Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್
ನವದೆಹಲಿ, ಸೆಪ್ಟೆಂಬರ್ 4: ಚೀನಾದ ಸುಖೋಯ್ ಎಸ್‌ಯು-35 ಯುದ್ಧ ವಿಮಾನವನ್ನು ತೈವಾನ್‌ನ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂಬ ಪ್ರತಿಪಾದನೆಯೊಂದು ತೈವಾನ್‌ನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆದರೆ ತೈವಾನ್‌ನ ರಕ್ಷಣಾ ಸಚಿವಾಲಯ ನೀಡಿರುವ ಅಧಿಕೃತ ಹೇಳಿಕೆ ಈ ವರದಿಗಳನ್ನು ನಿರಾಕರಿಸಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿನ ಈ ಮಾಹಿತಿ ಸುಳ್ಳು ಮತ್ತು ದುರುದ್ದೇಶಪೂರ್ವಕ ಎಂದು ಆರೋಪಿಸಿದೆ.
ದಿ ಜೀವಿಶ್ ಪ್ರೆಸ್ ಮಾಡಿರುವ ವರದಿ ಪ್ರಕಾರ, ತೈವಾನ್ ಸ್ಟ್ರೈಟ್ ಮತ್ತು ದಕ್ಷಿಣ ಚೀನಾ ಸಮುದ್ರ ಭಾಗಗಳಲ್ಲಿ ಒಳನುಸುಳಿದ್ದ ವಿಮಾನವು ವಿಯೆಟ್ನಾಂ ಗಡಿ ಸಮೀಪದಲ್ಲಿನ ದಕ್ಷಿಣ ಚೀನಾದ ಸ್ವಾಯತ್ತ ಕರಾವಳಿ ಪ್ರದೇಶ ಗುವಾಂಗ್‌ಕ್ಸಿಯಲ್ಲಿ ಅಪಘಾತಕ್ಕೀಡಾಗಿದೆ.

ಜೆಟ್ ಒಂದು ಹೊತ್ತಿ ಕಡು ಕಪ್ಪು ಹೊಗೆ ಉಗುಳುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ಚಿತ್ರೀಕರಿಸಿರುವ ಸ್ಥಳ ಯಾವುದು ಎಂದು ಗೊತ್ತಾಗಿಲ್ಲ. ಚೀನಾದ ವಿಮಾನವನ್ನು ತೈವಾನ್ ರಕ್ಷಣಾ ಪಡೆ ಹೊಡೆದು ಉರುಳಿಸಿದ ವಿಡಿಯೋ ಇದು ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಖಚಿತ ಪುರಾವೆಗಳಿಲ್ಲ. ಈ ವರದಿ ಶುದ್ಧ ಸುಳ್ಳು ಎಂದು ಅನೇಕರು ಹೇಳಿದ್ದಾರೆ. ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಕೆಲವು ಹೇಳಿದ್ದಾರೆ.
2015ರ ನವೆಂಬರ್‌ನಲ್ಲಿ ಸಹಿ ಹಾಕಿದ್ದ ಒಪ್ಪಂದದ ಅನ್ವಯ ರಷ್ಯಾವು ಚೀನಾಕ್ಕೆ ಎಸ್‌ಯು-35 ಯುದ್ಧ ವಿಮಾನಗಳನ್ನು ಹಸ್ತಾಂತರಿಸುವ ಕಾರ್ಯವನ್ನು 2019ರಲ್ಲಿ ಪೂರ್ಣಗೊಳಿಸಿತ್ತು. ಇದರಲ್ಲಿ ಒಂದುವಿಮಾನ ಪತನಗೊಂಡಿದೆ.

ಈ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹರಡುತ್ತಿರುವ ಕೃತ್ಯವಾಗಿದೆ. ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಸಲುವಾಗಿ ಇಂತಹ ಹೇಳಿಕೆಗಳನ್ನು ಹರಿಬಿಡಲಾಗಿದೆ ಎಂದು ವಾಯು ಪಡೆ ಖಂಡಿಸಿದೆ.
ತೈವಾನ್ ಸ್ಟ್ರೈಟ್ ಪ್ರದೇಶದ ಸುತ್ತಲಿನ ವಾಯು ಭಾಗ ಹಾಗೂ ಸಮುದ್ರದಲ್ಲಿನ ಸ್ಥಿತಿಯನ್ನು ಕೇಂದ್ರ ಕಚೇರಿ ಸೂಕ್ಷ್ಮವಾಗಿ ಗಮನಿಸಲಿದೆ. ಸುಳ್ಳು ಹಾಗೂ ನಕಲಿ ಸುದ್ದಿಗಳು ಹರಡದಂತೆ ತಡೆಯಲು ತಕ್ಷಣವೇ ಸೂಕ್ತ ಮಾಹಿತಿಗಳನ್ನು ನೀಡಲಿದೆ ಎಂದು ಸಚಿವಾಲಯ ಹೇಳಿದೆ.

Fact Check
ಕ್ಲೇಮು
ಚೀನಾದ ಸುಖೋಯ್ ಯುದ್ಧ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ.
ಪರಿಸಮಾಪ್ತಿ
ಈ ವರದಿಯನ್ನು ತೈವಾನ್ ರಕ್ಷಣಾ ಸಚಿವಾಲಯ ನಿರಾಕರಿಸಿದೆ.












Click it and Unblock the Notifications