ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಜಲಾವೃತವಾಗಿರುವ ರಸ್ತೆಗಳಲ್ಲಿ ಕಸ ತೇಲುತ್ತಿರುವ ಈ ವಿಡಿಯೋ ಚೆನ್ನೈನದ್ದಾ?

|
Google Oneindia Kannada News

ಚೆನ್ನೈ ನವೆಂಬರ್ 9: ರಾಜಧಾನಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳು ಕಳೆದ ಕೆಲವು ದಿನಗಳಿಂದ ತೀವ್ರ ಮಳೆಯಿಂದಾಗಿ ಜಲಾವೃತವಾಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು, ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗಿವೆ. ಆದರೆ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆದ ಕೆಲವೊಂದು ಫೋಟೋಗಳು ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಪ್ರವಾಹದ ದೃಶ್ಯಗಳೆಂದು ವೈರಲ್ ಆಗಿವೆ.

ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ ಮತ್ತು ಸ್ಥಳೀಯ ಭೂಕುಸಿತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಲಾವೃತಗೊಂಡಿರುವ ರಸ್ತೆಯಲ್ಲಿ ಕಸ, ವಾಹನಗಳು ತೇಲಾಡುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚೆನ್ನೈನ ಸದ್ಯದ ಪರಿಸ್ಥಿತಿ ಹೀಗಿದೆ ಎಂಬ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವಿಡಿಯೋದ ಜೊತೆಗೆ ಸಂದೇಶ ತಪ್ಪಾಗಿದೆ ಎಂದು ಕಂಡುಹಿಡಿದಿದೆ. ಒಂದೆರಡು ತಿಂಗಳ ಹಿಂದೆ ಭಾರೀ ಮಳೆಯಿಂದಾಗಿ ರಾಜಧಾನಿ ನೀರಿನಲ್ಲಿ ಮುಳುಗಿದಾಗ ಈ ವಿಡಿಯೋವನ್ನು ನವದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ತೆಗೆದುಕೊಳ್ಳಲಾಗಿದೆ. ವೈರಲ್ ಫೋಟೋದ ನಿಜವಾದ ಪೋಸ್ಟ್‌ನ್ನು ಇಲ್ಲಿ ನೋಡಬಹುದು.

Fact Check: This video of waterlogged streets is from Chennai?

ತನಿಖೆ

ಆರಂಭದಲ್ಲಿ ವೈರಲ್ ಫೋಟೋಗಳಿಗೆ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ದೆಹಲಿಯಿಂದ ಆಗಿರಬಹುದು ಮತ್ತು ಚೆನ್ನೈ ಅಲ್ಲ ಎಂದು ಸೂಚಿಸುವುದನ್ನು ಕಂಡುಕೊಳ್ಳಲಾಯಿತು. ಕ್ಲಿಪ್ಪಿಂಗ್ ಅನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ, ಜನರು ಹಿಂದಿಯಲ್ಲಿ ಮಾತನಾಡುವುದು ಕೇಳುಬರುತ್ತದೆ. ನಾರ್ತ್ ಈಸ್ಟರ್ನ್ ಕ್ಯಾರಿಯಿಂಗ್ ಕಾರ್ಪೊರೇಷನ್ ಲಿಮಿಟೆಡ್ (NECC) ನ ಬೋರ್ಡ್ ಅನ್ನು ಸಹ ವೀಡಿಯೊದಲ್ಲಿ ನೋಡಬಹುದು.

Fact Check: This video of waterlogged streets is from Chennai?

ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟಿಜನ್‌ಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 2021 ರ ಆರಂಭದಲ್ಲಿ ಹೊಸ ದೆಹಲಿಯ ಸದರ್ ಬಜಾರ್‌ ದೃಶ್ಯವೆಂದು ಹಂಚಿಕೊಂಡ ವೀಡಿಯೊ ಇದಾಗಿದೆ.

ಈ ಸೂಚನೆಯನ್ನು ತೆಗೆದುಕೊಂಡು Google Maps ನಲ್ಲಿ ಹುಡುಕಿದಾಗ ಸದರ್ ಬಜಾರ್‌ನ ಆಜಾದ್ ಮಾರ್ಕೆಟ್ ರಸ್ತೆಯಲ್ಲಿ NECC ಶಾಖೆ ಇರುವುದು ಖಚಿತವಾಗಿದೆ. ಅದೇ ವಿಳಾಸವನ್ನು NECC ವೆಬ್‌ಸೈಟ್‌ನಲ್ಲಿಯೂ ಸಹ ಒದಗಿಸಲಾಗಿದೆ.

ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬಳಕೆದಾರರು ಹಂಚಿಕೊಂಡ ಅನೇಕ ವೀಡಿಯೊಗಳನ್ನು ಅದೇ ಬೀದಿಯ ಜಲಾವೃತ ಸ್ಥಿತಿಯನ್ನು ತೋರಿಸುತ್ತವೆ.

Fact Check: This video of waterlogged streets is from Chennai?

ನವದೆಹಲಿಯ ಒಂದು ವೀಡಿಯೊ ಮತ್ತು ಸದ್ಯ ಚನ್ನೈದೆಂದು ವೈರಲ್ ವೀಡಿಯೊದ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು. ಈ ವೀಡಿಯೊದಲ್ಲಿ, ದೆಹಲಿ ನೋಂದಣಿಯೊಂದಿಗೆ ಕಾರನ್ನು ಚಲಿಸಲು ಪ್ರಯತ್ನಿಸುತ್ತಿರುವ ಜನರನ್ನು ಸಹ ನೋಡಬಹುದು.

Fact Check: This video of waterlogged streets is from Chennai?

ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸತತ ಮಳೆಯಿಂದಾಗಿ ಸದರ್ ಬಜಾರ್ ರಸ್ತೆಗಳಲ್ಲಿ ವಾಹನಗಳು ತೇಲುತ್ತಿರುವ ಬಗ್ಗೆ ಕೆಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಎರಡು ತಿಂಗಳ ಹಿಂದೆ ನಿತ್ಯ 100 ಮಿ.ಮೀ.ಕ್ಕೂ ಹೆಚ್ಚು ಮಳೆಯಾಗಿ ದೆಹಲಿಯ (Delhi Rains) ರಸ್ತೆಗಳಲ್ಲಿ, ಆಟೋ, ಬಸ್​ಗಳ ಒಳಗೆ ನೀರು ತುಂಬಿದೆ. ಇದರಿಂದ ಪ್ರಯಾಣಿಕರು ನೀರು ನಿಂತ ಬಸ್​ಗಳಲ್ಲೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಸೆಪ್ಟಂಬರ್‌ ನಲ್ಲಿ ಸುರಿದ ದೆಹಲಿಯ ಮಳೆಯ ಆರ್ಭಟದ ವಿಡಿಯೋಗಳು ಟ್ವಿಟ್ಟರ್​ನಲ್ಲಿ ಹರಿದಾಡುತ್ತಿವೆ. ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಲ್ಲೂ ಮಳೆ ಹೆಚ್ಚಾಗಿ ಪಲಾಂ ಎಂಬ ಪ್ರದೇಶದಲ್ಲಿ ಚಲಿಸುವ ಬಸ್​ನೊಳಗೆ ಕೆಸರು ತುಂಬಿದ ನೀರು ನುಗ್ಗಿ ಪ್ರಯಾಣಿಕರು ಪರದಾಡಬೇಕಾಯಿತು. ಆ ವಿಡಿಯೋ ಕೂಡ ವೈರಲ್ ಆಗಿದೆ. ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಾಕೇತ್ ಮೆಟ್ರೋ ಸ್ಟೇಷನ್​ನ ಗೇಟ್​ಗಳನ್ನು ಮುಚ್ಚಿ ಮಳೆ ಕಡಿಮೆಯಾಗುವವರೆಗೂ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚರಕ್ಕೆ ಅವಕಾಶವಿರಲಿಲ್ಲ. ಮಳೆಯಿಂದ ದೆಹಲಿಯಲ್ಲಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ಬಹುತೇಕ ರಸ್ತೆಗಳಲ್ಲಿ 2 ಅಡಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು. ಹೀಗೆ ಮಳೆ ನೀರು ನುಗ್ಗಿದ ಪ್ರದೇಶಗಳಲ್ಲಿ ನವದೆಹಲಿಯ ಸದರ್ ಬಜಾರ್ ಪ್ರದೇಶ ಕೂಡ ಒಂದಾಗಿದೆ.

ಹಾಗಾಗಿ, ವೈರಲ್ ವಿಡಿಯೋ ನವದೆಹಲಿಯಿಂದ ಬಂದಿದ್ದು, ಚೆನ್ನೈನಲ್ಲಿ ನಡೆಯುತ್ತಿರುವ ಮಳೆಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ಚೆನ್ನೈನಲ್ಲಿ ಪ್ರಸ್ತುತ ಮಳೆಯಿಂದಾದ ಅವಾಂತರದ ಫೋಟೋ-ವಿಡಿಯೋಗಳು ವೈರಲ್

ಪರಿಸಮಾಪ್ತಿ

ನವದೆಹಲಿಯ ಫೋಟೋ-ವಿಡಿಯೋಗಳನ್ನು ಪ್ರಸ್ತುತ ಚೆನ್ನೈನ ಮಳೆಯಿಂದ ಸೃಷ್ಟಿಯಾದ ಸಮಸ್ಯೆಗಳು ಎಂದು ವೈರಲ್ ಮಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Several parts of Tamil Nadu, including the capital Chennai, have been experiencing intense rainfall and waterlogging over the past few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X