Get Updates
Get notified of breaking news, exclusive insights, and must-see stories!

Yuva Rajkumar: 'ಯುವ' ಮೊದಲ ಹಾಡು ಬಿಡುಗಡೆ ಅಪ್ಡೇಟ್ ಕೊಟ್ಟ ಚಿತ್ರತಂಡ

ಬೆಂಗಳೂರು, ಫೆಬ್ರವರಿ 26: ರಾಜವಂಶದ ಕುಡಿ 'ಯುವ ರಾಜಕುಮಾರ್' ನಟನೆಯ ಯುವ (Yuva) ಸಿನಿಮಾ ತಂಡದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ದೊಡ್ಮನೆಯ ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 'ಯುವ' ಸಿನಿಮಾದ ಮೊದಲ ಹಾಡು ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಂತರ ರಾಜವಂಶ ಕುಡಿ ಮೂರನೇ ತಲೆಮಾರಿನ ಯುವರಾಜ್ ಕುಮಾರ್ (Yuva raj Kumar) ನಟನೆಯ ಮೊದಲ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆಗಳು ಮೂಡಿವೆ. ಸಿನಿಮಾ ರಿಲೀಸ್ ಮೊದಲೇ 'ಯುವ' ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟಿಸಿದೆ. ಬೃಹತ್ ಕಾರ್ಯಕ್ರಮದ ಮೂಲಕ ಹಾಡು ಬಿಡುಗಡೆಗೊಳ್ಳಲಿದೆ.

Yuva Rajkumars Yuva Film 1st Song Obbane Shiva-Obbane Yuva Released on March 2nd

ಸಾಂಗ್ ಪೋಸ್ಟರ್ ವೈರಲ್

'ಯುವ' ಸಿನಿಮಾ ಮಾರ್ಚ್ 28 ರಂದು ಬಿಡುಗಡೆ ಆಗಲಿದೆ. ಇದೀಗ ಯುವ ಚಿತ್ರತಂಡವು ಮಹತ್ವ ಸುದ್ದಿ ನೀಡಿದ್ದು, ಯುವ ಸಿನಿಮಾದ ಹಾಡನ್ನು ಇದೇ ಮಾರ್ಚ್ 2ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಈ ಕುರಿತು ಬಿಡುಗಡೆ ಮಾಡಲಾದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಂಗ್ ಬಿಡುಗಡೆ ಮಾಹಿತಿಯನ್ನು ನಟ ಯುವರಾಜ್ ಕುಮಾರ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. 'ಒಬ್ಬನೇ ಶಿವ-ಒಬ್ಬನೇ 'ಯುವ' ಎಂಬ ಚಿತ್ರದ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ದಿನಾಂಕ್ ಫಿಕ್ಸ್ ಮಾಡಿದೆ.

ಸಾಂಗ್ ಬಿಡುಗಡೆಯ ಇವೆಂಟ್ ಎಲ್ಲಿ?

ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾವನ್ನು ಭರ್ಜರಿಯಾಗಿ ತೆರೆಗೆ ತರಲು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಇದೀಗ ಯುವ ಸಿನಿಮಾದ ಮೊದಲ ಹಾಡನ್ನು ಚಾಮರಾಜನಗರದ ದೇವಸ್ಥಾನ ಮೈದಾನದಲ್ಲಿ ಮಾರ್ಚ್ 2ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Yuva Rajkumars Yuva Film 1st Song Obbane Shiva-Obbane Yuva Released on March 2nd

ಯುವ ರಾಜ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣ Xನಲ್ಲಿ ಸಾಂಗ್ ರಿಲೀಸ್ ಪೋಸ್ಟರ್ ಹಂಚಿಕೊಂಡಿದೆ. ಕಂಪು ಬಣ್ಣದ ಈ ಪೋಸ್ಟ್‌ನಲ್ಲಿ 1st singl 0BBANE SHIVA OBBANE YUVA ಎಂದು ಬರೆಯಲಾಗಿದೆ. ಯುವ ರಾಜಕುಮಾರ್ ಸಹ ಆಫೋಟೊದಲ್ಲಿ ಕಾಣುವುದನ್ನು ನೋಡಬಹುದು.

ಇದು ಲಿರಿಕಲ್ ಸಾಂಗ್

ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟೀಂ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಇದು ಲಿರಿಕಲ್ ಹಾಡು ಎಂದು ಹೇಳಲಾಗಿದೆ. ಸಿನಿಮಾಗಾಗಿ ಕಾತರದಿಂದ ಕಾಯುತ್ತಿರುವ ದೊಡ್ಮನೆ ಅಭಿಮಾನಿಗಳ ಬಳಗ ಈ ಹಾಡನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.

ಮಿಸ್ಟರ್ ಆಂಡ್ ಮಿಸ್‌ ರಾಮಾಚಾರಿ, ರಾಜಕುಮಾರ್, ಯುವರತ್ನ ದಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಸಿನಿಮಾ ಜತೆಗೆ ಹಾಡುಗಳು ಸಾಕಷ್ಟು ಕುತೂಹಲ ಕೆರಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+