Fact Check:ದೇಶದ ಮೊದಲ ಮೆಟ್ರೋ ರೈಲು ಆರಂಭಿಸಿದವರು ವಾಜಪೇಯಿ ಎಂದಿಲ್ಲ ಮೋದಿ
ನವದೆಹಲಿ, ಡಿಸೆಂಬರ್ 31: ದೇಶದಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಆರಂಭಿಸಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿಗೆ ಸಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ದೇಶದ ಮೊದಲ ಮೆಟ್ರೋ ರೈಲಿಗೆ ಚಾಲನೆ ನೀಡಿರುವ ಹೆಗ್ಗಳಿಕೆಯನ್ನು ಪ್ರಧಾನಿ ಮೋದಿ ವಾಜಪೇಯಿ ಅವರ ಹೆಗಲಿಗಿಟ್ಟಿದ್ದಾರೆ, ಅಷ್ಟೂ ಕ್ರೆಡಿಕ್ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿತ್ತು.
ಡಿಸೆಂಬರ್ 28 ರಂದು ಚಾಲಕರಹಿತ ಮೆಟ್ರೋ ರೈಲಿಗೆ ನರೇಂದ್ರ ಮೋದಿ ಚಾಲನೆ ನೀಡುವಾಗ ಈ ಮಾತುಗಳನ್ನಾಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು.

ದೇಶದ ಮೊದಲ ಮೆಟ್ರೋ ರೈಲು ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನದಿಂದಾಗಿ ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು ಎನ್ನುವ ಸುದ್ದಿ ಸುಳ್ಳು. ಆದರೆ ಸತ್ಯವೇನೆಂದರೆ ಮೊದಲ ಮೆಟ್ರೋಗೆ 1972ರಲ್ಲಿ ಚಾಲನೆ ನೀಡಲಾಗಿತ್ತು. ಮತ್ತು 1984ರಲ್ಲಿ ಇಂಧಿರಾಗಾಂಧಿ ನೇತೃತ್ವದಲ್ಲಿ ಕಾರ್ಯ ಆರಂಭಿಸಲಾಗಿತ್ತು.
ಒನ್‌ಇಂಡಿಯಾಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಸುದ್ದಿ ಸುಳ್ಳು, ಆದರೆ ಸಾಕಷ್ಟು ವರ್ಷಗಳಿಂದ ದೆಹಲಿಯಲ್ಲಿ ಇದರ ಕುರಿತು ಚರ್ಚೆ ನಡೆಯುತ್ತಿತ್ತು, ಅಟಲ್ ಬಿಹಾರಿ ವಾಜಪೇಯಿಯವರಿಂದಾಗಿ ಮೊದಲ ಮೆಟ್ರೋ ರೈಲು ಓಡುವಂತಾಯಿತು ಎಂದು ಹೇಳಿದ್ದರು.
ಅವರ ಇಡೀ ಭಾಷಣದಲ್ಲಿ ದೆಹಲಿ ಮೆಟ್ರೋವನ್ನುದ್ದೇಶಿಸಿ ಮಾತನಾಡಿದ್ದರು, ದೇಶದ ಮೆಟ್ರೋವಲ್ಲ. ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೋಲ್ಕತ್ತದಲ್ಲಿ ಆರಂಭವಾಗಿತ್ತು. 1972ರಲ್ಲಿ ಇಂದಿರಾ ಗಾಂಧಿಯವರು ಈ ಯೋಜನೆಗೆ ಚಾಲನೆ ನೀಡಿದ್ದರು. ಮೊದಲ ಹಂತದ ರೈಲು ಯೋಜನೆ 3.4 ಕಿ.ಮೀ ಉದ್ದದ್ದಾಗಿತ್ತು.

Fact Check
ಕ್ಲೇಮು
ಭಾರತದಲ್ಲಿ ಮೊದಲ ಮೆಟ್ರೋ ರೈಲು ಆರಂಭಿಸಿದರು ಅಟಲ್ ಬಿಹಾರಿ ವಾಜಪೇಯಿ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಪರಿಸಮಾಪ್ತಿ
ಭಾರತದಲ್ಲಿ ಮೊದಲ ಮೆಟ್ರೋವನ್ನು ಪ್ರಾರಂಭಿಸಿದವರ ವಾಜಪೇಯಿ ಎಂದು ಮೋದಿ ಹೇಳಿಲ್ಲ












Click it and Unblock the Notifications