ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ವರ್ಷ ವಯಸ್ಸಿನ 317 ಕೆ.ಜಿ. ತೂಕದ ಮೀನು ಪತ್ತೆ

|
Google Oneindia Kannada News

ಕೆನಡಾದಲ್ಲಿ ಇದೇ ಮೊದಲ ಬಾರಿಗೆ 100 ವರ್ಷ ವಯಸ್ಸಾಗಿರುವ ಜೀವಂತ ದೊಡ್ಡದಾದ ಮೀನು ಪತ್ತೆಯಾಗಿದೆ. ನೋಡಲು ಸರ್ಫ್‌ ಬೋರ್ಡ್‌ ರೀತಿ ಕಾಣುವ ಮೀನು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬ್ರಿಟಿಷ್ ಕೊಲಂಬಿಯಾದಲ್ಲಿ ಮೀನುಗಾರರು ಬೃಹತ್ ಸ್ಟರ್ಜನ್ ಮೀನೊಂದನ್ನು ಸೆರೆಹಿಡಿದಿದ್ದರು. ಇದು ಹತ್ತು ಅಡಿಗಳಷ್ಟು ಉದ್ದವಾಗಿದ್ದು ಮತ್ತು 100 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.

ಕಾಂಬೋಡಿಯನ್ ಮೀನಾಗಾರರ ಬಲೆಗೆ ಸಿಕ್ಕ 300 ಕೆಜಿ ತೂಕದ ಮೀನು! ಕಾಂಬೋಡಿಯನ್ ಮೀನಾಗಾರರ ಬಲೆಗೆ ಸಿಕ್ಕ 300 ಕೆಜಿ ತೂಕದ ಮೀನು!

ಸ್ಟೀವ್ ಎಕ್ಲಂಡ್ ಮತ್ತು ಮಾರ್ಕ್ ಬೋಯಿಸ್ ಅವರು ರಿವರ್ ಮಾನ್ಸ್ಟರ್ ಅಡ್ವೆಂಚರ್ಸ್, ನಿಕ್ ಮೆಕ್‌ಕೇಬ್ ಮತ್ತು ಟೈಲರ್ ಸ್ಪೀಡ್‌ನ ಮಾರ್ಗದರ್ಶಕರೊಂದಿಗೆ ಲಿಲ್ಲೂಯೆಟ್ ಬಳಿ ಮೀನುಹಿಡಿಯುವಾಗ, ಅವರು ಇದ್ದಕ್ಕಿದ್ದಂತೆ ಬೃಹತ್ ಮೀನೊಂದನ್ನು ಗುರುತಿಸಿದರು.

100 Years Old Big Live Fish Found In Canada River

ಸ್ಟರ್ಜನ್ ಮೀನು 10 ಅಡಿ ಮತ್ತು ಒಂದು ಇಂಚು ಉದ್ದ ಮತ್ತು 57 ಇಂಚುಗಳಷ್ಟು ಸುತ್ತಳತೆಯನ್ನು ಹೊಂದಿತ್ತು ಎಂದು ಎಕ್ಲಂಡ್ ಹೇಳಿದರು.

30 ಕೋಟಿ ಮೊಟ್ಟೆ! 3 ಸಾವಿರ ಕಿಲೋ! ಈ ರೀತಿಯ ಮೀನುಗಳು ಸಹ ಇವೆಯೇ? ಇಲ್ಲಿದೆ ನೋಡಿ ಪವಾಡ..! 30 ಕೋಟಿ ಮೊಟ್ಟೆ! 3 ಸಾವಿರ ಕಿಲೋ! ಈ ರೀತಿಯ ಮೀನುಗಳು ಸಹ ಇವೆಯೇ? ಇಲ್ಲಿದೆ ನೋಡಿ ಪವಾಡ..!

317 ಕೆ.ಜಿ. ತೂಕದ ಮೀನು; ಮೀನುಗಾರರ ಗಾಳಕ್ಕೆ ಈ ಮೀನು ಸಿಕ್ಕಿಕೊಂಡಿದ್ದು, ಇದನ್ನು ಮೇಲಕ್ಕೆ ತರಲು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ. ಛಲಬಿಡದ ಮೀನುಗಾರರು ಕೊನೆಗೂ ಮೀನನ್ನು ಪಳಗಿಸಿ ಹಿಡಿದಿದ್ದಾರೆ.

"ಈ ಮೀನು ನಾವು ಇದುವರೆಗೂ ಹಿಡಿದಿರುವ ಮೀನುಗಳಲ್ಲೇ ಅತಿ ದೊಡ್ಡ ಗಾತ್ರದ್ದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೀನು 317 ಕಿಲೋ ಗ್ರಾಂ ತೂಕದ್ದಾಗಿದ್ದು 100 ವರ್ಷಗಳಿಗೂ ಹಳೆಯ ಮೀನು" ಎಂದು ಹೇಳಿದ್ದಾರೆ.

ತಾವು ಹಿಡಿದ ಮೀನಿನ ಕೆಲವು ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡ ನಂತರ ಮೀನುಗಾರರು ಸ್ಟರ್ಜನ್‌ ಮೀನನ್ನು ನೀರಿಗೆ ವಾಪಸ್ ಬಿಟ್ಟಿದ್ದಾರೆ.

100 Years Old Big Live Fish Found In Canada River

ಅಸಿಪೆನ್ಸೆರಿಡೆ ಕುಟುಂಬಕ್ಕೆ ಸೇರಿದ 27 ಜಾತಿಯ ಮೀನುಗಳಿಗೆ ಸ್ಟರ್ಜನ್ ಸಾಮಾನ್ಯ ಹೆಸರು. ಆರಂಭಿಕ ಸ್ಟರ್ಜನ್ ಪಳೆಯುಳಿಕೆಗಳು ಲೇಟ್ ಕ್ರಿಟೇಶಿಯಸ್‌ಗೆ ಸೇರಿದವು.

ನ್ಯೂಸ್‌ವೀಕ್ ವರದಿಯ ಪ್ರಕಾರ, ಬಿಳಿ ಸ್ಟರ್ಜನ್ ಉತ್ತರ ಅಮೆರಿಕಾದಲ್ಲಿ ಅತಿದೊಡ್ಡ ಸಿಹಿನೀರಿನ ಮೀನು, ಇದು 14 ಅಡಿ ಉದ್ದದವರೆಗೆ ಬೆಳೆಯುತ್ತದೆ ಮತ್ತು 1,500 ಪೌಂಡ್‌ಗಳವರೆಗೆ ತೂಗುತ್ತದೆ.

ಫ್ರೇಸರ್ ರಿವರ್ ಸ್ಟರ್ಜನ್ ಕನ್ಸರ್ವೇಶನ್ ಸೊಸೈಟಿ ಪ್ರಕಾರ ಈ ಮೀನುಗಳು 150 ವರ್ಷಗಳವರೆಗೆ ಬದುಕಬಲ್ಲವು ಎಂದು ಹೇಳಿದೆ.

ಬಿಳಿ ಸ್ಟರ್ಜನ್ ಪೆಸಿಫಿಕ್ ಮಹಾಸಾಗರಕ್ಕೆ ಹರಿಯುವ ಹಲವಾರು ದೊಡ್ಡ ಉತ್ತರ ಅಮೆರಿಕಾದ ನದಿಗಳಲ್ಲಿ ವಾಸಿಸುತ್ತದೆ. ಅವರು ಪ್ರಾಥಮಿಕವಾಗಿ ದೊಡ್ಡ ನದಿಗಳ ನದಿ ಪಾತ್ರಗಳಲ್ಲಿ ವಾಸಿಸುತ್ತದೆ, ಮೊಟ್ಟೆಯಿಡುವ ವೇಳೆ ವಲಸೆ ಹೋಗುತ್ತದೆ ಮತ್ತು ನದಿ ಪಾತ್ರಗಳಲ್ಲಿ ಇವು ಬಹಳ ದೂರ ಪ್ರಯಾಣ ಮಾಡುತ್ತವೆ.

English summary
This is the first time a large live fish has been found in Canada It's 100 years old giant fish. A fish that looks like a surfboard is now viral on a social network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X