ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check; ಪಿಪಿಪಿ ಮಾದರಿಯಲ್ಲಿ ಪ್ಯಾಸೆಂಜರ್‌ ರೈಲು ಸಂಚಾರ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಭಾರತೀಯ ರೈಲ್ವೆ ಇದೇ ಮೊದಲ ಬಾರಿಗೆ ಪ್ಯಾಸೆಂಜರ್ ರೈಲು ಸಂಚಾರದ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗಿದೆ. ಎರಡು ದಿನಗಳಿಂದ ಈ ಕುರಿತಂತೆ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಕಂಪನಿಗಳೇ ದರಗಳನ್ನು ತೀರ್ಮಾನಿಸಲಿವೆ ಎಂಬ ವರದಿಯೂ ಇತ್ತು

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ದೇಶದ 150 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ನಡೆಸುವುದು ಯೋಜನೆಯಾಗಿದೆ. ಇದಕ್ಕಾಗಿ ಖಾಸಗಿ ಕಂಪನಿಗಳಿಂದ ಟೆಂಡರ್ ಕರೆಯಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ರೈಲ್ವೆ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ.

IRCTC: ರೈಲು ತಡವಾಗಿ ಬಂದರೆ ಟೀ, ಕಾಫಿ, ಆಹಾರ, ಉಪಹಾರ ಉಚಿತ! ಹೇಗೆ? IRCTC: ರೈಲು ತಡವಾಗಿ ಬಂದರೆ ಟೀ, ಕಾಫಿ, ಆಹಾರ, ಉಪಹಾರ ಉಚಿತ! ಹೇಗೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಟೆಂಡರ್ ಪಡೆದ ಕಂಪನಿಗಳು ರೈಲು ಪ್ರಯಾಣ ದರ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇದರ ಕುರಿತು ಭಾರೀ ಚರ್ಚೆಗಳು ಆರಂಭವಾಗಿದ್ದವು.

ಗಂಗಾವತಿ-ದರೋಜಿ ನೂತನ ರೈಲು ಮಾರ್ಗ ಬಾಗಲಕೋಟೆ ತನಕ ವಿಸ್ತರಣೆ? ಗಂಗಾವತಿ-ದರೋಜಿ ನೂತನ ರೈಲು ಮಾರ್ಗ ಬಾಗಲಕೋಟೆ ತನಕ ವಿಸ್ತರಣೆ?

Run Of Passenger Trains On PPP Mode No Bids Invited Says Railways

ಈ ಕುರಿತು ರೈಲ್ವೆ ಇಲಾಖೆ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದು, ಇಂತಹ ಚಿಂತನೆ ಇಲಾಖೆ ಮುಂದೆ ಇಲ್ಲ. ವರದಿಗಳಲ್ಲಿ ಪ್ರಕಟವಾಗಿರುವಂತೆ ಯಾವುದೇ ಟೆಂಡರ್ ಸಹ ಕರೆದಿಲ್ಲ ಎಂದು ತಿಳಿಸಿದೆ.

ರೈಲು ಟಿಕೆಟ್ ರದ್ದು ಮಾಡಿದರೆ ಜಿಎಸ್‌ಟಿ ಶುಲ್ಕ, ಯಾಕೆ? ರೈಲು ಟಿಕೆಟ್ ರದ್ದು ಮಾಡಿದರೆ ಜಿಎಸ್‌ಟಿ ಶುಲ್ಕ, ಯಾಕೆ?

ಖಾಸಗಿ ಕಂಪನಿಗಳಿಗೆ ರೈಲು ಪ್ರಯಾಣದರ ಏರಿಕೆ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಿದರೆ ಭಾರತೀಯ ರೈಲ್ವೆಗೆ ಸುಮಾರು 30,000 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಡಿಜಿಟಲ್ ಮಾಧ್ಯಮದ ವರದಿಯೊಂದು ಹೇಳಿತ್ತು.

ದೇಶದ 12 ವಿಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಪ್ಯಾಸೆಂಜರ್ ರೈಲು ಸಂಚಾರ ನಡೆಸಲಿದೆ. 16 ಕೋಚ್‌ಗಳನ್ನು ಹೊಂದಿರುವ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ ಎಂದು ವರದಿ ವಿವರಿಸಿತ್ತು.

Fact Check

ಕ್ಲೇಮು

ಭಾರತೀಯ ರೈಲ್ವೆ ಪಿಪಿಪಿ ಮಾದರಿಯಲ್ಲಿ ದೇಶದ 150 ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ನಡೆಸಲು ಖಾಸಗಿ ಕಂಪನಿಗಳಿಂದ ಟೆಂಡರ್ ಕರೆದಿದೆ. ಕಂಪನಿಗಳೇ ಪ್ರಯಾಣ ದರ ತೀರ್ಮಾನ ಮಾಡಲಿವೆ.

ಪರಿಸಮಾಪ್ತಿ

ಪಿಪಿಪಿ ಮಾದರಿಯಲ್ಲಿ ಪ್ಯಾಸೆಂಜರ್ ರೈಲು ಸಂಚಾರ ನಡೆಸುವ ಯಾವುದೇ ಚಿಂತನೆ ಇಲ್ಲ. ಖಾಸಗಿ ಕಂಪನಿಗಳಿಂದ ಟೆಂಡರ್ ಸಹ ಕರೆದಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Indian railways said that no bids from private entities invited to run 150 pairs of passenger trains through PPP mode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X