ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ?

|
Google Oneindia Kannada News

ನವದೆಹಲಿ, ಮೇ 14: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕೆಲವು ವರದಿಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿಎಸ್‌ಐಆರ್ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಿಗೆ ಕೊರೊನಾ ತಗುಲುವುದು ಕಡಿಮೆ ಎಂದು ಹೇಳಿದೆ ಎಂದು ಬರೆಯಲಾಗಿದೆ.

ಸಿಗರೇಟ್ ಸೇದುವವರಿಗೆ ಸೋಂಕು ಬರೋದಿಲ್ವಾ? ಹೀಗನ್ನುತ್ತಿದೆ ಅಧ್ಯಯನ...ಸಿಗರೇಟ್ ಸೇದುವವರಿಗೆ ಸೋಂಕು ಬರೋದಿಲ್ವಾ? ಹೀಗನ್ನುತ್ತಿದೆ ಅಧ್ಯಯನ...

ಆದರೆ ವಿಶ್ವ ಆರೋಗ್ಯ ಸಂಸ್ಥೆ ಹೀಗೆ ಹೇಳಿಯೇ ಇಲ್ಲ ಇದು ಸುಳ್ಳು ಸುದ್ದಿ, ಧೂಮಪಾನಿಗಳು ಬಹುಬೇಗ ಕೊರೊನಾ ಸೋಂಕಿಗೆ ತುತ್ತಾಗುತ್ತಾರೆ, ಹಾಗೆಯೇ ಸೋಂಕು ತೀವ್ರವಾಗಿ ಅವರನ್ನು ಕಾಡುತ್ತದೆ ಎಂದು ಹೇಳಿದೆ.

 Fact Check: Are Smokers Lesser Risk Of Contracting Covid19

ಸಿಎಸ್‌ಐಆರ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಏಪ್ರಿಲ್ 24ರಂದು ನಾವು ಯಾವುದೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರಲಿಲ್ಲ, ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಿಗೆ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ನಾವು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ನೀವು ಈಗಾಗಲೇ ಧೂಮಪಾನದ ವ್ಯಸನಕ್ಕೆ ಒಳಗಾಗಿದ್ದರೆ ಜೊತೆಗೆ ಅಪ್ಪಟ ಸಸ್ಯಹಾರಿಗಳಾಗಿದ್ದರೆ, ಬೇರೆಯವರಿಗೆ ಹೋಲಿಸಿದರೆ ನಿಮಗೆ ಕೊರೊನಾ ಸೋಂಕು ಪಾಸಿಟಿವ್ ಬರುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಲಾಗಿತ್ತು.

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

ಇದಕ್ಕೆ ಪುಷ್ಟಿ ನೀಡುವಂತೆ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಇನ್ನೊಂದು ಮಹತ್ತರ ವಿಚಾರ ತಿಳಿದು ಬಂದಿದೆ. ಅದೇನೆಂದರೆ ಯಾರಿಗೆ ರಕ್ತದ ಗುಂಪು ' O' ಆಗಿರುತ್ತದೆ ಅವರಿಗೆ ಕೋವಿಡ್-19 ಸೊಂಕು ತಗಲುವುದು ತೀರಾ ಕಡಿಮೆ. ಯಾವ ಜನರಿಗೆ ರಕ್ತದ ಗುಂಪು ' AB'ಮತ್ತು ' B'ಆಗಿರುತ್ತದೆ, ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದಿದ್ದರು.

Fact Check

ಕ್ಲೇಮು

ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವುದಿಲ್ಲ'

ಪರಿಸಮಾಪ್ತಿ

ಧೂಮಪಾನಿಗಳಿಗೆ 1.5 ಪಟ್ಟು ಸೋಂಕು ತಗುಲುವ ಸಾಧ್ಯತೆ ಇರುತ್ತದೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
There are many posts that claim that smokers are less vulnerable to COVID-19. Several reports have quoted the World Health Organization and a CSIR survey and said that smokers and vegetarians are less vulnerable to COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X