅವಸಾನದ ಅಂಚಿಗೆ ತಲುಪುವ ಸ್ಥಿತಿ ಉಂಟಾಗಿದೆ. ಅಧಿಕಾರಿಗಳ ಅಸಡ್ಡೆಯೇ ಕೋಟೆಯ ಗೋಡೆ ಕುಸಿಯಲು ಕಾರಣವಾಗಿದ್ದು, ಸೂಕ್ತವಾಗಿ ಕೋಟೆಯನ್ನು ಸಂರಕ್ಷಣೆ ಮಾಡಿದ್ದರೆ ಕೋಟೆ ಹಾನಿಗೊಳಗಾಗುತ್ತಿರಲಿಲ್ಲ.

 ನೀರಿನಿಂದ ರಕ್ಷಿಸಿಕೊಳ್ಳಬಹುದಾದ ಕೋಟೆ!

ನೀರಿನಿಂದ ರಕ್ಷಿಸಿಕೊಳ್ಳಬಹುದಾದ ಕೋಟೆ!

ದೇವನಹಳ್ಳಿಯ ಐತಿಹಾಸಿಕ ಕೋಟೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟೆಗೂ ಈ ದೇವನಹಳ್ಳಿ ಕೋಟೆಗೆ ಸಾಮ್ಯತೆಯಿದೆ. ಎರಡು ಸ್ಥಳಗಳಲ್ಲೂ ಇಟ್ಟಿಗೆಯ ಪುಡಿ ಹಾಗೂ ಸುಣ್ಣದಿಂದ ಮಾಡಿದ ಸುರ್ಕಿಯನ್ನು ಬಳಸಲಾಗಿದೆ. ದೇವನಹಳ್ಳಿ ಕೋಟೆಯಲ್ಲಿ ಈ ಸಾಂಪ್ರದಾಯಿಕ ವಿಧಾನವನ್ನು ನೀರು ಇಳಿಯುವ ಸ್ಥಳಗಳಲ್ಲಿ ಬಳಸಲಾಗಿದೆ. ದಿಡ್ಡಿ ಗೋಡೆಯ ಒಳಭಾಗ ಹಾಗೂ ಪ್ರಾಕಾರದ ನೆಲಗಳಲ್ಲಿ ಈಗಲೂ ಇದರ ಅಂಶಗಳನ್ನು ಕಾಣಬಹುದಾಗಿದೆ. ಆದರೆ ಕೆಆರ್ಎಸ್ ಅಣೆಕಟ್ಟು ಸಂಪೂರ್ಣವಾಗಿ ಸುರ್ಕಿಯಿಂದಲೇ ಮಾಡಲ್ಪಟ್ಟಿದೆ.

ಕೋಟೆಯ ಒಳಗೋಡೆಯ ಉದ್ದಕ್ಕೂ ಸಣ್ಣಸಣ್ಣ ಕಾಲುವೆಗಳು ಪ್ರಾಕಾರದಲ್ಲಿ ನಿಲ್ಲಬಹುದಾದ ನೀರನ್ನು ಒಣಗುವಂತೆ ಮಾಡಿ ಕೋಟೆಯು ಬಿರುಕು ಬಿಡುವುದನ್ನು ತಡೆಗಟ್ಟಿದೆ. ಕೋಟೆ ಗೋಡೆಯ ಸಣ್ಣ ಮದ್ದಿನ ಮನೆಗಳಲ್ಲಿ ಇಟ್ಟಿಗೆಗಳನ್ನು ಕೋನಾತ್ಮಕವಾಗಿ ಜೋಡಿಸಲಾಗಿದೆ. ಪ್ರತಿಯೊಂದು ಕೆಳಪದರದ ಮೇಲೂ ಇಟ್ಟಿಗೆಗಳನ್ನು ಅಡ್ಡಲಾಗಿ ಜೋಡಿಸಲಾಗಿದೆ. ನೀರು ಹೀರುವಿಕೆಯನ್ನು ತಪ್ಪಿಸಿ ಕಟ್ಟಡದ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತೊಂದು ಸರಳ ಮತ್ತು ಸಾಂಪ್ರದಾಯಿಕ ವಿಧಾನವಾಗಿದೆ.

 ಮೈಸೂರು ಪ್ರಾಂತ್ಯದ ಸೇನಾ ವಾಸ್ತುಶಿಲ್ಪ

ಮೈಸೂರು ಪ್ರಾಂತ್ಯದ ಸೇನಾ ವಾಸ್ತುಶಿಲ್ಪ

ದೇವನಹಳ್ಳಿಯ ಕೋಟೆ 18ನೇ ಶತಮಾನದ ಮೈಸೂರು ಪ್ರಾಂತ್ಯದ ಸೇನಾ ವಾಸ್ತುಶಿಲ್ಪಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಕೋಟೆಯಲ್ಲಿ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ ಕೆಲಸದ ಗೋಡೆಗಳು ಫಿರಂಗಿಯನ್ನು ತಡೆಯುವುದಕ್ಕಾಗಿಯೇ ನಿರ್ಮಿಸಲಾಗಿದೆ. ಕೋಟೆಯ ಸುತ್ತಲೂ ಕಂದಕವೂ, ಬೇಕಾದಾಗ ತೆಗೆದುಹಾಕಬಹುದಾದ ಸೇತುವೆಯೂ ಇದೆ. ತೆಗೆದುಹಾಕಬಹುದಾದ ಸೇತುವೆಯನ್ನು ಎಳೆಯಲು ಬಳಸುವ ರಾಟೆಯನ್ನು ಕೋಟೆಯ ಮಹಾದ್ವಾರದ ಮೇಲೆ ಈಗಲೂ ನೋಡಬಹುದಾಗಿದೆ.

ಶತ್ರು ದಾಳಿಯ ಸಮಯದಲ್ಲಿ ಶತ್ರುಗಳನ್ನು ಕೋಟೆಯಿಂದ ಹೊರಗಿಡುವ ಉದ್ದೇಶದಿಂದ ಸೇತುವೆಯನ್ನು ತೆಗೆದುಬಿಡಲಾಗುತ್ತಿತ್ತು. ಕಂದಕದ ಮೇಲಿನ ಗೋಡೆಯ ಹಿಂದೆ ಕಾಲಾಳುಗಳು ನಿಂತು ಗುಂಡು ಹಾರಿಸಲು ಹಾಗೂ ಮದ್ದು ಗುಂಡುಗಳನ್ನು ಬಂದೂಕಿಗೆ ತುಂಬಲು ಸಹಾಯವಾಗುವ ಕಟ್ಟೆ ಇದೆ. ದಿಡ್ಡಿ ಗೋಡೆಯಲ್ಲಿರುವ ಕಿಂಡಿಗಳಿಂದ ಸೈನಿಕರು ಬಂದೂಕುಗಳಿಂದ ದಾಳಿ ಮಾಡುವ ಅನುಕೂಲವೂ ಇದೆ. ಕೆಲ ಸೈನಿಕರು ದಿಡ್ಡಿಗೋಡೆಯಲ್ಲಿ ಮಾಡಿರುವ ಬುರುಜುಗಳಿಂದ ಮೈದಾನವನ್ನು ಗಮನಿಸುತ್ತಿದ್ದರೆ ಇನ್ನು ಕೆಲವರು ಪಿರಂಗಿಯನ್ನು ಬಳಸಿ ಗುಂಡು ಹಾರಿಸುತ್ತಿದ್ದರು. ಕೋಟೆ ಎಷ್ಟೇ ಬಲವಾಗಿದ್ದರೂ ಅದರ ಭದ್ರತೆ ಅದರ ಸೈನಿಕರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

 ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 35 ಕಿ.ಮೀ ದೂರ

ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 35 ಕಿ.ಮೀ ದೂರ

ಕ್ರಿ.ಶ 1791ರಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪು ಸುಲ್ತಾನ್‌ನಿಂದ ಬೆಂಗಳೂರು ಕೋಟೆಯನ್ನು ವಶಪಡಿಸಿಕೊಂಡಾಗ ದೇವನಹಳ್ಳಿ ಸೈನಿಕರು ಹೆದರಿ ಕೋಟೆಯಿಂದ ಹೋಡಿ ಹೋದರು. ಬ್ರಿಟಿಷರು ಒಂದು ವಾರದ ನಂತರ ದೇವನಹಳ್ಳಿಗೆ ಬಂದಾಗ ಯುದ್ದವೇ ಇಲ್ಲದೆ ಈ ಕೋಟೆ ಅವರ ವಶವಾಯಿತು. ಕೋಟೆಯ ಸುಂದರ ಇತಿಹಾಸ ದೇವನಹಳ್ಳಿ ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 35 ಕಿ.ಮೀ ದೂರದಲ್ಲಿದ್ದು, ವೇಗವಾಗಿ ಪ್ರಬುದ್ಧಮಾನಕ್ಕೆ ಬರುತ್ತಿರುವ ಮತ್ತು ಪ್ರಾಗೈತಿಹಾಸಿಕ ಕಾಲದಿಂದ ಟಿಪ್ಪುವಿನವರೆಗೂ ಪ್ರಾಚೀನತೆಯನ್ನು ಹೊಂದಿರುವ ಒಂದು ಉಪನಗರ.

ದೇವನಹಳ್ಳಿ ಗಂಗನವಾಡಿಯ ಒಂದು ಭಾಗವಾಗಿದ್ದು, ನಂತರ ರಾಷ್ಟ್ರಕೂಟರ, ನೊಳಂಬರ, ಪಲ್ಲವರ, ಚೋಳರ, ಹೊಯ್ಸಳರ ಮತ್ತು ವಿಜಯನಗರ ರಾಜರ ರಾಜ್ಯಭಾರಕ್ಕೆ ಒಳಗಾಗಿತ್ತು. ವಿಜಯನಗರ ರಾಜರ ಆಳ್ವಿಕೆಯ ಸಮಯದಲ್ಲಿ ಆವತಿಯ ಸಾಮಂತ ರಾಜನು ಕ್ರಿ.ಶ 1501ರಲ್ಲಿ ದೇವನದೊಡ್ಡಿಯ(ದೇವನಹಳ್ಳಿ) ದೇವರಾಯನಿಂದ ಅನುಮತಿಯನ್ನು ಪಡೆದು ಇಲ್ಲಿ ಕೋಟೆಯನ್ನು ಕಟ್ಟಿದನು.

 ಟಿಪ್ಪುವಿನ ಅಚ್ಚುಮೆಚ್ಚಿನ ಬೇಟೆಯಾಡುವ ಪ್ರದೇಶ

ಟಿಪ್ಪುವಿನ ಅಚ್ಚುಮೆಚ್ಚಿನ ಬೇಟೆಯಾಡುವ ಪ್ರದೇಶ

ತರುವಾಯ ಕ್ರಿ.ಶ 1747ರಲ್ಲಿ ಕೋಟೆಯ ಮೈಸೂರಿನ ಒಡೆಯರ ಅಧೀನಕ್ಕೆ ಬಂದಿತು. ಇದನ್ನು ಮರಾಠರು ಹಲವು ಬಾರಿ ಗೆದ್ದುಕೊಂಡಿದ್ದರು. ನಂತರ ಇದು ಹೈದರಾಲಿ ಮತ್ತು ಟಿಪ್ಪುವಿನ ವಶವಾಯಿತು. ಈಗಿರುವ ಕೋಟೆಯು ಹೈದರಾಲಿ ಮತ್ತು ಟಿಪ್ಪುವಿಗೆ ಸೇರಿದುದೆಂದು ಹೇಳುವರು. ಇದು ಟಿಪ್ಪುವಿನ ಅಚ್ಚುಮೆಚ್ಚಿನ ಬೇಟೆಯಾಡುವ ಪ್ರದೇಶ ಮ್ತು ಸಂಭವನೀಯವಾಗಿ ಅವನ ಜನ್ಮಸ್ಥಳವೂ ಆಗಿತ್ತು. ಸ್ಥೂಲವಾಗಿ ಮತ್ತು ಅಂಡಾಕಾರವಾಗಿ ಪೂರ್ವಾಭಿಮುಖವಾಗಿರುವ ಈ ಕೋಟೆಯು ಕೆತ್ತನೆಗೊಳಿಸಿರುವ ಕಲ್ಲುಗಳಿಂದ ಹೊರ ಹೊದಿಕೆಯನ್ನು ಹೊಂದಿದ್ದು, ಸಮಾಂತರದಲ್ಲಿರುವ 12 ಅರ್ಧ ವೃತ್ತಾಕಾರದ ಬುರುಜುಗಳನ್ನು ಹೊಂದಿದೆ.

 ಸುಂದರ ಕೋಟೆಯನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕಿದೆ

ಸುಂದರ ಕೋಟೆಯನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕಿದೆ

ಕೋಟೆಯ ಮೇಲೆ ಒಳಭಾಗದ ಕಡೆ ಕಂಡಿಗಳುಳ್ಳ ಕೈಪಿಡಿ ಗೋಡೆಯನ್ನು ಅಳವಡಿಸಿದ್ದು, ಕೋಟೆಯ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗಾರೆಯಿಂದ ಅಲಂಕೃತವಾದ ದ್ವಾರಗಳಿವೆ. ಬುರುಜುಗಳ ಮೇಲೆ ಫಿರಂಗಿಗಳನ್ನು ಇಡಲು ಇಟ್ಟಿಗೆ ಮತ್ತು ಗಾರೆಯ ದಿಂಡುಗಳನ್ನು ನಿರ್ಮಿಸಲಾಗಿದೆ.

ದೇವನಹಳ್ಳಿಯ ಸುಂದರ ಕೋಟೆಯನ್ನು ಪುರಾತತ್ವ ಇಲಾಖೆ ಸಂರಕ್ಷಿಸುವಲ್ಲಿ ಮುಂದಾಗಬೇಕಿದೆ. ಅಪರೂಪದ ವಾಸ್ತುಶಿಲ್ಪ ಹೊಂದಿರುವ ಕೋಟೆಯನ್ನು ಅಭಿವೃದ್ಧಿಪಡಿಸಿ ಉತ್ತಮ ಪ್ರವಾಸಿ ತಾಣ ಮಾಡಬೇಕಿದೆ. ಕೋಟೆಯೊಳಗೆ ಐತಿಹಾಸಿಕ ದೇವಾಲಯಗಳಿದ್ದು ಮುಜರಾಯಿ ಇಲಾಖೆಗೆ ಒಳಪಟ್ಟಿವೆ. ಆದ್ದರಿಂದ ಕೋಟೆಯನ್ನು ಸಂರಕ್ಷಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಉತ್ತಮ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+