Fact Check: ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷ

ಜಪಾನ್, ಅಕ್ಟೋಬರ್ 06: ನಮ್ಮ ಬ್ರಾಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಮಾನವನ ಜ್ಞಾನ ವಿಕಾಸವಾದಂತೆಲ್ಲಾ ಈ ರಹಸ್ಯಗಳು ಒಂದೊಂದಾಗಿ ತೆರೆಯುತ್ತಾ ಹೋಗುತ್ತವೆ.

ಇದೀಗ ಜಪಾನ್‌ ಸ್ಟೇಡಿಯಂ ಒಂದರಲ್ಲಿ ಹಾರುವ ತಟ್ಟೆಗಳು ಪ್ರತ್ಯಕ್ಷವಾಗಿತ್ತು ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿವೆ. ಅದು ನಿಜವಾಗಿಯೂ ಹಾರುವ ತಟ್ಟೆಯಾಗಿತ್ತೆ ಎಂಬುದರ ಕುರಿತು ಅಧ್ಯಯನ ಮಾಡಲಾಗಿದೆ.

ಜಪಾನ್‌ನ ಸ್ಟೇಡಿಯಂನಲ್ಲಿ ಐದು ರೀತಿಯ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ. ಒಟ್ಟು ಎರಡು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಫೋಟೊಗಳಲ್ಲಿ ಐದು ವೃತ್ತಾಕಾರದ ದೀಪಗಳು ಕಾಣಿಸಿವೆ.

Fact Check: Multiple UFO Orbs Spotted Over Japanese Stadium

ಈ ಸ್ಟೇಡಿಯಂ ಟೋಕ್ಯೋದಿಂದ 29 ಕಿ.ಮೀ ದೂರದಲ್ಲಿದೆ. ಕೇವಲ ಈ ಹಾರುತ ತಟ್ಟೆಗಳು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಅಷ್ಟೇ ಅಲ್ಲದೆ ಮಾನವರು ಈ ಜಪಾನ್‌ನಲ್ಲಿ ಕೊರೊನಾ ಸೋಂಕನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎಂದು ತಿಳಿಯಲು ಅನ್ಯಗ್ರಹದ ಜೀವಿಗಳು ಬಂದಿವೆ ಎನ್ನುವ ವದಂತಿ ಕೂಡ ಹರಿದಾಡಿತ್ತು.

ನಿಜವಾಗಿಯೂ ಇದನ್ನು ಕಂಡವರಿದ್ದಾರೆಯೇ ಅಥವಾ ಫೋಟೊ ನೋಡಿ ಜನರು ಮಾತನಾಡಿಕೊಳ್ಳುತ್ತಿದ್ದಾರೆಯೇ ಎಂಬುದು ತಿಳಿದಿಲ್ಲ.

ಆದರೆ ಸ್ಟೇಡಿಯಂ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ವಿಮಾನದಲ್ಲಿ ಜಾಹೀರಾತು ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿತ್ತು, ಅದೇ ಚಿತ್ರವನ್ನು ನೋಡಿ ಹಾರುವ ತಟ್ಟೆಗಳೆಂದು ತಿಳಿಯಲಾಗಿದೆ ಎಂದು ವಿವರಿಸಿದ್ದಾರೆ.

ಇದಕ್ಕೆ ಪುಷ್ಠಿ ಎಂಬಂತೆ ಅನ್ಯಗ್ರಹ ಜೀವಿಗಳ ಯಾನ(ಯುಎಫ್‌ಒ) ಭೇಟಿ ನೀಡಿರುವುದರ ಕುರಿತಾದ ಸಾವಿರಾರು ಪ್ರಕರಣಗಳು ಕಣ್ಣಮುಂದಿವೆ. ಈ ಯುಎಫ್‌ಒಗಳನ್ನು ನೋಡಿಸುವುದಾಗಿ ಅನೇಕರು ವಾದಿಸಿದ್ದಾರೆ.

ಆದರೆ ಇದ್ಯಾವುದಕ್ಕೂ ಕರಾರುವಕ್ಕಾಗಿಉತ್ತರ ದೊರೆತಿಲ್ಲ. ಆದರೆ ಸ್ಟೇಡಿಯಂ ಕ್ಯಾಮರಾದಲ್ಲಿ ಒಂದಲ್ಲ 5 ಯುಎಫ್‌ಒಗಳು ಸೆರೆಯಾಗಿವೆ.

Fact Check

ಕ್ಲೇಮು

ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು

ಪರಿಸಮಾಪ್ತಿ

ಜಪಾನ್ ಸ್ಟೇಡಿಯಂನಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿಲ್ಲ ಅದು ವಿಮಾನದಲ್ಲಿ ಪ್ರದರ್ಶಿಸಲಾಗುತ್ತಿದ್ದ ಜಾಹೀರಾತು ಬ್ಯಾನರ್‌ಗಳು.

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+